ಇಂದು ನಡೆಯಬೇಕಿದ್ದ ಕೆಎಂಎಫ್​ ಚುನಾವಣೆ ಮುಂದೂಡಿದ ರಾಜ್ಯ ಸರ್ಕಾರ

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆಯಬೇಕಿದ್ದ ಚುನಾವಣೆಯನ್ನು ರಾಜ್ಯ ಸರ್ಕಾರ ಮುಂದೂಡಿದೆ.

ಕೆಎಂಎಫ್​ ಅಧ್ಯಕ್ಷ ಸ್ಥಾನಕ್ಕೆ ಏರಲು ಜೆಡಿಎಸ್​ ಶಾಸಕ ಎಚ್​.ಡಿ. ರೇವಣ್ಣ ಮತ್ತು ಕಾಂಗ್ರೆಸ್​ ಶಾಸಕ ಭೀಮಾ ನಾಯಕ್​ ನಡುವೆ ಪೈಪೋಟಿ ಏರ್ಪಟ್ಟಿತ್ತು. 12 ನಿರ್ದೇಶಕರಿರುವ ಒಕ್ಕೂಟದಲ್ಲಿ ಜೆಡಿಎಸ್​ ಬೆಂಬಲಿಗರ ಸಂಖ್ಯೆ ಮೂರು ಮಾತ್ರ. ಆದರೆ ನಾಲ್ವರು ನಿರ್ದೇಶಕರನ್ನು ರೇವಣ್ಣ ಹೈಜಾಕ್​ ಮಾಡಿ ರೆಸಾರ್ಟ್​ನಲ್ಲಿ ಇಟ್ಟಿದ್ದು, ಅವರು ಸೋಮವಾರ ನೇರವಾಗಿ ಚುನಾವಣೆಗೆ ಹಾಜರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ರೇವಣ್ಣ ಅಧ್ಯಕ್ಷರಾಗುವುದು ನಿಶ್ಚಿತ ಎಂದು ಹೇಳಲಾಗುತ್ತಿತ್ತು.

ಆದರೆ ಕೊನೇ ಕ್ಷಣದಲ್ಲಿ ಕೆಎಂಎಫ್​ ಚುನಾವಣೆಯನ್ನು ರಾಜ್ಯ ಸರ್ಕಾರ ಮುಂದೂಡಿದೆ. ಸರ್ಕಾರದ ಈ ನಡೆ ಇಬ್ಬರ ಜಗಳದ ಲಾಭವನ್ನು ಬಿಜೆಪಿ ಪಡೆಯಲು ತಂತ್ರ ಹೆಣೆಯುತ್ತಿದೆಯೇ ಎಂದ ಅನುಮಾನ ಹುಟ್ಟುಹಾಕಿದೆ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ಶಾಸಕ ಭೀಮಾ ನಾಯಕ್ ಪಕ್ಷ ಬೆಂಬಲಿತ ನಿರ್ದೇಶಕರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಬೆಂಬಲವಿಲ್ಲದೆ ಕಂಗೆಟ್ಟಿದ್ದರು. ಮೈತ್ರಿ ಸರ್ಕಾರವಿದ್ದಾಗ ಭೀಮಾನಾಯಕ್ ಅವರಿಗೇ ಅಧ್ಯಕ್ಷ ಸ್ಥಾನವೆಂದು ಅಲಿಖಿತ ನಿರ್ಧಾರವಾಗಿತ್ತು. ಆದರೀಗ ಬದಲಾದ ರಾಜಕೀಯ ಸ್ಥಿತಿಯಲ್ಲಿ ಯಾವ ಮುಖಂಡರೂ ಬೆಂಬಲಕ್ಕೆ ನಿಂತಿರಲಿಲ್ಲ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಸಹಿತ ಬಹುತೇಕ ಎಲ್ಲ ಮುಖಂಡರಿಗೆ ಭೀಮಾನಾಯಕ್ ವಿನಂತಿಸಿಕೊಂಡರೂ ಪ್ರಯೋಜನವಾಗಿರಲಿಲ್ಲ.

One Reply to “ಇಂದು ನಡೆಯಬೇಕಿದ್ದ ಕೆಎಂಎಫ್​ ಚುನಾವಣೆ ಮುಂದೂಡಿದ ರಾಜ್ಯ ಸರ್ಕಾರ”

  1. Revanna can kidnap anybody because of Nimmbehannu power. E nimbe hanninaths huduga bantho ye rekha ye madhuri

Comments are closed.