ನೇಗಿಲಯೋಗಿಗೆ ಮೊದಲ ಬೋಗಿ

ಹತ್ತಾರು ನಿರೀಕ್ಷೆಗಳು, ಆಪರೇಷನ್ ಕಾಮೋಡ, ಲೋಕಸಭೆ ಚುನಾವಣೆ ಮೇಲೆ ಕಣ್ಣು, ಜತೆಗೆ ವಿತ್ತೀಯ ಶಿಸ್ತನ್ನು ಪಾಲಿಸಬೇಕಾದ ಸವಾಲುಗಳ ನಡುವೆಯೇ ಶುಕ್ರವಾರ 2019-20ನೇ ಸಾಲಿನ ಆಯವ್ಯಯ ಮಂಡಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಾದೇಶಿಕ ಸಮಾನತೆಗೆ ಗಮನ ನೀಡಿ, ಇಡೀ ಕರ್ನಾಟಕಕ್ಕೆ ಅಭಿವೃದ್ಧಿ, ಅನುದಾನದ ಘೋಷಣೆಯನ್ನು ಹಂಚಿದ್ದಾರೆ. ಬಜೆಟ್​ನಲ್ಲಿ ಕೃಷಿಗೆ ಭರ್ಜರಿ ಕೊಡುಗೆ ಸಿಕ್ಕರೆ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೂ ಆದ್ಯತೆ ದೊರೆತಿದೆ. ಕಳೆದ ಬಜೆಟ್​ನಲ್ಲಿ ಜೆಡಿಎಸ್ ಭದ್ರಕೋಟೆಗಳಿಗಷ್ಟೇ ಆದ್ಯತೆ ದೊರೆತಿತ್ತೆಂಬ ಆರೋಪವನ್ನು ತೊಡೆದುಹಾಕುವಂತೆ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಎಲ್ಲ ಜಿಲ್ಲೆಗಳಿಗೂ ಜನಾಕರ್ಷಣೆ ಕೊಡುಗೆ ನೀಡಿದ್ದಾರೆ. ಇರುವ ಸೀಮಿತ ಸಂಪನ್ಮೂಲದಲ್ಲಿ ತಮ್ಮ ಹಿಂದಿನ ಬಜೆಟ್ ಹಾಗೂ ಕಳೆದ ವರ್ಷ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್​ನ ಘೋಷಣೆಗಳನ್ನೂ ಮುಂದುವರಿಸಲು ಎಚ್ಡಿಕೆ ಹೇಗೆ ಬ್ಯಾಲೆನ್ಸ್ ಮಾಡುತ್ತಾರೆಂಬುದೇ ಸದ್ಯದ ಕುತೂಹಲ. ‘ನನ್ನ ನಂಬಿಕೆಯೊಂದು ಆಕಾಶ’ ಎಂದು ಆಯವ್ಯಯ ಮಂಡನೆ ವೇಳೆ ಎಚ್ಡಿಕೆ ಹೇಳಿದ ಕವನ ಸಾಲುಗಳೂ ಇದೇ ಪ್ರಶ್ನೆಯನ್ನು ಧ್ವನಿಸುವಂತಿತ್ತು. ಬಜೆಟ್ ಭರವಸೆಯ ಬುತ್ತಿಯನ್ನೇ ತಂದಿದ್ದರೂ, ಸಮ್ಮಿಶ್ರ ಸರ್ಕಾರದ ಭವಿಷ್ಯವೇ ಪ್ರಶ್ನಾರ್ಥಕವಾಗಿದೆ. ಹೀಗಾಗಿ ಸರ್ಕಾರ ಉಳಿದರೆ ಬಜೆಟ್ ಜಾರಿ ಸವಾಲು, ಇಲ್ಲವಾದರೆ ಹೊಸ ಸರ್ಕಾರಕ್ಕೆ ಹೊಸ ಸವಾಲು.

ಪ್ರತಿ ಪ್ರಜೆ ಮೇಲೆ 48 ಸಾವಿರ ರೂ.ಸಾಲ!

2020ರ ಮಾರ್ಚ್ ಅಂತ್ಯಕ್ಕೆ ರಾಜ್ಯದ ಸಾಲ 3,27,209 ಕೋಟಿ ರೂ.ಗಳಾಗಲಿದೆ. ರಾಜ್ಯದ ಜನಸಂಖ್ಯೆ ಅಂದಾಜು 6.90 ಕೋಟಿ ಇದ್ದು, ಈ ಲೆಕ್ಕಾಚಾರದಂತೆ ಪ್ರತಿ ಪ್ರಜೆಯ ಮೇಲೆ ಸುಮಾರು 48 ಸಾವಿರ ರೂ. ಹೊರೆ ಬೀಳಲಿದೆ.

ನೇರ ನಗದು ವರ್ಗ|
# ಇ-ಆಡಳಿತ ವ್ಯವಸ್ಥೆ ಭಾಗವಾಗಿ ಎಲ್ಲ ಇಲಾಖೆಗಳ ಫಲಾನುಭವಿಗಳಿಗೆ ಆಧಾರ್ ಆಧಾರಿತ ನೇರ ನಗದು ವರ್ಗಾವಣೆಗೆ ಕ್ರಮ.

ಬಜೆಟ್ ಅಚ್ಚರಿ
# ಸಿದ್ದರಾಮಯ್ಯ, ಯಡಿಯೂರಪ್ಪ ಪ್ರತಿನಿಧಿಸುವ ಬಾದಾಮಿ, ಶಿಕಾರಿಪುರಕ್ಕೆ ತಲಾ 300 ಕೋಟಿ ರೂ.

ಸಾಲಮನ್ನಾಗೆ ಸಿಕ್ಕಿದ್ದೇನು?

# 12,650 ಕೋಟಿ ರೂ.ಮೀಸಲು

# ಒಟ್ಟಾರೆ 18,650 ಕೋಟಿ ಬಿಡುಗಡೆ ಆದಂತೆ

# ಜೂನ್ ಒಳಗೆ ಸಹಕಾರಿ ಬ್ಯಾಂಕ್​ಗಳ ಸಾಲಮನ್ನಾ ಪ್ರಕ್ರಿಯೆ ಪೂರ್ಣ

# 34 ಸಾವಿರ ಕೋಟಿ ರೂ.ಮನ್ನಾ ಆಗಬೇಕಿರುವ ಒಟ್ಟು ಮೊತ್ತ

ಆರೋಗ್ಯ ಭಾಗ್ಯ

# ಆಯುಷ್ಮಾನ್ ಭಾರತ್ ಯೋಜನೆಯಡಿ ರಾಜ್ಯದ ಆರೋಗ್ಯ ಯೋಜನೆಗಳ ಸಂಯೋಜನೆಗೆ 950 ಕೋಟಿ ರೂ., 65 ಲಕ್ಷ ಕುಟುಂಬಕ್ಕೆ ಅನುಕೂಲ

ಜನಸಾಮಾನ್ಯರಿಗೆ ಉಡುಗೊರೆ…
# ಬೆಂಗಳೂರಿನ ಆಟೋ, ಟ್ಯಾಕ್ಸಿ ಚಾಲಕರಿಗೆ ಸಾರಥಿಯ ಸೂರು ಬಾಡಿಗೆ ಆಧಾರದ ವಸತಿ ಯೋಜನೆ, ಗುಂಪು ವಿಮೆ ಸೌಲಭ್ಯ

# ಗ್ರಾ.ಪಂ ವ್ಯಾಪ್ತಿಯ ಎಲ್ಲ ಆಸ್ತಿ ಡಿಜಿಟಲೀಕರಣ

# ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಏರ್​ಪೋರ್ಟ್ ನಿರ್ವಣಕ್ಕೆ ಯೋಜನೆ

# ಕಟ್ಟಡ ಕಾರ್ವಿುಕರಿಗೆ ಶ್ರಮಿಕ ಸೌರಭ ಯೋಜನೆ, ಬೀದಿ ಬದಿ ವ್ಯಾಪಾರಿಗಳಿಗೆ 7.68 ಕೋಟಿ ರೂ. ನೆರವು

ಶಿಕ್ಷಣಕ್ಕೆ ಮಣೆ

# ರಾಜ್ಯಾದ್ಯಂತ ಹೋಬಳಿಗೊಂದರಂತೆ 1 ಸಾವಿರ ಪಬ್ಲಿಕ್ ಶಾಲೆ ಸ್ಥಾಪನೆ, ಪ್ರಾಥಮಿಕ ತರಗತಿಯಿಂದ 12ನೇ ತರಗತಿವರೆಗೆ ಒಂದೇ ಸೂರಿನಡಿ ಶಿಕ್ಷಣ ಸೌಲಭ್ಯ

# ಆನ್​ಲೈನ್ ಮೂಲಕವೇ ಸಿಇಟಿ ಪರೀಕ್ಷೆ , ವಿದ್ಯಾರ್ಥಿಗಳಿಗೆ ಆಧಾರ್ ಸಂಖ್ಯೆ ಆಧಾರಿತ ಡಿಜಿಟಲ್ ಅಂಕಪಟ್ಟಿ, ಪದವಿ ಪ್ರಮಾಣಪತ್ರ ಆನ್​ಲೈನ್ ಮೂಲಕ ವಿತರಣೆ

ಮಹಿಳೆಯರಿಗೇನು?

# ಆಶಾ ಕಾರ್ಯಕರ್ತೆಯರ ಗೌರವಧನ 500 ರೂ.ಹೆಚ್ಚಳ. ನ.1ರಿಂದ ಜಾರಿ

# ಮಾತೃಶ್ರೀ ಸಹಾಯಧನ ಮಾಸಿಕ 1ರಿಂದ 2 ಸಾವಿರ ರೂ.ಗೆ ಹೆಚ್ಚಳ, ನ.1ರಿಂದಲೇ ಜಾರಿ

# ಅಂಗನವಾಡಿ ಕಾರ್ಯಕರ್ತೆಯರಿಗೆ 500 ಸಹಾಯಕಿಯರಿಗೆ 250 ರೂ.ಗೌರವಧನ ನ.1ರಿಂದ ಹೆಚ್ಚಳ

# ಸಂಧ್ಯಾ ಸುರಕ್ಷಾ ಮಾಸಾಶನ 1 ಸಾವಿರ ರೂ.ಗೆ ಹೆಚ್ಚಳ