ಒಂದೇ ಕಂತಿನಲ್ಲಿ ರೈತರ ವಾಣಿಜ್ಯ ಬ್ಯಾಂಕ್​ಗಳ ಸಾಲಮನ್ನಾ ಮಾಡಲು ಸಿಎಂ ಕುಮಾರಸ್ವಾಮಿ ಆದೇಶ

ಬೆಂಗಳೂರು: ರೈತರ ಸಾಲಮನ್ನಾ ಬಗ್ಗೆ ಇದ್ದಂತಹ ಗೊಂದಲಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೂಕ್ತ ಪರಿಹಾರ ನೀಡಿದ್ದಾರೆ. ವಾಣಿಜ್ಯ ಬ್ಯಾಂಕುಗಳ ಸಾಲಮನ್ನಾ ಒಂದೇ ಕಂತಿನಲ್ಲಿ ಆಗಬೇಕು ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಬುಧವಾರ ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಬೆಳೆ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಡುಗಡೆಯಾಗಿರುವ ಮೊತ್ತವನ್ನು ಕಡಿತಗೊಳಿಸಿ, ಉಳಿದ ಸಂಪೂರ್ಣ ಮೊತ್ತವನ್ನು ಒಂದೇ ಕಂತಿನಲ್ಲಿ ರೈತರ ಖಾತೆಗೆ ಬಿಡುಗಡೆ ಮಾಡಲು ಕುಮಾರಸ್ವಾಮಿ ಆದೇಶ ನೀಡಿದ್ದಾರೆ.

ಮೊದಲನೇ ಕಂತಿನಲ್ಲಿ ಹಲವು ರೈತರ ಸಾಲವನ್ನು ಮನ್ನಾ ಮಾಡಲಾಗಿತ್ತು. ಆದರೆ ಬಹುತೇಕ ರೈತರ ಸಾಲಮನ್ನಾವಾಗಿರಲಿಲ್ಲ. ಈಗ ಉಳಿದವರ ಸಂಪೂರ್ಣ ಸಾಲವನ್ನು ಒಂದೇ ಕಂತಿನಲ್ಲಿ ಅವರ ಖಾತೆಗೆ ಬಿಡುಗಡೆಯಾಗಬೇಕು ಎಂದು ಕುಮಾರಸ್ವಾಮಿ ಆದೇಶ ಹೊರಡಿಸುವ ಮೂಲಕ ರೈತರ ಗೊಂದಲ ನಿವಾರಣೆ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *