ವೈಚಾರಿಕ ಚಿಂತನೆ ಬಿತ್ತುವ ಮಾನವ ಬಂಧುತ್ವ ವೇದಿಕೆ

blank

ಜಗಳೂರು: ಮನೆ ಮನೆಗೂ ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ತಿಳಿಸಲು ಕಳೆದ ಹತ್ತು ವರ್ಷಗಳಿಂದ ಮಾನವ ಬಂಧುತ್ವ ವೇದಿಕೆ ಶ್ರಮಿಸುತ್ತಿದೆ ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಮಾನವ ಬಂಧುತ್ವ ವೇದಿಕೆ ತಾಲೂಕು ಸಮಿತಿಯಿಂದ ಗ್ರಾಮ ಸಮಿತಿಗಳ ಸ್ಥಾಪನೆ ಕುರಿತು ಹಮ್ಮಿಕೊಂಡಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.

ಸಮಾಜದಲ್ಲಿ ಮೂಢನಂಬಿಕೆ, ಮೌಢ್ಯಾಚರಣೆ, ಮಹಿಳೆಯರ ಮೇಲಿನ ಶೋಷಣೆ, ಜಾತಿ ಅಸಮಾನತೆಯಂತಹ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಯನ್ನು ತಿಳಿಸಲು ನಮ್ಮ ವೇದಿಕೆ ಹಗಲಿರುಳು ಹೋರಾಟ ನಡೆಸುತ್ತಿದೆ ಎಂದರು.

ಪ್ರಸ್ತುತ ಮೌಢ್ಯಾಚರಣೆ ಕಣ್ಣಿಗೆ ಕಾಣದೆ ಜನರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿನ ಸುಳ್ಳುಗಳ ವೈಭವೀಕರಣದಿಂದ ಜಾತಿ ಧರ್ಮಗಳ ವಿಚಾರದಲ್ಲಿ ಕೋಮು ಪ್ರಚೋದನೆ ನಡೆಯುತ್ತಿದೆ. ಯುವಕರು ಇಂತಹ ವಿಚಾರಗಳ ಕಡೆ ಹೋಗದಂತೆ ತಡೆಯಲು ಗ್ರಾಮ ಮಟ್ಟದಲ್ಲಿ ಬಂಧುತ್ವ ಸಮಿತಿ ರಚನೆಯಾಗಬೇಕು ಎಂದು ತಿಳಿಸಿದರು.

ತಾಲೂಕು ಮಟ್ಟದಲ್ಲಿಯೇ ತರಬೇತಿ ಶಾಖೆ ತೆರೆಯುವ ಚಿಂತನೆ ನಡೆಸಲಾಗಿದೆ. ಇನ್ನು ಆರು ತಿಂಗಳೊಳಗಾಗಿ ಇಡೀ ತಾಲೂಕಿನಲ್ಲಿ ಗ್ರಾಮ ಸಮಿತಿ ರಚನೆ ಮಾಡಿ, ಚಳವಳಿ ಸಂಸ್ಥಾಪಕ ಸತೀಶ್ ಜಾರಕಿಹೊಳಿ ಅವರನ್ನು ಕರೆಸಿ ಬೃಹತ್ ಸಮ್ಮೇಳನ ಮಾಡಲಾಗುವುದು ಎಂದರು.

ವೇದಿಕೆ ರಾಜ್ಯ ಸಮಿತಿ ಸದಸ್ಯ ಕೆ.ಪಿ. ಪಾಲಯ್ಯ ಮಾತನಾಡಿ, ಸತೀಶ್ ಜಾರಕಿಹೊಳೆ ಮಾನವ ಬಂಧುತ್ವದ ಮೂಲಕ ಯುವಕರಲ್ಲಿ ಜಾಗೃತಿ ಮೂಡಿಸಿ ಸಾಮಾಜಿಕ ಹೋರಾಟ, ಸಾಂಸ್ಕೃತಿಕ ಸಂಘಟನೆ, ಸಾಹಿತ್ಯ ಹಾಗೂ ರಾಜಕೀಯ ಕ್ಷೇತ್ರಗಳ ಬದಲಾವಣೆಗೆ ವಿಭಿನ್ನ ರೀತಿಯಲ್ಲಿ ಶ್ರಮಿಸುತ್ತಿದ್ದಾರೆ ಎಂದರು.

ಜಿಲ್ಲಾ ಸಮಿತಿ ಸದಸ್ಯ ಧನ್ಯಕುಮಾರ್ ಮಾತನಾಡಿ, ಹಲವಾರು ಪ್ರಗತಿಪರ ಸಂಘಟನೆ ಮುಖಂಡರು, ಮಾಧ್ಯಮ ಸ್ನೇಹಿತರು, ವಕೀಲರ ಸಂಘ ಹೀಗೆ ಅನೇಕ ಪ್ರಜ್ಞಾವಂತರು ಮಾನವ ಬಂಧುತ್ವ ವೇದಿಕೆ ಚಳವಳಿಗೆ ಶಕ್ತಿ ತುಂಬಿದ್ದಾರೆ. ಜನರಲ್ಲಿನ ನಕಾರಾತ್ಮಕ ಮನೋಭಾವ ಹೋಗಲಾಡಿಸಲು ವೈಚಾರಿಕ ಕಾರ್ಯಕ್ರಮಗಳನ್ನು ಮಾಡಿ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ತಾಲೂಕು ಸಂಚಾಲಕ ವಕೀಲ ಎಚ್. ಬಸವರಾಜ್ ಮಾತನಾಡಿ, ವೇದಿಕೆಯಿಂದ ಸರ್ವರ ಸಹಕಾರದೊಂದಿಗೆ ವಿವಿಧ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ. ಈ ಚಳವಳಿಗೆ ಮಹಿಳಾ ಬಂಧುತ್ವ ವೇದಿಕೆ, ವಿದ್ಯಾರ್ಥಿ ಬಂಧುತ್ವ ವೇದಿಕೆ ಸೇರಿ ಸಾಹಿತ್ಯ, ಸಂಗೀತ, ಕ್ರೀಡೆ, ಸ್ವಯಂ ವೃತ್ತಿ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ, ರಾಜಕೀಯ ತರಬೇತಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಬಂಧುತ್ವ ಬೆಳೆಸಲು ಗ್ರಾಮ ಸಮಿತಿಗಳ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಸಮಿತಿ ರಚನೆ ಮಾಡಲಾಗುವುದು ಎಂದರು.

ಜಿಲ್ಲಾ ಸಂಚಾಲಕ ಲಕ್ಷ್ಮಣ್ ನಾಯ್ಕ , ವಿಭಾಗೀಯ ಸಂಚಾಲಕ ಮಾಡಾಳು ಶಿವಕುಮಾರ್, ಜಿಲ್ಲಾ ಸಮಿತಿ ಸದಸ್ಯ ಎಂ.ಎಸ್. ನಜೀರ್ ಅಹಮದ್, ಪ್ರಗತಿಪರ ಹೋರಾಟಗಾರ ಆರ್. ಓಬಳೇಶ್, ಪ್ರಾಚಾರ್ಯ ನಾಗಲಿಂಗಪ್ಪ, ವಕೀಲರಾದ ಸಣ್ಣ ಓಬಯ್ಯ, ರುದ್ರೇಶ್, ತಿಪ್ಪೇಸ್ವಾಮಿ, ನಾಗೇಶ್, ರಂಗಸ್ವಾಮಿ, ಮಹಾಂತೇಶ್, ಸಂಘಟನೆ ಮುಖಂಡರಾದ ಇಂದಿರಾ ಗುರುಸ್ವಾಮಿ, ಮಲೆ ಮಾಚಿಕೆರೆ ಸತೀಶ್, ಎಂ. ರಾಜಪ್ಪ, ಚೌಡಮ್ಮ, ಮಹಬೂಬ್ ಅಲಿ, ಓಬಳೇಶ್, ಪೇಂಟರ್ ಖಲೀಲ್ ಸಾಬ್, ಗೌರಿಪುರ ರಾಜು, ಗೋಗುದ್ದು ತಿಪ್ಪೇಸ್ವಾಮಿ, ಗ್ರಾಪಂ ಸದಸ್ಯ ಜಯ್ಯಣ್ಣ, ಕೊಟ್ಟಿಗೆ ತಿಪ್ಪೇಸ್ವಾಮಿ ಇತರರಿದ್ದರು.

Share This Article

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​! Cardiac Arrest

Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…