Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಆತಂಕದಲ್ಲಿ ಆರ್ಥಿಕ ಸ್ಥಿತಿ

Sunday, 18.02.2018, 3:06 AM       No Comments

| ರುದ್ರಣ್ಣ ಹರ್ತಿಕೋಟೆ

ಬೆಂಗಳೂರು: ವಿಧಾನಸಭಾ ಚುನಾವಣಾ ಹುರುಪಿನಲ್ಲಿ, ಸರ್ವರಿಗೂ ಸಮಪಾಲು-ಸಮಬಾಳು ಆಶಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್​ನಲ್ಲಿ ವಿತ್ತೀಯ ಶಿಸ್ತನ್ನು ಕಾಯ್ದುಕೊಂಡು ಸಾಮಾಜಿಕ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಪ್ರಯತ್ನ ಮೇಲ್ನೋಟಕ್ಕೆ ಕಂಡರೂ ದೂರಗಾಮಿಯಾಗಿ ರಾಜ್ಯದ ಆರ್ಥಿಕ ಸ್ಥಿತಿ ಹಳಿ ತಪು್ಪವ ಆತಂಕ ಸೃಷ್ಟಿಯಾಗಿದೆ.

ಬಜೆಟ್ಟನ್ನು ಸೂಕ್ಷ್ಮವಾಗಿ ಗಮನಿಸಿದರೆ, ಆರ್ಥಿಕ ಸಮೀಕ್ಷೆ ಹಾಗೂ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿನ ಕೆಲವೊಂದು ಎಚ್ಚರಿಕೆಗಳನ್ನು ಕಡೆಗಣಿಸಿರುವ ಅನುಮಾನಗಳು ಮೂಡುತ್ತವೆ. ಏಕೆಂದರೆ, ವಿತ್ತೀಯ ಶಿಸ್ತು ಹಾಗೂ ಸಾಮಾಜಿಕ ಯೋಜನೆಗಳು ಪರಸ್ಪರ ವೈರುಧ್ಯ ಹೊಂದಿದಂಥವು.

ಸಿದ್ದರಾಮಯ್ಯ ತಾವು ಮಂಡಿಸಿರುವ ಎಲ್ಲ ಬಜೆಟ್​ಗಳಲ್ಲೂ ವಿತ್ತೀಯ ಶಿಸ್ತಿನ ಚೌಕಟ್ಟಿನಲ್ಲೇ ಇರುವ ಪ್ರಯತ್ನ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಅನಿಸಿದರೂ, ಏರುತ್ತಿರುವ ಸಾಲದ ಪ್ರಮಾಣ, ಮಾನವ ಸಂಪನ್ಮೂಲದ ಹೆಚ್ಚಳ, ತೆರಿಗೆಯೇತರ ಆದಾಯದಲ್ಲಿ ಆಗದಿರುವ ಪರಿಷ್ಕರಣೆ ಇವೆಲ್ಲವೂ ಸವಾಲುಗಳೇ ಆಗಿವೆ. ಈ ಹಿನ್ನೆಲೆಯಲ್ಲಿಯೇ ವಿತ್ತೀಯ ನಿರ್ವಹಣಾ ಸಮಿತಿ ರಾಜ್ಯದ ಮುಂದಿರುವ ಅನೇಕ ಸವಾಲುಗಳನ್ನು ಗುರುತಿಸಿದೆ.

ಜಿಎಸ್​ಡಿಪಿಗೆ ಸಂಬಂಧಿಸಿದಂತೆ ಸೀಮಿತ ಸಂಪನ್ಮೂಲ, ಬದ್ಧತಾ ವೆಚ್ಚ, ಅಭಿವೃದ್ಧಿ ಫಲಿತಾಂಶಗಳ ನಡುವೆ ಜೋಡಣೆಯಾಗದಿರುವುದು ರಾಜ್ಯ ಸರ್ಕಾರ ಆರ್ಥಿಕವಾಗಿ ದೊಡ್ಡ ಸವಾಲನ್ನು ಎದುರಿಸುವಂತಾಗಿದೆ. ಬಜೆಟ್​ನಲ್ಲಿ ಘೋಷಿಸಿರುವ ಯೋಜನೆಗಳಿಗೆ ಎಲ್ಲಿಂದ ಹಣ ಹೊಂದಾಣಿಕೆ ಮಾಡಲಿದ್ದಾರೆ ಎಂಬುದು ಸ್ಪಷ್ಟವಾಗುವುದಿಲ್ಲ. ಏಕೆಂದರೆ ಬೇಡಿಕೆಗಳು ಹೆಚ್ಚಾಗುತ್ತವೆ ಎಂಬುದನ್ನು ಮಧ್ಯಮಾವಧಿ ವಿತ್ತೀಯ ಯೋಜನೆ ಗುರುತಿಸಿದೆ.

ಸಾಲದ ಪ್ರಮಾಣ: ಸಾಲ ಮಾಡುವಲ್ಲಿ ವಿತ್ತೀಯ ಶಿಸ್ತನ್ನು ಅನುಸರಿಸುತ್ತಿರುವುದಾಗಿಯೂ, ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಅಡಿಯಲ್ಲಿಯೇ ಇರುವುದಾಗಿಯೂ ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ ವಾಸ್ತವವಾಗಿ ಎರಡು ವರ್ಷಗಳಿಂದ ಇಳಿದಿದ್ದ ಶೇಕಡಾವಾರು ಪ್ರಮಾಣ ಈ ವರ್ಷ ಮತ್ತೆ ಹೆಚ್ಚಾಗುತ್ತಿದೆ. ಇದು ಭಾರಿ ಆತಂಕದ ಸಂಗತಿಯೇ ಅಗಿದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.

ರಾಜಸ್ವ ಹೆಚ್ಚಳದ ಆತಂಕ: ವೇತನ, ಪಿಂಚಣಿ, ಬಡ್ಡಿ ಸಂದಾಯ, ಸಹಾಯಧನ ಆಧಾರಿತ ಕಾರ್ಯಕ್ರಮಗಳು, ಬದ್ಧ ವೆಚ್ಚಗಳು ರಾಜಸ್ವ ಹೆಚ್ಚಳದ ಅಂತರವನ್ನು ಕಡಿಮೆ ಮಾಡುತ್ತಿವೆ. ಸಹಾಯಧನ ಕಾರ್ಯಕ್ರಮಗಳಿಗೆ ಈ ವರ್ಷ ಕಳೆದ ವರ್ಷಕ್ಕಿಂತ 909.25 ಕೋಟಿ ರೂ. ಹೆಚ್ಚಾಗುತ್ತಿದೆ. ರಾಜಸ್ವ ಹೆಚ್ಚಳ ಕೇವಲ 384 ಕೋಟಿ ರೂ. ಮಾತ್ರ ಇದೆ. ಇದರಿಂದಾಗಿ ಒತ್ತಡ ಹೆಚ್ಚಾಗುತ್ತದೆ. ಅದನ್ನು ಭರಿಸಲು ಆಸ್ತಿಗಳ ಮಾರಾಟ, ಸಾಲ, ಮುಂಗಡ ವಸೂಲಿಗಳನ್ನು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಸುತ್ತದೆ. ಈ ವೆಚ್ಚಗಳಿಂದಾಗಿಯೇ ಮಾನವ ಅಭಿವೃದ್ಧಿ ಸೂಚ್ಯಂಕ ನಿಂತಿರುತ್ತದೆ. ಆ ನಿಟ್ಟಿನಲ್ಲಿ ಸರ್ಕಾರ ವಿಶೇಷ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಆರ್ಥಿಕ ನೀತಿ ಹೇಳುತ್ತದೆ.

ಕೇಂದ್ರ ಕಡಿತದ ಹೊರೆ: ಕೇಂದ್ರ ಸರ್ಕಾರ ಆರ್​ಕೆವಿವೈ, ನರೇಗಾ, ಆರ್​ಎಂಎಸ್​ಎ, ಪಿಎಂಎವೈ ಸೇರಿದಂತೆ ಅನೇಕ ಯೋಜನೆಗಳಿಗೆ ಅರ್ಧಕ್ಕಿಂತ ಹೆಚ್ಚು ಅನುದಾನ ಕಡಿತ ಮಾಡಿದೆ. ಆ ಯೋಜನೆಗಳನ್ನು ಅರ್ಧಕ್ಕೆ ನಿಲ್ಲಿಸಲು ಸಾಧ್ಯವಿಲ್ಲವಾದ್ದರಿಂದ ಸ್ವಂತ ಸಂಪನ್ಮೂಲಗಳಿಂದಲೇ ಭರಿಸಬೇಕಾಗುತ್ತದೆ. ಬಜೆಟ್​ನಲ್ಲಿ ಆ ಪ್ರಯತ್ನ ಕಂಡುಬರುತ್ತಿಲ್ಲ. ಅಬ್ಕಾರಿ ಹೊರತುಪಡಿಸಿ ಉಳಿದ ಮೂಲಗಳಿಂದ ಸಂಪನ್ಮೂಲ ಎಷ್ಟು ಹೆಚ್ಚಾಗಬಹುದೆಂಬುದು ಈಗಲೇ ಹೇಳಲಾಗದು.

ಸಾಲ ತೀರಿಕೆ ನಿಧಿ: 14ನೇ ಹಣಕಾಸು ಆಯೋಗ ಸಾಲ ತೀರಿಕೆ ನಿಧಿ ಇದ್ದರೆ ಹೂಡಿಕೆದಾರರ ವಿಶ್ವಾಸ ಹೆಚ್ಚಿಸುವುದೆಂದು ಹೇಳಿದೆ. ಆದರೆ ವಿತ್ತೀಯ ಕೊರತೆ ಹೆಚ್ಚುತ್ತಿರುವುದರಿಂದ ಈ ನಿಧಿಯಲ್ಲಿ ಹೂಡಿಕೆ ಮಾಡಲು ಮತ್ತೆ ಸಾಲ ಮಾಡಬೇಕಾದ ಸ್ಥಿತಿ ನಿರ್ವಣವಾಗಿದೆ. ಅದು ವಿತ್ತೀಯ ಕೊರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದ್ದರಿಂದಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕೆಂದು ಆರ್ಥಿಕ ಸಮೀಕ್ಷೆ ಹೇಳಿದೆ. ಆದರೆ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಕೇಳುವ ಸ್ಥಿತಿ ಈಗ ಇಲ್ಲ.

ಹಣದುಬ್ಬರ ನಿಯಂತ್ರಣ: ಹಣದುಬ್ಬರ ನಿಯಂತ್ರಣ ಕೇವಲ ರಾಜ್ಯ ಸರ್ಕಾರವೊಂದರಿಂದಲೇ ಸಾಧ್ಯವಿಲ್ಲ. ಆದರೆ ಆ ನಿಟ್ಟಿನಲ್ಲಿ ಕೆಲವೊಂದು ಪ್ರಯತ್ನ ಮಾಡಲು ಆಶಯ ವ್ಯಕ್ತಮಾಡಬಹುದಾಗಿತ್ತು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಉದ್ಯೋಗ ಸೃಷ್ಟಿ: ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಭಾರಿ ಉದ್ಯೋಗ ಸೃಷ್ಟಿಯ ಬಗ್ಗೆ ಉಲ್ಲೇಖಿಸಲಾಗಿತ್ತು. ಆದರೆ ಸರ್ಕಾರದ ಮಾಹಿತಿ ಪ್ರಕಾರ 14 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಆದರೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಉಳಿದ 36 ಲಕ್ಷ ಉದ್ಯೋಗಗಳ ಬಗ್ಗೆ ಎಲ್ಲಿಯೂ ಪ್ರಸ್ತಾಪವಾಗದಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.

ಮಾರುಕಟ್ಟೆ ಸಾಲ ಹೆಚ್ಚಳ: ಈ ಬಾರಿ ಮಾರುಕಟ್ಟೆ ಸಾಲಗಳ ಪ್ರಮಾಣ ಶೇ. 4 ಹೆಚ್ಚಳವಾಗುತ್ತಿದೆ. ಈ ಸಾಲ ಆಸ್ತಿ ಸೃಜನೆಗೆ ಬಳಕೆಯಾಗಬೇಕು ಎಂಬುದು ತಜ್ಞರ ಸಲಹೆ.

ತೆರಿಗೆಯೇತರ ಆದಾಯ ಇಳಿಕೆ

ವಿವಿಧ ಇಲಾಖೆಗಳು ನೀಡುವ ಸೇವೆಗಳಿಗೆ ಬಳಕೆದಾರರ ವೆಚ್ಚ, ಶುಲ್ಕದ ಮೂಲಗಳಿಂದ ರಾಜ್ಯದ ಆದಾಯಕ್ಕೆ ಬರುವ ತೆರಿಗೆಯೇತರ ಆದಾಯ ಹಲವು ವರ್ಷಗಳಿಂದ ಪರಿಷ್ಕರಣೆಯಾಗಿಲ್ಲವೆಂಬುದು ಆರ್ಥಿಕ ಸಮೀಕ್ಷೆಯಲ್ಲಿ ವ್ಯಕ್ತವಾಗಿರುವ ಆಕ್ಷೇಪ. ಅಧಿಕಾರಿಗಳ ಸಮಿತಿ ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದರೂ ಅದು ಜಾರಿಗೆ ಬಂದಿಲ್ಲ. ಲಾಭಕರವಲ್ಲದ ದುಬಾರಿ ಸಹಾಯಧನಗಳಿಂದ ಜಿಎಸ್​ಡಿಪಿಯಲ್ಲಿ ತೆರಿಗೆಯೇತರ ರಾಜಸ್ವದ ಪ್ರಮಾಣ ನಗಣ್ಯವಾಗಿದೆ. ಆದ್ದರಿಂದಲೇ ದರಗಳನ್ನು ಪರಿಷ್ಕರಣೆ ಮಾಡಲು ಸಮೀಕ್ಷೆಯಲ್ಲಿ ಹೇಳಲಾಗಿದೆ. ಆದರೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಸರ್ಕಾರ ಆ ಪ್ರಯತ್ನ ಮಾಡುವ ಸಾಧ್ಯತೆ ಕಡಿಮೆ.

ವಿತ್ತೀಯ ಸವಾಲು ಮುಖ್ಯ ಕಾರ್ಯದರ್ಶಿ ನೇತೃತ್ವದ ವಿತ್ತೀಯ ನಿರ್ವಹಣಾ ಸಮಿತಿ ವರದಿ

# ಯಾವುದೇ ವೆಚ್ಚ, ದೀರ್ಘಾವಧಿ ಅರ್ಥ ವ್ಯವಸ್ಥೆ ವಿಸ್ತರಣೆ, ಆಸ್ತಿ ಸೃಜನೆಯ ಕಡೆ ಇರಬೇಕು

# ವೆಚ್ಚ ಬೇಡಿಕೆ ಹೆಚ್ಚುತ್ತಿರುವುದರಿಂದ ಸಾಧ್ಯವಿ ರುವ ಕಡೆ ಖಾಸಗಿ ಸಹಭಾಗಿತ್ವ ಪಡೆಯಬೇಕು

# ಅಗತ್ಯವಿಲ್ಲದ ಸಹಾಯಧನ ಯೋಜನೆಗಳನ್ನು ಹಂತ ಹಂತವಾಗಿ ಕಡಿಮೆ ಮಾಡಿಕೊಳ್ಳಬೇಕು

# ಕೇಂದ್ರ ಯೋಜನೆಗಳಿಗೆ ಅನುದಾನ ಕಡಿತವಾಗಿರುವುದರಿಂದ ಅವುಗಳಿಗೆ ಹಣ ಹೊಂದಾಣಿಕೆ ಮಾಡಲು ಸಮಿತಿ ರಚನೆ ಮಾಡಿ ಪರಿಶೀಲನೆ ಮಾಡಬೇಕು.

# ಬಂಡವಾಳ ವೆಚ್ಚಕ್ಕೆ ಹಣ ಹೊಂದಾಣಿಕೆ ಮಾಡಲು ಗಮನ ಹರಿಸಬೇಕು

# ಬಳಕೆದಾರರ ಶುಲ್ಕ ಹೆಚ್ಚಳ ಮಾಡಬೇಕು

# ಯೋಜನೆ ಆರಂಭದ ವರ್ಷದಲ್ಲಿ ಮಾತ್ರವಲ್ಲದೇ ಒಟ್ಟು ವೆಚ್ಚ ಭರಿಸುವ ರೀತಿ ರೂಪಿಸಬೇಕು, ಆಗ ಪದೇ ಪದೇ ಪರಿಷ್ಕರಣೆ ತಪು್ಪತ್ತದೆ.

# ಮುಕ್ತಾಯದ ಹಂತದಲ್ಲಿರುವ ಯೋಜನೆಗಳಿಗೆ ಮೊದಲ ಆದ್ಯತೆ ನೀಡಬೇಕು

# ಕೇಂದ್ರದ ಅನುದಾನಗಳ ಗರಿಷ್ಠ ಬಳಕೆ ಮಾಡಿ ರಾಜಸ್ವ ಹೆಚ್ಚಳಕ್ಕೆ ಆದ್ಯತೆ ನೀಡಬೇಕು

# ಅಭಿವೃದ್ಧಿಯೇತರ ವೆಚ್ಚ ನಿಯಂತ್ರಣ ಮಾಡಿ ಅಭಿವೃದ್ಧಿಗೆ ಹೆಚ್ಚು ಖರ್ಚು ಮಾಡಬೇಕು

# ಸೋರಿಕೆ ತಡೆ ಹಾಗೂ ಫಲಾನುಭವಿಗಳನ್ನು ಗುರುತಿಸುವಲ್ಲಿ ಉತ್ತಮ ನಡವಳಿಕೆ.

ಅಷ್ಟವರ್ಣಗಳಲ್ಲಿ ಅರಳಿದ ವಿರಾಗಿ…

ವಿಂಧ್ಯಗಿರಿಯ ವಿರಾಟ್ ವಿರಾಗಿ ಬಾಹುಬಲಿ ಸ್ವಾಮಿಗೆ ಶನಿವಾರ ಮಧ್ಯಾಹ್ನ ಪ್ರಥಮ ಮಜ್ಜನ ನೆರವೇರಿತು. ಜಲಾಭಿಷೇಕದ ನಂತರ ಇಕ್ಷುರಸ (ಕಬ್ಬಿನ ರಸ), ಎಳನೀರಿನಲ್ಲಿ ತೊಯ್ದ ಗೊಮ್ಮಟ ಗಾಜಿನಿಂದ ನಿರ್ವಿುತವಾದ ಮೂರ್ತಿಯಂತೆ ಕಂಡರೆ, ಕ್ಷೀರಾಭಿಷೇಕದಿಂದ ಶ್ರೇಷ್ಠ ಅಮೃತ ಶಿಲೆಯಿಂದ ಸಿದ್ಧವಾದವನಂತೆಯೂ, ಶ್ವೇತಕಲ್ಪ ಚೂರ್ಣ (ಅಕ್ಕಿ ಹಿಟ್ಟು) ಮಜ್ಜನದಿಂದ ಆಕಾಶದಲ್ಲಿ ಬಿಳಿ ಮೇಘಗಳ ನಡುವೆ ತೇಲುತ್ತಿರುವ ಮಂದಸ್ಮಿತನಾಗಿಯೂ, ಹರಿದ್ರಾ (ಅರಿಶಿಣ) ದ್ರವದ ಪವಿತ್ರ ಸ್ನಾನದಿಂದ ಸ್ವರ್ಣಲೇಪಿತನಂತೆಯೂ, ವನಸ್ಪತಿ ಕಷಾಯದಿಂದ ನೆನೆದಾಗ ಕಪ್ಪು- ಕೆಂಪು ಮಿಶ್ರಿತ ವರ್ಣನಾಗಿಯೂ, ಶ್ರೀಗಂಧದ ಅಭಿಷೇಕದಿಂದ ಪ್ರಸಾದ ಗಂಧ ಲೇಪಿತ ತಾಮ್ರವರ್ಣನಾಗಿಯೂ, ಅಷ್ಟಗಂಧಕ್ಕೆ ಮೈಯೊಡ್ಡಿದಾಗ ಅಡಿಯಿಂದ ಮುಡಿವರೆಗೂ ಕುಂಕುಮ ವರ್ಣನಾಗಿಯೂ ಕಂಗೊಳಿಸಿದ ಪರಿ ನೋಡುಗರನ್ನು ಧನ್ಯಗೊಳಿಸಿತು..

Leave a Reply

Your email address will not be published. Required fields are marked *

Back To Top