19 C
Bangalore
Thursday, November 14, 2019

ಬಂಡವಾಳ ಸಂಗ್ರಹಕ್ಕೆ ಮೆಗಾ ಜಿಮ್

Latest News

ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಟೊಮ್ಯಾಟೊಗೆ ಬೆಲೆ ಎಷ್ಟಿರಬಹುದು? ಎಂದು ಊಹಿಸಬಲ್ಲಿರಾ?

ಇಸ್ಲಮಾಬಾದ್​: ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ಭಾರತದಿಂದ ಆಮದು ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ಪಾಕಿಸ್ತಾನದಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ...

ಬೇಷರತ್ ಕ್ಷಮೆಯಾಚಿಸಿದ್ದ ರಾಹುಲ್ ಗಾಂಧಿ: ನ್ಯಾಯಾಂಗ ನಿಂದನೆ ಮೊಕದ್ದಮೆ ಕೈ ಬಿಟ್ಟ ಸುಪ್ರೀಂ ಕೋರ್ಟ್​

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಉಲ್ಲೇಖಿಸಿ ಚೌಕೀದಾರ್​ ಚೋರ್ ಹೈ ಎಂದಿದ್ದ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿಯವರ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಚಾರಣೆ...

ಕಂಠೀರವ ಸ್ಟುಡಿಯೋದಲ್ಲಿ ರೆಬಲ್ ಸ್ಟಾರ್ ದಿ. ಅಂಬರೀಷ್ ಅವರ ಮೊದಲ ಪುಣ್ಯ ತಿಥಿ: ಅರಮನೆ ಮೈದಾನದಲ್ಲಿ ಬೃಹತ್​ ಕಾರ್ಯಕ್ರಮ

ಬೆಂಗಳೂರು: ಖ್ಯಾತ ನಟ ಹಾಗೂ ಮಾಜಿ ಸಚಿವ ದಿ. ಅಂಬರೀಷ್ ಅವರ ಮೊದಲ ವರ್ಷದ ಪುಣ್ಯ ತಿಥಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಕಂಠೀರವ...

ದೇಶದ ಕಾರು ಮಾರುಕಟ್ಟೆಯ ಟಾಪ್ 10 ಕಾರುಗಳ ಪಟ್ಟಿಗೆ ಕೊರಿಯನ್​ ಕಂಪನಿ ಕಾರು!: ಉಳಿದಂತೆ ಮಾರುತಿಯದ್ದೇ ಕಾರುಬಾರು..

ಮುಂಬೈ: ದೇಶದ ಕಾರು ಮಾರುಕಟ್ಟೆಯ ಕಳೆದ ತಿಂಗಳ ಕಾರು ಮಾರಾಟ ದತ್ತಾಂಶ ಪ್ರಕಾರ, ಟಾಪ್​ 10 ಕಾರುಗಳ ಪಟ್ಟಿಯಲ್ಲಿ ಮಾರುತಿ ಕಾರುಗಳದ್ದೇ ಕಾರುಬಾರು....

ರಫೇಲ್ ವಿವಾದ ಇನ್ನು ಮುಗಿದ ಅಧ್ಯಾಯ: ಮರುಪರಿಶೀಲನಾ ಅರ್ಜಿಗಳು ವಜಾಗೊಳಿಸಿ ಸುಪ್ರೀಂ ಆದೇಶ

ನವದೆಹಲಿ: ವಿವಾದಾತ್ಮಕ ರಫೇಲ್ ಒಪ್ಪಂದವನ್ನು ಮೇಲ್ವಿಚಾರಣೆ ನಡೆಸುವಂತೆ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ತಳ್ಳಿಹಾಕಿದೆ. ರಫೇಲ್ ಒಪ್ಪಂದವನ್ನು ನ್ಯಾಯಾಲಯ ತನಿಖೆಗೆ ಒಳಪಡಿಸುವುದಿಲ್ಲ ಎಂದು...

ರಾಜ್ಯದ ಕೈಗಾರಿಕಾ ವಲಯಕ್ಕೆ ಬಂಡವಾಳ ಆಕರ್ಷಿಸುವ ಸಲುವಾಗಿ 2020ರ ಜನವರಿಯಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಆಯೋಜಿಸಲಾಗುತ್ತದೆ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.

ಕೈಗಾರಿಕೆಗಳನ್ನು ಬೆಂಗಳೂರಿನಿಂದ ಎರಡನೇ ಹಾಗೂ ಮೂರನೇ ಹಂತದ ನಗರಗಳಿಗೆ ಕೊಂಡೊಯ್ಯಲು ಸಿಎಂ ಮುಂದಾಗಿದ್ದಾರೆ. 2014ರಲ್ಲಿ ರೂಪಿಸಿದ ಕರ್ನಾಟಕ ಕೈಗಾರಿಕಾ ನೀತಿ 2019ರ ಸೆಪ್ಟೆಂಬರ್​ಗೆ ಮುಕ್ತಾಯವಾಗಲಿದೆ. ನೂತನ ಕೈಗಾರಿಕಾ ನೀತಿಯಲ್ಲಿ ವಿಶೇಷವಾಗಿ ಹಿಂದುಳಿದ ಪ್ರದೇಶಗಳು, ಎರಡನೇ ಹಂತದ, ಮೂರನೇ ಹಂತದ ನಗರಗಳಿಗೆ ಬಂಡವಾಳವನ್ನು ಆಕರ್ಷಿಸುವ ಮತ್ತು ವಿನೂತನ ತಂತ್ರಜ್ಞಾನಗಳು ಹಾಗೂ ಹೆಚ್ಚಿನ ಉದ್ಯೋಗ ಸಷ್ಟಿಗೆ ಅವಕಾಶವಿರುವ ವಲಯಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದಿದ್ದಾರೆ.

ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ‘ಎಂಎಸ್​ಎಂಇ-ಸಾರ್ಥಕ್’ ಯೋಜನೆಯನ್ನು ಕುಮಾರಸ್ವಾಮಿ ಘೋಷಿಸಿದ್ದಾರೆ. ಎಂಎಸ್​ಎಂಇಗಳು ತಮ್ಮಉತ್ಪನ್ನಗಳನ್ನು ಮಾರುಕಟ್ಟೆಗೆ ತರುವಲ್ಲಿ ಅಗಾಧ ಸವಾಲುಗಳನ್ನು ಎದುರಿಸುತ್ತಿವೆ. ಈ ಪ್ರಕ್ರಿಯೆಯಲ್ಲಿ ಎದುರಾಗುವ ತೊಂದರೆಗಳನ್ನು ನಿವಾರಿಸಲು ಹೊಸ ಯೋಜನೆ ಜಾರಿಗೆ ತರಲಾಗುವುದು. ಗುಣಮಟ್ಟದ ಕಚ್ಚಾವಸ್ತು ಪಡೆಯಲು, ಸಾಲ ಸೌಲಭ್ಯ ಪಡೆಯಲು, ದುಡಿಮೆ ಬಂಡವಾಳ ಮತ್ತು ರಾಜ್ಯದಾದ್ಯಂತ ಗುರುತಿಸಬಹುದಾದ ಬ್ರಾಂಡನ್ನು ಸಿದ್ಧಮಾದರಿಯಲ್ಲಿ ಇದು ಒದಗಿಸುತ್ತದೆ. ಈ ಕಾರ್ಯಕ್ಕೆ 5 ಕೋಟಿ ರೂ. ಮೀಸಲಿಟ್ಟಿರುವುದಾಗಿ ತಿಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಆಧರಿತ ಸೇವೆಗಳು ಹಾಗೂ ಸಂಶೋಧನೆಯಲ್ಲಿ ಬಂಡವಾಳ ಹೂಡಿಕೆ ಅವಕಾಶಗಳನ್ನು ಒದಗಿಸಿ ವೇಗ ನೀಡುವ ಸಲುವಾಗಿ 2014ರಲ್ಲಿ ರೂಪಿಸಿದ ಕರ್ನಾಟಕ ಐಟಿ, ಐಟಿಇಎಸ್, ಇನ್ನೊವೇಷನ್ ಇನ್ಸೆಂಟಿವ್ಸ್ ನೀತಿಯನ್ನು ಪರಿಷ್ಕರಿಸಲಾಗುತ್ತದೆ. ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ವಾಣಿಜ್ಯೋದ್ಯಮ ಪ್ರೋತ್ಸಾಹಿಸಲು ಉತ್ತೇಜನ ನೀಡಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ. ಕರ್ನಾಟವೃ ಕೈಗಾರಿಕಾ ಪ್ರದೇಶಾಭಿವದ್ಧಿ ಮಂಡಳಿ ವತಿಯಿಂದ ಅರಸೀಕೆರೆ (ಹಾಸನ), ನಾಗಮಂಗಲ (ಮಂಡ್ಯ), ಚಿತ್ತಾಪುರ(ಕಲಬುರಗಿ), ಮುಳವಾಡ (ವಿಜಯಪುರ), ಕಣಗಲಾ(ಬೆಳಗಾವಿ) ಮತ್ತು ಮಧುಗಿರಿಯಲ್ಲಿ(ತುಮಕೂರು) ಕೈಗಾರಿಕಾಗೆ ಗಳ ಅಭಿವೃದ್ಧಿ ಮಾಡಲು ಪ್ರಸ್ತಾಪಿಸಲಾಗಿದೆ. ಆದರೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಕಳೆದ ವರ್ಷ ಮೀಸಲಿಟ್ಟಿದ್ದ 2,256 ಕೋಟಿ ರೂ. ಅನುದಾನದಲ್ಲಿ ಕಡಿತ ಮಾಡಿ 2,167 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ. ವಗೆ ತಂತ್ರಜ್ಞಾನ ಇಲಾಖೆಗೂ ಕಳೆದ ವರ್ಷದ 257 ಕೋಟಿ ರೂ. ಅನುದಾನವನ್ನು ತಗ್ಗಿಸಿ 190 ಕೋಟಿ ರೂ. ಒದಗಿಸಲಾಗಿದೆ.

ತುಮಕೂರಿನಲ್ಲಿ 2 ಲಕ್ಷ ಉದ್ಯೋಗ
ತುಮಕೂರು ಜಿಲ್ಲೆಯ ವಸಂತನರಸಾಪುರದ 9,629 ಎಕರೆ ಪ್ರದೇಶದಲ್ಲಿ ಈಗಾಗಲೆ ಜಾರಿಯಲ್ಲಿರುವ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆಯ ತುಮಕೂರು ನಾಡ್​ನಲ್ಲಿ 2 ಲಕ್ಷ ಜನರಿಗೆ ಉದ್ಯೋಗ ಸೃಜನೆ ಗುರಿ ಹೊಂದಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಮೂಲಸೌಕರ್ಯಕ್ಕೆ ವಿವರವಾದ ಮಾಸ್ಟರ್ ಪ್ಲಾನ್ ತಯಾರಿಸುತ್ತಿದ್ದು, 50,000 ಕೋಟಿ ರೂ. ವರೆಗೆ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆಯಿದೆ. ವಸಂತನರಸಾಪುರ, ತುಮಕೂರು, ರಾಮನಗರ ಮತ್ತು ಬೆಂಗಳೂರು ನಡುವೆ ರೈಲು ಆಧರಿತ ಸಮರ್ಥ ಮತ್ತು ಅನುಕೂಲಕರ ಸಾಗಾಣಿಕೆ ವ್ಯವಸ್ಥೆಯನ್ನು ಪ್ರತ್ಯೇಕ ಟ್ರಾಕ್​ಗಳ ಮೇಲೆ ಸ್ಥಾಪಿಸಲಾಗುತ್ತದೆ ಎಂದಿದ್ದಾರೆ.

ತೆಂಗಿನನಾರು ಅಭಿವೃದ್ಧಿಗೆ ನೀತಿ
ಕಲ್ಪವಕ್ಷ ಕಾಯಕ -ಸಮಗ್ರ ತೆಂಗಿನ ನಾರಿನ ನೀತಿ ಜಾರಿ ಮಾಡಲಾಗುವುದು ಎಂದು ಸರ್ಕಾರ ಘೋಷಿಸಿದೆ. ಸ್ವಸಹಾಯ ಸಂಘಗಳ ಮೂಲಕ ತೆಂಗಿನ ಸಿಪ್ಪೆ ಸಂಗ್ರಹಣೆಗೆ ಶೇ.10 ಸಹಾಯಧನ ಪಾವತಿಸಲಾಗುವುದು. ತೆಂಗಿನ ನಾರಿನ ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸಿದಲ್ಲಿ ಶೇ. 90 ಅಥವಾ 25 ಲಕ್ಷ ರೂ.ವರೆಗೆ ಸಹಾಯಧನ, ತೆಂಗಿನ ನಾರನ್ನು ಉಪಯೋಗಿಸಿ ಮೌಲ್ಯಾಧಾರಿತ ಉತ್ಪನ್ನಗಳ ಉತ್ಪಾದನೆ ಘಟಕಕ್ಕೆ 1 ಕೋಟಿ ರೂ.ವರೆಗೆ ಸಹಾಯಧನ ನೀಡಲಾಗುತ್ತದೆ. ಸಣ್ಣ, ಅತಿ ಸಣ್ಣ ತೆಂಗಿನ ನಾರಿನ ಘಟಕಗಳಿಗೆ ಸಾಮಾನ್ಯ ಸೌಲಭ್ಯ ಒದಗಿಸಲು ತೆಂಗಿನ ನಾರಿನ ಕ್ಲಸ್ಟರ್​ಗಳನ್ನು ಅಭಿವದ್ಧಿಪಡಿಸಲಾಗುವುದು. ಈ ಕಾರ್ಯಕ್ರಮಗಳಿಗೆ 80 ಕೋಟಿ ರೂ. ನೀಡಲಾಗುತ್ತದೆ.

ಅಧಿಕಾರಿಗಳಿಗೆ ಐಟಿ ತರಬೇತಿ
#  ಇ-ಆಡಳಿತದಲ್ಲಿನ ಆಧುನಿಕ ತಂತ್ರಜ್ಞಾನದ ಬಗ್ಗೆ ಆಯ್ದ ಅಧಿಕಾರಿಗಳಿಗೆ ದೇಶದ ಪ್ರಮುಖ ಹಾಗೂ ಖ್ಯಾತ ಸಂಸ್ಥೆಗಳಿಗೆ ಹೆಚ್ಚಿನ ತರಬೇತಿಗೆ ನಿಯೋಜನೆ.
# ಸರ್ಕಾರಿ ಸೇವೆಗಳಲ್ಲಿ ಇ ಆಡಳಿತ ಹೆಚ್ಚಿಸುವ ಅನೇಕ ನಿರ್ಧಾರಗಳನ್ನು ಘೋಷಿಸಲಾಗಿದೆ.

# ಸರ್ಕಾರಿ ಸೇವೆ ಒದಗಿಸಲು ಹಾಗೂ ಗ್ರಾಹಕ ಸೇವೆಗಳನ್ನು ಉತ್ತಮಗೊಳಿಸಲು ಕೃತಕ ಬುದ್ಧಿಮತ್ತೆಯ ಚಾಟ್​ಬಾಟ್ ಹಾಗೂ ಬಿಗ್ ಡೇಟಾ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಅಗತ್ಯ ಮೂಲಭೂತ ಸೌಕರ್ಯ ಸ್ಥಾಪಿಸಲು ಕ್ರಮ
# ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಬಳಕೆ ಮತ್ತು ಅಭಿವೃದ್ಧಿ ಕಾರ್ಯಕ್ರಮ
# ಸಚಿವಾಲಯದ ಎಲ್ಲ ಕಚೇರಿಗಳಲ್ಲಿ ಇ-ಆಫೀಸ್ ಉಪಯೋಗಿಸುವುದು ಕಡ್ಡಾಯ.
#ರಾಜ್ಯ ಸರ್ಕಾರದ ಜಾಲತಾಣಗಳನ್ನು ಏಕರೂಪ ಟೆಂಪ್ಲೇಟ್​ಗೆ ಅಳವಡಿಸಿ ನಾಗರಿಕ ಸ್ನೇಹಿ ಜಾಲತಾಣವನ್ನಾಗಿ ಮಾಡಲು ಕ್ರಮ
# ರಾಜ್ಯ ಸರ್ಕಾರದ ಜಾಲತಾಣಗಳು ಅಂಗವಿಕಲ ಸ್ನೇಹಿಗೊಳಿಸಲು ಕ್ರಮ
# ಸಚಿವಾಲಯದ ಸ್ಥಳೀಯ ಪ್ರದೇಶ ನೆಟ್​ವರ್ಕ್(ಲ್ಯಾನ್) ವ್ಯವಸ್ಥೆಯನ್ನು ಉನ್ನತೀಕರಿಸಿ, ಹೆಚ್ಚಿನ
# ಸಾಮರ್ಥ್ಯದ ಸುರಕ್ಷಿತ ಹಾಗೂ ವಿಶ್ವಾಸಾರ್ಹ ನಿಸ್ತಂತು(ವೈರ್​ಲೆಸ್) ನೆಟ್​ವರ್ಕ್ ನೀಡಲಾಗುತ್ತದೆ.
# ಮೈಸೂರಿನ ಆಡಳಿತ ತರಬೇತಿ ಕೇಂದ್ರ ಮತ್ತು ಪ್ರತಿ ಜಿಲ್ಲಾ ತರಬೇತಿ ಕೇಂದ್ರಗಳಲ್ಲಿ ಇ-ಆಡಳಿತ ತರಬೇತಿ ಕೋಶ ಸ್ಥಾಪಿಸಿ, ಸರ್ಕಾರದ ಸಿಬ್ಬಂದಿಯ ಸಾಮರ್ಥ್ಯ ವೃದ್ಧಿ
# ರಾಜ್ಯದಲ್ಲಿನ ಆಸಕ್ತ ವಿದ್ಯಾರ್ಥಿಗಳಿಗೆ ಇ-ಆಡಳಿತ ವಿಚಾರದಲ್ಲಿ ಇಂಟರ್ನ್​ಷಿಪ್ ಅಥವಾ ತರಬೇತಿ ಯೋಜನೆ
# ಪ್ರಾರಂಭಿಸಿ, ಉದಯೋನ್ಮುಖ ಕಂಪನಿ ಹಾಗೂ ಸಂಸ್ಥೆಗಳಿಗೆ ಸಮಂಜಸವಾದ ದರಕ್ಕೆ ಅಗತ್ಯ ಮಾಹಿತಿಯನ್ನು ಒದಗಿಸುವ ಮೂಲಕ ಜನ ಸಾಮಾನ್ಯರ ಮತ್ತು ಕೃಷಿಕ ಸಮಾಜಕ್ಕೆ ಉಪಯೋಗವಾಗುವ ಐಟಿ ವ್ಯವಸ್ಥೆಗಳ ಬೆಳವಣಿಗೆಗೆ ಪೋ›ತ್ಸಾಹ ನೀಡಲು ಇನ್ಪೋನಾಮಿಕ್ಸ್ ಶಾಖೆ ಆರಂಭ.

ನೀರು, ಹಣ ಸೋರಿಕೆಗೆ ಬ್ರೇಕ್
ಪೌರಾಡಳಿತ ನಿರ್ದೇಶನಾಲಯಗಳಲ್ಲಿ ನೀರು ಸರಬರಾಜು ವ್ಯವಸ್ಥೆಯಲ್ಲಿ ನೀರು ಸೋರಿಕೆ ಮತ್ತು ನೀರು ಸರಬರಾಜಿನಲ್ಲಿ ಆದಾಯ ಸೋರಿಕೆ ತಡೆಗಟ್ಟಲು ಹಾಗೂ ನೀರಿನ ದರದಲ್ಲಿ ಏಕರೂಪತೆ ತರಲು ಪ್ರತ್ಯೇಕ ನೀರು ದರ ನಿಗದಿ ಸಲಹಾ ಕೋಶ ಸ್ಥಾಪನೆಯಾಗಲಿದೆ.

ಇತರೆ ಘೋಷಣೆ: 2ನೇ ಹಂತದ ನಗರಗಳಲ್ಲಿ ರ್ಪಾಂಗ್ ನಿಯಮ ಜಾರಿ ಹಾಗೂ ಸುಧಾರಿತ ಸಂಚಾರ ಮಾಹಿತಿ ಮತ್ತು ನಿರ್ವಹಣಾ ವ್ಯವಸ್ಥೆ ಅಧ್ಯಯನಕ್ಕೆ ಕ್ರಮ
# ಮಂಗಳೂರಿನಲ್ಲಿ ಕರ್ನಾಟಕ ಜ್ಞಾನ-ಆರೋಗ್ಯ ಸಮೃದ್ಧಿ ಪರಿಧಿಯನ್ನು(ಕಾರಿಡಾರ್)ಮಣಿಪಾಲದಿಂದ ಕೊಣಾಜೆಯವರೆಗೆ ಅಭಿವೃದ್ಧಿಪಡಿಸುವ ಬಗ್ಗೆ ಕಾರ್ಯಸಾಧ್ಯತಾ ವರದಿ ತಯಾರಿಸಲು ಕ್ರಮ.

ವರ್ಗಾವಣೆಗೆ ಕೌನ್ಸೆಲಿಂಗ್
ಸರ್ಕಾರದಲ್ಲಿ ಪ್ರಮುಖವಾಗಿ ಕೇಳಿಬರುವ ವರ್ಗಾವಣೆ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡಲು ಕುಮಾರಸ್ವಾಮಿ ಮನಸ್ಸು ಮಾಡಿದ್ದಾರೆ. ಎಲ್ಲ ಇಲಾಖೆಯಲ್ಲಿನ ಸಿ ಮತ್ತು ಡಿ ದರ್ಜೆ ನೌಕರರ ವರ್ಗಾವಣೆಯನ್ನು ಸಂಪೂರ್ಣ ಕೌನ್ಸೆಲಿಂಗ್ ಮೂಲಕ ಪಾರದರ್ಶಕವಾಗಿ ನಡೆಸಲು ಕಾಯ್ದೆ ರೂಪಿಸಲಾಗುತ್ತದೆ ಎಂದಿದ್ದಾರೆ. ರಾಜ್ಯದ ಸುಮಾರು 6 ಲಕ್ಷ ಸರ್ಕಾರಿ ನೌಕರರಲ್ಲಿ ಎ ಮತ್ತು ಬಿ ವರ್ಗವನ್ನು ಹೊರತುಪಡಿಸಿ ಸುಮಾರು 5 ಲಕ್ಷದಷ್ಟು ಸಿ ಮತ್ತು ಡಿ ದರ್ಜೆ ನೌಕರರಿದ್ದಾರೆ.

11,250 ಕೋಟಿ ರೂ. ಸಹಾಯಧನ
ರೈತರಿಗೆ ಉಚಿತವಾಗಿ ನೀಡಲಾಗುತ್ತಿದ್ದ ನೀರಾವರಿ ಪಂಪ್​ಸೆಟ್, ಭಾಗ್ಯಜ್ಯೋತಿ, ಕುಟೀರಜ್ಯೋತಿ ಗ್ರಾಹಕರ ಸಹಾಯಧನವನ್ನು 11,250 ಕೋಟಿ ರೂ.ಗೆ ಸರ್ಕಾರ ಹೆಚ್ಚಿಸಿದೆ. 2018-19ರ ಬಜೆಟ್​ನಲ್ಲಿ 9,250 ಕೋಟಿ ರೂ.ಸಹಾಯಧನ ನೀಡಲಾಗಿತ್ತು. ರೈತರ ನೀರಾವರಿ ಪಂಪ್​ಸೆಟ್​ಗಳಿಗೆ ಸಾಧ್ಯವಾದಷ್ಟು ಹಗಲಿನಲ್ಲೇ ವಿದ್ಯುತ್ ಪೂರೈಕೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಗುಣಮಟ್ಟದ ವಿದ್ಯುತ್ ಒದಗಿಸಲು 40 ಸಾವಿರ ಹೊಸ ಟ್ರಾನ್ಸ್​ಫಾರ್ಮರ್ ಅಳವಡಿಕೆ ಮಾಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

ಒಂದೊತ್ತಿನ ಊಟ ಸಾಕಾ?

| ನಿತಿನ್ ಮಹದೇವಪ್ಪ ತೆರಿಗೆ ತಜ್ಞ

ಜಿಎಸ್​ಟಿ ವಿಚಾರದಲ್ಲಿ ಏನನ್ನೂ ಮಾಡಲು ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಅವಕಾಶವಿಲ್ಲ. ತೆರಿಗೆ ನಷ್ಟಕ್ಕೆ ಐದು ವರ್ಷಗಳ ಕಾಲ ಮಾತ್ರ ಪರಿಹಾರ ಸಿಗುತ್ತದೆ. ಆದರೆ ಮುಖ್ಯಮಂತ್ರಿ ಅವರು 2025ರ ತನಕ ಮುಂದುವರಿಸುವಂತೆ ಕೇಳುವುದಾಗಿ ಹೇಳಿದ್ದಾರೆ.

ಇದು 2.34 ಲಕ್ಷ ಕೋಟಿ ರೂ.ಗಳ ಮೊತ್ತದ ಬಜೆಟ್ ಆಗಿದೆ. ಅದರಲ್ಲಿ ರಾಜ್ಯ ಸರ್ಕಾರದ ಸಂಪನ್ಮೂಲ 1.8 ಲಕ್ಷ ಕೋಟಿ ರೂ.ಗಳು ಮಾತ್ರ. ಕೊರತೆಯಾಗುವ ಹಣವನ್ನು ಸಾಲದ ರೂಪದಲ್ಲಿಯೇ ಪಡೆಯಬೇಕಾಗಿದೆ. ಅದಕ್ಕಾಗಿ ಸುಮಾರು 48 ಸಾವಿರ ಕೋಟಿ ರೂ.ಗಳಷ್ಟು ಸಾಲ ಮಾಡುತ್ತಿದ್ದು, ಆ ಮೊತ್ತವನ್ನು ಬಂಡವಾಳ ವೆಚ್ಚಕ್ಕೆ ತೊಡಗಿಸುವುದಾಗಿ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ಆದರೆ ಲೋಕಸಭಾ ಚುನಾವಣೆ ಹತ್ತಿರವಿರುವಾಗ ಅದನ್ನು ಗಮನದಲ್ಲಿಟ್ಟುಕೊಂಡು ಈ ಮುಂಗಡಪತ್ರ ರೂಪಿಸಿರುವುದು ಕಂಡುಬರುತ್ತದೆ. ಆದ್ದರಿಂದ ಇದು ಬೆಳವಣಿಗೆಗೆ ಪೂರಕವಲ್ಲದ ಬಜೆಟ್ ಆಗಿದೆ.

ಇವತ್ತಿಗೆ ಮಾತ್ರ ಊಟ ಸಾಕು ಎಂಬ ಧೋರಣೆ ಈ ಬಜೆಟ್​ನಲ್ಲಿದೆ. ತೆರಿಗೆಯಲ್ಲಿ ಮೂರನೇ ಒಂದು ಭಾಗ ಎಂಬ ಥಿಯೆರಿ ಇದೆ. ಅದನ್ನು ಇಲ್ಲಿ ಮುಖ್ಯಮಂತ್ರಿ ಅಳವಡಿಸಿಕೊಂಡಿಲ್ಲ. ಬಂಡವಾಳ ವೆಚ್ಚ ಹೆಚ್ಚಾಗಿದ್ದರೆ ಆಸ್ತಿ ಸೃಜನೆ ಆಗುತ್ತಿತ್ತು. ಅದರಿಂದ ಭವಿಷ್ಯದಲ್ಲೂ ಪ್ರಯೋಜನವಾಗುತ್ತಿತ್ತು.

ಇಂದಿನ ಹಣಕಾಸಿನ ಪರಿಸ್ಥಿತಿಯಲ್ಲಿ ಬಂಡವಾಳ ವೆಚ್ಚ ಕಡಿಮೆಯಾಗಿರು ವುದು ಕಂಡು ಬರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಬಂಡವಾಳ ವೆಚ್ಚ ದುಪ್ಪಟ್ಟು ಮಾಡಿ, ಜನಾಕರ್ಷಕ ಯೋಜನೆಗಳನ್ನು ಕಡಿಮೆ ಮಾಡಿದ್ದರೆ ದುಡಿಯುವ ಅವಕಾಶಗಳನ್ನು ಹೆಚ್ಚು ಮಾಡಲು, ಆ ಮೂಲಕ ಉದ್ಯೋಗಸೃಷ್ಟಿಗೆ ಅವಕಾಶಗಳಿದ್ದವು. ಕಳೆದ ವರ್ಷದ ಸಾಲಮನ್ನಾ ನಿರ್ಧಾರದಿಂದ ಆಗಿರುವ ಪರಿಣಾಮಗಳು ಈ ಬಜೆಟ್​ನಲ್ಲಿ ಕಂಡು ಬರುತ್ತಿ್ತೆ. ತೆರಿಗೆ ಸಂಪನ್ಮೂಲಗಳನ್ನು ಹೆಚ್ಚು ಮಾಡಿಕೊಳ್ಳಲು ಅವಕಾಶವಿಲ್ಲ. ಹೀಗಾಗಿ ಬಜೆಟ್​ನಲ್ಲಿ ಘೋಷಣೆ ಮಾಡಿರುವ ಎಲ್ಲ ಯೋಜನೆಗಳ ಅನುಷ್ಠಾನ ಇಂದಿನ ಸೀಮಿತ ಸಂಪನ್ಮೂಲದಲ್ಲಿ ದೊಡ್ಡ ಸವಾಲಿನಂತೆ ಭಾಸವಾಗುತ್ತಿದೆ. 2.34 ಲಕ್ಷ ಕೋಟಿ ರೂ.ಗಳಲ್ಲಿ ಕನಿಷ್ಠ 70 ಸಾವಿರ ಕೋಟಿ ರೂ.ಗಳನ್ನು ಬಂಡವಾಳಕ್ಕೆ ತೊಡಗಿಸಿದ್ದರೆ ಮೂಲಸೌಕರ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲು ಅವಕಾಶಗಳಿದ್ದವು. ಆದರೆ ಆ ಕೆಲಸವನ್ನು ಮಾಡಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಫಲರಾಗಿದ್ದಾರೆ.

ತ್ಯಾಜ್ಯದಿಂದ ತಯಾರಾಗಲಿದೆ ವಿದ್ಯುತ್
ಮಾನವ ತ್ಯಾಜ್ಯ ಕಲ್ಮಶದ ನಿರ್ವಹಣೆ ಮತ್ತು ವಿಲೇವಾರಿಗೆ ಪ್ರಾಯೋಗಿಕವಾಗಿ ಕಲ್ಮಶ ನಿರ್ವಹಣಾ ಘಟಕ (ಎಫ್​ಎಸ್​ಎಸ್​ಎಂ)ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ. ಘಟಕದಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡಿ ವಿದ್ಯುತ್ ಉತ್ಪಾದನೆಗೆ ನಿರ್ಧರಿಸಲಾಗಿದ್ದು, ಇದರಿಂದಾಗಿ ಘನ ತ್ಯಾಜ್ಯ ವಿಲೇವಾರಿ ವೆಚ್ಚ ಹಾಗೂ ತ್ಯಾಜ್ಯದ ಸಮಸ್ಯೆ ಕಡಿಮೆಯಾಗಲಿದೆ ಎಂದು ಉಲ್ಲೇಖಿಸಲಾಗಿದೆ. ಜತೆಗೆ ನೀರು ಸಂಸ್ಕರಣಾ ಘಟಕಗಳು ಮತ್ತು ತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ ಸೌರ ವಿದ್ಯುತ್ ಸ್ಥಾವರ ಸ್ಥಾಪನೆಗೆ ನಿರ್ಧರಿಸಲಾಗಿದೆ. ಇಲ್ಲಿ ಉತ್ಪಾದನೆಯಾಗುವ ವಿದ್ಯುಚ್ಛಕ್ತಿಯನ್ನು ನೀರು ಸಂಸ್ಕರಣಾ ಘಟಕ, ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಬಳಸಿಕೊಳ್ಳುವ ಯೋಜನೆಯನ್ನು ಈ ಬಾರಿಯ ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿದೆ.

ನೆರೆಯಿಂದ ಎಚ್ಚೆತ್ತ ಸರ್ಕಾರ
ಬೆಂಗಳೂರು ಹಾಗೂ ಮಂಗಳೂರು ನಗರ ಪ್ರದೇಶದಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ನೆರೆಯಿಂದ ಸಂಭವಿಸಿದ ಅನಾಹುತಗಳ ನಂತರ ಸರ್ಕಾರ ಎಚ್ಚೆತ್ತಿದೆ. ಬಿಬಿಎಂಪಿ ಸೇರಿ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಲ್ಲಿ ಬಾಹ್ಯ ಅನುದಾನ ಆಧಾರಿತ ಯೋಜನೆಯಡಿ ಪೂರ್ಣ ಪ್ರಮಾಣದಲ್ಲಿ ಬೃಹತ್ ಮಳೆ ನೀರು ಕಾಲುವೆಗಳ ಮರುನಿರ್ವಣಕ್ಕೆ

ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಸೌರಶಕ್ತಿಗೆ ಪ್ರೋತ್ಸಾಹ: ಪ್ರಸ್ತುತ 12,747 ಮೆಗಾವಾಟ್ ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿರುವ ಕರ್ನಾಟಕ, ಮುಂದಿನ ವರ್ಷಾಂತ್ಯದಲ್ಲಿ ಇನ್ನೂ 2,100 ಮೆಗಾವಾಟ್ ಹೆಚ್ಚಿನ ಸೌರಶಕ್ತಿ ಉತ್ಪಾದನೆ ಮಾಡಲಿದೆ.

ಗಣಿಗಳ ಡ್ರೋನ್ ಸಮೀಕ್ಷೆ
ದೇಶದಲ್ಲೇ ಮೊದಲ ಬಾರಿಗೆ ರಾಜ್ಯದ ಗಣಿ ಗುತ್ತಿಗೆಗಳಲ್ಲಿ 82 ಕೋಟಿ ರೂ.ವೆಚ್ಚದಲ್ಲಿ ನೂತನ ಡ್ರೋನ್ ತಂತ್ರಜ್ಞಾನ ಮತ್ತು ಡಿಜಿಪಿಎಸ್ ತಂತ್ರಜ್ಞಾನ ಬಳಸಿ ಸಮೀಕ್ಷೆ ಕೈಗೊಳ್ಳಲು ಕ್ರಮ ಕೈಗೊಳ್ಳುವ ಘೋಷಣೆಯಾಗಿದೆ. ಈ ಸಮೀಕ್ಷೆ ಮೂಲಕ ಇಲಾಖೆ ನೀಡಿರುವ ಗಣಿಗಾರಿಕೆ ಮಿತಿ ಹಾಗೂ ಗಣಿಗಾರಿಕೆ ಮಾಡಿರುವ ಪ್ರದೇಶದ ವ್ಯತ್ಯಾಸ ಕಂಡುಹಿಡಿದು ಅಕ್ರಮ ಗಣಿಗಾರಿಕೆ ತಡೆಗಟ್ಟಬಹುದಾಗಿದೆ.

ಬೆಂಗಳೂರಿನ ದೊಡ್ಡಬಿದರಕಲ್ಲು ಬಳಿ ಕಾವೇರಿ ಎಂಪೋರಿಯಂ ಒಡೆತನದಲ್ಲಿನ ಜಾಗದಲ್ಲಿ ಕಲಾಗ್ರಾಮ ಸ್ಥಾಪಿಸಿ ಅಂತಾರಾಷ್ಟ್ರೀಯ ಮಟ್ಟದ ಮ್ಯೂಸಿಯಂ, ಬಯಲು ರಂಗಮಂದಿರ ನಿರ್ವಿುಸಿ, ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲು 10 ಕೋಟಿ ರೂ.

ಪ್ರತಿಯೊಬ್ಬರ ಮನೆಬಾಗಿಲಿಗೆ ಸರ್ಕಾರಿ ಸೇವೆ
ಈ ಹಿಂದೆ ಜಾರಿಯಾದಾಗ ದೇಶಾದ್ಯಂತ ಪ್ರಸಿದ್ಧಿಪಡೆದು ಇದೀಗ ಕಳೆಗುಂದಿರುವ ಸಕಾಲ ಯೋಜನೆಯನ್ನು ಬಲಪಡಿಸಲಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಸ್ವಸಹಾಯ ಕಿಯಾಸ್ಕ್​ಗಳ ಸ್ಥಾಪನೆ ಮೂಲಕ ಸಕಾಲ ಸೇವೆಗಳಿಗೆ ಅರ್ಜಿ ಸಲ್ಲಿಕೆಗೆ ಮತ್ತು ಸೇವೆ ಪಡೆಯಲು ನಾಗರಿಕರಿಗೆ ಅನುವು ಮಾಡಿಕೊಡಲಾಗುತ್ತಿದೆ. ಮನೆ ಬಾಗಿಲಿಗೆ ಸರ್ಕಾರದ ನಾಗರಿಕ ಸೇವೆಗಳು ಎಂಬ ನೂತನ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಿ ಆಯ್ದ ಸೇವೆಗಳನ್ನು ನಾಗರಿಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಸದ್ಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಇಲಾಖೆ ಅಧೀನದ ಪ್ರಿ ಮೆಟ್ರಿಕ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಇ-ಆಡಳಿತ ಇಲಾಖೆ ರೂಪಿಸಿರುವ ರಾಜ್ಯ ಸ್ಕಾಲರ್​ಷಿಪ್ ಪೋರ್ಟಲ್ ವ್ಯವಸ್ಥೆಯನ್ನು ಎಲ್ಲ ಇಲಾಖೆಯ ಫಲಾನುಭವಿಗಳಿಗೂ ವಿಸ್ತರಿಸಲಾಗುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಕಾಂಪಿಟ್ ವಿತ್ ಚೀನಾಗೆ ಬಲ
ಕಳೆದ ವರ್ಷ ಬಜೆಟ್​ನಲ್ಲಿ ಘೋಷಿಸಿದ್ದ ಕಾಂಪಿಟ್ ವಿತ್ ಚೀನಾ ಯೋಜನೆಗೆ ಕುಮಾರಸ್ವಾಮಿ ಹೆಚ್ಚು ಶಕ್ತಿ ತುಂಬಲು ಮುಂದಾಗಿದ್ದಾರೆ. ಚೀನಾ ಉತ್ಪಾದಿತ ಪೀಠೋಪಕರಣ, ಸೌರಶಕ್ತಿ ವಸ್ತುಗಳು, ಎಲೆಕ್ಟ್ರಿಕ್ ಲೈಟ್, ಸ್ನಾನಗೃಹ ವಸ್ತುಗಳು, ಎಲೆಕ್ಟ್ರಿಕ್ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಆಟಿಕೆಗಳು ಲಭ್ಯವಾಗುತ್ತಿವೆ. ಚೀನಾ ಕಳೆದ ಎರಡು ದಶಕಗಳಲ್ಲಿ ಉತ್ಪಾದನಾ ವಲಯದಲ್ಲಿ ಅಗಾಧ ಅಭಿವೃದ್ಧಿ ಸಾಧಿಸಿದ್ದು ನಮ್ಮ ದೇಶದಲ್ಲಿಯೂ ಚೀನಿ ವಸ್ತುಗಳು ಮಾರುಕಟ್ಟೆಗೆ ದಾಳಿಯಿಟ್ಟು ದೇಶದ ಸ್ವಂತ ಉದ್ದಿಮೆಗಳು ಮುಚ್ಚುವ ಸ್ಥಿತಿಗೆ ಬಂದಿದೆ. ದೇಶಿ ಉತ್ಪಾದನೆಯನ್ನು ಹೆಚ್ಚಿಸಲು ಯೋಜನೆ ಘೋಷಿಸಲಾಗಿತ್ತು. 2018ರ ಆ.10ಕ್ಕೆ ಯೋಜನೆ ಜಾರಿಗೆ ಆಯಾ ಉದ್ದಿಮೆ ಸಂಬಂಧಿಸಿ ವಿಷನ್ ಗ್ರೂಪ್ ರಚಿಸಲಾಗಿದೆ. ಆ. 23ಕ್ಕೆ ನೋಡಲ್ ಅಧಿಕಾರಿ ನೇಮಿಸಲಾಗಿದೆ. 2018ರ ಸೆ.14ಕ್ಕೆ ಯೋಜನೆಗೆ ಅನುಮೋದನೆ ನೀಡಲಾಗಿದೆ. ನ.11ಕ್ಕೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ. 9 ಜಿಲ್ಲೆಗಳಲ್ಲಿ 9 ಕೈಗಾರಿಕಾ ಕ್ಲಸ್ಟರ್​ಗಳನ್ನು ಸ್ಥಾಪಿಸಲಾಗುತ್ತಿದೆ. ಕೊಪ್ಪಳ, ಬಳ್ಳಾರಿ, ಕೋಲಾರ ಜಿಲ್ಲೆಗಳಲ್ಲಿ ಉದ್ಯಮ ಸ್ಥಾಪನೆಗೆ ಈಗಾಗಲೇ ಹೂಡಿಕೆದಾರರು ಮುಂದಾಗಿದ್ದಾರೆ. ಮುಂದಿನ ನಾಲ್ಕೂವರೆ ವರ್ಷದಲ್ಲಿ ಈ 9 ಜಿಲ್ಲೆಗಳಲ್ಲಿ ತಲಾ ಒಂದು ಲಕ್ಷದಂತೆ 9 ಲಕ್ಷ ಉದ್ಯೋಗ ಸೃಷ್ಟಿಸುವ ಆಶಯ ಹೊಂದಲಾಗಿದೆ. ಈ ಕಾರ್ಯಕ್ರಮಗಳನ್ನು ಮುಂದುವರಿಸಲು ಪ್ರಸಕ್ತ ವರ್ಷದಲ್ಲಿ 110 ಕೋಟಿ ರೂ. ಅನುದಾನವನ್ನು ಕುಮಾರಸ್ವಾಮಿ ಒದಗಿಸಿದ್ದಾರೆ.

ಇತರ ನಿರ್ಧಾರಗಳು:ಸಾಂಪ್ರದಾಯಿಕ ಉದ್ಯಮಗಳಲ್ಲಿ ಹೊಸ ವಿನ್ಯಾಸದ ಉತ್ಪನ್ನಗಳನ್ನು ತಯಾರಿಸಲು ಅನುಕೂಲ ಕಲ್ಪಿಸಲು, ಡಿಸೈನ್ ಕ್ಲಿನಿಕ್​ಗಳ ಸ್ಥಾಪನೆಗೆ 2 ಕೋಟಿ ರೂ. ಅನುದಾನ
# ವಿದ್ಯುತ್ ಮಗ್ಗಗಳಿಂದ ಶಬ್ದ ಮಾಲಿನ್ಯ ತಡೆಗಟ್ಟಲು ಘಟಕಕ್ಕೆ ಅಕೋಸ್ಟಿಕ್ ಉಪಕರಣಗಳ ಅಳವಡಿಕೆಗಾಗಿ ಶೇ.75 ಸಹಾಯಧನ ನೀಡಲು 5 ಕೋಟಿ ರೂ. ಮೀಸಲು.
# ಹೋಲಿಗೆ ಯಂತ್ರ ಚಾಲನೆ ತರಬೇತಿ ಪಡೆದ ಮಹಿಳಾ ಅಭ್ಯರ್ಥಿಗಳಿಗೆ ಇಂಡಸ್ಟ್ರೀಯಲ್ ಹೊಲಿಗೆ ಯಂತ್ರ ಖರೀದಿಗೆ ಶೇ. 50 ಸಹಾಯ ಧನ ನೀಡಲು 2 ಕೋಟಿ ರೂ. ಮೀಸಲು.
# ಹಲವಾರು ವರ್ಷಗಳಿಂದ ನಷ್ಟದಲ್ಲಿರುವ ಮಂಡ್ಯದ ಮೈಶುಗರ್ ಕಾರ್ಖಾನೆಯ ಸ್ಥಳದಲ್ಲಿ ಹೊಸ ಕಾರ್ಖಾನೆ ನಿರ್ವಿುಸಿ ಡಿಸ್ಟಿಲರಿ ಘಟಕ, ಸಕ್ಕರೆ ಘಟಕ, ಬಾಯ್ಲಿಂಗ್ ಹೌಸ್ ದುರಸ್ತಿ ಮತ್ತು ಎಥನಾಲ್ ಯಂತ್ರೋಪಕರಣ ಹಾಗೂ ಮೊಲಾಸಸ್ ಟ್ಯಾಂಕ್ ಅಳವಡಿಸಲು 100 ಕೋಟಿ ರೂ.
# ಕೈಗಾರಿಕಾ ಶೆಡ್​ಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ಬಂಡವಾಳ ಹೂಡಿಕೆದಾರರಿಗೆ ಪೋ›ತ್ಸಾಹಧನ ನೀಡಲು 50 ಕೋಟಿ ರೂ. ಮೀಸಲು.

ಮೂರು ನಗರಗಳಿಗೆ ಮೆಟ್ರೋ
ಮೈಸೂರು, ಮಂಗಳೂರು ಹಾಗೂ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡದಲ್ಲಿ ಮೆಟ್ರೋ ಯೋಜನೆ ಅನುಷ್ಠಾನದ ಕಾರ್ಯಸಾಧ್ಯತಾ ವರದಿ ತಯಾರಿಸಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ನಡುವೆ ಕೆಲ ತಿಂಗಳ ಹಿಂದಷ್ಟೇ ಬಸ್ ರ್ಯಾಪಿಡ್ ಟ್ರಾನ್ಸ್​ಪೋರ್ಟ್ ಸಿಸ್ಟಂ ಉದ್ಘಾಟನೆಯಾಗಿತ್ತು. ಇದರ ಜತೆಗೆ ಮೆಟ್ರೋ ಯೋಜನೆಯೂ ಅವಳಿ ನಗರಕ್ಕೆ ದೊರೆಯುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ 95 ಕಿ.ಮೀ. ಉದ್ದದ 3ನೇ ಹಂತದ ಮೆಟ್ರೋ ಯೋಜನೆಯನ್ನು ಕಳೆದ ಬಜೆಟ್​ನಲ್ಲಿ ಘೋಷಿಸಲಾಗಿತ್ತು. ಸಾಮಾನ್ಯವಾಗಿ 20 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಷ್ಟೇ ಮೆಟ್ರೋ ಯೋಜನೆ ಕಾಣಬಹುದಾಗಿದೆ. ಹೀಗಿದ್ದರೂ ಈ ನಗರಗಳಿಂದ ಮೆಟ್ರೋಗಾಗಿ ಬೇಡಿಕೆ ಕೇಳಿಬಂದ ಹಿನ್ನೆಲೆಯಲ್ಲಿ ಸಾಧಕ-ಬಾಧಕಗಳ ಕುರಿತು ವರದಿ ತಯಾರಿಸಲಾಗುತ್ತಿದೆ ಎಂದರು.

ಹಿಂದೆ ಹೀಗಿತ್ತು…
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಎರಡನೇ ಆಯವ್ಯಯ ಸೇರಿದಂತೆ ರಾಜ್ಯದಲ್ಲಿ ಇದುವರೆಗೆ 72 ಮುಂಗಡಪತ್ರಗಳು ಮಂಡನೆಯಾಗಿವೆ. ಈವರೆಗೆ 18 ಮಂದಿ ಹಣಕಾಸು ಸಚಿವರು ರಾಜ್ಯದ ಬಜೆಟ್ ಮಂಡಿಸಿದ್ದಾರೆ. ಅತಿ ಹೆಚ್ಚು ಬಜೆಟ್ ಮಂಡಿಸಿದ ಕೀರ್ತಿ ರಾಮಕೃಷ್ಣ ಹೆಗಡೆ ಹಾಗೂ ಸಿದ್ದರಾಮಯ್ಯ ಅವರದಾಗಿದೆ. ಈ ಇಬ್ಬರೂ ತಲಾ 13 ಬಜೆಟ್ ಮಂಡಿಸಿದ್ದರೆ, ಎಂ.ವೈ. ಘೋರ್ಪಡೆ ಏಳು, ಬಿ.ಎಸ್. ಯಡಿಯೂರಪ್ಪ ಆರು, ಟಿ. ಮರಿಯಪ್ಪ ಹಾಗೂ ಎಂ. ವೀರಪ್ಪ ಮೊಯಿಲಿ ತಲಾ 5, ಕೆಂಗಲ್ ಹನುಮಂತಯ್ಯ ಹಾಗೂ ಎಸ್.ಎಂ. ಕೃಷ್ಣ ತಲಾ 4, ಬಿ.ಡಿ. ಜತ್ತಿ ಮೂರು, ಎಸ್.ಎಂ. ಯಾಹ್ಯಾ, ಎಸ್. ಬಂಗಾರಪ್ಪ ಹಾಗೂ ಕುಮಾರಸ್ವಾಮಿ ತಲಾ ಎರಡು, ಎ.ಜಿ. ರಾಮಚಂದ್ರರಾವ್, ಎಸ್.ಆರ್. ಕಂಠಿ, ಎಸ್.ಆರ್. ಬೊಮ್ಮಾಯಿ, ಎಂ. ರಾಜಶೇಖರಮೂರ್ತಿ, ಡಿ.ವಿ. ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್ ತಲಾ ಒಂದು ಆಯವ್ಯಯ ಮಂಡಿಸಿದ್ದಾರೆ. ಹಣಕಾಸು ಸಚಿವರಾಗಿದ್ದರೂ ಪಿ.ಜಿ.ಆರ್. ಸಿಂಧ್ಯಾ ಅವರಿಗೆ ಬಜೆಟ್ ಮಂಡಿಸಲು ಅವಕಾಶ ಸಿಗಲಿಲ್ಲ.

ರಾಜ್ಯ ಬಜೆಟ್ ನಿರಾಶೆದಾಯಕ ವಾಗಿದೆ. ಬಿಬಿಎಂಪಿಯಿಂದ 18 ಕಿ.ಮೀ, ವಿಭಾಗ ಕೇಂದ್ರದಿಂದ 10 ಕಿ.ಮೀ, ಜಿಲ್ಲಾ ಕೇಂದ್ರದಿಂದ 7 ಕಿಮೀ ಮತ್ತು ತಾಲೂಕು ಕೇಂದ್ರದಿಂದ 5 ಕಿಮೀ ವ್ಯಾಪಿಯಲ್ಲಿ ಬಗರ್​ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದ್ದರೂ ಬಜೆಟ್​ನಲ್ಲಿ ಪರಿಹಾರ ಸಿಕ್ಕಿಲ್ಲ.

| ಮಾರುತಿ ಮಾನ್ಪಡೆ ಕರ್ನಾಟಕ ಪ್ರಾಂತ್ಯ ರೈತ ಸಂಘ ಉಪಾಧ್ಯಕ್ಷ

- Advertisement -

Stay connected

278,453FansLike
560FollowersFollow
607,000SubscribersSubscribe

ವಿಡಿಯೋ ನ್ಯೂಸ್

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...

VIDEO: ರೋಹಿತ್​ ಶರ್ಮಾ...

ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿಖರ್​ ಧವನ್​ ಅವರ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿಕ್ಕಾಪಟೆ, ಲೈಕ್ಸ್​, ಕಾಮೆಂಟ್ಸ್​ಗಳು ಬರುತ್ತಿವೆ. ರೋಹಿತ್​ ಶರ್ಮಾ ಹಾಗೂ...

VIDEO: ಹೊಸ ಟ್ರಾಫಿಕ್​...

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ...

VIDEO| ಈ​ ವಿಡಿಯೋ...

ಬೀಜಿಂಗ್​: ಕಣ್ಣಿಗೆ ಕಾಣುವುದೆಲ್ಲಾ ಸತ್ಯವಲ್ಲ ಎಂಬುದಕ್ಕೆ ಈ ಘಟನೆ ಒಳ್ಳೆಯ ಉದಾಹರಣೆ. ಚೀನಾದ ಯಾಂಗ್ಜೆ ನದಿಯಲ್ಲಿ ನಿಗೂಢವಾಗಿ ಹಾಗೂ ವಿಚಿತ್ರವಾಗಿ ಗೋಚರವಾದ ಕಪ್ಪುಬಣ್ಣದ ಜೀವಿಯನ್ನು ಹೋಲುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲ...

VIDEO: ದುರ್ಗಾಪೂಜಾ ಥೀಮ್​...

ಕೋಲ್ಕತ: ತೃಣಮೂಲ ಕಾಂಗ್ರೆಸ್​ನಿಂದ ನೂತನವಾಗಿ ಆಯ್ಕೆಯಾದ ಸಂಸದೆಯರಾದ ನುಸ್ರತ್ ಜಹಾನ್​ ಹಾಗೂ ಮಿಮಿ ಚಕ್ರಬರ್ತಿ ದುರ್ಗಾಪೂಜಾ ಹಾಡಿಗೆ ಮನಮೋಹಕವಾಗಿ ನೃತ್ಯ ಮಾಡಿದ್ದು ವಿಡಿಯೋ ಭರ್ಜರಿ ವೈರಲ್​ ಆಗಿದೆ. ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿರುವ ಈ...