Friday, 16th November 2018  

Vijayavani

Breaking News

ಗ್ರಾಮೀಣ ನಗರವಾಸಿಗಳ ಓಲೈಸುವ ಬಜೆಟ್

Saturday, 17.02.2018, 3:03 AM       No Comments

| ಎಸ್. ವೆಂಕಟರಮಣಿ ತೆರಿಗೆ ತಜ್ಞರ ಸಮಿತಿ ಅಧ್ಯಕ್ಷ, ಬಿಸಿಐಸಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಾಮೀಣ ಮತ್ತು ನಗರವಾಸಿಗಳನ್ನು ಸಂತೃಪ್ತಗೊಳಿಸುವ ಬಜೆಟ್ ಮಂಡಿಸಿದ್ದಾರೆ. 2018ರ ಮೇನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ, ಸಮಾಜದ ಎರಡು ಮುಖ್ಯ ಸ್ತಂಭಗಳಾದ ಗ್ರಾಮ ಮತ್ತು ಕೈಗಾರಿಕಾ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಗ್ರಾಮ ಮತ್ತು ನಗರಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ದೊರೆತಿದ್ದು, ಗ್ರಾಮ ಮತ್ತು ನಗರ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಾಗಿದ್ದಾರೆ. ಹಾಗಾಗಿ ಇದನ್ನು ರೈತರು ಮತ್ತು ಕೈಗಾರಿಕಾಸ್ನೇಹಿ ಬಜೆಟ್ ಎಂದು ವಿಶ್ಲೇಷಿಸಬಹುದು.

ಕರ್ನಾಟಕ ಮಾದರಿಯ ಇ-ವೇಬಿಲ್ ಅನ್ನು ರಾಷ್ಟ್ರದಾದ್ಯಂತ ಜಾರಿಗೊಳಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಿಎಂ ಹೇಳಿದ್ದಾರೆ. ಇದರಿಂದಾಗಿ, ತೆರಿಗೆ ಸಂಗ್ರಹ ಪದ್ಧತಿಯಲ್ಲಿ ಗುಣಾತ್ಮಕ ಬದಲಾವಣೆ ತರಲು ಸಾಧ್ಯವಾಗಲಿದ್ದು, ಜಿಎಸ್​ಟಿ ಅನುಷ್ಠಾನಕ್ಕೆ ಪೂರಕವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸರ್ಕಾರ ಮಂಡಿಸಿರುವ 2018-19ನೇ ಸಾಲಿನ ಬಜೆಟ್​ನ ದಿಕ್ಕುದೆಸೆಯಲ್ಲೇ ರಾಜ್ಯ ಬಜೆಟ್ ಕೂಡ ಸಾಗಿದೆ ಎಂಬುದಂತೂ ಸ್ಪಷ್ಟ. ನಗರ-ಗ್ರಾಮ ಮೂಲಸೌಕರ್ಯ ಅಭಿವೃದ್ಧಿ, ಶೈಕ್ಷಣಿಕ ಸೌಲಭ್ಯ ಮತ್ತು ಆರೋಗ್ಯ ಸೇವೆಗಳ ವಿಸ್ತರಣೆ, ಕುಟುಂಬ ಕಲ್ಯಾಣ, ಕ್ರೀಡೆಗಳಿಗೆ ಉತ್ತೇಜನ, ತೋಟಗಾರಿಕೆ ಮತ್ತು ರೇಷ್ಮೆ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ರೀತಿ, ಈ ಚುನಾವಣಾ ಬಜೆಟ್​ನಲ್ಲಿ ಪ್ರತಿಯೊಂದು ವಲಯಕ್ಕೂ ಅನುದಾನಗಳನ್ನು ಒದಗಿಸಲಾಗಿದೆ.

ಬೆಂಗಳೂರು ಮತ್ತು ಅದರ ಸುತ್ತಮುತ್ತಲ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ಗಮನ ನೀಡಿರುವುದು, ಜಾಗತಿಕ ಸಮುದಾಯದಲ್ಲಿ ಬ್ರಾಂಡ್ ಬೆಂಗಳೂರಿನ ವರ್ಚಸ್ಸನ್ನು ಕಾಯ್ದುಕೊಳ್ಳಲು ಪೂರಕವಾಗಿದೆ. ಅದರಲ್ಲೂ ವಿಶೇಷವಾಗಿ, ನಮ್ಮ ಮೆಟ್ರೋ ಯೋಜನೆಯ 2 ಮತ್ತು 2ಎ ಹಂತದ ಕಾಮಗಾರಿಗಳನ್ನು ಚುರುಕುಗೊಳಿಸುವ ಜತೆಗೆ 3ನೇ ಹಂತದ ಕಾಮಗಾರಿಗಳನ್ನು ಆರಂಭಿಸುವ ಪ್ರಸ್ತಾಪ ಮಾಡಿರುವುದು ಬ್ರಾ್ಯಂಡ್ ಬೆಂಗಳೂರಿನ ನಿರ್ವಣಕ್ಕೆ ಪೂರಕವಾಗಿದೆ. ಬಿಎಂಟಿಸಿ, ಬಿಡಿಎ ಮತ್ತು ಬಿಬಿಎಂಪಿಗೆ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಬೆಂಗಳೂರಿನ ಮೂಲಸೌಕರ್ಯ ಕೊರತೆಗಳ ನಿವಾರಣೆಯೆಡೆಗೆ ಹೆಚ್ಚಿನ ಗಮನಹರಿಸಲಾಗಿದೆ. ಇದೆಲ್ಲದರ ಪರಿಣಾಮದಿಂದಾಗಿ ಬೆಂಗಳೂರಿಗೆ ನೇರವಾಗಿ ಹೊಸ ಹೂಡಿಕೆಗಳು ಹರಿದುಬರಲಿವೆ.

ಈಗಾಗಲೆ ಜಿಎಸ್​ಟಿ ಅನುಷ್ಠಾನಗೊಂಡಿರುವ ಹಿನ್ನೆಲೆಯಲ್ಲಿ 2018-19ನೇ ಸಾಲಿನ ಬಜೆಟ್​ನಲ್ಲಿ ಘೋಷಿಸಿರುವ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ಅನುದಾನ ಒದಗಿಸಲು ಹಣವನ್ನು ಹೇಗೆ ಹೊಂದಿಸಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಹಾಗಾಗಿ, ಸಿದ್ದರಾಮಯ್ಯ ಅವರ ಬಜೆಟ್ ಕೇವಲ ಚುನಾವಣಾ ಮೌಲ್ಯವನ್ನು ಹೊಂದಿದೆಯೇ ಅಥವಾ ವಾಸ್ತವ ರೂಪಕ್ಕಿಳಿಯುತ್ತದೆಯೇ ಎಂಬುದಕ್ಕೆ ಕಾಲವೇ ಉತ್ತರವಾಗಬೇಕಿದೆ.

ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸ್ವಂತ ಕಟ್ಟಡ ಹೊಂದಿರುವ 120 ಸರ್ಕಾರಿ ಐಟಿಐಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಮಲ್ಟಿಮೀಡಿಯಾ ಕಂಪ್ಯೂಟರ್ ಲ್ಯಾಬ್​ಗಳನ್ನು ಸ್ಥಾಪಿಸುವ ಮೂಲಕ ಡಿಜಿಟಲ್ ಕಲಿಕೆ ಏರ್ಪಡಿಸುವುದಾಗಿ ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿದೆ. ಇದರಿಂದಾಗಿ ಈ ಸಂಸ್ಥೆಗಳಲ್ಲಿ ಕೈಗಾರಿಕೆಗಳಿಗೆ ಪೂರಕವಾದ ಕೌಶಲಗಳನ್ನು ರೂಢಿಸಿಕೊಂಡು ವಿದ್ಯಾರ್ಥಿಗಳು ಹೊರಬರುತ್ತಾರೆ. ಹಾಗಾಗಿ ಇದೊಂದು ಸ್ವಾಗತಾರ್ಹ ನಿರ್ಧಾರವಾಗಿದೆ.

ಅನ್ವೇಷಣೆಗಳ ನೀತಿ ಘೋಷಿಸಲಾಗಿದ್ದು, ಇದರಿಂದ ಹೊಸ ಹೊಳಹುಗಳೊಂದಿಗೆ, ಬಳಕೆದಾರರಿಗೆ ಬಹುವಿಧದ ಅನುಕೂಲಗಳನ್ನು ಕಲ್ಪಿಸಿಕೊಡಬಹುದಾದ ಉತ್ಪನ್ನಗಳನ್ನು ತಯಾರಿಸಲು ಉತ್ಪಾದನಾ ಕ್ಷೇತ್ರದ ನವೋದ್ಯಮಗಳಿಗೆ ಉತ್ತೇಜನ ದೊರೆಯಲಿದೆ.

ಸಣ್ಣ ವಿಮಾನಗಳಿಗೆ ಮಾರಾಟ ಮಾಡುವ ಎಟಿಎಫ್​ನ ಮಾರಾಟ ತೆರಿಗೆಯನ್ನು ಶೇ.28ರಿಂದ ಶೇ.5ಕ್ಕೆ ಇಳಿಸಿರುವುದು ಸ್ವಾಗತಾರ್ಹ. ಇದರಿಂದಾಗಿ, ಕೇಂದ್ರ ಸರ್ಕಾರದ ಉಡಾನ್ ಯೋಜನೆಗಳನ್ನು ರಾಜ್ಯವ್ಯಾಪಿಯಾಗಿ ವಿಸ್ತರಿಸಲು ಅನುಕೂಲವಾಗಲಿದೆ.

ಸಿಎಂ ಸಿದ್ದರಾಮಯ್ಯ ಅವರು ಸಮಗ್ರ ಮೂಲಸೌಕರ್ಯ ಅಭಿವೃದ್ಧಿ ಜತೆಗೆ ಗ್ರಾಮೀಣ ಆರ್ಥಿಕತೆಗೆ ಒತ್ತು ನೀಡಲು ಪ್ರಯತ್ನಿಸಿದ್ದಾರೆ. ಆದರೂ, ರಾಜ್ಯದಲ್ಲಿ ನಾನಾ ಮೂಲಸೌಕರ್ಯ ಕೊರತೆಗಳಿಂದಾಗಿ ಅನ್ಯ ರಾಜ್ಯಗಳ ಪಾಲಾಗುತ್ತಿರುವ ಕೈಗಾರಿಕೆಗಳನ್ನು ಕರ್ನಾಟಕಕ್ಕೆ ಕರೆತರಲು, ಹೋಗಲಿರುವವರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಒತ್ತು ನೀಡಿದ್ದರೆ ಒಳ್ಳೆಯದಿತ್ತು.


 ಸಿಎಂ ತವರಿಗೆ ಫುಲ್​ವಿುೕಲ್ಸ್!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸರ್ಕಾರದ ಕೊನೇ ಬಜೆಟ್​ನಲ್ಲಿ ಹೈ-ಕ ಭಾಗ, ಮಲೆನಾಡು, ಅರೆ ಮಲೆನಾಡು ಪ್ರದೇಶ ಹಾಗೂ ಕರಾವಳಿ ಜಿಲ್ಲೆಗಳ ಅವಶ್ಯಕತೆಗಳನ್ನು ಗಣನೆಗೆ ತೆಗೆದುಕೊಂಡಿದ್ದಾರೆ. ಸಮತೋಲಿತ ಬಜೆಟ್ ಮಂಡಿಸಲು ಯತ್ನಿಸಿದ್ದಾರಾದರೂ ಕಾಂಗ್ರೆಸ್ ಪ್ರಾಬಲ್ಯ ಹೊಂದಿರುವ ಜಿಲ್ಲೆಗಳಿಗೆ ಒತ್ತು ಕೊಟ್ಟಿರುವುದು ಕಂಡುಬರುತ್ತದೆ. ಯಾವ ಜಿಲ್ಲೆಗಳಿಗೆ ಏನೇನು ಕೊಡುಗೆ ಎಂಬ ಮಾಹಿತಿ ಇಲ್ಲಿದೆ.

ವಿಜಯಪುರ

# ವಿಜಯಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶತಮಾನೋತ್ಸವ ಕಟ್ಟಡಕ್ಕೆ ತಲಾ 5 ಕೋಟಿ ರೂ. ಸಹಾಯಧನ

# ಕೃಷ್ಣಾ ಮೇಲ್ದಂಡೆ ಯೋಜನೆಯ 2ನೇ ಹಂತವಾಗಿ ನಾರಾಯಣಪುರ ಬಲದಂಡೆ ಕಾಲುವೆ 95 ಕಿ.ಮೀ. ಆಧುನೀಕರಣ ಯೋಜನೆಗೆ 750 ಕೋಟಿ ರೂ. ಮೀಸಲು.


ಬಾಗಲಕೋಟೆ

# ಬಾಗಲಕೋಟೆಯ ಸಸಾಲಟ್ಟಿ ಏತ ನೀರಾವರಿ ಯೋಜನೆಗೆ 140 ಕೋಟಿ ರೂ.

# ಮುಧೋಳ ತಾಲೂಕಿನ ಮಂಟೂರು ಕೆರೆ ತುಂಬಿಸುವ ಯೋಜನೆಗೆ 50 ಕೋಟಿ ರೂ.

# ಜಮಖಂಡಿ ತಾಲೂಕಿನ ಗಲಗಲಿ-ಮರೆಗುದ್ದಿ ಏತ ನೀರಾವರಿ ಯೋಜನೆಗೆ 100 ಕೋಟಿ ರೂ.

# ಹೆಲಿಪ್ಯಾಡ್ ಮತ್ತು ಹೆಲಿ ಸೇವೆ ಅಭಿವೃದ್ಧಿಗೆ ಅನುಮೋದನೆ

# ಮುದ್ದೇಬಿಹಾಳದ ತಾಳಿಕೋಟೆ, ಬಾದಾಮಿಯ ಹೆಬ್ಬಳಿಯಲ್ಲಿ ವಿದ್ಯುತ್ ಉಪಕೇಂದ್ರ


 ಬೆಳಗಾವಿ

# ಬೆಳಗಾವಿಯ ರಾಮದುರ್ಗ ತಾಲೂಕಿನ 46 ಕೆರೆಗಳಿಗೆ ಘಟಪ್ರಭಾ ನದಿ ನೀರು ಹರಿಸುವ ಸಾಲಾಪುರ ಏತ ನೀರಾವರಿ ಯೋಜನೆಗೆ 540 ಕೋಟಿ ರೂ.

# ಸತ್ತಿಗೇರಿ ಏತ ನೀರಾವರಿ ಯೋಜನೆಗೆ 210 ಕೋಟಿ ರೂ.

# ಗೋಕಾಕ ತಾಲೂಕಿನ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಕುಡಿಯುವ ನೀರು ಪೂರೈಕೆಗಾಗಿ ಹಾಗೂ ಮಾರ್ಕಂಡೇಯ ಕಾಲುವೆಯಡಿ ಬಿಟ್ಟು ಹೋದ ಅಚ್ಚುಕಟ್ಟಿನ ನೀರಾವರಿಗಾಗಿ 250 ಕೋಟಿ ರೂ. ಮಂಜೂರು

# ಅಥಣಿ ತಾಲೂಕಿನ ಕೋಹಳ್ಳಿ, ಕೊಟ್ಟಲಗಿ, ಐಗಳಿ, ಕಕಮರಿ, ಹಾಲಳ್ಳಿ, ಅಡಹಳ್ಳಿ, ಅಡಾಳಟ್ಟಿ, ಕೋಕಟನೂರ, ಕನ್ನಾಳ, ಪಡತರವಾಡಿ, ಅರಟಾಳ ಗಾ ್ರುಗಳ 17 ಕೆರೆಗಳಿಗೆ ಕೃಷಾ ್ಣ ನದಿ ನೀರು ಹರಿಸಲು 137 ಕೋಟಿ ರೂ.


 ಕಾರವಾರ

#  ಕಾರವಾರ ವೈದ್ಯಕೀಯ ಕಾಲೇಜಿನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ

# ಕಾರವಾರ ಬಂದರಿನಲ್ಲಿ 61 ಕೋಟಿ ರೂ. ವೆಚ್ಚದಲ್ಲಿ ಕೋಸ್ಟಲ್ ಬರ್ತ್

#  90 ಕೋಟಿ ರೂ. ವೆಚ್ಚದಲ್ಲಿ 425 ಮೀಟರ್ ಅಲೆ ತಡೆಗೋಡೆ

# ಹೌಸ್ ಬೋಟ್ ಹಾಗೂ ತೇಲುವ ಉಪಾಹಾರ ಗೃಹ

# ಮುರುಡೇಶ್ವರದಲ್ಲಿ ದೋಣಿಗಳ ಸುರಕ್ಷಿತ ಇಳಿದಾಣಕ್ಕೆ ಹೊರಬಂದರು ನಿರ್ವಿುಸುವ ಉದ್ದೇಶ. ಪೂರ್ವಭಾವಿ ಅಧ್ಯಯನಕ್ಕಾಗಿ 1 ಕೋಟಿ ರೂ. ಮೀಸಲು.

# ಕಿರು ವಿಮಾನ ನಿಲ್ದಾಣ ಸ್ಥಾಪನೆಗೆ ಅನುಮೋದನೆ


 ಧಾರವಾಡ

# ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ 50 ಎಕರೆಯಲ್ಲಿ ಬಹು ಮಾದರಿಯ ಲಾಜಿಸ್ಟಿಕ್ ಪಾರ್ಕ್ ಅಭಿವೃದ್ಧಿಗೆ ಕ್ರಮ

# ಕವಿವಿಯಲ್ಲಿ ಕೋಟಿ ರೂ. ವೆಚ್ಚದಲ್ಲಿ ಕೊಂಕಣಿ ಅಧ್ಯಯನ ಪೀಠ

# ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಶತಮಾನೋತ್ಸವ ಕಟ್ಟಡಕ್ಕೆ 5 ಕೋಟಿ ರೂ.

#  ಭಾರಿ ವಾಹನ ತರಬೇತಿ ಸಂಸ್ಥೆಯಲ್ಲಿ 100 ಮಹಿಳೆಯರಿಗೆ ಚಾಲನಾ ತರಬೇತಿ


 ಗದಗ

# ಗದಗದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಕಾಲೇಜು

# ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕ್ಯಾಥ್ ಲ್ಯಾಬ್ ಸೌಲಭ್ಯದೊಂದಿಗೆ ಹೃದಯ ಚಿಕಿತ್ಸಾ ಘಟಕ

# ಜಿಲ್ಲಾ ಕ್ರೀಡಾಂಗಣಕ್ಕೆ ಕ್ರೀಡಾ ಹಬ್ ಮಾದರಿಯಲ್ಲಿ ಕ್ರೀಡಾ ಸೌಲಭ್ಯ

# ರೋಣದ ಬೆಳವಣಕಿಯಲ್ಲಿ ವಿದ್ಯುತ್ ಉಪಕೇಂದ್ರ


 ಹಾವೇರಿ

# ಹಾವೇರಿ ಜಿಲ್ಲೆಯಲ್ಲಿ 79.80 ಕೋಟಿ ರೂ. ವೆಚ್ಚದಲ್ಲಿ ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರು ತಾಲೂಕಿನ ಆಸುಂಡಿ ಹಾಗೂ ಸುತ್ತ್ತಲಿನ 17 ಕೆರೆಗಳಿಗೆ ಕುಮುದ್ವತಿ ನದಿ ನೀರು

# 23 ಕೋಟಿ ರೂ.ಗಳ ವೆಚ್ಚದಲ್ಲಿ ಹಿರೇಕೆರೂರು ತಾಲೂಕಿನ 13 ಕೆರೆಗೆ ತುಂಗಭದ್ರ ನೀರನ್ನೆತ್ತುವ ಯೋಜನೆ


 ದಕ್ಷಿಣ ಕನ್ನಡ

# ಮಂಗಳೂರು ತಾಲೂಕಿನ ಹರೇಕಳ ಎಂಬಲ್ಲಿ ಕುಡಿಯುವ ನೀರು ಹಾಗೂ ನೀರಾವರಿ ಸೌಲಭ್ಯ ಕಲ್ಪಿಸಲು ನೇತ್ರಾವತಿ ನದಿಗೆ ಉಪ್ಪುನೀರು ತಡೆಯುವ ಕಿಂಡಿ ಅಣೆಕಟ್ಟು ನಿರ್ವಣಕ್ಕೆ 174 ಕೋಟಿ ರೂ. ಮೀಸಲು.

# 85 ಕೋಟಿ ರೂ. ವೆಚ್ಚದಲ್ಲಿ ಅತ್ಯುನ್ನತ ಭದ್ರತಾ ವ್ಯವಸ್ಥೆಯ ಕಾರಾಗೃಹ ನಿರ್ಮಾಣ

#  ಹಳೇ ಮಂಗಳೂರು ಬಂದರಿನಲ್ಲಿ 65 ಕೋಟಿ ರೂ. ವೆಚ್ಚದಲ್ಲಿ ಕೋಸ್ಟಲ್ ಬರ್ತ್

# ಬಂದರಿನ ಆಳ ಹೆಚ್ಚಿಸಲು 29 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ

# ಹೌಸ್​ಬೋಟ್ ಹಾಗೂ ತೇಲುವ ಉಪಾಹಾರ ಗೃಹ


 ಚಿಕ್ಕಮಗಳೂರು

# ಚಿಕ್ಕಮಗಳೂರಿನಲ್ಲಿ ಕಿರು ವಿಮಾನ ನಿಲ್ದಾಣ, ಹೆಲಿಪ್ಯಾಡ್, ಹೆಲಿ ಸೇವೆ ಸ್ಥಾಪನೆಗೆ ಅನುಮೋದನೆ

# ಕುವೆಂಪು ವಿವಿಯಲ್ಲಿ ಸ್ನಾತಕೋತ್ತರ ಕೇಂದ್ರ

# ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಯೋಜನೆಯಡಿ ಆಯ್ಕೆ


 ಹಾಸನ

# ಹಾಸನ ವೈದ್ಯಕೀಯ ಕಾಲೇಜಿನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ನಿರ್ವಣಕ್ಕೆ 15 ಕೋಟಿ ರೂ.

# ಅರಕಲಗೂಡು ತಾಲೂಕು ಕೊಣನೂರು ಕೆರೆಯಿಂದ ಗ್ರಾಮದ ಸುತ್ತಮುತ್ತಲಿನ 40 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ 30 ಕೋಟಿ ರೂ. ಮೀಸಲು.

# ಹಾಸನಕ್ಕೆ ಹೊಂದಿಕೊಂಡಿರುವ ಚನ್ನಪಟ್ಟಣ ಕೆರೆ, ಸತ್ಯಮಂಗಲ ಕೆರೆ, ಹುನಸಿನಕೆರೆ ಕೆರೆಗಳ ಪುನಶ್ಚೇತನ ಹಾಗೂ ಹಂದಿನಕೆರೆಯಿಂದ ಸತ್ಯಮಂಗಲ ಕೆರೆಗೆ ನೀರು ತುಂಬಿಸುವ ಯೋಜನೆಗೆ 20 ಕೋಟಿ ರೂ.


 ಕೊಡಗು

#  ಕೊಡಗಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಮಡಿಕೇರಿ-ತಲಕಾವೇರಿ ರಸ್ತೆಗೆ ಮರು ಡಾಂಬರೀಕರಣ, ಅಭಿವೃದ್ಧಿ

# ಕಿರು ವಿಮಾನ ನಿಲ್ದಾಣ, ಹೆಲಿಪ್ಯಾಡ್ ಹಾಗೂ ಹೆಲಿ ಸೇವೆ ಸ್ಥಾಪನೆಗೆ ಅನುಮೋದನೆ

# ಹೆಲಿಪ್ಯಾಡ್ ಮತ್ತು ಹೆಲಿ ಸೇವೆ ಅಭಿವೃದ್ಧಿಗೆ ಅನುಮೋದನೆ


 ಮಂಡ್ಯ

# ಮಂಡ್ಯದ ಕೆ.ಆರ್. ಪೇಟೆಯ ಗಂಗೇನಹಳ್ಳಿ, ಮಂಡ್ಯದ ತುಂಬೆಕೆರೆಯಲ್ಲಿ ವಿದ್ಯುತ್ ಉಪಕೇಂದ್ರ

# ಅಮೃತ್ ಯೋಜನೆಯಡಿ ನೀರು ಸರಬರಾಜು ಯೋಜನೆ ಅನುಷ್ಠಾನ


 ಚಾಮರಾಜನಗರ

#  ಚಾಮರಾಜನಗರದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಕಾಲೇಜು

# ಬಿಳಿಗಿರಿರಂಗನ ಬೆಟ್ಟ ಪ್ರದೇಶದಲ್ಲಿ 40 ಎಕರೆ ವಿಸ್ತೀರ್ಣದಲ್ಲಿ ಹಿಪ್ಪುನೇರಳೆ ಕೃಷಿ ಅಭಿವೃದ್ಧಿಪಡಿಸಿ ಸೋಲಿಗರಿಂದ ದ್ವಿತಳಿ ರೇಷ್ಮೆಹುಳು ಸಾಕಾಣಿಕೆ ಉದ್ದೇಶ

# ಹೊಸ ಕೈಗಾರಿಕಾ ವಸಾಹತು ಔ ನೂತನ ಕೃಷಿ ಕಾಲೇಜು ಸ್ಥಾಪನೆ


 ಮೈಸೂರು

# ಮೈಸೂರಿನಲ್ಲಿರುವ ಕುವೆಂಪು ಅವರ ನಿವಾಸ ‘ಉದಯರವಿ’ಯನ್ನು ರಾಷ್ಟ್ರಕವಿ ಸ್ಮಾರಕವಾಗಿ ಅಭಿವೃದ್ಧಿ

# ಮೈಸೂರಿನಲ್ಲಿ ಪ್ರತಿ ವರ್ಷ ಆಯೋಜಿಸುವ ದಸರಾ ಕ್ರೀಡಾಕೂಟವನ್ನು ‘ದಸರಾ-ಸಿಎಂ ಕಪ್’ ಹೆಸರಲ್ಲಿ ಆಯೋಜನೆ, 7 ಕೋಟಿ ರೂ.ಅನುದಾನ

# 45 ಕೋಟಿ ರೂ. ವೆಚ್ಚದಲ್ಲಿ ನಂಜನಗೂಡು ವರ್ತಲ ರಸ್ತೆಯಲ್ಲಿ ಟ್ರಕ್ ಟರ್ವಿುನಲ್

# ಶುಶ್ರೂಷಾ ಕಾಲೇಜಿಗೆ 30 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ

#  ವೈದ್ಯಕೀಯ ಕಾಲೇಜಿನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕಕ್ಕೆ 15 ಕೋಟಿ ರೂ.

# ಬಸವಣ್ಣನವರ ಬಗ್ಗೆ ಅಧ್ಯಯನ ನಡೆಸಲು ಮೈಸೂರು ವಿವಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಬಸವ ಅಧ್ಯಯನ ಕೇಂದ್ರ

# ಮೈಸೂರಿನಲ್ಲಿ ಅಜೀಜ್ ಸೇಠ್ ಸ್ಮಾರಕ ಸಮುದಾಯ ಭವನ ನಿರ್ಮಾಣ

# ಬೆಂಗಳೂರು- ಮೈಸೂರು ಕಾರಿಡಾರ್​ನಲ್ಲಿ ರೇಷ್ಮೆ ಟೂರಿಸಂ ಅಭಿವೃದ್ಧಿ

# ಪಿರಿಯಾಪಟ್ಟಣ ತಾಲೂಕಿನ ಕಣಗಾಲು, ಕಿತ್ತೂರು, ಟಿ.ನರಸೀಪುರ ತಾಲೂಕಿನ ಮಡವಾಡಿ, ಮಲಿಯೂರು, ನಂಜನಗೂಡು ತಾಲೂಕಿನ ಹೆಮ್ಮರಗಾಲ, ಚಂದ್ರವಾಡಿಯಲ್ಲಿ ವಿದ್ಯುತ್ ಉಪಕೇಂದ್ರ


ರಾಮನಗರ

# ರಾಮನಗರಕ್ಕೆ ಕೈಗಾರಿಕಾ ಟೌನ್​ಷಿಪ್

# ಚನ್ನಪಟ್ಟಣದ ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಲೈವ್ ಮ್ಯೂಸಿಯಂ

# ರಾಮನಗರದಲ್ಲಿ ಭೂಮಿ ಖರೀದಿ ಯೋಜನೆಯಡಿ ಖರೀದಿ ವೆಚ್ಚ 15ರಿಂದ 20 ಲಕ್ಷ ರೂ. ಏರಿಕೆ

# ಬಿಡದಿ-ಹಾರೋಹಳ್ಳಿ ರಸ್ತೆಗತೆ ಸರಪಳಿ 11.20ರಿಂದ 17.00 ಕಿ.ಮೀ.ವರೆಗೆ ಹಾರೋಹಳ್ಳಿ ಸೇರುವ ರಸ್ತೆಯನ್ನು 32 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಪಥದ ರಸ್ತೆಯನ್ನಾಗಿ ಅಗಲೀಕರಣ

#  ಚನ್ನಪಟ್ಟಣದಲ್ಲಿ ವಿದ್ಯುತ್ ಉಪಸ್ಥಾವರ


 ಬೀದರ್​

# ಬೀದರ್​ನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕ್ಯಾಥ್ ಲ್ಯಾಬ್ ಸೌಲಭ್ಯದೊಂದಿಗೆ ಹೃದಯ ಚಿಕಿತ್ಸಾ ಘಟಕ

#  482 ಕೋಟಿ ರೂ. ವೆಚ್ಚದಲ್ಲಿ ಕಾರಂಜಾ ಯೋಜನೆ ಆಧುನೀಕರಣ


ಕಲಬುರಗಿ

# ಕಲಬುರಗಿಯ ವೈದ್ಯಕೀಯ ಕಾಲೇಜಿನಲ್ಲಿ ಹೈ-ಕ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಸುಟ್ಟ ಗಾಯಗಳ ವಾರ್ಡ್

# ಜಿಲ್ಲಾ ಕ್ರೀಡಾಂಗಣಕ್ಕೆ ಕ್ರೀಡಾ ಹಬ್ ಮಾದರಿಯಲ್ಲಿ ಕ್ರೀಡಾ ಸೌಲಭ್ಯ

# ಉತ್ತರ ಕರ್ನಾಟಕ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಕಲಬುರಗಿ ಕಲಾಭವನ ನಿರ್ಮಾಣ

# ಕಲಬುರಗಿ ಕೋಟೆ, ಸನ್ನತಿಯಲ್ಲಿ ಸಮಗ್ರ ಪ್ರವಾಸಿ ಸೌಲಭ್ಯ


ರಾಯಚೂರು

# ರಾಯಚೂರಿನ ಯಾಪಲ ದಿನ್ನಿಯಲ್ಲಿ ವಿದ್ಯುತ್ ಉಪಕೇಂದ್ರ

# ಪಶು ರೋಗ ತಪಾಸಣೆ ಕೇಂದ್ರ


 ಕೊಪ್ಪಳ

#  ಕೊಪ್ಪಳದ100 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಕಾಲೇಜು

# ಗಂಗಾವತಿಯ ಯರಡೋನಾ, ಬೆನ್ನೂರು, ಕುಷ್ಟಗಿಯ ತಾವರಗೇರಾದಲ್ಲಿ ವಿದ್ಯುತ್ ಉಪಕೇಂದ್ರ

# ಹೊಸ ಕೈಗಾರಿಕಾ ವಸಾಹತು

# ಜಾನುವಾರು ರೋಗ ತಪಾಸಣೆಗೆ ಸುಸಜ್ಜಿತ ಹೈಟೆಕ್ ಕೇಂದ್ರ


 ಯಾದಗಿರಿ

# ಯಾದಿಗಿರಿಯಲ್ಲಿ ಹೊಸ ಕೈಗಾರಿಕಾ ವಸಾಹತು

# ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ ವಿಸ್ತರಣೆಯಡಿ ಶಹಾಪುರ ಮತ್ತು ಸುರಪುರ ತಾಲೂಕುಗಳಿಗೆ ಅನ್ವಯವಾಗುವಂತೆ ಹೆಚ್ಚುವರಿ ಅಚ್ಚುಕಟ್ಟು ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ.

# ರಾಮಸಮುದ್ರ ಗ್ರಾಮದಲ್ಲಿ ವಿದ್ಯುತ್ ಉಪಕೇಂದ್ರ


 ಬಳ್ಳಾರಿ

# ಬಳ್ಳಾರಿಗೆ ಹೊಸ ಕೈಗಾರಿಕಾ ವಸಾಹತು

# ಹಂಪಿಯಲ್ಲಿ ಸಮಗ್ರ ಪ್ರವಾಸಿ ಸೌಲಭ್ಯ

# ಬಾಚಿಗೊಂಡನಹಳ್ಳಿಯಲ್ಲಿ ವಿದ್ಯುತ್ ಉಪಕೇಂದ್ರ


 ಶಿವಮೊಗ್ಗ

# ಶಿವಮೊಗ್ಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 7.81 ಕೋಟಿ ರೂ. ವೆಚ್ಚದಲ್ಲಿ ಹೃದಯ ಚಿಕಿತ್ಸಾ ಸೌಲಭ್ಯ

# ಮಲೆನಾಡು ಅಭಿವೃದ್ಧಿ ಮಂಡಳಿಗೆ 70 ಕೋಟಿ ರೂ. ಅನುದಾನ


ದಾವಣಗೆರೆ

# ದಾವಣಗೆರೆಯ ಜಗಳೂರು ತಾಲೂಕಿನ 46 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸಲು 250 ಕೋಟಿ ರೂ.

# ಬೇತೂರು, ಮಾಗನಳ್ಳಿ, ರಾಂಪುರ, ಮೇಗಲಗೇರಿ ಮತ್ತು ಖಡಜ್ಜಿ ಗ್ರಾಮಗಳ ಕೆರೆಗಳನ್ನು ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಗೆ 135 ಕೋಟಿ ರೂ. ನಿಗದಿ

# ವೃತ್ತಿ ರಂಗಭೂಮಿ ಅಧ್ಯಯನ, ಸಂಶೋಧನೆ ಮತ್ತು ರಂಗ ಶಿಕ್ಷಣಕ್ಕೆ ಅನುಕೂಲವಾಗುವಂತೆ ವೃತ್ತಿ ರಂಗಭೂಮಿ ಕೇಂದ್ರ


ಚಿತ್ರದುರ್ಗ

# ಚಿತ್ರದುರ್ಗದ ಭರಮಸಾಗರ ಹೋಬಳಿಯ 33 ಕೆರೆಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಗೆ 250 ಕೋಟಿ ರೂ. ಮಂಜೂರು.

# ಬೇತೂರು, ಮಾಗನಳ್ಳಿ, ರಾಂಪುರ, ಮೇಗಲಗೇರಿ ಮತ್ತು ಖಡಜ್ಜಿ ಗ್ರಾಮಗಳ ಕೆರೆಗಳನ್ನು ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಗೆ 135 ಕೋಟಿ ರೂ. ನಿಗದಿ.

# 35 ಕೋಟಿ ರೂ. ವೆಚ್ಚದಲ್ಲಿ ಟ್ರಕ್ ಟರ್ವಿುನಲ್ ಹಾಗೂ ಹೈವೇ ಅಮಿನಿಟೀಸ್ ನಿರ್ಮಾಣ

# ನೆಲಗಡಲೆ ಬೆಳೆ ಪ್ರೋತ್ಸಾಹಕ್ಕೆ 50 ಕೋಟಿ ರೂ. ವಿಶೇಷ ಪ್ಯಾಕೇಜ್.


 ಉಡುಪಿ

# ಉಡುಪಿ ಜಿಲ್ಲಾ ಕ್ರೀಡಾಂಗಣಕ್ಕೆ ಕ್ರೀಡಾ ಹಬ್ ಮಾದರಿಯಲ್ಲಿ ಕ್ರೀಡಾ ಸೌಲಭ್ಯ

# ಹೌಸ್ ಬೋಟ್ ಹಾಗೂ ತೇಲುವ ಉಪಾಹಾರ ಗೃಹ

# ಎ.ಡಿ.ಬಿ ನೆರವಿನ ಕರ್ನಾಟಕ ಸಮಗ್ರ ನೀರು ನಿರ್ವಹಣಾ ಹೂಡಿಕೆ ಕಾರ್ಯಕ್ರಮದಡಿ ಪರಿಷ್ಕೃತ ಯೋಜನೆಯ ಮೊತ್ತ 2187.72 ಕೋಟಿ ರೂ. ವೆಚ್ಚದಲ್ಲಿ ಒಟ್ಟು 8 ಪಟ್ಟಣಗಳಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿ ಕೈಗೆತ್ತಿಕೊಂಡಿದ್ದು, 2ನೇ ಹಂತದಲ್ಲಿ ಉಡುಪಿ, ಕುಂದಾಪುರ ನಗರಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು.


ತುಮಕೂರು

# ತುಮಕೂರು ಜಿಲ್ಲೆಯ ನೆಲಗಡಲೆ ಬೆಳೆಯುವ ರೈತರ ಅನುಕೂಲಕ್ಕೆ ಆರಂಭಿಕವಾಗಿ ಪಾವಗಡ, ಶಿರಾ ಹಾಗೂ ಮಧುಗಿರಿ ತಾಲೂಕಿಗೆ ವಿಶೇಷ ಪ್ಯಾಕೇಜ್​ಔ ಕುಣಿಗಲ್, ಮಧುಗಿರಿ ತಾಲೂಕಿನಲ್ಲಿ ವಿದ್ಯುತ್ ಉಪಸ್ಥಾವರ

# ಹೊಸ ಕೈಗಾರಿಕಾ ವಸಾಹತು


 ಕೋಲಾರ

# ಕೋಲಾರದಲ್ಲಿ ರೈಲು ಕೋಚ್ ಫ್ಯಾಕ್ಟರಿಗೆ ಭೂಮಿ ಹಾಗೂ ಯೋಜನೆಯ ಶೇ.50 ವೆಚ್ಚ ಭರಿಸಲು ಸಿದ್ಧ

# ಬಂಗಾರಪೇಟೆಯಲ್ಲಿ ವಿದ್ಯುತ್ ಉಪಸ್ಥಾವರ


 ಚಿಕ್ಕಬಳ್ಳಾಪುರ

# ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೂಮಿ ಖರೀದಿ ಯೋಜನೆಯಡಿ ಖರೀದಿ ವೆಚ್ಚ 15ರಿಂದ 20 ಲಕ್ಷ ರೂ. ಏರಿಕೆ

# ನಂದಿಬೆಟ್ಟದಲ್ಲಿ ಸಮಗ್ರ ಪ್ರವಾಸಿ ಸೌಲಭ್ಯ


 ಬೆಂಗಳೂರು ಗ್ರಾಮಾಂತರ

# ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕಿನ 30 ಕೆರೆಗಳಿಗೆ ಕೆ.ಆರ್. ಪುರಂ ಸಂಸ್ಕರಣಾ ಘಟಕದಿಂದ ನೀರು ತುಂಬಿಸುವ ಯೋಜನೆಗೆ 100 ಕೋಟಿ ರೂ.

# ದೇವನಹಳ್ಳಿ, ಎಚ್.ಎಸ್.ಆರ್. ಬಡಾವಣೆ, ತಾವರೆಕೆರೆ ಹಾಗೂ ವರ್ತರಿನಲ್ಲಿ ಆಧುನಿಕ ಕ್ರೀಡಾ ಸೌಲಭ್ಯ ಕಲ್ಪಿಸಲು 20 ಕೋಟಿ ರೂ.

# ಹೆಸರಘಟ್ಟ ಫಾಮ್ರ್ ಮೂಲಕ ರಾಜಾನಕುಂಟೆ- ಮಧುರೆ ರಸ್ತೆ ಸೇರುವ ರಸ್ತೆಗೆ ಬಸವಣ್ಣ ದೇವಸ್ಥಾನದಿಂದ ಕುಕ್ಕನಹಳ್ಳಿ ಮಾರ್ಗವಾಗಿ ಹಾಗೂ ಮತ್ಕೂರು ಮಾರ್ಗವಾಗಿ ರಾಜಾನುಕುಂಟೆ-ಮಧುರೆ ರಸ್ತೆಗೆ ಸೇರುವ ಪರ್ಯಾಯ ರಸ್ತೆ ಅಭಿವೃದ್ಧಿಗಾಗಿ 12 ಕೋಟಿ ರೂ. ಮೀಸಲು

# ತಲಘಟ್ಟಪುರದಲ್ಲಿನ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಸಿಲ್ಕ್ ಮ್ಯೂಸಿಯಂ ಅಭಿವೃದ್ಧಿ

# ಆನೇಕಲ್, ಹೊಸಕೋಟೆಯಲ್ಲಿ ವಿದ್ಯುತ್ ಉಪಸ್ಥಾವರ

# ಹೊಸ ಕೈಗಾರಿಕಾ ವಸಾಹತು


 ಬೆಂಗಳೂರು

# ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 2,500 ಕೋಟಿ ರೂ. ಬಿಡುಗಡೆ

# 2018-19ರಲ್ಲಿ 105.55 ಕಿ.ಮೀ. ಉದ್ದದ ಬೆಂಗಳೂರು ಮೆಟ್ರೋ ಹಂತ-3ಯೋಜನೆ ವರದಿ ತಯಾರಿಸಲು ಕ್ರಮ. ಯೋಜನೆ ಪೂರ್ಣಗೊಂಡರೆ ಮೆಟ್ರೋ ಮಾರ್ಗ 266 ಕಿ.ಮೀ. ಆಗಲಿದೆ.

# ಪಾಲಿಕೆ ವ್ಯಾಪ್ತಿಯ 100 ಕಿ.ಮೀ. ಉದ್ದದ ಪ್ರಮುಖ ರಸ್ತೆಗಳ ಅಭಿವೃದ್ಧಿ.

# 150 ಕಿ.ಮೀ. ಬೃಹತ್ ನೀರುಗಾಲುವೆ ಅಭಿವೃದ್ಧಿ.

# ನಗರದ ವಾಹನ ದಟ್ಟಣೆ ಕಡಿಮೆಗೊಳಿಸಲು ಪ್ರಮುಖ 8 ಜಂಕ್ಷನ್​ಗಳಲ್ಲಿ ಗ್ರೇಡ್ ಸೆಪರೇಟರ್ ನಿರ್ವಣ.

# ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ 250 ಕಿ.ಮೀ. ಉದ್ದದ ವಿವಿಧ ರಸ್ತೆಗಳ ಪಾದಚಾರಿ ಮಾರ್ಗಗಳ ಅಭಿವೃದ್ಧಿ.

# ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿರುವ 110 ಹಳ್ಳಿಗಳ ರಸ್ತೆಗಳ ಅಭಿವೃದ್ಧಿ.

# ತಿಪ್ಪಗೊಂಡನಹಳ್ಳಿ, ಹೆಸರುಘಟ್ಟ ಜಲಾಶಯಗಳ ಪುನಶ್ಚೇತನಕ್ಕೆ 340 ಕೋಟಿ ರೂ. ಅನುದಾನ

# ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸಾವಿರ ಹಾಸಿಗೆ ಸಾಮರ್ಥ್ಯದ ಹೆಚ್ಚುವರಿ ವಾರ್ಡ್

# ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ 15 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಪೆಟ್ ಸಿಟಿ ಸ್ಕ್ಯಾನ್ ಸೌಲಭ್ಯ

# ಸೆಂಟ್ರಲ್ ಕಾಲೇಜಿನಲ್ಲಿ ವೈವಿಧ್ಯತೆ ಮತ್ತು ಅಲ್ಪಸಂಖ್ಯಾತರ ಅಧ್ಯಯನ ಪೀಠ

# ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಂಜುಂಡಸ್ವಾಮಿ ಸಂಶೋಧನಾ ಪೀಠ ಸ್ಥಾಪನೆ

 

Leave a Reply

Your email address will not be published. Required fields are marked *

Back To Top