19 C
Bangalore
Thursday, November 14, 2019

ರೈತನಿಗೆ ಸಿರಿ, ಹೊಸ ಬೆಳೆ ವಿಮೆಗೆ ದಾರಿ

Latest News

ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಟೊಮ್ಯಾಟೊಗೆ ಬೆಲೆ ಎಷ್ಟಿರಬಹುದು? ಎಂದು ಊಹಿಸಬಲ್ಲಿರಾ?

ಇಸ್ಲಮಾಬಾದ್​: ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ಭಾರತದಿಂದ ಆಮದು ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ಪಾಕಿಸ್ತಾನದಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ...

ಬೇಷರತ್ ಕ್ಷಮೆಯಾಚಿಸಿದ್ದ ರಾಹುಲ್ ಗಾಂಧಿ: ನ್ಯಾಯಾಂಗ ನಿಂದನೆ ಮೊಕದ್ದಮೆ ಕೈ ಬಿಟ್ಟ ಸುಪ್ರೀಂ ಕೋರ್ಟ್​

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಉಲ್ಲೇಖಿಸಿ ಚೌಕೀದಾರ್​ ಚೋರ್ ಹೈ ಎಂದಿದ್ದ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿಯವರ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಚಾರಣೆ...

ಕಂಠೀರವ ಸ್ಟುಡಿಯೋದಲ್ಲಿ ರೆಬಲ್ ಸ್ಟಾರ್ ದಿ. ಅಂಬರೀಷ್ ಅವರ ಮೊದಲ ಪುಣ್ಯ ತಿಥಿ: ಅರಮನೆ ಮೈದಾನದಲ್ಲಿ ಬೃಹತ್​ ಕಾರ್ಯಕ್ರಮ

ಬೆಂಗಳೂರು: ಖ್ಯಾತ ನಟ ಹಾಗೂ ಮಾಜಿ ಸಚಿವ ದಿ. ಅಂಬರೀಷ್ ಅವರ ಮೊದಲ ವರ್ಷದ ಪುಣ್ಯ ತಿಥಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಕಂಠೀರವ...

ದೇಶದ ಕಾರು ಮಾರುಕಟ್ಟೆಯ ಟಾಪ್ 10 ಕಾರುಗಳ ಪಟ್ಟಿಗೆ ಕೊರಿಯನ್​ ಕಂಪನಿ ಕಾರು!: ಉಳಿದಂತೆ ಮಾರುತಿಯದ್ದೇ ಕಾರುಬಾರು..

ಮುಂಬೈ: ದೇಶದ ಕಾರು ಮಾರುಕಟ್ಟೆಯ ಕಳೆದ ತಿಂಗಳ ಕಾರು ಮಾರಾಟ ದತ್ತಾಂಶ ಪ್ರಕಾರ, ಟಾಪ್​ 10 ಕಾರುಗಳ ಪಟ್ಟಿಯಲ್ಲಿ ಮಾರುತಿ ಕಾರುಗಳದ್ದೇ ಕಾರುಬಾರು....

ರಫೇಲ್ ವಿವಾದ ಇನ್ನು ಮುಗಿದ ಅಧ್ಯಾಯ: ಮರುಪರಿಶೀಲನಾ ಅರ್ಜಿಗಳು ವಜಾಗೊಳಿಸಿ ಸುಪ್ರೀಂ ಆದೇಶ

ನವದೆಹಲಿ: ವಿವಾದಾತ್ಮಕ ರಫೇಲ್ ಒಪ್ಪಂದವನ್ನು ಮೇಲ್ವಿಚಾರಣೆ ನಡೆಸುವಂತೆ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ತಳ್ಳಿಹಾಕಿದೆ. ರಫೇಲ್ ಒಪ್ಪಂದವನ್ನು ನ್ಯಾಯಾಲಯ ತನಿಖೆಗೆ ಒಳಪಡಿಸುವುದಿಲ್ಲ ಎಂದು...

ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನಕ್ಕೆ ‘ರೈತಸಿರಿ’, ಕರಾವಳಿ ಮತ್ತು ಮಲೆನಾಡಿನ ಭತ್ತ ಬೆಳೆಗಾರರ ನೆರವಿಗಾಗಿ ‘ಕರಾವಳಿ ಪ್ಯಾಕೇಜ್’, ಶೂನ್ಯ ಬಂಡವಾಳ ಕೃಷಿ ಸಂಶೋಧನೆಗೆ 40 ಕೋಟಿ, ದಾಳಿಂಬೆ- ದ್ರಾಕ್ಷಿ ಬೆೆಳೆಗಾರರಿಗೆ 150 ಕೋಟಿ ರೂ. ವಿಶೇಷ ಪ್ಯಾಕೇಜ್, ಹೊಸ ಬೆಳೆ ವಿಮೆ ಜಾರಿ ಪರಿಶೀಲನೆ… ಇವು ರೈತರ ಅಭಿವೃದ್ಧಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ ಹೊಸ ಕಾರ್ಯಕ್ರಮಗಳು.

ಸಿರಿಧಾನ್ಯ ಬೆಳೆಗಾರರನ್ನು ಪ್ರೋತ್ಸಾಹಿಸಲು ರೂಪಿಸಿರುವ ರೈತಸಿರಿ ಯೋಜನೆಯಡಿ ಪ್ರತಿ ಹೆಕ್ಟೇರ್​ಗೆ 10 ಸಾವಿರ ರೂ.ನಂತೆ ರೈತರಿಗೆ ನೇರ ನಗದು ವರ್ಗಾವಣೆ ಮಾಡಲಾಗುವುದು. ಸಿರಿಧಾನ್ಯ ಬೆಳೆಯ ವಿಸ್ತೀರ್ಣ ಹೆಚ್ಚಿಸುವುದು ಇದರ ಉದ್ದೇಶವಾಗಿದ್ದು, ಸದ್ಯಕ್ಕೆ ಈ ನೆರವನ್ನು ಒಟ್ಟಾರೆ 10 ಸಾವಿರ ಹೆಕ್ಟೇರ್​ಗೆ ಒದಗಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಬಜೆಟ್​ನಲ್ಲಿ 10 ಕೋಟಿ ರೂ. ತೆಗೆದಿರಿಸಲಾಗಿದೆ. ಜತೆಗೆ, ಸಿರಿಧಾನ್ಯಗಳನ್ನು ಹಾಪ್​ಕಾಮ್್ಸ, ನಂದಿನಿ ಔಟ್​ಲೆಟ್ ಮುಂತಾದವುಗಳ ಮೂಲಕ ಜನರಿಗೆ ಮಾರಾಟ ಮಾಡಲು 10 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆಯಡಿ ಹನಿ ನೀರಾವರಿ ಉತ್ತೇಜಿಸಲು 368 ಕೋಟಿ ರೂ. ನೀಡಲಾಗಿದೆ. ರೈತರು ಹಾಗೂ ಶಾಲಾ ಮಕ್ಕಳು ಅಗತ್ಯವಿರುವಾಗ ಭೇಟಿ ನೀಡಿ ವಿವಿಧ ಬೆಳೆಗಳ ಬಗ್ಗೆ ಮಾಹಿತಿ ಪಡೆಯಲು ಮಂಡ್ಯ ಜಿಲ್ಲೆ ವಿ.ಸಿ.ಫಾರಂನಲ್ಲಿ ಹಾಗೂ ರಾಯಚೂರಿನ ಸಿಂಧನೂರಿನಲ್ಲಿ ಕೃಷಿ ಪ್ರಾತ್ಯಕ್ಷಿಕೆ ಸಂಸ್ಥೆ ಸ್ಥಾಪಿಸಲು 10 ಕೋಟಿ ರೂ. ಮೀಸಲಿರಿಸಲಾಗಿದೆ.

ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳನ್ನು ಸ್ಥಾಪಿಸಲು ಸಹಾಯಧನ ನೀಡುವ ಕಾರ್ಯಕ್ರಮವನ್ನು ಮುಂದುವರಿಸಿ, 250 ಕೋಟಿ ರೂ. ನೀಡಲಾಗಿದೆ. ಶೂನ್ಯ ಬಂಡವಾಳ ಕೃಷಿ ಕುರಿತ ಹೆಚ್ಚಿನ ಅಧ್ಯಯನಕ್ಕಾಗಿ ಕೃಷಿ ವಿ.ವಿ.ಗಳಿಗೆ 40 ಕೋಟಿ ರೂ. ಒದಗಿಸಲಾಗಿದೆ. ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ 35 ಕೋಟಿ ರೂ. ನಿಗದಿಪಡಿಸಲಾಗಿದೆ.

ಸಾವಯವ ಹಾಗೂ ಶೂನ್ಯ ಬಂಡವಾಳ ಕೃಷಿ ಉತ್ಪನ್ನಗಳ ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರಾ್ಯಂಡಿಂಗ್ ಘಟಕಗಳಿಗೆ ಪೋ›ತ್ಸಾಹ ನೀಡಲು ಉದ್ದೇಶಿಸಲಾಗಿದ್ದು, ಈ ಕಾರ್ಯಕ್ರಮದಡಿ ಅರ್ಹ ಉದ್ದಿಮೆದಾರರು ಹಾಗೂ ನವೋದ್ಯಮಿಗಳಿಗೆ ಶೇ.50ರ ದರದಲ್ಲಿ ಪೋ›ತ್ಸಾಹಧನ ನೀಡಲು 2 ಕೋಟಿ ರೂ. ಒದಗಿಸಲಾಗಿದೆ. ಇಸ್ರೇಲ್ ಮಾದರಿಯ ಕಿರು ನೀರಾವರಿ ಯೋಜನೆಗೆ ಉತ್ತೇಜನ ನೀಡಲು 145 ಕೋಟಿ ರೂ. ಒದಗಿಸಲಾಗಿದೆ. ಜಲಾನಯನ ಪ್ರದೇಶ ಕಾಪಾಡುವ ಉದ್ದೇಶದಿಂದ 9 ಲಕ್ಷ ಹೆಕ್ಟೇರ್ ಪ್ರದೇಶವನ್ನು ರಾಜ್ಯದ ಆಯ್ದ 100 ಬರಪೀಡಿತ ಮತು ್ತ ಅತಿ ಹೆಚ್ಚು ಅಂತರ್ಜಲ ಕುಸಿತ ಇರುವ ತಾಲೂಕುಗಳಲ್ಲಿ, ಬರ ನಿರೋಧಕ ಜಲಾನಯನ ಚಟುವಟಿಕೆ ನಡೆಸಲು 100 ಕೋಟಿ ರೂ. ಒದಗಿಸಲಾಗಿದೆ.

ಹಾಲು ಉತ್ಪಾದಕರಿಗೆ ಕ್ಷೀರಾಭಿಷೇಕ
ಹಾಲು ಉತ್ಪಾದಕರಿಗೆ ಸರ್ಕಾರ ಪ್ರತಿ ಲೀಟರ್​ಗೆ ಹೆಚ್ಚುವರಿ 1 ರೂ. ಪ್ರೋತ್ಸಾಹಧನ ಘೋಷಿಸಿದೆ. ಈಗಾಗಲೇ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹ ನೀಡಲಾಗುತ್ತಿತ್ತು. ಈ ಬಜೆಟ್​ನಲ್ಲಿ 1 ರೂ. ಹೆಚ್ಚಿಸಿದ್ದು, ಇನ್ನು ಮುಂದೆ ಪ್ರತಿ ಲೀ.ಗೆ 6 ರೂ. ಲಭಿಸಲಿದೆ. ಇದಕ್ಕಾಗಿ 1,459 ಕೋಟಿ ರೂ. ಹಂಚಿಕೆ ಮಾಡಿದೆ. ಕ್ಷೀರಭಾಗ್ಯ ಯೋಜನೆಯಡಿ ಹಾಲನ್ನು ಒಟ್ಟು 638 ಕೋಟಿ ರೂ.ಗೆ ಖರೀದಿಸಿ ಶಾಲೆಗೆ ಹೋಗುವ ಎಲ್ಲ ಮಕ್ಕಳಿಗೆ ಪ್ರತಿ ನಿತ್ಯ ನೀಡಲಾಗುತ್ತದೆ. ಅಂಗನವಾಡಿ ಮಕ್ಕಳಿಗೆ ವಾರದಲ್ಲಿ 5 ದಿನ ಹಾಲನ್ನು ನೀಡಲು 405 ಕೋಟಿ ರೂ. ಒದಗಿಸಲಾಗಿದೆ. ಒಟ್ಟಾರೆ ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ 2,502 ಕೋಟಿ ರೂ. ವಿನಿಯೋಗಿಸಲಿದೆ.

ವರ್ಷದಲ್ಲಿ ಸಿಗಲಿದೆ ಸಾಲಮನ್ನಾ ಹರ್ಷ
ವಾಣಿಜ್ಯ ಬ್ಯಾಂಕ್ ಬೆಳೆ ಸಾಲಮನ್ನಾ ಯೋಜನೆಗೆ 6,500 ಕೋಟಿ ರೂ. ಹಾಗೂ ಸಹಕಾರ ಬ್ಯಾಂಕ್​ಗಳ ಬೆಳೆ ಸಾಲಮನ್ನಾ ಯೋಜನೆಗೆ 6,150 ಕೋಟಿ ರೂ. ಒದಗಿಸಲಾಗಿದೆ. ಸಹಕಾರ ಬ್ಯಾಂಕ್​ಗಳ ಸಾಲಮನ್ನಾ ಪ್ರಕ್ರಿಯೆಯು ಜೂನ್ 2019ರವರೆಗೆ ಪೂರ್ಣಗೊಳ್ಳುವುದು. ವಾಣಿಜ್ಯ ಬ್ಯಾಂಕುಗಳ ಸಾಲಮನ್ನಾ ಯೋಜನೆ 2019-20ರ ಆರ್ಥಿಕ ಸಾಲಿನಲಿ ್ಲ ಪೂರ್ಣಗೊಳ್ಳುವುದು. ವಾಣಿಜ್ಯ ಬ್ಯಾಂಕ್ ಬೆಳೆ ಸಾಲಮನ್ನಾಗಾಗಿ 2018-19ನೇ ಸಾಲಿನಲ್ಲಿ 6,500 ಕೋಟಿ ರೂ. ಒದಗಿಸಲಾಗಿತ್ತು. ಇಲ್ಲಿಯವರೆಗೆ 6 ಲಕ್ಷ ರೈತರಿಗೆ 2,850 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸಹಕಾರ ಬ್ಯಾಂಕ್​ಗಳ ಬೆಳೆ ಸಾಲಮನ್ನಾಕ್ಕೆ 2018-19ರಲ್ಲಿ 2600 ಕೋಟಿ ರೂ. ಬಿಡುಗಡೆ ಮಾಡಿದ್ದು, 5.97 ಲಕ್ಷ ರೈತರಿಗೆ ಅನುಕೂಲವಾಗಿದೆ.

ಮಿಡಿ ಸೌತೆ ರಫ್ತಿಗೆ ಉತ್ತೇಜನ
ರಾಮನಗರ, ಧಾರವಾಡ ಜಿಲ್ಲೆಗಳಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಅಂತಾರಾಷ್ಟ್ರೀಯ ಮಾವು ಉತ್ಪನ್ನಗಳ ಸಂಸ್ಕರಣಾ ಘಟಕ ಹಾಗೂ ಕೋಲಾರದಲ್ಲಿ ಟೊಮ್ಯಾಟೋ ಉತ್ಪನ್ನಗಳ ಸಂಸ್ಕರಣಾ ಘಟಕ ಸ್ಥಾಪನೆಗೆ 20 ಕೋಟಿ ರೂ. ನೀಡಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಕೊಯ್ಲೋತ್ತರ ನಿರ್ವಹಣೆ, ಮಾರುಕಟ್ಟೆ ಉತ್ತೇಜನ ಮತ್ತು ನಿರ್ವಹಣೆಗೆ 2 ಕೋಟಿ ರೂ., ಜೇನುಕೃಷಿ ಉತ್ತೇಜನಕ್ಕೆ 5 ಕೋಟಿ ರೂ., ಮಿಡಿ ಸೌತೆ ರಫ್ತು ಮತ್ತು ಬೆಳೆಗಾರರ ಅನುಕೂಲಕ್ಕೆ 6 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಸಹಕಾರ ವಲಯದಲ್ಲಿ ಕೃಷಿ ಇಲಾಖೆಯ ರೈತರ ಉತ್ಪಾದಕ ಸಂಸ್ಥೆಯ ಮಾದರಿಯಲ್ಲಿ 500 ಸಂಯುಕ್ತ ಬೇಸಾಯ ಸಹಕಾರ ಸಂಘಗಳ ಸ್ಥಾಪನೆಗೆ 5 ಕೋಟಿ ರೂ.ಮೀಸಲು.

ರೇಷ್ಮೆ ಕೃಷಿ ವಿಸ್ತರಣೆಗೆ ಆದ್ಯತೆ
ರೇಷ್ಮೆ ಕೃಷಿಕರ ಮೂಲಕ ರೇಷ್ಮೆ ವಿಸ್ತರಣಾ ಕಾರ್ಯಕ್ರಮಕ್ಕೆ 2 ಕೋಟಿ ರೂ. ಒದಗಿಸಲಾಗಿದೆ. ರೇಷ್ಮೆ ಮಾರಾಟ ಮಂಡಳಿ ಬಲಪಡಿಸಲು 10 ಕೋಟಿ ರೂ., ಸಂತೇಮರಹಳ್ಳಿ ರೇಷ್ಮೆ ಕಾರ್ಖಾನೆ ಆಧುನೀಕರಣ ಹಾಗೂ ಯುವಕರಿಗೆ ತರಬೇತಿ ನೀಡಲು 2 ಕೋಟಿ ರೂ., ಚಾಮರಾಜನಗರ ರೇಷ್ಮೆ ಕಾರ್ಖಾನೆ ಪುನ ಶ್ಚೇತನಕ್ಕೆ 5 ಕೋಟಿ ರೂ., ರಾಮನಗರ ಮತ್ತು ಹಾವೇರಿ ರೇಷ್ಮೆ ಮಾರುಕಟ್ಟೆ ಆಧುನೀಕರಣಕ್ಕೆ 10 ಕೋಟಿ ರೂ., ಚನ್ನಪಟ್ಟಣದ ಸಿಲ್ಕ್ ಇಂಡಸ್ಟ್ರೀಸ್ ಕಾಪೋರೇಷನ್ ಆವರಣದಲ್ಲಿ ರೇಷ್ಮೆ ಸಂಬಂಧಿತ ಸಾಧನೆಗಳ ಪ್ರದರ್ಶನ, ಉತ್ಪನ್ನಗಳ ಮಾರಾಟಕ್ಕೆ -ಠಿ;10 ಕೋಟಿ.

ನಾಟಿ ಕೋಳಿ ಸಾಕಣೆಗೆ ಪ್ರೋತ್ಸಾಹ
ರಾಜ್ಯದ 10 ಸಾವಿರ ಬಡ ನಿರುದ್ಯೋಗಿ ಯುವಕ- ಯುವತಿಯರಿಗೆ ‘ನಾಟಿ ಕೋಳಿ ಸಾಕಣೆ’ಗೆ ಪ್ರೋತ್ಸಾಹ ನೀಡಲು ಮುಂದಾಗಿರುವ ಸರ್ಕಾರ ಅದಕ್ಕಾಗಿ 10 ಕೋಟಿ ರೂ. ಮೀಸಲಿರಿಸಿದೆ. ರಾಜ್ಯದ 15 ಜಿಲ್ಲೆಗಳಲ್ಲಿ ಸುಸಜ್ಜಿತ ಪಶುಚಿಕಿತ್ಸಾ ವಾಹನ ಒದಗಿಸಲು 2 ಕೋಟಿ ರೂ., ದೇಶೀಯ ಕುರಿ ತಳಿಗಳಲ್ಲಿ ಅವಳಿ-ಜವಳಿ ಸಂತಾನೋತ್ಪತ್ತಿ ಅಭಿವೃದ್ಧಿಗೊಳಿಸುವ ಪ್ರಯೋಗಾಲಯ ಸ್ಥಾಪನೆಗೆ 2 ಕೋಟಿ ರೂ. ನೀಡಲು ತೀರ್ವನಿಸಲಾಗಿದೆ.

ಫಸಲ್ ಬಿಮಾ ಪರ್ಯಾಯಕ್ಕೆ ಚಿಂತನೆ
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಿಂದ ವಿಮಾ ಕಂಪನಿಗಳಿಗೆ ಲಾಭವಾಗುತ್ತಿದ್ದು, ರೈತರಿಗೆ ಹೆಚ್ಚಿನ ಅನುಕೂಲವಾಗಿಲ್ಲ. ಈ ಹಿನ್ನೆಲೆಯಲಿ ್ಲ ಹೊಸ ಬೆಳೆ ವಿಮೆ ಯೋಜನೆ ಜಾರಿಗೆ ತರುವಲ್ಲಿ ಉಂಟಾಗುವ ಸಾಧಕ -ಬಾಧಕಗಳ ಬಗ್ಗೆ ಪರಿಶೀಲಿಸಲು ಸರ್ಕಾರ ಉದ್ದೇಶಿಸಿದೆ.

12 ಬೆಳೆಗಳಿಗೆ ರೈತ ಕಣಜ ಯೋಜನೆ
ರೈತರು ಬೆಳೆದಿರುವ ಬೆಳೆಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡಲು 12 ಅಧಿಸೂಚಿತ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಸಂರಕ್ಷಣಾ ವ್ಯವಸ್ಥೆಯನ್ನು ಆವರ್ತಕ ನಿಧಿ ಮೂಲಕ ಒದಗಿಸಲು ರೈತ ಕಣಜ ಯೋಜನೆ ರೂಪಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯಲ್ಲಿ ರಾಜ್ಯದಲ್ಲಿನ ಎಲ್ಲ ಕೃಷಿ ಮಾರುಕಟ್ಟೆಗಳಲಿ ್ಲ ವರ್ಷವಿಡೀ ಶಾಶ್ವತ ಸಂಗ್ರಹಣಾ ಕೇಂದ್ರ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಈ ಬಜೆಟ್​ನಲ್ಲಿ 510 ಕೋಟಿ ರೂ. ಒದಗಿಸಲಾಗುವುದು.

ಕೃಷಿ ಉತ್ಪನ್ನ ಮಾರುಕಟ್ಟೆ ಆಗಲಿದೆ ಸ್ಮಾರ್ಟ್
ರಾಜ್ಯದ ಎಲ್ಲ 162 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸ್ಮಾರ್ಟ್ ವೇಯಿಂಗ್ ಮಷಿನ್ ಪದ್ಧತಿ ಅಳವಡಿಕೆ. 5 ತರಕಾರಿ ಮಾರುಕಟ್ಟೆಗಳಲ್ಲಿ -ಠಿ;10 ಕೋಟಿ ವೆಚ್ಚದಲ್ಲಿ ಸಮಗ್ರ ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ಘಟಕಗಳ ಸ್ಥಾಪನೆ.

ಭತ್ತ ಬೆಳೆಯಲು ಉತ್ತೇಜನ
ಭತ್ತದ ಕೃಷಿ ಪ್ರದೇಶ ಕುಂಠಿತವಾಗುವುದನ್ನು ತಡೆಯಲು ಕರಾವಳಿ ಮತ್ತು ಮಲೆನಾಡು ಭಾಗದ ರೈತರಿಗೆ ಭತ್ತ ಬೆಳೆಯಲು ಹೆಕ್ಟೇರ್​ಗೆ 7500 ರೂ. ಪ್ರೋತ್ಸಾಹಧನ ನೀಡಲು ಕರಾವಳಿ ಪ್ಯಾಕೇಜ್​ಗೆ 5 ಕೋಟಿ ರೂ. ಅನುದಾನ.

ಡಿಕೆಶಿ ಪವರ್​ಗೆ ಎಚ್​ಡಿಕೆ ಮಣೆ
ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಮತ್ತೊಮ್ಮೆಸಾಮರ್ಥ್ಯ ಮೆರೆದಿದ್ದಾರೆ. ತಾವು ಜವಾಬ್ದಾರಿ ಹೊತ್ತಿರುವ ಜಲಸಂಪನ್ಮೂಲ ಇಲಾಖೆಗೆ ಈ ಬಾರಿ ಭರ್ಜರಿ ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 2019-20ನೇ ಸಾಲಿನಲ್ಲಿ ಒಟ್ಟು 17,212 ಕೋಟಿ ರೂ. ಮೀಸಲಿಡಲಾಗಿದೆ.

ಬಿಎಸ್​ವೈ ಮೇಲೆ ಮಮತೆ: ರಾಜಕೀಯ ವೈಷಮ್ಯ ಏನೇ ಇದ್ದರೂ, ಯಡಿಯೂರಪ್ಪ ಅವರ ಮೇಲೆ ಬಜೆಟ್​ನಲ್ಲಿ ಮಮತೆ ತೋರಿಸಿದ್ದು, ಅವರು ಪ್ರತಿನಿಧಿಸುವ ಶಿಕಾರಿಪುರ ಕ್ಷೇತ್ರದಲ್ಲಿ 200 ಕೆರೆ ತುಂಬಿಸುವ ಉಡುಗಣಿ-ತಾಳಗುಂದ ಹೊಸೂರು ಯೋಜನೆಗೆ 200 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ಭಾರಿ-ಮಧ್ಯಮ ನೀರಾವರಿ: ಏತ ನೀರಾವರಿ ಯೋಜನೆಗಳಿಗೆ 1563 ಕೋಟಿ ರೂ.

# ಕೆರೆ ತುಂಬಿಸುವ ಯೋಜನೆಗಳಿಗೆ 1,680 ಕೋಟಿ ರೂ.

# ಸಮಗ್ರ ಅಭಿವೃದ್ಧಿ ಕಾಮಗಾರಿಗಳಿಗೆ 445 ಕೋಟಿ ರೂ.

# ನೀರಾವರಿ ಯೋಜನೆಗಳಿಗೆ 477 ಕೋಟಿ ರೂ.

# ಕಾಲುವೆ ಆಧುನೀಕರಣ-ಅಭಿವೃದ್ಧಿ ಕಾಮಗಾರಿಗಳಿಗೆ 860 ಕೋಟಿ ರೂ.

# ಬ್ರಿಡ್ಜ್​ ಮತ್ತು ಬ್ಯಾರೇಜ್ ನಿರ್ಮಾಣ ಕಾಮಗಾರಿಗಳಿಗೆ 160 ಕೋಟಿ ರೂ.

# ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ 506 ಕೋಟಿ ರೂ.

# ಮಂಚನಬೆಲೆ ಜಲಾಶಯ ಕೆಳಭಾಗದ ಉದ್ಯಾನವನ ಅಭಿವೃದ್ಧಿ, ಪ್ರವಾಸೋದ್ಯಮ ಚಟುವಟಿಕೆಗೆ 125 ಕೋಟಿ ರೂ.

# ಹಾರಂಗಿ ಜಲಾನಯನ ಪ್ರದೇಶ ಹಾಗೂ ನದಿಪಾತ್ರದ ಪುನಶ್ಚೇತನಕ್ಕೆ 75 ಕೋಟಿ ರೂ.

ಸಣ್ಣ ನೀರಾವರಿ: ಕೆ.ಸಿ.ವ್ಯಾಲಿ ಯೋಜನೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ 40 ಎಂಎಲ್​ಡಿ ನೀರು ಕೊಂಡೊಯ್ಯಲು ಪೈಪ್​ಲೈನ್ ಅಳವಡಿಕೆ ಕಾಮಗಾರಿಗೆ 40 ಕೋಟಿ ರೂ.

# ಪಾಂಡವಪುರ ತಾಲೂಕಿನ ಬಳಘಟ್ಟ ಗ್ರಾಪಂ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ 100 ಕೋಟಿ ರೂ.

# ಬೀದರ್ ಜಿಲ್ಲೆಯ ಎಲ್ಲ ಕೆರೆಗಳ ಸುಧಾರಣೆಗೆ ಇನ್ನು 3 ವರ್ಷಗಳಲ್ಲಿ 300 ಕೋಟಿ ರೂ. ವೆಚ್ಚ

# ಶಿವಮೊಗ್ಗ ಜಿಲ್ಲೆಯ ಹೊಳೆ ಹನಸವಾಡಿ ಗ್ರಾಮದ ಸಮೀಪದ ತುಂಗಾ ನದಿಯಿಂದ ಏತ ನೀರಾವರಿ ಮೂಲಕ 8 ಕೆರೆಗಳಿಗೆ ನೀರು ತುಂಬಿಸಲು 13 ಕೋಟಿ ರೂ.

# ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಕೌಜಲಗಿ, ಗೋಸಬಾಳ ಹಾಗೂ ಸುತ್ತಲಿನ ಹಳ್ಳಿಗಳ 2,500 ಎಕರೆ ಜಮೀನುಗಳಿಗೆ ಕಲ್ಲಮರಡಿ ಏತ ನೀರಾವರಿ ಯೋಜನೆ ಜಾರಿ

# ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿರುವ ತಾಲೂಕುಗಳ ಅಂತರ್ಜಲ ವೃದ್ಧಿಗೋಸ್ಕರ ಚೆಕ್​ಡ್ಯಾಂ, ಬ್ಯಾರೇಜ್ ಬಾಂದಾರ, ಕೊಳವೆಬಾವಿಗಳ ಮರುಪೂರಣ ರಚನೆ ಕಾಮಗಾರಿಗಳಿಗೆ 10 ಕೋಟಿ ರೂ.

ಸ್ವಚ್ಛ ಕರ್ನಾಟಕಕ್ಕೆ ಒತ್ತು
ಸ್ವಚ್ಛಮೇವ ಜಯತೆ ಆಂದೋಲನ ಮೂಲಕ 100 ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿಗೆ ಒತ್ತು ನೀಡಲಾಗಿದೆ. ಇಲ್ಲಿ ಒಣ ಮತ್ತು ಹಸಿ ತ್ಯಾಜ್ಯವನ್ನು ವಿಂಗಡಿಸಿ ಒಣ ಕಸ ಮರುಬಳಕೆ ಹಾಗೂ ಗೊಬ್ಬರಕ್ಕೆ ಹಸಿ ಕಸ ಬಳಸಲಾಗುತ್ತದೆ.

ನಮ್ಮದು ಡಿಜಿಟಲ್ ಕರ್ನಾಟಕ: ರಾಜ್ಯ ಸರ್ಕಾರಕ್ಕೆ ಡಿಜಿಟಲ್ ಕರ್ನಾಟಕ ಮೂಲಕ ಆದಾಯ ತಂದುಕೊಳ್ಳುವ ನಿಟ್ಟಿನಲ್ಲೂ ಚಿಂತನೆ ನಡೆಸಿರುವ ಸಿಎಂ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಆಸ್ತಿಗಳ ಡಿಜಿಟಲೀಕರಣಕ್ಕೆ ಮುಂದಾಗಿದ್ದಾರೆ. ಆ ಮೂಲಕ ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಸೇರಿಸಲು ಕ್ರಮ ಕೈಗೊಂಡಿದ್ದಾರೆ.

ಅನಿರ್ಬಂಧಿತ ಅಭಿವೃದ್ಧಿಗೆ ಹಣ
ಪ್ರತಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಲ್ಲಿ ಎದುರಾಗುವ ತುರ್ತು ಅಭಿವೃದ್ಧಿ ಕಾಮಗಾರಿಗಳಿಗೆ ಪ್ರತಿ ಬಾರಿಯೂ ಒಪ್ಪಿಗೆ ಪಡೆಯಲು ಸಾಧ್ಯವಿಲ್ಲವೆಂಬ ನಿಟ್ಟಿನಲ್ಲಿ ಈಗಾಗಲೇ ಜಾರಿಯಲ್ಲಿರುವ ‘ಅನಿರ್ಬಂಧಿತ ಅಭಿವೃದ್ಧಿ ಅನುದಾನ’ಕ್ಕೆ ಹೆಚ್ಚುವರಿ ಹಣವನ್ನು ಸಿಎಂ ಘೋಷಿಸಿದ್ದಾರೆ. ಪ್ರತಿ ಜಿಪಂಗೆ ಗರಿಷ್ಠ ಮೊತ್ತವನ್ನು 8 ಕೋಟಿ ರೂ.ಗೆ ಹೆಚ್ಚಿಸಿ, 172 ಕೋಟಿ ರೂ. ಅನುದಾನ ಮೀಸಲಿಟ್ಟರೆ, ಪ್ರತಿ ತಾಪಂಗೆ ಗರಿಷ್ಠ 2 ಕೋಟಿ ರೂ.ವರೆಗೆ ಹೆಚ್ಚಿಸಿ, 372 ಕೋಟಿ ರೂ. ಮೀಸಲಿಟ್ಟಿದ್ದಾರೆ.

ಗೃಹಲಕ್ಷ್ಮೀ ಬೆಳೆ ಸಾಲ ಯೋಜನೆ
ರೈತರಿಗಾಗಿ ಆಭರಣಗಳ ಮೇಲೆ ಶೇ.3 ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸುವ ಗೃಹಲಕ್ಷ್ಮೀ ಬೆಳೆ ಸಾಲ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ. ಸಣ್ಣ, ಅತಿ ಸಣ್ಣ ರೈತರು ಅವರ ಆಭರಣಗಳ ಮೇಲೆ ಶೇ. 3 ದರದಲ್ಲಿ ಸಾಲಸೌಲಭ್ಯವನ್ನು ಗೃಹಲಕ್ಷ್ಮೀ ಯೋಜನೆಯಡಿ ಪಡೆದುಕೊಳ್ಳಬಹುದು.

ಇದಲ್ಲದೆ ಕೃಷಿ ಮಾರುಕಟ್ಟೆಗಳಲ್ಲಿ ಶಾಶ್ವತ ಸಂಗ್ರಹಣಾ ಕೇಂದ್ರಗಳನ್ನು ಆರಂಭಿಸಲು 510 ಕೋಟಿ ರೂ. ಮೀಸಲಿಡಲಾಗಿದೆ. ಹುಬ್ಬಳ್ಳಿ, ಗದಗ, ಹಾವೇರಿ, ಕುಂದಗೋಳ, ಅಣ್ಣಿಗೇರಿಯಲ್ಲಿ ಮೆಣಸು ಮತ್ತು ಹೆಸರುಕಾಳು ಬೆಳೆಗಳ ಜೀವಿತಾವಧಿ ಹೆಚ್ಚಿಸಲು ಆಧುನಿಕ ಪ್ಯಾಕೇಜಿಂಗ್ ಪದ್ಧತಿಯಾದ ಗುಣವಿಶ್ಲೇಷಣೆ ಮತ್ತು ಸಂಸ್ಕರಣಾ ಘಟಕ ಪ್ರಾರಂಭಿಸಲು 160 ಕೋಟಿ ರೂ. ಒದಗಿಸಿದೆ.

ಗ್ರಾಮೀಣ ಬಲವರ್ಧನೆಗೆ ಜಲವರ್ಧನೆಯ ಭಜನೆ
ರಾಜ್ಯ ಸಮ್ಮಿಶ್ರ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಬಲವರ್ಧನೆಗೆ ಮುಂದಾಗಿರುವುದು ಆಯವ್ಯಯದಲ್ಲಿ ಗೋಚರವಾಗುತ್ತಿದೆ. 2019ನ್ನು ‘ಜಲವರ್ಷ’ ಎಂದು ಘೋಷಿಸಿ, ಜಲಾಮೃತ ಯೋಜನೆಯಲ್ಲಿ 20,000 ಜಲಸಂರಕ್ಷಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದಕ್ಕಾಗಿ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳಿಗೆ 500 ಕೋಟಿ ರೂ. ಮೀಸಲಿಟ್ಟಿದೆ. ರಾಯಚೂರು, ವಿಜಯಪುರ, ಮಂಡ್ಯ ಮತ್ತು ಕೋಲಾರ ಜಿಲ್ಲೆಗಳಲ್ಲಿ 4000 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ‘ಜಲಧಾರೆ’ಯೋಜನೆ ಆರಂಭಕ್ಕೆ ಕ್ರಮ ವಹಿಸಲಾಗುತ್ತಿದೆ. ಇನ್ನು ನರೇಗಾ ಯೋಜನೆಯಲ್ಲಿ 12 ಕೋಟಿ ಮಾನವ ದಿನಗಳ ಸೃಜನೆಯ ಗುರಿ ಹಾಕಿಕೊಂಡಿದ್ದರೆ, ನರೇಗಾ ಮೂಲಕ 90 ಕೋಟಿ ರೂ. ವ್ಯಯಿಸಿ ‘ಸುಭದ್ರ ಶಾಲೆ ಯೋಜನೆ’ಯನ್ವಯ 6825 ಗ್ರಾಮೀಣ ಶಾಲೆಗಳಿಗೆ ಕಾಂಪೌಂಡ್ ನಿರ್ವಣಕ್ಕೆ ಮುಂದಾಗಿದೆ.

ಕೃಷಿಗೊಂದು ಹೊಸ ದೃಷ್ಟಿಕೋನ

| ಡಾ.ಎಸ್.ಎ.ಪಾಟೀಲ್ ಮಾಜಿ ನಿರ್ದೇಶಕ, ಐಎಆರ್​ಐ, ನವದೆಹಲಿ

ಈ ಬಜೆಟ್ ಕೃಷಿ ಹಾಗೂ ಅವಲಂಬಿತ ಕ್ಷೇತ್ರಗಳಿಗೆ ಹೊಸ ದೃಷ್ಟಿಕೋನವನ್ನು ನೀಡಿದೆ. ಕೆಲವೊಂದು ವಲಯಕ್ಕೆ ಅನುದಾನ ಕಡಿಮೆ ಎನಿಸಿದರೂ ಉತ್ತಮ ಕಾರ್ಯಕ್ರಮ ರೂಪಿಸಲಾಗಿದೆ. ಹಿಂದಿನ ಸರ್ಕಾರದ ಒಳ್ಳೆಯ ಯೋಜನೆಯಾದ ಕೃಷಿಭಾಗ್ಯಕ್ಕೆ ಅನುದಾನ ಹೆಚ್ಚಿಸಬೇಕಾಗಿತ್ತು. ಕೆರೆಗಳನ್ನು ತುಂಬಿಸುವುದು ಅಂತರ್ಜಲ ಅಭಿವೃದ್ಧಿ ಹಾಗೂ ರೈತರ ದೃಷ್ಟಿಯಲ್ಲಿ ನೋಡಿದಾಗ ಸೂಕ್ತವಾದ ಯೋಜನೆ. ರಾಜಸ್ಥಾನ ನಂತರ ಬರ ನಿರ್ವಹಣೆಗೆ ಇದರಿಂದ ಅನುಕೂಲವಾಗಲಿದೆ. ಮಾರುಕಟ್ಟೆ ಮಧ್ಯಪ್ರವೇಶಕ್ಕೆ ಹೆಚ್ಚಿನ ಅನುದಾನ ಇಟ್ಟಿರುವುದರಿಂದ ಬೆಲೆ ಕುಸಿತದ ವೇಳೆ ರೈತರಿಗೆ ಅನುಕೂಲವಾಗುತ್ತದೆ. ಸಾವಯವ ಹಾಗೂ ಶೂನ್ಯ ಬಂಡವಾಳ ಕೃಷಿಗೆ ನೀಡಿರುವ ಆದ್ಯತೆ ಹಾಗೂ ಇಸ್ರೇಲ್ ಮಾದರಿ ಯೋಜನೆಗೆ ಅನುದಾನ ಹೆಚ್ಚು ಮಾಡಿರುವುದು ಸ್ವಾಗತಾರ್ಹ. ಮೀನುಗಾರಿಕೆ, ಪಶುಸಂಗೋಪನೆಗೆ ನೀಡಿರುವ ಒತ್ತು ಕೃಷಿ ಅವಲಂಬಿತ ರೈತರಿಗೆ ಹೆಚ್ಚಿನ ವರಮಾನಕ್ಕೆ ದಾರಿಯಾಗುತ್ತದೆ.

ಸಹಕಾರ ಇಲಾಖೆಯ ಮೂಲಕ ಆರಂಭಿಸುತ್ತಿರುವ ಗುಂಪು ಕೃಷಿಯನ್ನು 500ಕ್ಕೆ ಸೀಮಿತ ಮಾಡಬಾರದಿತ್ತು. ಕುರಿಗಳ ಜತೆಗೆ ಮೇಕೆಗಳ ಅಭಿವೃದ್ಧಿಗೂ ಒತ್ತು ನೀಡಿದ್ದರೆ ಚೆನ್ನಾಗಿತ್ತು. ನಾಟಿ ಕೋಳಿ ಅಭಿವೃದ್ಧಿಗೆ ಆದ್ಯತೆ ನೀಡಿರುವ ಕಾರಣ ರೈತರಿಗೆ ಮತ್ತೊಂದು ಸಣ್ಣ ಪ್ರಮಾಣದ ವರಮಾನಕ್ಕೆ ಅವಕಾಶ ಕಲ್ಪಿಸಿದಂತಾಗಿದೆ. ಹಾಲಿನ ಪ್ರೋತ್ರಾಹ ಧನ ಹೆಚ್ಚಳ ಹೈನೋದ್ಯಮ ಅಭಿವೃದ್ಧಿಗೆ ಪೂರಕವಾಗಿದೆ. ಕೃಷಿಗೆ ರಾಜ್ಯದಿಂದಲೇ ಪ್ರತ್ಯೇಕ ವಿಮೆ ಸೌಲಭ್ಯ ಕಲ್ಪಿಸಲು ಮುಂದಾಗಿರುವುದು ಪ್ರಶಂಸನೀಯ.

ರೇಷ್ಮೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದರೆ ಉತ್ತರ ಕರ್ನಾಟಕದಲ್ಲಿ ರೇಷ್ಮೆ ಹೆಚ್ಚಾಗಿ ಬೆಳೆಯುವುದಿಲ್ಲ. ಆದ್ದರಿಂದ ಆ ಭಾಗದಲ್ಲಿಯೂ ರೇಷ್ಮೆ ಬೆಳೆಗೆ ಆದ್ಯತೆ ನೀಡಬೇಕಾಗುತ್ತದೆ. ತೋಟಗಾರಿಕೆಗೆ ಇನ್ನಷ್ಟು ಆದ್ಯತೆ ಅಗತ್ಯವಿತ್ತು. ಹೈದರಾಬಾದ್ ಕರ್ನಾಟಕ ಅಭಿವೃದ್ದಿ ಮಂಡಳಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಆದರೆ ಇದೇ ಮಂಡಳಿಯ ಮೂಲಕ ಇನ್ನೂ 500 ಕೋಟಿ ರೂ. ಹೆಚ್ಚಿನ ಅನುದಾನ ನೀಡಿ ಆ ಭಾಗದ ಕೃಷಿಗೆ ಆದ್ಯತೆ ನೀಡಬಹುದಾಗಿತ್ತು. ಕೃಷಿಗೆ ನೀಡಿದ ಆದ್ಯತೆಯು ಗ್ರಾಮೀಣ ಅಭಿವೃದ್ಧಿಗೂ ಪೂರಕವಾಗುತ್ತದೆ. ದೊಡ್ಡದಾದ ಯೋಜನೆ ಅಲ್ಲದಿದ್ದರೂ ಸಣ್ಣ ಸಣ್ಣ ಯೋಜನೆಗಳ ಮೂಲಕ ಕೃಷಿ ಹಾಗೂ ಗ್ರಾಮೀಣ ವಲಯದಲ್ಲಿ ಬದಲಾವಣೆಗೆ ಮುನ್ನುಡಿ ಬರೆಯಲಾಗಿದೆ.

ಸಾಲ ಪರಿಹಾರ ಆಯೋಗ
ಕೇರಳ ಮಾದರಿಯಲ್ಲಿ ರಾಜ್ಯದಲ್ಲಿಯೂ ಸಾಲ ಪರಿಹಾರ ಆಯೋಗ ಸ್ಥಾಪಿಸುವ ಬಗ್ಗೆ ಪರಿಶೀಲಿಸುವ ಭರವಸೆಯನ್ನು ಸರ್ಕಾರ ನೀಡಿದೆ. ಇದಲ್ಲದೆ, ರಾಜ್ಯ ಉಗ್ರಾಣ ನಿಗಮದಲ್ಲಿ ಕೃಷಿ ಉತ್ಪನ್ನ ಸಂಗ್ರಹಣೆ ಮಾಡಿದಲ್ಲಿ ರೈತರಿಗೆ ಉಚಿತವಾಗಿ ಗರಿಷ್ಠ 8 ತಿಂಗಳು ವೈಜ್ಞಾನಿಕ ಸಂಗ್ರಹಣೆ ಸೌಲಭ್ಯ, ಅಡಮಾನ ಸಾಲದ ಮೇಲೆ ಭಾಗಶಃ ಬಡ್ಡಿ ಸಹಾಯಧನ ಹಾಗೂ ಕನಿಷ್ಠ ಸಾಗಾಣಿಕೆ ವೆಚ್ಚ ಒದಗಿಸಲು 200 ಕೋಟಿ ರೂ. ವೆಚ್ಚ ಮಾಡಲಾಗುವುದು. ಮುಂದಿನ ಐದು ವರ್ಷದಲ್ಲಿ ತಲಾ ಒಂದು ಕೋಟಿ ರೂ. ವೆಚ್ಚದಲ್ಲಿ 600 ಗ್ರಾಮೀಣ ಸಂತೆಗಳಿಗೆ ಮೂಲಸೌಕರ್ಯ ಒದಗಿಸುವುದು, ಕಿರು ಮಾರುಕಟ್ಟೆಗಳಾಗಿ ಅಭಿವೃದ್ಧಿ ಮತ್ತು ರೈತರಿಗೆ ನೇರ ಮಾರಾಟಕ್ಕೆ ಅವಕಾಶ ಒದಗಿಸುವ ಸಂಬಂಧ ಕ್ರಮಕೈಗೊಳ್ಳಲು ಸರ್ಕಾರ ಮುಂದಾಗಿದೆ.

ಹಿಂದೆ ಹೀಗಿತ್ತು…
ಹಣಕಾಸು ಸಚಿವರಾಗಿದ್ದ ರಾಮಕೃಷ್ಣ ಹೆಗಡೆ 1966-67ರಲ್ಲಿ ಮಂಡಿಸಿದ ಮುಂಗಡಪತ್ರದಲ್ಲಿ ದಲಿತರಿಗೆ ಮನೆ, 20 ಉದ್ಯೋಗ ವಿನಿಮಯ ಕೇಂದ್ರಗಳ ಸ್ಥಾಪನೆ, ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿದರು. 1968-69ರಲ್ಲಿ ಕನ್ನಡ ಸಾಹಿತ್ಯ ಪರಿಷತ್​ಗೆ ಆರ್ಥಿಕ ನೆರವು ಒದಗಿಸಿದರು. 1983-84ರಲ್ಲಿ ಸಮಗ್ರ ಶಿಕ್ಷಣ ಕಾಯ್ದೆ, ಮೀನುಬಲೆ ತಯಾರಿಕೆ ಕಾರ್ಖಾನೆ, ಕುಶಲಕರ್ವಿುಗಳಿಗೆ ಸೌಕರ್ಯ ಕೇಂದ್ರ, ಪಡಿತರ ಅಕ್ಕಿ, ಗೋಧಿಗೆ ಸಹಾಯ, ಕಡಿಮೆ ಬೆಲೆಗೆ ಸೀರೆ,ಧೋತಿ, ಶಾಲಾ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ, ಪಠ್ಯ ಪುಸ್ತಕ, ನರ್ಸಿಂಗ್ ನಿರ್ದೇಶನಾಲಯ, ಧಾರವಾಡ ಕೃಷಿ ವಿವಿ ಘೋಷಣೆ ಮಾಡಿದರು. 1985-86ರಲ್ಲಿ ದುಡಿಮೆಯ ಹಕ್ಕು, ವಿಶ್ವ ಕನ್ನಡ ಸಮ್ಮೇಳನ, ಜನತಾ ಚಿತ್ರಮಂದಿರ, ಗ್ರಾಮೀಣ ಸಾಲ ಘೋಷಿಸಿದ್ದರು. 1988-89ರಲ್ಲಿ 100 ಎಸ್​ಸಿ-ಎಸ್​ಟಿ ಹಾಸ್ಟೆಲ್, 50 ಆಶ್ರಮ ಶಾಲೆ, 100 ಹಿಂದುಳಿದ ವರ್ಗಗಳ ಶಾಲೆ, ಮೊಟ್ಟೆ ಮಾರುಕಟ್ಟೆ ಮಂಡಳಿ, ಬೆಸ್ತರಿಗಾಗಿ ವಿಮಾ ಯೋಜನೆಗೆ ಆದ್ಯತೆ ನೀಡಿದರು. 1989-90ರಲ್ಲಿ ಎಸ್.ಆರ್. ಬೊಮ್ಮಾಯಿ ಕೃಷಿ ಉತ್ಪಾದನೆ ಹೆಚ್ಚಿಸುವ ಹಸಿರು ಕಿರಣ ಯೋಜನೆ ತಂದರು.

ಬಹುಮತವಿಲ್ಲದ ಸರ್ಕಾರ ಬಜೆಟ್ ಮಂಡಿಸಿದೆ. ಈ ಬಜೆಟ್​ನಲ್ಲಿಯೂ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ರೈತರ ಸಾಲಮನ್ನಾದ ಬಗ್ಗೆ ಸ್ಪಷ್ಟವಾಗಿ ಘೋಷಣೆ ಮಾಡದೇ, ಮುಖ್ಯಮಂತ್ರಿಗಳು ರೈತರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದೊಂದು ನಿರಾಶಾದಾಯಕ ಬಜೆಟ್.

| ಡಾ.ಪ್ರಭಾಕರ ಕೋರೆ ರಾಜ್ಯಸಭೆ ಸದಸ್ಯ

- Advertisement -

Stay connected

278,453FansLike
560FollowersFollow
607,000SubscribersSubscribe

ವಿಡಿಯೋ ನ್ಯೂಸ್

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...

VIDEO: ರೋಹಿತ್​ ಶರ್ಮಾ...

ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿಖರ್​ ಧವನ್​ ಅವರ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿಕ್ಕಾಪಟೆ, ಲೈಕ್ಸ್​, ಕಾಮೆಂಟ್ಸ್​ಗಳು ಬರುತ್ತಿವೆ. ರೋಹಿತ್​ ಶರ್ಮಾ ಹಾಗೂ...

VIDEO: ಹೊಸ ಟ್ರಾಫಿಕ್​...

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ...

VIDEO| ಈ​ ವಿಡಿಯೋ...

ಬೀಜಿಂಗ್​: ಕಣ್ಣಿಗೆ ಕಾಣುವುದೆಲ್ಲಾ ಸತ್ಯವಲ್ಲ ಎಂಬುದಕ್ಕೆ ಈ ಘಟನೆ ಒಳ್ಳೆಯ ಉದಾಹರಣೆ. ಚೀನಾದ ಯಾಂಗ್ಜೆ ನದಿಯಲ್ಲಿ ನಿಗೂಢವಾಗಿ ಹಾಗೂ ವಿಚಿತ್ರವಾಗಿ ಗೋಚರವಾದ ಕಪ್ಪುಬಣ್ಣದ ಜೀವಿಯನ್ನು ಹೋಲುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲ...

VIDEO: ದುರ್ಗಾಪೂಜಾ ಥೀಮ್​...

ಕೋಲ್ಕತ: ತೃಣಮೂಲ ಕಾಂಗ್ರೆಸ್​ನಿಂದ ನೂತನವಾಗಿ ಆಯ್ಕೆಯಾದ ಸಂಸದೆಯರಾದ ನುಸ್ರತ್ ಜಹಾನ್​ ಹಾಗೂ ಮಿಮಿ ಚಕ್ರಬರ್ತಿ ದುರ್ಗಾಪೂಜಾ ಹಾಡಿಗೆ ಮನಮೋಹಕವಾಗಿ ನೃತ್ಯ ಮಾಡಿದ್ದು ವಿಡಿಯೋ ಭರ್ಜರಿ ವೈರಲ್​ ಆಗಿದೆ. ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿರುವ ಈ...