ಬಿಯರ್ ದುಬಾರಿ, ಅಬಕಾರಿ ಆದಾಯಕ್ಕೆ ಕಿಕ್!

Latest News

ಅಲೆ ತಡೆಗೋಡೆ ಕಾಮಗಾರಿಗೆ ವಿರೋಧ

ಕಾರವಾರ: ತಖೋಲ್ ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆಗಾಗಿ ಟ್ಯಾಗೋರ್ ಕಡಲ ತೀರದಿಂದ ಅಲೆ ತಡೆಗೋಡೆ ಕಾಮಗಾರಿ ಆರಂಭವಾಗಿದೆ. ಅದಕ್ಕೆ ಮೀನುಗಾರರು ವಿರೋಧ...

ಪ್ರೇಮಲೋಕ 2ರಲ್ಲಿ ಕ್ರೇಜಿಸ್ಟಾರ್ ಸನ್ಸ್!

ಬೆಂಗಳೂರು: 1987ರಲ್ಲಿ ತೆರೆಕಂಡ ಮ್ಯೂಸಿಕಲ್ ಹಿಟ್ ‘ಪ್ರೇಮಲೋಕ’ ಸಿನಿಮಾ ಬಗ್ಗೆ ಹೆಚ್ಚೇನೂ ಹೇಳುವ ಅವಶ್ಯಕತೆ ಇಲ್ಲ. ಆ ಸಿನಿಮಾ ನಿರ್ವಿುಸಿದ ದಾಖಲೆ ಒಂದೆರಡಲ್ಲ....

ರಫೇಲ್ ರಗಳೆ ಅಂತ್ಯ

ರಫೇಲ್ ಪ್ರಕರಣದಲ್ಲಿ ಸರ್ಕಾರಕ್ಕೆ ನೀಡಿದ್ದ ಕ್ಲೀನ್​ಚಿಟ್ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ. ಈ ಬಗ್ಗೆ ಯಾವುದೇ...

ಅನನ್ಯ ಸಾಂಸ್ಕೃತಿಕ ಪ್ರಜ್ಞೆಯ ಕನಕದಾಸ

ಕನಕದಾಸರು 16ನೇ ಶತಮಾನದ ಕರ್ನಾಟಕದಲ್ಲಿ ಆಗಿ ಹೋದ ಭಕ್ತಕವಿ. ಕೀರ್ತನೆ, ನಳಚರಿತೆ, ರಾಮಧಾನ್ಯ ಚರಿತ್ರೆ, ಮೋಹನ ತರಂಗಿಣಿ, ಹರಿಭಕ್ತಿ ಸಾರ ಹಾಗೂ ಅನೇಕ...

ಒಳ್ಳೆಯದನ್ನು ಮಾಡುವುದೇ ಧರ್ಮದ ಸರ್ವಸ್ವ

ಪಶ್ಚಿಮದ ಭೋಗಭೂಮಿಯಲ್ಲಿ ಮೈಕೊಡವಿ ನಿಂತ ಈ ಪೂರ್ವರಾಷ್ಟ್ರದ ತ್ಯಾಗಮೂರ್ತಿ ಅವರುಗಳಿಗೆ ತ್ಯಾಗ-ಯೋಗವನ್ನು ಬೋಧಿಸಿದರು. ಅಲ್ಲದೆ ಅಲ್ಲಿ ತನ್ನ ಮಾತೃಭೂಮಿಗಾಗಿ ವೈಯಕ್ತಿಕ ಜೀವನವನ್ನೇ ಸಾರ್ಥಕವಾಗಿ...

ಮದ್ಯನಿಷೇಧದ ಹೋರಾಟ ಹೆಚ್ಚಾಗುತ್ತಿದ್ದರೂ, ರಾಜ್ಯ ಸರ್ಕಾರ ಅಬಕಾರಿ ಕ್ಷೇತ್ರವನ್ನು ಆದಾಯದ ಪ್ರಮುಖ ಮೂಲಗಳಲ್ಲಿ ಒಂದೆಂದು ಪರಿಗಣಿಸಿದೆ. ಹೀಗಾಗಿ ಬಜೆಟ್​ನಲ್ಲಿ ಅಬಕಾರಿ ಆದಾಯದ ಗುರಿ ಹೆಚ್ಚಿಸುವುದರ ಜತೆಗೆ ಬಿಯರ್ ಮೇಲಿನ ಸುಂಕ ಏರಿಸಿದೆ. ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.150ರಿಂದ ಶೇ.175ಕ್ಕೆ ಹಾಗೂ ಡ್ರಾಟ್ ಬಿಯರ್ ಮೇಲಿನ ಸುಂಕವನ್ನು ಶೇ.115ರಿಂದ ಶೇ.150ಕ್ಕೆ ಏರಿಸಲು ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ. ಮೈಕ್ರೊ ಬ್ರಿವರಿಯಲ್ಲಿ ತಯಾರಾಗುವ ಬಿಯರ್​ಗೆ ಅಬಕಾರಿ ಸುಂಕವನ್ನು 5 ರೂ.ನಿಂದ 10 ರೂ ಹಾಗೂ ಹೆಚ್ಚುವರಿ ಸುಂಕವನ್ನು 12.5 ರೂ.ನಿಂದ 25 ರೂ.ಗೆ ಏರಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಕಡಿಮೆ ಆಲ್ಕೋಹಾಲ್ ಪ್ರಮಾಣ ಇರುವ ಬಿವರೇಜಸ್(ಎಲ್​ಎಬಿ) ಮೇಲಿನ ಅಬಕಾರಿ ಸುಂಕ 5 ರೂ.ನಿಂದ 10 ರೂ. ಹಾಗೂ ಹೆಚ್ಚುವರಿ ಅಬಕಾರಿ ಸುಂಕ ಶೇ.122ರಿಂದ ಶೇ.150ಕ್ಕೆ ವೃದ್ಧಿಸಲಿದೆ. ಇದರಿಂದ ಮದ್ಯಪ್ರಿಯರ ಕಿಸೆ ಇನ್ನಷ್ಟು ಖಾಲಿಯಾಗಲಿದೆ.

ಸಾವಿರ ಕೋಟಿ ಆದಾಯ ಏರಿಕೆ: ಅಬಕಾರಿ ಸುಂಕ ಏರಿಕೆ ನಡುವೆಯೂ ಅಬಕಾರಿ ಇಲಾಖೆ ಮುಂದಿನ ಆರ್ಥಿಕ ವರ್ಷದಲ್ಲಿ ಸುಮಾರು 1200 ಕೋಟಿ ರೂ. ಅಧಿಕ ಆದಾಯ ಗಳಿಸುವ ಅಂದಾಜನ್ನು ಸರ್ಕಾರ ಮಾಡಿದೆ. 2018-19ರಲ್ಲಿ 19,750 ಕೋಟಿ ರೂ. ಆದಾಯದ ಗುರಿ ಇರಿಸಿಕೊಂಡಿದ್ದರೆ, 2019-20ನೇ ಆರ್ಥಿಕ ವರ್ಷಕ್ಕೆ 20,950 ಕೋಟಿ ರೂ. ಆದಾಯ ಗುರಿ ನಿಗದಿಪಡಿಸಲಾಗಿದೆ.

2018-19ಕ್ಕೆ ಪರಿಷ್ಕೃತ ಅಂದಾಜು
2018-19ನೇ ಸಾಲಿನಲ್ಲಿ 2,13,734 ಕೋಟಿ ರೂ. ಜಮೆ ನಿರೀಕ್ಷಿಸಲಾಗಿದ್ದರೂ, 2,12,228 ಕೋಟಿ ರೂ. ಜಮೆಯಾಗಿದೆ. ರಾಜಸ್ವ ಕ್ರೋಡೀಕರಣ 1,65,897 ಕೋಟಿ ರೂ. ಇದರಲ್ಲಿ ಸ್ವಂತ ತೆರಿಗೆ ಸಂಗ್ರಹಣೆ 1,06,312 ಕೋಟಿ ರೂ. ತಲುಪಿದೆ. ಪರಿಷ್ಕೃತ ಅಂದಾಜಿನ ಪ್ರಕಾರ ವೆಚ್ಚ 2,17,451 ಕೋಟಿ ರೂ. ಆಗಿದೆ.

ಕರಸಮಾಧಾನ ಯೋಜನೆ
ಜಿಎಸ್​ಟಿ ಜಾರಿಯಾಗುವ ಮೊದಲು ವಾಣಿಜ್ಯ ತೆರಿಗೆ ಇಲಾಖೆ ನಿರ್ವಹಿಸುತ್ತಿದ್ದ ಎಲ್ಲ ಕಾಯ್ದೆ ವ್ಯಾಪ್ತಿಯ ತೆರಿಗೆ ಬಾಕಿಗಳಿಗೆ ಕರಸಮಾಧಾನ ಯೋಜನೆ ವಿಸ್ತರಿಸಲು ಉದ್ಯಮಿಗಳು ಮನವಿ ಮಾಡಿದ್ದರು. ಹೀಗಾಗಿ ತೆರಿಗೆ ಬಾಕಿ ಕಡಿತಕ್ಕೆ ಕರಸಮಾಧಾನ ಯೋಜನೆ ಜಾರಿಗೊಳಿಸಲು ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿದೆ.

ಋಣಾತ್ಮಕ ಹಾದಿಯಲ್ಲಿ ಕೃಷಿ
ರಾಜ್ಯದಲ್ಲಿ ಮಳೆ ಅಭಾವ ಹಾಗೂ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೃಷಿ ವಲಯ ಶೇ.4.8ರ ಋಣಾತ್ಮಕ ಬೆಳವಣಿಗೆ ಕಾಣುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಸಾಲಮನ್ನಾ ಸೇರಿ ಇತರ ರೈತಪರ ಯೋಜನೆಗಳ ಹೊರತಾಗಿಯೂ ಕೃಷಿ ವಲಯದಲ್ಲಿನ ಋಣಾತ್ಮಕ ಬೆಳವಣಿಗೆ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ.

2025ರವರೆಗೆ ಜಿಎಸ್​ಟಿ ಪರಿಹಾರಕ್ಕೆ ಆಗ್ರಹ
ಜಿಎಸ್​ಟಿ ಅನುಷ್ಠಾನದಲ್ಲಿನ ಗೊಂದಲ ಹಾಗೂ ಸಮಸ್ಯೆಗಳಿಂದ ತೆರಿಗೆ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ರಾಜ್ಯಗಳ ಪ್ರಯತ್ನದ ಹೊರತಾಗಿಯೂ ರಾಜಸ್ವದ ಅಂತರ ಸರಿದೂಗುತ್ತಿಲ್ಲ. ಹೀಗಾಗಿ ಜಿಎಸ್​ಟಿ ಪರಿಹಾರವನ್ನು 2025ನೇ ಸಾಲಿನವರೆಗೂ ಮುಂದುವರಿಸಬೇಕು ಎಂದು ಬಜೆಟ್​ನಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ.

ತಲಾ -ಠಿ; 48 ಸಾವಿರ ಸಾಲ
ಕರ್ನಾಟಕ ಸರ್ಕಾರದ ಒಟ್ಟು ಸಾಲ 3,27,209 ಕೋಟಿ ರೂ. ತಲುಪಿದ್ದು, ರಾಜ್ಯದ ಪ್ರತಿ ನಾಗರಿಕನ ಮೇಲೆ ಸರಾಸರಿ 48 ಸಾವಿರ ರೂ. ಸಾಲವಾದಂತಾಗಿದೆ. ಹಾಲಿ ಆಯವ್ಯಯದಲ್ಲಿಯೂ ಹೊಸದಾಗಿ 48,601 ಕೋಟಿ ರೂ. ಸಾಲ ಮಾಡುವ ಪ್ರಸ್ತಾಪವಿದೆ. ರಾಜ್ಯ ಸರ್ಕಾರದ ವಿತ್ತೀಯ ನಿಯಮಗಳ ಪ್ರಕಾರ ಜಿಎಸ್​ಡಿಪಿಗೆ ಶೇ.20.6 ಸಾಲವಿದೆ. ಇನ್ನೊಂದೆಡೆ ವಿತ್ತೀಯ ಕೊರತೆ 42,051 ಕೋಟಿ ರೂ. ಆಗಿದ್ದು, ಇದು ಕೂಡ ಜಿಎಸ್​ಡಿಪಿಯ ಶೇ.2.65ರ ವ್ಯಾಪ್ತಿಯಲ್ಲಿದೆ. ಹೀಗಾಗಿ ಸಾಲಮನ್ನಾ ಮತ್ತು ಜನಪ್ರಿಯ ಯೋಜನೆಗಳ ಹೊರತಾಗಿಯೂ ಕರ್ನಾಟಕವು ವಿತ್ತೀಯ ಶಿಸ್ತು ಕಾಪಾಡಿಕೊಳ್ಳಲು ಯಶಸ್ವಿಯಾಗಿದೆ.

ಜಿಎಸ್​ಡಿಪಿ ಏರಿಳಿತ
ಕರ್ನಾಟಕದ ಜಿಎಸ್​ಡಿಪಿ 2017-18ರಲ್ಲಿ ಶೇ.10.4ರ ಬೆಳವಣಿಗೆ ಸಾಧಿಸಿತ್ತು. ಆದರೆ 2018-19ರಲ್ಲಿ ಇದು ಶೇ.9.6ಕ್ಕೆ ಕುಸಿಯಬಹುದು ಎಂದು ಅಂದಾಜಿಸಲಾಗಿದೆ. 2019-20ನೇ ಆರ್ಥಿಕ ವರ್ಷಕ್ಕೆ ಮತ್ತೆ ಎರಡಂಕಿ ತಲುಪುವ ಸಾಧ್ಯತೆಯಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಜಿಎಸ್​ಡಿಪಿ ಮೊತ್ತವು 14,08,112 ಕೋಟಿ ರೂ.ನಿಂದ 15,88,303 ಕೋಟಿ ರೂ. ತಲುಪುವ ನಿರೀಕ್ಷೆಯಿದೆ. ಇದು ಶೇ.12.8ರ ಬೆಳವಣಿಗೆ ದರವಾಗಲಿದೆ.

ಸಂಪನ್ಮೂಲ ಕ್ರೋಡೀಕರಣ
ಜಿಎಸ್​ಟಿ ನಷ್ಟ ಪರಿಹಾರ ಸೇರಿ ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವ 1,18,993 ಕೋಟಿ ರೂ. ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇದು ಶೇ.11.92 ವೃದ್ಧಿ ಕಾಣುವ ನಿರೀಕ್ಷೆಯಿದೆ. ತೆರಿಗೆಯೇತರ ರಾಜಸ್ವಗಳಿಂದ 8,055 ಕೋಟಿ ರೂ, ಕೇಂದ್ರದ ತೆರಿಗೆ ಪಾಲು 39,806 ಕೋಟಿ ರೂ., ಕೇಂದ್ರದ ಸಹಾಯಾನುದಾನ 15,008 ಕೋಟಿ ರೂ. ದೊರೆಯಲಿದೆ. ಇದರ ಜತೆಗೆ 48,601 ಕೋಟಿ ರೂ. ಸಾಲ, 80 ಕೋಟಿ ರೂ. ಋಣೇತರ ಸ್ವೀಕೃತಿ ಹಾಗೂ 195 ಕೋಟಿ ರೂ. ಸಾಲ ವಸೂಲಿ ಮೊತ್ತದ ಮೂಲಕ ಸಂಪನ್ಮೂಲ ಕ್ರೋಡೀಕರಿಸುವ ಗುರಿ ಹೊಂದಲಾಗಿದೆ. ಪ್ರತ್ಯೇಕವಾಗಿ ಜಿಎಸ್​ಟಿಯಲ್ಲಿ 76,046 ಕೋಟಿ ರೂ., ನೋಂದಣಿ ಮುದ್ರಾಂಕದಲ್ಲಿ 11,828 ಕೋಟಿ ರೂ., ಸಾರಿಗೆ ರಾಜಸ್ವದಿಂದ 7100ಕೋಟಿ ರೂ. ಸಂಗ್ರಹದ ಅಂದಾಜು ಮಾಡಲಾಗಿದೆ.

ಕಡಲ ತೀರ ಅಭಿವೃದ್ಧಿ
ಪ್ರವಾಸಿಗರನ್ನು ಆಕರ್ಷಿಸುವ ವಿಷಯದಲ್ಲಿ ಕರ್ನಾಟಕದ ಕರಾವಳಿ ಪ್ರದೇಶಗಳ ಕೊಡುಗೆ ಗಮನಾರ್ಹ ವಾದುದು. ಈ ನಿಟ್ಟಿನಲ್ಲಿ ಎದ್ದುಕಾಣುವ ಎರಡು ತಾಣಗಳಾದ ಪಣಂಬೂರು ಮತ್ತು ಸಸಿಹಿತ್ಲುವಿನಲ್ಲಿ ಕಡಲತೀರದ ಪ್ರವಾಸೋದ್ಯಮದ ಅಭಿವೃದ್ಧಿಗೆಂದು 2019-20ನೇ ಸಾಲಿನಲ್ಲಿ 7 ಕೋಟಿ ರೂಪಾಯಿ ಅನುದಾನವನ್ನು ಒದಗಿಸಲಾಗಿದೆ.

ಸ್ಮಾರಕ ರಕ್ಷಣೆ: ಸ್ಥಳವೊಂದರ ಐತಿಹ್ಯವನ್ನು ಸಾರಿಹೇಳುವಲ್ಲಿ ಸ್ಮಾರಕಗಳು ವಹಿಸುವ ಪಾತ್ರ ಮಹತ್ತರವಾದುದು. ಇಂಥ ಒಟ್ಟು 834 ಸಂರಕ್ಷಿತ ಸ್ಮಾರಕಗಳ ಪೈಕಿ 600ನ್ನು ಸಮೀಕ್ಷೆ ಮಾಡಿ, ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲು ಸಂಕಲ್ಪ.

ಯುವಪೀಳಿಗೆಗೆ ಉದ್ಯೋಗ
‘ಕರ್ನಾಟಕ ಐಟಿ, ಐಟಿಇಎಸ್, ಇನೋವೇಷನ್ ಇನ್ಸೆಂಟಿವ್ಸ್’ ನೀತಿ ಹಾಗೂ ರಾಜ್ಯದ ವಿವಿಧೆಡೆ ಬಂಡವಾಳ ಹೂಡಿಕೆಯ ಅವಕಾಶಗಳನ್ನು ಒದಗಿಸುವ ಮೂಲಕ ಯುವಪೀಳಿಗೆಗೆ ಉದ್ಯೋಗಾವಕಾಶದ ಸಾಧ್ಯತೆಗಳನ್ನು ಮತ್ತಷ್ಟು ಹೆಚ್ಚಿಸುವ, ಅದರ ಗತಿಯನ್ನು ಇನ್ನಷ್ಟು ವರ್ಧಿಸುವ ಆಶಯದೊಂದಿಗೆ ಸದರಿ ನೀತಿಯನ್ನು ಯಥೋಚಿತವಾಗಿ ಪರಿಷ್ಕರಿಸಲಾಗುವುದು. ಹಂತ-2 ಮತ್ತು ಹಂತ-3ರ ವ್ಯಾಪ್ತಿಯಲ್ಲಿ ಬರುವ ರಾಜ್ಯದ ನಗರಗಳಲ್ಲಿ ವಾಣಿಜ್ಯೋದ್ಯಮವನ್ನು ಹಾಗೂ ಈ ನಿಟ್ಟಿನಲ್ಲಿನ ನೂತನ ಪರಿಪಾಠಗಳನ್ನು ಉತ್ತೇಜಿಸುವುದಕ್ಕೆ ಒತ್ತುನೀಡಲಾಗುವುದು ಎಂದು ಸರ್ಕಾರ ಹೇಳಿದೆ.

ಪರಿಪೋಷಣಾ ಕೇಂದ್ರಕ್ಕೆ ಬಲ
ಉದಯೋನ್ಮುಖ ವಾಣಿಜ್ಯೋದ್ಯಮಿಗಳಿಗೆ ಪೂರಕ ಸೌಲಭ್ಯಗಳನ್ನು ಅಥವಾ ಪರಿಪೋಷಣಾ ಕೇಂದ್ರಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ‘ಸ್ಟಾರ್ಟ್ ಅಪ್’ ಉದ್ಯಮಿಗಳಿಗೆ ಒತ್ತಾಸೆಯಾಗಿ ನಿಲ್ಲಬಲ್ಲ ಪರಿಪೋಷಣಾ ಕೇಂದ್ರಗಳ ಬಲವರ್ಧನೆಗೆಂದು ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕಾ ಸಂಘಗಳು ಹಾಗೂ ಖಾಸಗಿ ಸಂಘ-ಸಂಸ್ಥೆಗಳ ಜತೆಗಿನ ಸಹಭಾಗಿತ್ವಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಹಂತ-2 ಮತ್ತು ಹಂತ-3ರ ವ್ಯಾಪ್ತಿಯಲ್ಲಿ ಬರುವ ರಾಜ್ಯದ ನಗರಗಳಲ್ಲಿ ಇಂಥ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ. ನವೋದ್ಯಮಗಳಿಗೆ ಸಾಕಷ್ಟು ಅನುಕೂಲ ಆಗಲಿದೆ.

ಬಾದಾಮಿ ಕರಕುಶಲ ಮಾರುಕಟ್ಟೆ
ರಾಜ್ಯವನ್ನು ಆಳಿದ ರಾಜಮನೆತನಗಳ ಪೈಕಿ ಚಾಲುಕ್ಯರದ್ದು ಎದ್ದುಕಾಣುವ ಹೆಸರು. ಚಾಲುಕ್ಯರ ಸಮೃದ್ಧ ಪರಂಪರೆಯನ್ನು ಪ್ರವಾಸಿಗರಿಗೆ, ಆಸಕ್ತರಿಗೆ ಸಮರ್ಥವಾಗಿ ಪರಿಚಯಿಸಲು ಸರ್ಕಾರ ಸಂಕಲ್ಪಿಸಿದೆ. ಇದರ ಅಂಗವಾಗಿ, ಬಾದಾಮಿಯನ್ನು ವಿಶ್ವವಿಖ್ಯಾತ ಪ್ರವಾಸಿತಾಣವನ್ನಾಗಿ ಮತ್ತು ಕರಕುಶಲ ಮಾರುಕಟ್ಟೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಈ ಉದ್ದೇಶಕ್ಕಾಗಿ 2019-20ನೇ ಸಾಲಿನಲ್ಲಿ 25 ಕೋಟಿ ರೂಪಾಯಿ ಒದಗಿಸಲಾಗಿದೆ.

ಸಮೃದ್ಧ ಅಭಿವೃದ್ಧಿಯ ಬಜೆಟ್

| ಡಾ. ಟಿ. ಆರ್. ಚಂದ್ರಶೇಖರ, ವಿಶ್ರಾಂತ ಪ್ರಾಧ್ಯಾಪಕ, ಕನ್ನಡ ವಿವಿ, ಹಂಪಿ

ಅನೇಕ ದೃಷ್ಟಿಯಿಂದ ಇದೊಂದು ಸಮೃದ್ಧ ಬಜೆಟ್ಟಾಗಿದೆ. ಇದು ರೂ.2.30 ಲಕ್ಷ ಕೋಟಿ ಮೊತ್ತದ ಬಜೆಟ್. ಕಳೆದ ವರ್ಷದ ಬಜೆಟ್ಟಿಗಿಂತ ಶೇ.10 ರಷ್ಟು ಅಧಿಕವಾಗಿದೆ. ಇದರಲ್ಲಿ ಕೃಷಿಗೆ ಆದ್ಯತೆ ನೀಡಲಾಗಿದ್ದು, ರೂಢಿಗತ ಕ್ರಮಗಳ ಜೊತೆಗೆ ವಿನೂತನ-ಆವಿಷ್ಕಾರಾತ್ಮಕ ಕಾರ್ಯಕ್ರಮಗಳಿವೆ. ಒಣ ಭೂಮಿ ಕೃಷಿಗೆ ಅನುಕೂಲವಾಗುವ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಪ್ರತಿ ಹೆಕ್ಟೇರಿಗೆ ರೂ.10.000 ನೇರ ನಗದು ನೀಡುವುದಾಗಿ ಘೊಷಿಸಿದ್ದಾರೆ. ಕೃಷಿ ಅಭಿವೃದ್ಧಿ ಮತ್ತು ಪರಿಸರ ಸಮತೋಲನ ಎರಡನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ.

ರೈತರಿಗೆ ಮಾತ್ರವಲ್ಲ ಬಜೆಟ್ಟಿನಲ್ಲಿ ಕಾರ್ವಿುಕರಿಗೆ, ಕಟ್ಟಡ ನಿರ್ಮಾಣ ಕಾರ್ವಿುಕರಿಗೆ, ಹಿಂದುಳಿದ ವರ್ಗಗಳಿಗೆ, ಪ್ರದೇಶಾಭಿವೃದ್ಧಿ ಮಂಡಳಿಗಳಿಗೆ, ಪ್ರಾದೇಶಿಕ ಸಮತೋಲನ ಕಾರ್ಯಕ್ರಮಗಳಿಗೆ (ಹೈದರಾಬಾದ್ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಗೆ ರೂ.1500 ಕೋಟಿ, ಡಾ. ಡಿ. ಎಂ. ನಂಜುಂಡಪ್ಪ ವಿಶೇಷ ಅಭಿವೃದ್ದಿ ಯೋಜನೆಗೆ ರೂ.3010 ಕೋಟಿ), ಮಹಿಳೆೆಯರಿಗೆ, ದಲಿತರಿಗೆ ಭರಪೂರ ಅನುದಾನ ಘೊಷಿಸಿದ್ದಾರೆ. ಉದಾಹರಣೆಗೆ ಕೇಂದ್ರ ಸರ್ಕಾರವು 2019-20ನೆಯ ಸಾಲಿಗೆ ತನ್ನ ಬಜೆಟ್​ನಲ್ಲಿ ದೇಶದ 25 ಕೋಟಿಗೂ ಮೀರಿದ ಪ.ಜಾ. ಮತ್ತು ಪ.ಪಂ. ಜನರ ಕಲ್ಯಾಣಕ್ಕೆ ರೂ.1.26 ಲಕ್ಷ ಕೋಟಿ ಅನುದಾನ ನೀಡಿದ್ದರೆ ರಾಜ್ಯದ 1.5 ಕೋಟಿ ಪ.ಜಾ. ಮತ್ತು ಪ.ಪಂ. ಜನರ ಅಭಿವೃದ್ಧಿಗೆ ರೂ.30445 ಕೋಟಿ ಅನುದಾನ ನೀಡಲಾಗಿದೆ. ಅಲ್ಪಸಂಖ್ಯಾತ ವರ್ಗಕ್ಕೆ, ಪ್ರಮುಖವಾಗಿ ಹಿಂದುಳಿದ ವರ್ಗಗಳ ಮಠಗಳಿಗೆ, ಸಂಸ್ಥೆಗಳಿಗೆ, ಆಶ್ರಮಗಳಿಗೆ ಅನುದಾನ, ಶಿಕ್ಷಣ ಕ್ಷೇತ್ರಕ್ಕೆ ಅಪಾರ ಅನುದಾನ ಒದಗಿಸಿದ್ದಾರೆ. ವಿಶೇಷ ವಸತಿ ಶಾಲೆ, ವಸತಿ, ಶೌಚಾಲಯ, ಕೌಶಲ ತರಬೇತಿ, ಮೂಲಸೌಲಭ್ಯಗಳಿಗೆ ಒತ್ತು ಕೊಡಲಾಗಿದೆ. ರೆವಿನ್ಯೂ ಖಾತೆಯಲ್ಲಿ ಮಿಗತೆಯನ್ನು ಸಾಧಿಸಿಕೊಳ್ಳಲಾಗಿದೆ. ವಿತ್ತೀಯ ಕೊರತೆೆಯು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಎಸ್​ಡಿಪಿ)ಶೇ.2.65ರಷ್ಟಿದೆ. ಕರ್ನಾಟಕದ ಒಟ್ಟು ಸಾಲದ ಮೊತ್ತವು ವಿತ್ತೀಯ ಜವಾಬ್ದಾರಿ ಅಧಿನಿಯಮ ನಿಗದಿಪಡಿಸಿರುವ ಎಸ್​ಡಿಪಿಯ ಶೇ.25ರ ಪ್ರಮಾಣಕ್ಕಿಂತ ಕಡಿಮೆಯಿದೆ.

ಬಜೆಟ್ ಎನ್ನುವುದು ಕೇವಲ ಅನುದಾನದ ಸಂಗತಿಯಲ್ಲ. ಅದೊಂದು ಅಭಿವೃದ್ಧಿಯ ಚಾಲಕ ಶಕ್ತಿ. ಈ ಬಗ್ಗೆ ಸರ್ಕಾರ ಗಮನಹರಿಸಿದರೆ ಕುಮಾರಸ್ವಾಮಿ ಅವರ ಸಮೃದ್ಧ ಬಜೆಟ್ಟು ಜನರ ಬದುಕನ್ನು ಸಮೃದ್ಧ -ಸುಖಮಯವಾಗಿಸೀತು.

ಹಂಪಿ ವ್ಯಾಖ್ಯಾನ ಕೇಂದ್ರ ಸ್ಥಾಪನೆ

ಐತಿಹಾಸಿಕ ಮಹತ್ವ ಹಾಗೂ ಜಾಗತಿಕ ಪ್ರಸಿದ್ಧಿಯನ್ನು ಹೊಂದಿರುವ, ಮಹತ್ವದ ಪ್ರವಾಸಿ ತಾಣವಾಗಿರುವ ಹಂಪಿಯಲ್ಲಿ ‘ಹಂಪಿ ವ್ಯಾಖ್ಯಾನ ಕೇಂದ್ರ’ದ ಸ್ಥಾಪನೆಗೆ ಸರ್ಕಾರ ಕ್ರಮ ಕೈಗೊಳ್ಳಲಿದ್ದು, ಈ ಉದ್ದೇಶಕ್ಕಾಗಿ 2019-20ನೇ ಸಾಲಿನಲ್ಲಿ 1 ಕೋಟಿ ರೂಪಾಯಿ ಅನುದಾನವನ್ನು ಒದಗಿಸಿದೆ. ಧ್ವನಿಯನ್ನು ಪ್ರತಿಧ್ವನಿಸುವ ವಿಶಿಷ್ಟತೆಯಳ್ಳ ಗೋಳಗುಮ್ಮಟವಿರುವ ವಿಜಯಪುರ, ರಾಜ್ಯ ಪ್ರವಾಸೋದ್ಯಮದ ಭೂಪಟದಲ್ಲಿ ಎದ್ದುಕಾಣುವ ಹೆಸರು. ಇಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಮತ್ತಷ್ಟು ಉತ್ತೇಜಿಸಲೆಂದು, ‘ವಿಜಯಪುರ ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರ’ದ ಸ್ಥಾಪನೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಉದ್ದೇಶಕ್ಕಾಗಿ 2019-20ರ ಸಾಲಿನಲ್ಲಿ ಒಂದು ಕೋಟಿ ರೂಪಾಯಿ ಅನುದಾನವನ್ನು ಒದಗಿಸಲಾಗಿದೆ.

ಪ್ರವಾಸಿಗರ ಆಕರ್ಷಣೆಗೆ ‘ಬಿಗ್ ಬಸ್’

ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ‘ಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಪ್ರದರ್ಶನ’ವನ್ನು ಆಯೋಜಿಸಲು ಸರ್ಕಾರ ಉದ್ದೇಶಿಸಿದ್ದು, ಇದಕ್ಕಾಗಿ 2 ಕೋಟಿ ರೂಪಾಯಿ ಅನುದಾನ ಒದಗಿಸಿದೆ. ರಾಜಪ್ರಭುತ್ವದ ಕುರುಹುಗಳನ್ನು ಈಗಲೂ ಮಡಿಲಲ್ಲಿರಿಸಿಕೊಂಡಿರುವ ಮೈಸೂರು ಹಾಗೂ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಹಂಪಿ, ಪ್ರವಾಸೋದ್ಯಮದ ದೃಷ್ಟಿಯಿಂದ ಕರ್ನಾಟಕದ ಎರಡು ಮಹತ್ವದ ತಾಣಗಳು. ಈ ಪ್ರಸಿದ್ಧ ತಾಣಗಳ ಸಮರ್ಥ ವೀಕ್ಷಣೆಗೆ ಪ್ರವಾಸಿಗರಿಗೆ ಅನುವುಮಾಡಿಕೊಡಲೆಂದು ಲಂಡನ್ನಿನ ‘ಬಿಗ್ ಬಸ್’ ಮಾದರಿಯ 6 ಡಬಲ್ ಡೆಕರ್ ಬಸ್​ಗಳನ್ನು ಕೆ.ಎಸ್.ಟಿ.ಡಿ.ಸಿ. ವತಿಯಿಂದ ಪ್ರಾರಂಭಿಸಲಾಗುವುದು. ಈ ಬಾಬತ್ತಿಗಾಗಿ 5 ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ ಬಜೆಟ್​ನಲ್ಲಿ ಒದಗಿಸಿದೆ.

ಹಿಂದೆ ಹೀಗಿತ್ತು…
ರಾಜ್ಯದ ಅಭಿವೃದ್ಧಿಗಾಗಿ ಲೋಕಸಭೆಯಲ್ಲಿ ಲೇಖಾನುದಾನ ಮಂಡನೆಯಾಗಬೇಕಾದ ಪರಿಸ್ಥಿತಿಯೂ ಬಂದಿತ್ತು. 2008ರಲ್ಲಿ ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಲೇಖಾನುದಾನದ ಮೂಲಕ ಲೋಕಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿತ್ತು. ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಶಾಸಕಾಂಗ ಪಕ್ಷ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಅವರಿಗೆ ಬೆಂಬಲ ನೀಡದ ಕಾರಣ ಆಗ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಿತ್ತು. ಮಾರ್ಚ್ ತಿಂಗಳಿನಲ್ಲಿಯೇ ಈ ಘಟನೆ ನಡೆದಿದ್ದರಿಂದ ಕಾನೂನಿನ ಪ್ರಕಾರ ಆರು ತಿಂಗಳ ಲೇಖಾನುದಾನವನ್ನು ಲೋಕಸಭೆಯಲ್ಲಿ ಮಂಡಿಸಬೇಕಾಗಿತ್ತು. ಆಗ ಕೇಂದ್ರ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಲೇಖಾನುದಾನವನ್ನು ಮಂಡಿಸಿದರು. 2008ರ ಮಾರ್ಚ್ 10ರಂದು ಲೋಕಸಭೆಯಲ್ಲಿ ಒಪ್ಪಿಗೆ ಪಡೆದ ಇದು 17782.56 ಕೋಟಿ ರೂ.ಗಳ ಯೋಜನಾಗಾತ್ರ ಹೊಂದಿತ್ತು. ಆ ನಂತರ ನಡೆದ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾದ ಬಿ.ಎಸ್. ಯಡಿಯೂರಪ್ಪ ಹೊಸ ಬಜೆಟ್ ಮಂಡಿಸಿದರು.

ರಾಜ್ಯ ಸರ್ಕಾರದ ಬಜೆಟ್ ಸಣ್ಣ, ಅತೀ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೆ ಆಶಾದಾಯಕ ವಾಗಿಲ್ಲ. ಈ ಸಂಬಂಧ ಕಾಸಿಯಾದ ಮನವಿಗಳಿಗೆ ಸಿಎಂ ಸ್ಪಂದಿಸದಿರುವುದು ಬೇಸರ ಮೂಡಿಸಿದೆ. ಎಂಎಸ್​ಎಂಇ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಲ್ಲಿ ಉದ್ಯೋಗ ಸೃಷ್ಟಿಗೂ ಅದು ಪೂರಕವಾಗುತಿತ್ತು. ಕೈಗಾರಿಕಾ ನೋಡ್ ಅಭಿವೃದ್ಧಿ ಸ್ವಾಗತಾರ್ಹ.

| ಬಸವರಾಜ ಎಸ್.ಜವಳಿ ಕಾಸಿಯಾ ಅಧ್ಯಕ್ಷ

- Advertisement -

Stay connected

278,469FansLike
563FollowersFollow
607,000SubscribersSubscribe

ವಿಡಿಯೋ ನ್ಯೂಸ್

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...

VIDEO: ರೋಹಿತ್​ ಶರ್ಮಾ...

ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿಖರ್​ ಧವನ್​ ಅವರ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿಕ್ಕಾಪಟೆ, ಲೈಕ್ಸ್​, ಕಾಮೆಂಟ್ಸ್​ಗಳು ಬರುತ್ತಿವೆ. ರೋಹಿತ್​ ಶರ್ಮಾ ಹಾಗೂ...

VIDEO: ಹೊಸ ಟ್ರಾಫಿಕ್​...

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ...