More

    ಕೃಷಿ ಕ್ಷೇತ್ರ ಬೆಳವಣಿಗೆಗೆ ಪೂರಕ ಆಯವ್ಯಯ: ತಜ್ಞ ಅಭಿಪ್ರಾಯ

    ಕೃಷಿ ಕ್ಷೇತ್ರ ಬೆಳವಣಿಗೆಗೆ ಪೂರಕ ಆಯವ್ಯಯ: ತಜ್ಞ ಅಭಿಪ್ರಾಯರಾಜ್ಯದ ಪ್ರಸಕ್ತ ಸಾಲಿನ ಕೃಷಿ ಕ್ಷೇತ್ರದ ಬೆಳವಣಿಗೆಯ ದರ ಶೇ.5.5 ಇದ್ದು, ಅದು ಇನ್ನಷ್ಟು ಹೆಚ್ಚಾಗಲು ಮುಂದಿನ ವರ್ಷದ ಆಯವ್ಯಯದಲ್ಲಿ ಕೃಷಿ ಹಾಗೂ ಪೂರಕ ಚಟುವಟಿಕೆಗಳಿಗೆ ನೀಡಿರುವ ಪ್ರೋತ್ಸಾಹ ಸಹಾಯಕವಾಗಿದೆ. ಕೃಷಿ, ತೋಟಗಾರಿಕೆಗೆ 9456 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದಾರೆ. ಅದರಲ್ಲಿ ಕೆಲವೊಂದು ವಿಶೇಷವಾದ ಘೋಷಣೆಗಳನ್ನು ಮಾಡಿದ್ದಾರೆ. ಕೃಷಿಯ ಬೆಳವಣಿಗೆಯ ಜತೆಗೆ, ಕೃಷಿ ಬೆಳೆಗಳಿಗೆ ತಗಲುವ ರೋಗದ ನಿಯಂತ್ರಣ, ಡಿಜಿಟಲ್ ಕೃಷಿಗೆ ಪ್ರೋತ್ಸಾಹ, ಕೃಷಿ ಶಿಕ್ಷಣ, ಹೀಗೆ ಕೃಷಿಯ ಜತೆಗೆ ಕೃಷಿ ಆಧಾರಿತ ವಲಯಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಿದ್ದಾರೆ. ಅದು ಕೃಷಿ ವಲಯದ ಬೆಳವಣಿಗೆಗೆ ಪೂರಕವಾಗಿರುತ್ತದೆ. ತಿಪಟೂರಿನಲ್ಲಿ ತೋಟಗಾರಿಕೆ ಮಹಾ ವಿದ್ಯಾಲಯದ ಸ್ಥಾಪನೆ ಮಾಡಿರುವುದು ಆ ಭಾಗದಲ್ಲಿ ತೆಂಗು ಸೇರಿ ತೋಟಗಾರಿಕೆ ಬೆಳೆಗಳಿಗೆ ಅನುಕೂಲವಾಗುತ್ತದೆ. ಬಳ್ಳಾರಿಯಲ್ಲಿ ಮೆಗಾ ಡೇರಿ, ಹಾವೇರಿಯಲ್ಲಿ ಮೀನುಮರಿ ಉತ್ಪಾದನೆ, ಅಡಕೆಗೆ ತಗುಲಿರುವ ರೋಗ ನಿಯಂತ್ರಣಕ್ಕೆ ತಂತ್ರಜ್ಞಾನ ರೂಪಿಸಲು ತೀರ್ಥಹಳ್ಳಿಯಲ್ಲಿ ಅಡಕೆ ಸಂಶೋಧನಾ ಕೇಂದ್ರಕ್ಕೆ ನೆರವು, ಹಾದಗಿರಿಯಲ್ಲಿ ಸಿಗಡಿ ಉತ್ಪಾದನೆ ಕೇಂದ್ರ, ಸಿರಿಧಾನ್ಯಕ್ಕೆ ನೆರವಾಗಲು ಪ್ರತಿ ಹೆಕ್ಟೇರ್​ಗೆ 10 ಸಾವಿರ ಪ್ರೋತ್ಸಾಹ ಧನ, ನೆಟ್ಟೆ ರೋಗಕ್ಕೆ ಒಳಗಾದ ತೊಗರಿ ಬೆಳೆಗಾರರಿಗೆ ಪ್ರೋತ್ಸಾಹ ಧನ ಹೀಗೆ ರಾಜ್ಯದ ಎಲ್ಲ ಭಾಗದ ಕೃಷಿಕರನ್ನು ಗಮನದಲ್ಲಿಟ್ಟುಕೊಂಡಿದ್ದಾರೆ.

    ರೈತರಿಗೆ ವಿಮೆ ವ್ಯವಸ್ಥೆ ತರಲು ಮುಂದಾಗಿರುವುದು ಒಳ್ಳೆಯ ಕ್ರಮವಾಗಿದ್ದು ಅಭದ್ರತೆಯಲ್ಲಿ ಜೀವಿಸುವ ಕೃಷಿಕರ ಬದುಕಿಗೆ ಭದ್ರತೆ ಸಿಗಲಿದೆ. ಕೃಷಿ ಉತ್ಪಾದಕರ ಸಂಘಗಳಿಗೆ ನೆರವು ನೀಡುವುದು, 1000 ಸಣ್ಣ ಕೆರೆಗಳನ್ನು ಸಹಸ್ರ ಸರೋವರ ಯೋಜನೆಯಲ್ಲಿ ಅಭಿವೃದ್ಧಿ ಮಾಡುವುದು ದೂರದೃಷ್ಟಿಯನ್ನು ತೋರುತ್ತದೆ. ಜಮೀನುಗಳಲ್ಲಿ ಜಲಹೊಂಡಗಳ ನಿರ್ವಣಗಳನ್ನು ನಿರ್ವಿುಸಲು ನೆರವಾಗುವ ಅಂತರ್ಜಲ ವೃದ್ಧಿಗೆ ನೆರವಾಗುವುದು ಒಳ್ಳೆಯ ಕ್ರಮವಾಗಿದೆ. ದ್ರಾಕ್ಷಿ, ರೇಷ್ಮೆ ಬೆಳೆಗಾರರ ಹಿತವನ್ನು ಗಮನದಲ್ಲಿಟ್ಟುಕೊಂಡು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಬಜೆಟ್​ನ ಶೇ.12 ಹಣ ಮೀಸಲಿಡಲಾಗಿದೆ. ಅದರಲ್ಲಿ ಕೃಷಿ ಶಿಕ್ಷಣಕ್ಕೂ ಅನುಕೂಲವಾಗಲಿದೆ.

    ಹೈನುಗಾರಿಕೆ ಮಾಡುವ ರೈತರನ್ನು ಗಮನದಲ್ಲಿಟ್ಟುಕೊಂಡು ಯೋಜನೆ ತಂದಿದ್ದರೆ, ಕುರಿಗಾರರು ಹಾಗೂ ಕೋಳಿ ಸಾಕಣೆ ಮಾಡುವವರನ್ನು ಮರೆತಿಲ್ಲ. ಇದೆಲ್ಲವೂ ಗ್ರಾಮೀಣ ಭಾಗದಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಾಗಲು ಸಹಾಯಕವಾಗುತ್ತದೆ. ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಒಳಗಾಗುವ ಕೃಷಿಕರಿಗೆ ನೆರವಾಗಲು ಆವರ್ತನಿಧಿಯನ್ನು 2 ಸಾವಿರ ಕೋಟಿ ರೂ.ಗಳಿಂದ 3500 ಕೋಟಿ ರೂ.ಗಳಿಗೆ ಹೆಚ್ಚಿಸಿರುವುದು ರೈತರನ್ನು ಸಂಕಷ್ಟದಿಂದ ಪಾರು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ನೀರಾವರಿ ಯೋಜನೆಗಳಿಗೆ ನೀಡಿರುವ ಆದ್ಯತೆ ನೇರವಾಗಿ ಫಲ ಸಿಗುವುದು ರೈತರಿಗೆ. ಯೋಜನೆಗಳೆಲ್ಲವೂ ಕಾಲಮಿತಿಯಲ್ಲಿ ಅನುಷ್ಠಾನ ಮಾಡಬೇಕು. ಇಲ್ಲದಿದ್ದರೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ನರೇಗಾದ ಮೂಲಕವೂ ಕೃಷಿಗೆ ಒತ್ತು ನೀಡಲಾಗುತ್ತಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಗ್ರಾಮ ಪಂಚಾಯಿತಿಗಳ ಅನುದಾನ ಹೆಚ್ಚಳ ಮೊದಲಾದ ಕ್ರಮಗಳು ಗ್ರಾಮೀಣರ ಬದುಕಿನಲ್ಲಿ ಹೊಸ ಬೆಳಕನ್ನು ತರಲಿವೆ. ಒಟ್ಟಾರೆ ಈ ಬಜೆಟ್ ಕೃಷಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿದೆ. ಗ್ರಾಮೀಣ ಭಾಗದಲ್ಲಿ ಆರ್ಥಿಕ ಬೆಳವಣಿಗೆ ಹೆಚ್ಚಾಗುತ್ತದೆ.

    7ನೇ ವೇತನ ಆಯೋಗದ ವರದಿ ಅನುಷ್ಠಾನ ಖಚಿತ: ಸಿಎಂ ಭರವಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts