Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಉದ್ಯೋಗ ಪರ್ವ!

Wednesday, 19.09.2018, 3:06 AM       No Comments

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ರಾಜ್ಯ ರಾಜಕೀಯದ ಮೇಲಾಟಗಳ ನಡುವೆಯೇ ದೈನಂದಿನ ಆಡಳಿತಕ್ಕೆ ಸಮಸ್ಯೆಯಾಗಿರುವ ನೌಕರರ ಕೊರತೆ ನೀಗಿಸಿಕೊಳ್ಳುವತ್ತ ಹೆಜ್ಜೆ ಇರಿಸಿರುವ ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಸದ್ದಿಲ್ಲದೆಯೇ ಉದ್ಯೋಗ ಪರ್ವಕ್ಕೆ ಚಾಲನೆ ನೀಡಿದೆ.

ನೇರ ನೇಮಕಾತಿಗಾಗಿ ಎಲ್ಲ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಸರ್ಕಾರ ತೀರ್ವನಿಸಿದೆ. ಮುಂದಿನ ವರ್ಷಾಂತ್ಯದ ವೇಳೆಗೆ ನಿವೃತ್ತರಾಗುವವರೂ ಸೇರಿ ಸರ್ಕಾರದಲ್ಲಿ 2 ಲಕ್ಷಕ್ಕೂ ಅಧಿಕ ಹುದ್ದೆ ಖಾಲಿಯಿವೆ. ಸರ್ಕಾರದ ವಿವಿಧ ಯೋಜನೆಗಳು ಜಾರಿಗೊಳ್ಳುತ್ತಿದ್ದಂತೆಯೇ ಎಲ್ಲ ಇಲಾಖೆಗಳಲ್ಲೂ ನೌಕರರ ಕೊರತೆ ಎಂಬ ಏಕೈಕ ದೂರು ಪ್ರತಿಧ್ವನಿಸುತ್ತಿದೆ. ಆದ್ದರಿಂದಲೇ ಆದಷ್ಟು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲೇಬೇಕು ಎಂದು ಸರ್ಕಾರ ನಿರ್ಧರಿಸಿದೆ.

ಹೆಚ್ಚಿನ ಹೊರೆ ಇಲ್ಲ!: ನೌಕರರ ವೇತನಕ್ಕೆ ಬೇಕಾಗುವಷ್ಟು ಮೊತ್ತವನ್ನು ಸರ್ಕಾರ ಪ್ರತಿ ವರ್ಷ ತೆಗೆದಿರಿಸುತ್ತದೆ. ಹೀಗಾಗಿ ಆ ಮೊತ್ತ ಉಳಿತಾಯವಾಗುವುದರಿಂದ ಹೊಸ ನೇಮಕಾತಿಯಿಂದ ಹೆಚ್ಚಿನ ಹೊರೆ ಏನೂ ಆಗುವುದಿಲ್ಲ. ಆದ್ದರಿಂದಲೇ ಖಾಲಿ ಹುದ್ದೆಗಳನ್ನು ನೇಮಕ ಮಾಡುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮೂಡಿಸಲು ಸರ್ಕಾರ ಬಯಸಿದೆ.

ಬದಲಿಲ್ಲ: ಎ ಮತ್ತು ಬಿ ದರ್ಜೆ ಅಧಿಕಾರಿಗಳ ನೇಮಕಾತಿಯಷ್ಟೇ ಈಗ ಇರುವಂತೆ ಕೆಪಿಎಸ್​ಸಿ ಮೂಲಕ ನೇಮಕ ಮಾಡುವ ಪ್ರಕ್ರಿಯೆ ಮುಂದುವರಿಯಲಿದೆ.

ಮಾಹಿತಿ ಕೇಳಿದ ಸಿಎಸ್: ಎಷ್ಟು ಹುದ್ದೆ ಖಾಲಿಯಿವೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಎಲ್ಲ ಇಲಾಖೆಗಳಿಗೂ ಸೂಚನೆ ನೀಡಿದ್ದಾರೆ. ಕ್ಷೇತ್ರ ಇಲಾಖೆಗಳಿಂದ ಸಚಿವಾಲಯದ ತನಕ ಎಷ್ಟು ಮಂಜೂರಾತಿ ಹುದ್ದೆಗಳಿವೆ? ಅವುಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ? ಎಷ್ಟು ಹುದ್ದೆಗಳು ತುರ್ತಾಗಿ ಭರ್ತಿಯಾಗಬೇಕು? ಅದರಿಂದ ಆಗುವ ಆರ್ಥಿಕ ಹೊರೆ ಎಷ್ಟು? ಯಾವ ರೀತಿಯಲ್ಲಿ ಮಾಹಿತಿ ನೀಡಬೇಕು ಎಂಬ ನಮೂನೆಯನ್ನು ಮುಖ್ಯ ಕಾರ್ಯದರ್ಶಿ ಕಚೇರಿಯಿಂದಲೇ ಕಳುಹಿಸಿಕೊಡಲಾಗಿದೆ.

ಪ್ರಣಾಳಿಕೆಯ ಭರವಸೆ: ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳೆರಡೂ ಪ್ರಣಾಳಿಕೆಗಳಲ್ಲಿ ಭರವಸೆ ನೀಡಿದ್ದವು. ಆ ನಿಟ್ಟಿನಲ್ಲಿ ಸರ್ಕಾರ ಈಗ ಮುಂದಡಿ ಇಟ್ಟಿದೆ. ಎಲ್ಲ ಇಲಾಖೆ ಕಾರ್ಯದರ್ಶಿಗಳಿಂದ ಮಾಹಿತಿ ಬಂದ ನಂತರ ಮುಖ್ಯ ಕಾರ್ಯದರ್ಶಿ ಸಿಎಂ ಜತೆ ರ್ಚಚಿಸಲಿದ್ದಾರೆ. ಅವರ ಒಪ್ಪಿಗೆ ಬಳಿಕ ಸಂಪುಟದಲ್ಲಿ ಪ್ರಸ್ತಾವನೆ ಮಂಡಿಸಿ ಅನುಮೋದನೆ ಪಡೆಯಲಾಗುತ್ತದೆ ಎಂದು ಮೂಲಗಳು ಹೇಳುತ್ತವೆ. ವೇತನಕ್ಕೆ ವೆಚ್ಚ: ನೌಕರರ 6 ನೇ ವೇತನ ಆಯೋಗದ ಶಿಫಾರಸು ಸೇರಿ ವೇತನ ಹಾಗೂ ಪಿಂಚಣಿಗಾಗಿ ಒಟ್ಟಾರೆ ವಾರ್ಷಿಕ 54,341 ಕೋಟಿ ರೂ. ವೆಚ್ಚವಾಗುತ್ತದೆ. ಪ್ರತಿ ವರ್ಷ ವೇತನಕ್ಕೆ ಬಜೆಟ್​ನಲ್ಲಿ ಮೀಸಲಿಡಲಾಗುತ್ತದೆ. ಬಳಕೆ ಆಗದಿರುವ ಮೊತ್ತವನ್ನು ಬೇರೆ ಉದ್ದೇಶಕ್ಕೆ ವಿನಿಯೋಗಿಸಲಾಗುತ್ತದೆ.

ಕೆಪಿಎಸ್​ಸಿಯಲ್ಲಿ 3 ಹುದ್ದೆ ಖಾಲಿ: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಶೀಘ್ರ ಮೂರು ಹುದ್ದೆಗಳು ಖಾಲಿಯಾಗಲಿದ್ದು, ಸಮ್ಮಿಶ್ರ ಸರ್ಕಾರ ಅವುಗಳನ್ನು ನೇಮಕ ಮಾಡಬೇಕಾಗುತ್ತದೆ. ಅಧ್ಯಕ್ಷರಾಗಿರುವ ಟಿ. ಶಾಮ್ ಭಟ್, ಸದಸ್ಯರಾದ ಡಾ. ಮಂಗಳಾ ಶ್ರೀಧರ್ ಹಾಗೂ ಡಾ. ಎಚ್.ಡಿ. ಪಾಟೀಲ್ ಅವಧಿ ಈಗ ಪೂರ್ಣವಾಗುತ್ತಿದೆ. ಶಾಮ್ ಭಟ್ ಹಿಂದಿನ ಸರ್ಕಾರದ ಅವಧಿಯಲ್ಲಿ, ಮಂಗಳಾ ಶ್ರೀಧರ್ ಹಾಗೂ ಪಾಟೀಲ್ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದರು. ಮೂರು ಹುದ್ದೆಗಳಿಗೂ ಲಾಬಿ ನಡೆಯುತ್ತಿದ್ದು, ಆಕಾಂಕ್ಷಿಗಳು

ನೇರ ನೇಮಕಾತಿಗೆ ಚಿಂತನೆ

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸಿ ದರ್ಜೆ ಹಾಗೂ ಅದಕ್ಕಿಂತ ಕೆಳಹಂತದ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಚಿಂತನೆ ನಡೆದಿದೆ. ಇತ್ತೀಚೆಗೆ ನಡೆದ ಕಾರ್ಯದರ್ಶಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಸಿ ದರ್ಜೆ ನೌಕರರ ನೇಮಕಾತಿ ಹೊಣೆಯನ್ನು ಹಿಂದಿನ ಸರ್ಕಾರ ಇದ್ದಾಗಲೇ ಕರ್ನಾಟಕ ಲೋಕಸೇವಾ ಆಯೋಗಕ್ಕೆ ನೀಡಲಾಗಿತ್ತು. ಆದರೆ ಅಲ್ಲಿ ನೇಮಕಾತಿ ತಡವಾಗಿದೆ. ಪರೀಕ್ಷೆ ಹಾಗೂ ಸಂದರ್ಶನ ಮುಗಿದಿದ್ದರೂ ಇಲಾಖೆಗಳಿಗೆ ಮಾಹಿತಿಯೇ ರವಾನೆ ಆಗುವುದಿಲ್ಲ. ಇದನ್ನು ತಪ್ಪಿಸಲು ಎಲ್ಲ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಬಗ್ಗೆಯೂ ಚರ್ಚೆ ನಡೆಸಿ ಕಾನೂನು ಇಲಾಖೆಯ ಅಭಿಪ್ರಾಯ ಕೋರಲಾಗಿದೆ. ಯಾವುದೇ ಸಮಸ್ಯೆಗಳು ಎದುರಾಗದಂತೆ ಹೇಗೆ ನೇರ ನೇಮಕ ಮಾಡಬಹುದು ಎಂಬ ಬಗ್ಗೆಯೂ ವಿವಿಧ ಇಲಾಖೆ ಕಾರ್ಯದರ್ಶಿಗಳಿಂದ ಮಾಹಿತಿ ಕೋರಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಸ್ಥಳೀಯವಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ನೇಮಕ ಮಾಡುವುದು, ಅಭ್ಯರ್ಥಿಗಳು ಪಡೆದಿರುವ ಅಂಕಗಳನ್ನು ಪ್ರಕಟಿಸುವ ಮೂಲಕ ಅಕ್ರಮಗಳಿಗೆ ಅವಕಾಶ ಇಲ್ಲದಂತೆ ನೋಡಿಕೊಳ್ಳುವ ವಿಚಾರ ಚರ್ಚೆಯಾಗಿದೆ.

ಎಷ್ಟು ಹುದ್ದೆ ಖಾಲಿ

ರಾಜ್ಯದ ಜನಸಂಖ್ಯೆ 3 ಕೋಟಿ ಇದ್ದಾಗ 7.20 ಲಕ್ಷ ಹುದ್ದೆಗಳನ್ನು ಮಂಜೂರು ಮಾಡಲಾಗಿತ್ತು. ಜನಸಂಖ್ಯೆ ಈಗ 6 ಕೋಟಿ ಮೀರಿದ್ದರೂ ಹುದ್ದೆಗಳ ಸಂಖ್ಯೆ ಹೆಚ್ಚಾಗಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಸುಮಾರು 1.5 ಲಕ್ಷ ಹುದ್ದೆಗಳ ಭರ್ತಿಗೆ ಒಪ್ಪಿಗೆ ನೀಡಲಾಗಿತ್ತು. ಆದರೆ ಇನ್ನೂ ನೇಮಕಾತಿ ಪೂರ್ಣವಾಗಿಲ್ಲ. ಅದನ್ನು ಹೊರತುಪಡಿಸಿ 1.67 ಲಕ್ಷ ಹುದ್ದೆಗಳು ಖಾಲಿ ಇವೆ. ಈ ವರ್ಷದ ಕೊನೆಗೆ 14,363 ಹಾಗೂ ಮುಂದಿನ ವರ್ಷದ ಕೊನೆಗೆ 15,799 ನೌಕರರು ನಿವೃತ್ತರಾಗುತ್ತಿದ್ದಾರೆ.

24ರಂದು ಸಭೆ

ಮುಖ್ಯ ಕಾರ್ಯದರ್ಶಿ, ಸೆ. 24ರಂದು ಎಲ್ಲ ಇಲಾಖೆ ಕಾರ್ಯದರ್ಶಿಗಳನ್ನು ಒಳಗೊಂಡ ಮಾಸಿಕ ಕೆಡಿಪಿ ಸಭೆಯನ್ನು ನಡೆಸು ತ್ತಿದ್ದು, ಆ ಸಭೆಯಲ್ಲಿ ಖಾಲಿ ಹುದ್ದೆಗಳ ಬಗ್ಗೆ ಮಾಹಿತಿ ನೀಡುವಂತೆ ನಿರ್ದೇಶಿಸಲಾಗಿದೆ.

Leave a Reply

Your email address will not be published. Required fields are marked *

Back To Top