ಸಮಗ್ರ ಕರ್ನಾಟಕಕ್ಕೆ ಕುಮಾರ ಕಾಣಿಕೆ

Latest News

ಅನಾಮಧೇಯ ದೂರುಗಳೆಲ್ಲ ಸುಳ್ಳಲ್ಲ: ಮೂಗರ್ಜಿ ತನಿಖೆ ಬೇಡವೆಂಬ ಸರ್ಕಾರದ ಆದೇಶಕ್ಕೆ ಅಸಮಾಧಾನ

| ಯಂಕಣ್ಣ ಸಾಗರ್ ಬೆಂಗಳೂರು ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಬರುವ ಅನಾಮಧೇಯ ಹಾಗೂ ಮೂಗರ್ಜಿ ದೂರುಗಳ ತನಿಖೆ ನಡೆಸದಂತೆ ರಾಜ್ಯ ಸರ್ಕಾರದ...

ಅನಾಥ ಶಿಶುವೀಗ ಮಹಾವೀರ: ಜೈನ್ ಆಸ್ಪತ್ರೆ ವೈದ್ಯರಿಂದ ನಾಮಕರಣ, 14ರಂದು ಸಿಕ್ಕಿದ ಮಗು

ಬೆಂಗಳೂರು: ವಸಂತನಗರದ ಮಸೀದಿ ಬಳಿ ಅನಾಥವಾಗಿ ದೊರೆತ ನವಜಾತ ಶಿಶುವಿಗೆ ಭಗವಾನ್ ಮಹಾವೀರ ಜೈನ್ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿದ್ದು, ಮಹಾವೀರ ಎಂದು...

ಏ.29ಕ್ಕೆ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 49ನೇ ವರ್ಷದ ಉಚಿತ ಸಾಮೂಹಿಕ ವಿವಾಹ 2020ರ ಏಪ್ರಿಲ್ 29ರ ಸಂಜೆ 6.40ಕ್ಕೆ ಗೋಧೂಳಿ ಲಗ್ನದಲ್ಲಿ ನಡೆಯಲಿದೆ. ವರನಿಗೆ...

ವೈದ್ಯರ ಚೀಟಿಯಿಲ್ಲದೆ ಸಿಗುತ್ತಿವೆ ಔಷಧಗಳು!: ನೀಡಬಾರದ ಮಾತ್ರೆ, ಗುಳಿಗೆ ಡ್ರಗ್ಸ್ ವ್ಯಸನಿಗಳ ಕೈಗೆ

ಬೆಂಗಳೂರು: ವೈದ್ಯರ ಚೀಟಿ ಇಲ್ಲದೆ ನೀಡಬಾರದ ಔಷಧಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತಿದ್ದು, ಮಾದಕವ್ಯಸನಿಗಳು ಬಲಿಯಾಗುತ್ತಿದ್ದಾರೆ. ಇದಕ್ಕೆ ಔಷಧ ಮಾರಾಟಗಾರರು ಮತ್ತು ಗ್ರಾಹಕರು ಮುಖ್ಯ...

25ರಿಂದ ಬಸವನಗುಡಿ ಕಡ್ಲೆಕಾಯಿ ಪರಿಷೆ: 3 ದಿನ ಜಾತ್ರೆ ಸಂಭ್ರಮ, ವಿವಿಧ ತಳಿಗಳ ಕಾಯಿ ಮಾರಾಟ

ಬೆಂಗಳೂರು: ಕೊನೆಯ ಕಾರ್ತಿಕ ಸೋಮವಾರದಿಂದ (ನ.25) 3 ದಿನ ನಡೆಯುವ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಸಕಲ ಸಿದ್ಧತೆ ನಡೆದಿದೆ. ಈಗಾಗಲೇ ಹಲವು...

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್​ನಲ್ಲಿ ‘ಸಮಗ್ರ ಕರ್ನಾಟಕ’ವನ್ನು ತಲುಪುವ ಮೂಲಕ ತಾವು ಮಂಡಿಸಿದ ಚೊಚ್ಚಲ ಆಯವ್ಯಯ ವೇಳೆ ಎದುರಾಗಿದ್ದ ಟೀಕೆಗಳಿಗೆ ಉತ್ತರ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಯಾದ ಆರಂಭದಲ್ಲಿ ಮಂಡಿಸಿದ್ದ ಬಜೆಟ್​ನಲ್ಲಿ ಹಳೇ ಮೈಸೂರು ಭಾಗಕ್ಕೆ ಭರಪೂರ ಘೋಷಣೆ ಮಾಡಲಾಗಿದ್ದು, ಇತರ ವಲಯಗಳನ್ನು ಎಚ್​ಡಿಕೆ ಕಡೆಗಣಿಸಿದ್ದಾರೆ ಎಂಬ ಟೀಕೆ ಪ್ರತಿಪಕ್ಷವಲ್ಲದೆ, ಮೈತ್ರಿ ಪಕ್ಷ ಕಾಂಗ್ರೆಸ್​ನಿಂದಲೂ ಕೇಳಿಬಂದಿತ್ತು. ಆದರೆ ಎರಡನೇ ಅವಕಾಶದಲ್ಲಿ ಇಡೀ ರಾಜ್ಯದ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಎಲ್ಲ ಜಿಲ್ಲೆಗಳನ್ನು ತಲುಪಲು ಕುಮಾರಸ್ವಾಮಿ ಪ್ರಯತ್ನಿಸಿದ್ದಾರೆ. ಕೃಷಿ ಕ್ಷೇತ್ರಕ್ಕೆ ಸಿಂಹಪಾಲು ನೀಡುವ ಜತೆಗೆ ಆಯಾ ಜಿಲ್ಲೆಗಳಿಗೆ ಅಗತ್ಯವಿರುವ ಯೋಜನೆಗಳ ಅನುಷ್ಠಾನಕ್ಕೆ ಬಜೆಟ್​ನಲ್ಲಿ ಅನುದಾನ ಘೋಷಿಸಿದ್ದಾರೆ. ಯಾವ್ಯಾವ ಜಿಲ್ಲೆಗೆ ಏನೇನು ಸಿಕ್ಕಿದೆ? ಎಂಬ ಮಾಹಿತಿ ಇಲ್ಲಿದೆ.

ಹಿಂದೆ ಹೀಗಿತ್ತು…

ಹಣಕಾಸು ಸಚಿವ ಎಂ. ರಾಜಶೇಖರಮೂರ್ತಿ ಅವರು 1990-91ರ ಬಜೆಟ್​ನಲ್ಲಿ ಕೈಗಾರಿಕಾ ನೀತಿ, ಗ್ಯಾಸ್ ಗ್ರಿಡ್, ಅನಧಿಕೃತ ಕಟ್ಟಡಗಳ ಸಕ್ರಮ, ಹಂಪಿ ಕನ್ನಡ ವಿವಿ ಸ್ಥಾಪನೆ, ಕನ್ನಡದ ಎಲೆಕ್ಟ್ರಾನಿಕ್ ಬೆರಳಚ್ಚು ಯಂತ್ರಗಳ ನಿರ್ವಣಕ್ಕೆ ನೆರವು ಒದಗಿಸಿದರೆ, 1991-92ರಲ್ಲಿ ಎಸ್. ಬಂಗಾರಪ್ಪ ಅವರು ರಾಜ್ಯದಲ್ಲಿ 15.40 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿ, ಗುಡಿ ಕೈಗಾರಿಕೆಗಳಿಗಾಗಿ ವಿಶ್ವ, 4.25 ಲಕ್ಷ ಮನೆ ನಿರ್ಮಾಣ ಗುರಿಯ ಆಶ್ರಯ, ಆರಾಧನಾ, ಮಾದರಿ ಗ್ರಾಮ ಯೋಜನೆ ಜಾರಿಗೆ ತಂದರು. 1992-93ರಲ್ಲಿ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಅಕ್ಷಯ, ಕೃಷಿ ಕಾರ್ವಿುಕರಿಗಾಗಿ ಶ್ರಮ ಕಲ್ಯಾಣ ನಿಧಿ, ಕೃಷಿ ಪ್ರಶಸ್ತಿ, ಶುಶ್ರೂಷಾ ಕಾರ್ಯಕ್ರಮ ಘೋಷಿಸಿದರು. 1993-94ರಲ್ಲಿ ವೀರಪ್ಪ ಮೊಯ್ಲಿ ಕೈಗಾರಿಕೆಗೆ ಏಕಗವಾಕ್ಷಿ, ಉದ್ಯೋಗ ಜ್ಯೋತಿ, ಕೃಷಿ ಪಾಸ್​ಬುಕ್, ತುಳು, ಕೊಡವ, ಕೊಂಕಣಿ ಅಕಾಡೆಮಿಗಳ ಸ್ಥಾಪನೆ, 1994-95ರಲ್ಲಿ ಬಡತನ ನಿಮೂಲನೆ, ರಾಜೀವ್ ಆರೋಗ್ಯ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಶಿಶು ಸುರಕ್ಷಾ, ಜಲಸಿರಿ ಕಾರ್ಯಕ್ರಮ ಘೋಷಣೆ ಮಾಡಿದರು.

ಒಟ್ಟಾರೆಯಾಗಿ ಉತ್ತಮ ಬಜೆಟ್. ಕೃಷಿ ಭಾಗ್ಯ, ಕ್ಷೀರ ಭಾಗ್ಯ ಯೋಜನೆಗಳು ಮುಂದುವರಿದಿವೆ. ಆದರೆ, ರೈತ ಬೆಳಕು, ಉಚಿತ ಬಸ್​ಪಾಸ್ ಯೋಜನೆಗಳು ಮಾತ್ರ ಕಾಣಿಸುತ್ತಿಲ್ಲ. ಬಜೆಟ್ ಪುಸ್ತಕವನ್ನು ಸಂಪೂರ್ಣವಾಗಿ ಓದಿಲ್ಲ. ಬಜೆಟ್ ಪ್ರತಿ ಪಡೆದು ಓದಿದ ನಂತರ ಪ್ರತಿಕ್ರಿಯಿಸುತ್ತೇನೆ. ಈ ಬಗ್ಗೆ ಕುಮಾರಸ್ವಾಮಿ ಜತೆ ಮಾತನಾಡುತ್ತೇನೆ.

| ಸಿದ್ದರಾಮಯ್ಯ ಮಾಜಿ ಸಿಎಂ

ಬೆಳೆಸಾಲ ಇದೇ ವರ್ಷ ಮನ್ನಾ ಮಾಡುವೆ

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಕೃಷಿ ವಲಯದ ಸಮಗ್ರ ಅಭಿವೃದ್ಧಿಗೆ 46,853 ಕೋಟಿ ರೂ. ಮೀಸಲಿಡುವ ಮೂಲಕ ರೈತಪರವಾದ ತನ್ನ ಬದ್ಧತೆಯನ್ನು ಸಾಬೀತುಪಡಿಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮರ್ಥಿಸಿಕೊಂಡರು. ಬಜೆಟ್ ಮಂಡನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಆರ್ಥಿಕ ಶಿಸ್ತು ಕಾಯ್ದುಕೊಂಡೇ ಕೃಷಿ ಸಾಲ ಮನ್ನಾ ಯೋಜನೆಗೆ 12,500 ಕೋಟಿ ರೂ. ತೆಗೆದಿಡುವ ಜತೆಗೆ ವ್ಯವಸಾಯ ಹಾಗೂ ಅದಕ್ಕೆ ಪೂರಕ ಚಟುವಟಿಕೆಗಳಿಗೆ 46,853 ಕೋಟಿ ರೂ. ತೆಗೆದಿರಿಸಿದ್ದೇವೆ. ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿನ ಬೆಳೆ ಸಾಲ ಮನ್ನಾ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದ್ದೇವೆ ಎಂದರು. ಜತೆಗೆ ರೈತಾಪಿ ಮಹಿಳೆಯರು ಒಡವೆಗಳನ್ನು ಖಾಸಗಿಯವರ ಲೇವಾದೇವಿದಾರರ ಬಳಿ ಅಡವಿಟ್ಟು ಸಂಕಷ್ಟ ಅನುಭವಿಸುವುದನ್ನು ತಡೆಯಲು ಶೇ.3 ಬಡ್ಡಿ ಆಧಾರದಲ್ಲಿ ‘ಗೃಹ ಲಕ್ಷ್ಮೀ’ ಬೆಳೆ ಸಾಲ ಯೋಜನೆ ಆರಂಭಿಸಿದ್ದೇವೆ ಎಂದು ವಿವರಿಸಿದರು.

ಮೋದಿ ವಿರುದ್ಧ ವಾಗ್ದಾಳಿ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಾಜೀವ್ ಆವಾಸ್ ಯೋಜನೆ(ರೇ)ಯಲ್ಲಿ ನಿರ್ವಿುಸಿದ ಮನೆಗಳನ್ನು ಉದ್ಘಾಟಿಸಲು ಪ್ರಧಾನಿ ಮೋದಿ ಹುಬ್ಬಳ್ಳಿಗೆ ಬರುತ್ತಿದ್ದು, ತಮ್ಮದೇ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಮನೆಗಳನ್ನು ನಿರ್ವಿುಸಿದ್ದು ಕೇಂದ್ರ ಸರ್ಕಾರ ಅಲ್ಲ, ಕರ್ನಾಟಕ ಸರ್ಕಾರ. ಕನಿಷ್ಠ ಪಕ್ಷ ರಾಜ್ಯದ ಮುಖ್ಯಮಂತ್ರಿಯನ್ನೂ ಆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಪವಿತ್ರವಾದ ಲೋಕಸಭೆಯಲ್ಲೇ ಕರ್ನಾಟಕದ ಸಾಲಮನ್ನಾ ಯೋಜನೆ ಬಗ್ಗೆ ಮೋದಿ ತಪು್ಪ ಮಾಹಿತಿ ಕೊಟ್ಟಿದ್ದಾರೆ. ಇದು ದುರದೃಷ್ಟಕರ ಎಂದು ಟೀಕಿಸಿದರು.

ಐ ಆಮ್ ನಾಟ್ ಹ್ಯಾಪಿ, ಬಜೆಟ್​ನಲ್ಲಿ ಹಾವೇರಿ ಜಿಲ್ಲೆ ಅನಾಥವಾಗಿದೆ. ನನ್ನ ಕ್ಷೇತ್ರಕ್ಕೆ ಉಪ್ಪಿನಕಾಯಿ ತರ ಮದಗ-ಮಾಸೂರ ಕೆರೆ ಯೋಜನೆಗೆ 25 ಕೋಟಿ ರೂ. ಕೊಟ್ಟಿದ್ದಾರೆ. ಬೈರನಪಾದ ಏತ ನೀರಾವರಿ, 84 ಹಳ್ಳಿಗೆ ಕುಡಿಯುವ ನೀರಿನ ಜಲಧಾರೆ ಯೋಜನೆ, ಸರ್ವಜ್ಞ ಪ್ರಾಧಿಕಾರಕ್ಕೆ ಅನುದಾನ ಕೇಳಿದ್ದೆ, ಏನೂ ಕೊಟ್ಟಿಲ್ಲ.

| ಬಿ.ಸಿ. ಪಾಟೀಲ ಹಿರೇಕೆರೂರು ಶಾಸಕ

ಕ್ರಾಂತಿಕಾರಿಕ ಬಜೆಟ್ ಮಂಡಿಸುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಹಿಂದಿನ ಬಜೆಟ್​ನಲ್ಲಿನ ಘೋಷಣೆಗಳಲ್ಲಿ ಶೇ. 35 ಅನುಷ್ಠಾನ ಆಗಿಲ್ಲ. ಒಂದೇ ಕಂತಿನಲ್ಲಿ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ ಅದು ಜಾರಿಗೆ ಬಂದಿಲ್ಲ. ರಾಜ್ಯದ ಜನತೆ ಮುಂದೆ ಸುಳ್ಳುಗಳ ಸರಮಾಲೆಯನ್ನೇ ಇಟ್ಟು ವಂಚಿಸಿದ್ದಾರೆ. ಸದನದಲ್ಲಿ ಚರ್ಚೆ ಮಾಡಿ ಸುಳ್ಳನ್ನು ಬಯಲು ಮಾಡುತ್ತೇವೆ.

| ಬಿ.ಎಸ್. ಯಡಿಯೂರಪ್ಪ ಪ್ರತಿಪಕ್ಷ ನಾಯಕ

- Advertisement -

Stay connected

278,638FansLike
573FollowersFollow
611,000SubscribersSubscribe

ವಿಡಿಯೋ ನ್ಯೂಸ್

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ...

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​ ಬೆಲ್ಟ್​ ಹಾಕಿಕೊಂಡಿರುವುದಿಲ್ಲ...ಅದರೊಟ್ಟಿಗೆ ಬೇಕಾಬಿಟ್ಟಿ ಚಾಲನೆ ಬೇರೆ....

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ ಹರಿಬಿಡುವ ಮೂಲಕ ಸೋದರ ರಮೇಶ್​ ಜಾರಕಿಹೊಳಿಗೆ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...

VIDEO| ಶಾಸಕ ತನ್ವೀರ್​ ಸೇಠ್​ ಹಲ್ಲೆ ಪ್ರಕರಣ: ಪೊಲೀಸ್​ ವಿಚಾರಣೆ...

ಮೈಸೂರು: ಕಾಂಗ್ರೆಸ್​ ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್​ ವಿಚಾರಣೆಯ ವೇಳೆ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ತನ್ವೀರ್‌ ಸೇಠ್ ಹತ್ಯೆಗೆ ಈ ಹಿಂದೆ...

VIDEO: ಗೋಕಾಕ್​ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಲಖನ್​, ಸತೀಶ್​ ನಾಮಪತ್ರ ಸಲ್ಲಿಕೆ;...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...