Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಅಲ್ಪಸಂಖ್ಯಾತರಿಗೆ ಭರಪೂರ ತೌಫಾ!

Saturday, 17.02.2018, 3:05 AM       No Comments

ಈ ಬಜೆಟ್​ನಲ್ಲೂ ಅಹಿಂದ ಮಂತ್ರ ಮೊಳಗಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ವಿಶೇಷವಾಗಿ, ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿ ವೇತನ ಹೆಚ್ಚಳ, ಕೌಶಲ ವಿಕಾಸಕ್ಕೆ ಪ್ರೋತ್ಸಾಹ ನೀಡುವ ಜತೆಗೆ ಮಹಿಳೆಯರು ನವೋದ್ಯಮ ಆರಂಭಿಸಲು ಸಹಾಯಧನ ಘೋಷಿಸಿದ್ದಾರೆ. ಬಹುಕಾಲದ ಬೇಡಿಕೆಯಾದ ಮದರಸಾಗಳ ಆಧುನೀಕರಣಕ್ಕೂ ಒತ್ತು ನೀಡಲಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಾದರಿಯಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯ/ವಸತಿ ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಅತ್ಯುತ್ತಮ ಫಲಿತಾಂಶ ಗಳಿಸಿದ ವಸತಿ ಶಾಲೆ/ಕಾಲೇಜುಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ನಿರ್ಧರಿಸಲಾಗಿದ್ದು, ಈ ಕ್ರಮ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನಕ್ಕೆ ಪೂರಕವಾಗಲಿದೆ. ಅಲ್ಲದೆ, ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ 2000 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ.

ಅಧ್ಯಯನ ಪೀಠ: ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (ಸೆಂಟ್ರಲ್ ಕಾಲೇಜ್) ವೈವಿಧ್ಯತೆ ಮತ್ತು ಅಲ್ಪಸಂಖ್ಯಾತರ ಅಧ್ಯಯನ ಪೀಠ ಸ್ಥಾಪನೆ.

ಶೈಕ್ಷಣಿಕ ಸವಲತ್ತು ಹೆಚ್ಚಳ: 25 ಹೊಸ ಮೊರಾರ್ಜಿ ದೇಸಾಯಿ ವಸತಿ ಶಾಲೆ, 5 ಪದವಿ ಪೂರ್ವ ಮಹಿಳಾ ವಸತಿ ಕಾಲೇಜು, 2 ಮಾದರಿ ವಸತಿ ಶಾಲೆ ಆರಂಭಗೊಳ್ಳಲಿವೆ. 25 ವಿದ್ಯಾರ್ಥಿನಿಲಯ, ಉದ್ಯೋಗಸ್ಥ ಮಹಿಳೆಯರಿಗಾಗಿ 10 ವಸತಿ ನಿಲಯ, 4 ಬಿ.ಎಡ್ ಹಾಗೂ ಡಿ.ಎಡ್ ಆಂಗ್ಲ ಮಾಧ್ಯಮ ಬಾಲಕಿಯರ ವಸತಿ ಸಹಿತ ಕಾಲೇಜು ಮತ್ತು ಸಂಪನ್ಮೂಲ ಕೇಂದ್ರ ಆರಂಭಕ್ಕೆ ಕ್ರಮ. ಎಂಎಸ್​ಡಿಪಿ ಯೋಜನೆಯಡಿಯಲ್ಲಿ ಸ್ವಂತ ಕಟ್ಟಡ ನಿರ್ವಿುಸಲಾಗಿರುವ 25 ಸ್ಥಳಗಳಲ್ಲಿ ವಿದ್ಯಾರ್ಥಿನಿಲಯ/ಮಾದರಿ/ಆದರ್ಶ ಶಾಲೆ/ವಸತಿ ಕಾಲೇಜು ಪ್ರಾರಂಭಗೊಳ್ಳಲಿವೆ.

ಉಚಿತ ತರಬೇತಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜೆಇಇ, ಎನ್​ಇಇಟಿ, ಗೇಟ್, ಜಿಮ್ಯಾಟ್ ಇತ್ಯಾದಿಗೆ ಉಚಿತ ಪರೀಕ್ಷಾಪೂರ್ವ ತರಬೇತಿ, ಕಾನೂನು ಪದವೀಧರರ ಮಾಸಿಕ ಭತ್ಯೆ -ಠಿ; 5,000ಕ್ಕೆ ಏರಿಕೆ.

ವಿಶೇಷ ಪ್ರೋತ್ಸಾಹ ಧನ: ಬಿ.ಎಡ್ ಹಾಗೂ ಡಿ.ಎಡ್ ಕೋರ್ಸ್​ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ವೈದ್ಯಕೀಯ ಹಾಗೂ ತಾಂತ್ರಿಕ ಕೋರ್ಸ್​ಗಳ ಮೊದಲನೇ ವರ್ಷಕ್ಕೆ ಪ್ರವೇಶ ಹೊಂದಿರುವ ವಿದ್ಯಾರ್ಥಿಗಳಿಗೆ ತಲಾ 25 ಸಾವಿರ ರೂ. ಪ್ರೋತ್ಸಾಹ ಧನ. ವಿದ್ಯಾಸಿರಿ ಯೋಜನೆಗಳ ಫಲಾನುಭವಿಗಳ ಸಂಖ್ಯೆ 25 ಸಾವಿರಕ್ಕೆ ಹೆಚ್ಚಳ

# ಅಲ್ಪಸಂಖ್ಯಾತರ ವಸತಿ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ -ಠಿ; 800 ಕೋಟಿ

# ದಾರುಲ್-ಉಲೂಮ್ ಸಬೀಲುರ್ ರೆಹಮಾನ್ ರಿಷಾದ್, ಅರೇಬಿಕ್ ಕಾಲೇಜ್ ಬೆಂಗಳೂರು ಆವರಣದಲ್ಲಿ ಐವಾನ್-ಎ-ಅಶ್ರಫ್ ಸ್ಮಾರಕ ಭವನ ನಿರ್ವಣಕ್ಕೆ 10 ಕೋಟಿ ರೂ, ಮೈಸೂರಿನಲ್ಲಿ ದಿ.ಅಜೀಜ್ ಸೇಠ್ ಸ್ಮಾರಕ ಸಮುದಾಯ ಭವನ ನಿರ್ವಣಕ್ಕೆ ಕೋಟಿ ರೂ

# ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸ್ವಉದ್ಯೋಗಕ್ಕೆ ಸಾಲ ಮತ್ತು ಸಹಾಯಧನದ ಮೂಲಕ ವೃತ್ತಿ ಪ್ರೋತ್ಸಾಹ ಯೋಜನೆಗೆ  30 ಕೋಟಿ ರೂ, ಅಲ್ಪಸಂಖ್ಯಾತ ಮಹಿಳೆಯರಲ್ಲಿ ಉದ್ಯಮಶೀಲತೆ ಪ್ರೋತ್ಸಾಹಿಸಲು ಸ್ಟಾರ್ಟಪ್ ಸಾಲ 15 ಕೋಟಿ ರೂ

# ರಜತ ಮಹೋತ್ಸವದ ಸಂಭ್ರಮದಲ್ಲಿರುವ ಕರ್ನಾಟಕ ರಾಜ್ಯ ವಕ್ಪ್ ಪರಿಷತ್​ಗೆ ಮುಂದಿನ 5 ವರ್ಷಗಳಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲು ಪರಿಷತ್ತಿನ ಕಾರ್ಪಸ್ ಫಂಡ್​ಗೆ 20 ಕೋಟಿ ರೂ. ಅತೀ ಸೂಕ್ಷ್ಮ ವಕ್ಪ್ ಆಸ್ತಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ 15 ಕೋಟಿ ರೂ.

ಉದ್ಯಮಶೀಲತೆ ತರಬೇತಿ

ರಾಜ್ಯದ 16 ಜಿಲ್ಲೆಗಳಲ್ಲಿ ಸಂಭಾವ್ಯ ಉದ್ದಿಮೆದಾರರಿಗೆ ತರಬೇತಿ ನೀಡಲು ದಿಶಾ ಯೋಜನೆಯಡಿ ತರಬೇತಿಗೆ -ಠಿ; 2 ಕೋಟಿ ನಿಗದಿ. ಇದರೊಂದಿಗೆ, 2.50 ಲಕ್ಷ ಜನರಿಗೆ ತರಬೇತಿ. ಡಿಜಿಟಲ್ ಕಲಿಕೆಗೆ ಆದ್ಯತೆ ನೀಡುತ್ತಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 120 ಸರ್ಕಾರಿ ಐಟಿಐಗಳಿಗೆ -ಠಿ; 10 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡ ಹೊಂದಿರುವ ಮಲ್ಟಿಮೀಡಿಯಾ ಕಂಪ್ಯೂಟರ್ ಲ್ಯಾಬ್.

 

ಕ್ರೀಡಾ ವಿ.ವಿ, ಯುವ ಸಹಾಯವಾಣಿ

# ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ

# ರಾಜ್ಯದ 5 ಜಿಲ್ಲೆಗಳಲ್ಲಿ ಸುಸಜ್ಜಿತ ಮಹಿಳಾ ವಸತಿ ನಿಲಯಗಳ ಸ್ಥಾಪನೆ

# ರಾಷ್ಟ್ರೀಯ ಕ್ರೀಡಾಕೂಟದ ಮಾದರಿಯಲ್ಲಿ ರಾಜ್ಯ ದಸರಾ ಕ್ರೀಡಾಕೂಟ, ‘ದಸರಾ-ಸಿ.ಎಂ. ಕಪ್’ ಕ್ರೀಡಾಕೂಟ ಆಯೋಜನೆಗೆ 7 ಕೋಟಿ

# ವಿಶ್ವಮಟ್ಟದ ವಾರ್ಷಿಕ ‘ಕರ್ನಾಟಕ ಕುಸ್ತಿ ಹಬ್ಬ’ ಆಯೋಜನೆ.

# ವರ್ಷ ಪೂರ್ತಿ ಶಿಕ್ಷಣ, ಉದ್ಯೋಗ ಸಂಬಂಧಿ ಸಮಗ್ರ ಮಾಹಿತಿ ನೀಡುವ ಸೇವೆಯನ್ನು ಯುವಜನರಿಗೆ ಒದಗಿಸಲು ‘ಯುವ ಸಹಾಯವಾಣಿ’.

 

ಮಹಿಳಾ ಪ್ರಾತಿನಿಧ್ಯ ಹೆಚ್ಚಳ

# ಒಳಾಡಳಿತ ಇಲಾಖೆಗೆ ಒಟ್ಟು 6,647 ಕೋಟಿ ರೂ. ಒದಗಿಸಲಾಗಿದೆ.

# ಮುಂದಿನ 5 ವರ್ಷದಲ್ಲಿ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪ್ರಾತಿನಿಧ್ಯ ಶೇ.25ಕ್ಕೆ ಏರಿಕೆ.

# ಕ್ರೀಡಾಪಟುಗಳ ನೇರ ನೇಮಕಾತಿಗಾಗಿ ಹೊಸ ನೀತಿ

# ಶಾಶ್ವತ ಪೊಲೀಸ್ ಸೇವೆಗಳ ನೇಮಕಾತಿ ಮಂಡಳಿ ಸ್ಥಾಪನೆ.

# ಪೊಲೀಸ್ ಆಯುಕ್ತರ ಕಛೇರಿಗಳಲ್ಲಿ ನಿರ್ಭಯ ಕೇಂದ್ರಗಳ ಸ್ಥಾಪನೆ.

# ಜಿಲ್ಲಾ ಕೇಂದ್ರಗಳ ಮಹಿಳಾ ಪೊಲೀಸ್ ಠಾಣೆಗಳ ಉನ್ನತೀಕರಣ

# ರಾಜ್ಯದ ಎಲ್ಲ ತಾಲೂಕುಗಳಲ್ಲಿ 5 ವರ್ಷಗಳೊಳಗೆ ಹೊಸಅಗ್ನಿ ಶಾಮಕ ಠಾಣೆ

# ರಾಜ್ಯದ ಆಯ್ದ 10 ಜಿಲ್ಲೆಗಳ ಮಕ್ಕಳ ನ್ಯಾಯಾಲಯಗಳಿಗೆ  3 ಕೋಟಿ

 

ಪತ್ರಕರ್ತರಿಗೆ ಮಾಧ್ಯಮ ಸಂಜೀವನಿ

ಪತ್ರಕರ್ತರು ವೃತ್ತಿನಿರತ ಕೆಲಸಗಳ ವೇಳೆ ಅಪಘಾತಕ್ಕೆ ಒಳಗಾದರೆ ಇಲ್ಲವೆ ಇನ್ನಿತರ ಅವಘಡಗಳಿಗೆ ತುತ್ತಾಗಿ ಅಕಾಲಿಕ ಮರಣ ಹೊಂದಿದರೆ ಪತ್ರಕರ್ತರ ಕುಟುಂಬದವರಿಗೆ 5 ಲಕ್ಷ ರೂ.ವರೆಗಿನ ಜೀವವಿಮೆ ಖಾತರಿ ನೀಡಲು ‘ಮಾಧ್ಯಮ ಸಂಜೀವನಿ’ ಎಂಬ ಸಮೂಹ ಜೀವವಿಮೆ ಸೌಲಭ್ಯ ಆರಂಭಗೊಳ್ಳಲಿದೆ.

ಪತ್ರಿಕೆ ಹಂಚುವವರಿಗೆ ರಿಲೀಫ್: ಬೆಳಕು ಹರಿಯುವ ಮುನ್ನವೇ ಪತ್ರಿಕೆಗಳನ್ನು ಮನೆ-ಮನೆಗೂ ತಲುಪಿಸುವ ವಿತರಕರ ಕೆಲಸ ಬಹಳ ತ್ರಾಸದಾಯಕವಾದದ್ದು, ಈ ಕೆಲಸಕ್ಕೆ ಇವರಿಗೆ ಕೊಂಚ ಕಮಿಷನ್ ಹೊರತು ಪಡಿಸಿದರೆ ಇನ್ನಿತರ ಯಾವುದೇ ಸೌಲಭ್ಯಗಳಿಲ್ಲ. ಇದನ್ನು ಮನಗಂಡಿರುವ ಸರ್ಕಾರ ಪತ್ರಿಕೆ ಹಂಚುವವರ ಕ್ಷೇಮಾಭಿವೃದ್ಧಿಗೆ 2 ಕೋಟಿ ರೂ.ಗಳ ಕ್ಷೇಮನಿಧಿ ಸ್ಥಾಪಿಸುವುದಾಗಿ ಘೋಷಿಸಿದೆ.

ಮಹಿಳೆ, ಮಕ್ಕಳ ಸುರಕ್ಷತೆಗೆ ಆದ್ಯತೆ

ಮಹಿಳೆಯರು: ರಾಜ್ಯದಲ್ಲಿ ಎಚ್.ಐ.ವಿ ಅಥವಾ ಏಡ್ಸ್ ಬಾಧಿತರಾದ, ನಿರ್ಲಕ್ಷಿತಮಹಿಳೆಯರ ಪೋಷಣೆ, ರಕ್ಷಣೆಗೆ ವಿಭಾಗೀಯ ಮಟ್ಟದಲ್ಲಿ ಆಶ್ರಯ ಕೇಂದ್ರ ಸ್ಥಾಪನೆಗೆ -ಠಿ; 1 ಕೋಟಿ =ಅಂಗವಿಕಲತೆಯ ಪ್ರಮಾಣಕ್ಕನುಸಾರವಾಗಿ ಮಹಿಳೆಯರಿಗೆ ಸೂಕ್ತ ಆದ್ಯತೆ ನೀಡುವುದರೊಂದಿಗೆ ಸಂಬಂಧಪಟ್ಟ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ, ಕೃಷಿ ಭೂಮಿ ಹಂಚಿಕೆ ಮತ್ತು ವಸತಿಯಲ್ಲಿ ಶೇ.5 ಮೀಸಲಾತಿ.

ಮಕ್ಕಳು: ನಗರ ಪ್ರದೇಶಗಳಲ್ಲಿ ಹೊಸ 250 ಅಂಗನವಾಡಿ ಕೇಂದ್ರ ಪ್ರಾರಂಭಿಸಲು -ಠಿ; 17.50 ಕೋಟಿ =ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮಕ್ಕಳ ರಕ್ಷಣಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ನಿರ್ದೇಶನಾಲಯ.

ಎರಡು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಸರ್ವ ವರ್ಗಗಳ ಓಲೈಕೆಗಾಗಿ ಹಣ ಮೀಸಲಿಡಲಾಗಿದೆ. 2017-18ನೇ ಸಾಲಿನಲ್ಲಿ ಇಲಾಖಾವಾರು ಘೋಷಣೆ ಮಾಡಿದ ಯೋಜನೆಗಳಲ್ಲಿ ಶೇ.40ರಿಂದ 50 ಅನುದಾನ ಖರ್ಚು ಮಾಡಲು ವಿಫಲರಾಗಿದ್ದಾರೆ. ಆರ್ಥಿಕ ಶಿಸ್ತನ್ನು ಪಾಲಿಸಿಲ್ಲ.

| ಬಿ.ಎಸ್.ಯಡಿಯೂರಪ್ಪ ರಾಜ್ಯಾಧ್ಯಕ್ಷರು ಬಿಜೆಪಿ

 

 


2018-19ನೇ ಸಾಲಿನ ಬಜೆಟ್​ಗೆ ಯಾವುದೇ ರೀತಿಯ ವ್ಯಾಲ್ಯೂ ಇಲ್ಲ. ಬಜೆಟ್ ಆರಂಭವಾಗುವುದೇ ಏಪ್ರಿಲ್ ನಂತರ. ಹಾಗಾಗಿ ಎಲ್ಲ ಘೋಷಣೆ ನಗಣ್ಯ. ಇದರ ಬಗ್ಗೆ ಚರ್ಚೆ ಅಗತ್ಯವಿಲ್ಲ. ಇದು ವೋಟ್ ಆನ್ ಅಕೌಂಟ್ ಬಜೆಟ್. ಈ ಸರ್ಕಾರಕ್ಕೆ ಯಾವುದೇ ಹೊಸ ಕಾರ್ಯಕ್ರಮ ಘೋಷಿಸಲು ಆವಕಾಶವಿಲ್ಲ.

| ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ

 

 


ರೈತರು, ಮಹಿಳೆಯರು, ವಿದ್ಯಾರ್ಥಿಗಳಿಗೆ ಇದು ಬಂಪರ್ ಬಜೆಟ್. ಉದ್ಯೋಗ ಸೃಷ್ಟಿಯೊಂದಿಗೆ ಬೆಳವಣಿಗೆಗೆ ಆದ್ಯತೆ ನೀಡಲಾಗಿದೆ. ಕೃಷಿ, ಕೈಗಾರಿಕೆ ಬೆಳವಣಿಗೆ ದರ ಶೇ.4.9ರಷ್ಟಿದೆ. ಒಟ್ಟಾರೆ ಇದೊಂದು ಉತ್ತಮ ಬಜೆಟ್. ಎಲ್ಲ ಹಂತದ ಜನರನ್ನೂ ತೃಪ್ತಿಪಡಿಸಲು ಪ್ರಯತ್ನಿಸಲಾಗಿದೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಪ್ರಸ್ತಾಪವಿಲ್ಲ.

| ಡಾ.ಸಂಗೀತಾ ಕಟ್ಟೀಮನಿ ಆರ್ಥಿಕ ತಜ್ಞರು, ಕಲಬುರಗಿ


ವಾರ್ತಾ ಇಲಾಖೆಗೆ 239 ಕೋಟಿ ರೂ. ನೀಡಿರುವುದು ಸ್ತುತ್ಯರ್ಹ. ಬೆಂಗಳೂರಿನಲ್ಲಿ 5 ಕೋಟಿ ರೂ. ವೆಚ್ಚದ ಪತ್ರಕರ್ತರ ಭವನ, ಪತ್ರಕರ್ತರಿಗೆ 5 ಲಕ್ಷ ರೂ. ಕುಟುಂಬ ವಿಮೆ, ಪತ್ರಿಕೆ ಹಂಚುವ ಹುಡುಗರಿಗೆ 2 ಕೋಟಿ ರೂ. ಕ್ಷೇಮನಿಧಿ ಉತ್ತಮ ಕೊಡುಗೆ.

| ಎಂ. ಸಿದ್ದರಾಜು ಅಧ್ಯಕ್ಷ ಮಾಧ್ಯಮ ಅಕಾಡೆಮಿ


176 ಗ್ರಾ.ಪಂ. ಕೇಂದ್ರದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ

ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದಲ್ಲಿ ಪ್ರಾಥಮಿಕ ಶಾಲೆಯಿಂದ ಪಿಯುಸಿಯವರೆಗೆ ಒಂದೇ ಸೂರಿನಡಿ ಶಿಕ್ಷಣ ಒದಗಿಸುವ 176 ಸಂಯೋಜಿತ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಸರ್ಕಾರ ಪ್ರತಿ ಪಬ್ಲಿಕ್ ಶಾಲೆಗೆ ತಲಾ -ಠಿ; 5 ಲಕ್ಷದಂತೆ 176 ಶಾಲೆಗಳಿಗೆ -ಠಿ; 5 ಕೋಟಿ ಮೀಸಲಿಟ್ಟಿದೆ. ರಾಜ್ಯ ಕೇಂದ್ರ ಗ್ರಂಥಾಲಯಗಳ ಶತಮಾನೋತ್ಸವ ಸ್ಮರಣಾರ್ಥ ಜಿಲ್ಲಾ, ನಗರ, ತಾಲೂಕು ಸಾರ್ವಜನಿಕ ಗ್ರಂಥಾಲಯಗಳನ್ನು ಡಿಜಿಟಲ್ ಗ್ರಂಥಾಲಯಗಳನ್ನಾಗಿಸಲು ನಿರ್ಧರಿಸಿದೆ.

# ಕ್ಲೌಡ್ ತಂತ್ರಜ್ಞಾನದ ಮೂಲಕ ಸರ್ಕಾರಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳ 10 ಲಕ್ಷ ವಿದ್ಯಾರ್ಥಿಗಳಿಗೆ ಡಿಜಿಟಲ್ ಗ್ರಂಥಾಲಯ ಸೌಲಭ್ಯ ಒದಗಿಸಲು -ಠಿ; 5 ಕೋಟಿ.

# ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ಅತ್ಯುತ್ತಮ ಪ್ರಶಸ್ತಿ

# 100 ವರ್ಷ ಪೂರೈಸಿದ ಶಾಲೆಗಳನ್ನು ಪಾರಂಪರಿಕ ಶಾಲೆಗಳೆಂದು ಗುರುತಿಸಿ ನವೀಕರಣ

# ವಿಜ್ಞಾನದ ಅರಿವು ಅಗಸ್ತ್ಯ ಫೌಂಡೇಷನ್ ಜತೆಗೆ -ಠಿ; 7.5 ಕೋಟಿ ವೆಚ್ಚದಲ್ಲಿ ಸಂಚಾರಿ ವಿಜ್ಞಾನ ಪ್ರಯೋಗಾಲಯ

# ಶಾಲೆಗಳಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಪ್ರಾರಂಭ

# ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ.

ಹೆಣ್ಣು ಮಕ್ಕಳ ಶುಲ್ಕ ವಿನಾಯಿತಿ

ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸುವ ಸಲುವಾಗಿ ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿನಿಯರಿಗೆ ಪೂರ್ಣ ಶುಲ್ಕ ವಿನಾಯಿತಿ ನೀಡಲು ನಿರ್ಧರಿಸಿದೆ. ಇದಕ್ಕಾಗಿ -ಠಿ; 95 ಕೋಟಿ ನೀಡಲಿದ್ದು, 3.7 ಲಕ್ಷ ವಿದ್ಯಾರ್ಥಿನಿಯರು ಫಲಾನುಭವಿಗಳಾಗಲಿದ್ದಾರೆ.

ವೈದ್ಯಕೀಯ ಶಿಕ್ಷಣ ಮೂಲಸೌಕರ್ಯ

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ 1,000 ಹಾಸಿಗೆ ಸಾಮರ್ಥ್ಯದ ಹೆಚ್ಚುವರಿ ವಾರ್ಡ್ ನಿರ್ಮಾಣ ಮಾಡಲು ನಿರ್ಧರಿಸಿದೆ. * ಗದಗ, ಕೊಪ್ಪಳ ಮತ್ತು ಚಾಮರಾಜನಗರ ವೈದ್ಯಕೀಯ ಕಾಲೇಜುಗಳಲ್ಲಿ ತಲಾ 100 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆಸ್ಪತ್ರೆಗಳ ಕಟ್ಟಡ ನಿರ್ವಣಕ್ಕೆ 90 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.* ಮೈಸೂರಿನ ಶುಶ್ರೂಷಾ ಕಾಲೇಜಿನ ಹೊಸ ಕಟ್ಟಡ ನಿರ್ವಣಕ್ಕೆ, ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನದ ಶುಶ್ರೂಷಾ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ತಲಾ -ಠಿ; 30 ಕೋಟಿ ಅನುದಾನ.

ನಗರಾಭಿವೃದ್ಧಿ

 ಬೆಂಗಳೂರು ನಗರದ ಮೂಲಸೌಕರ್ಯ, ನಮ್ಮ ಮೆಟ್ರೊ, ಸಬ್ ಅರ್ಬನ್ ರೈಲು, ರಾಜ್ಯದ ನಗರ ಪಾಲಿಕೆ, ನಗರಸಭೆ ಹಾಗೂ ಪುರಸಭೆಗಳನ್ನು ಒಳಗೊಂಡಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೂಲಸೌಕರ್ಯ, ರಸ್ತೆ, ಚರಂಡಿ, ಒಳಚರಂಡಿ ಮತ್ತಿತರ ಯೋಜನೆಗಳ ಅನುಷ್ಠಾನಕ್ಕಾಗಿ ನಗರಾಭಿವ ೃದ್ಧಿ ಇಲಾಖೆಗ ೆ ಒಟ್ಟಾರೆಯಾಗಿ 17,196 ಕೋಟಿ ರೂ.ಗಳ ನ ್ನು ಒದಗಿಸ ಲಾಗಿದೆ.

ಕೊಟ್ಟಿದ್ದು ಹೆಚ್ಚು ದಕ್ಕಿದ್ದು ಕಮ್ಮಿ!

ವೃತ್ತಿ ರಂಗಭೂಮಿಯ ಸಮಗ್ರ ಅಧ್ಯಯನ, ಸಂಶೋಧನೆ ಮತ್ತು ರಂಗ ಶಿಕ್ಷಣಕ್ಕೆ ಅನುಕೂಲವಾಗುವಂತೆ ದಾವಣಗೆರೆಯಲ್ಲಿ ವೃತ್ತಿ ರಂಗಭೂಮಿ ಕೇಂದ್ರ ಸ್ಥಾಪನೆ * ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಅಕಾಡೆಮಿಗಳು, ಪ್ರಾಧಿಕಾರಗಳು ಪ್ರಕಟಿಸಿರುವ ಪುಸ್ತಕಗಳನ್ನು ನಾಡಿನ ಜನತೆಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಿ ಪುಸ್ತಕ ಸಂಸ್ಕೃತಿ ಬೆಳೆಸಲು ಕೆಎಸ್ಸಾರ್ಟಿಸಿ ಸಹಯೋಗದಲ್ಲಿ -ಠಿ; 1.5 ಕೋಟಿ ವೆಚ್ಚದಲ್ಲಿ ಪುಸ್ತಕ ಜಾಥಾ ನಡೆಸುವ ಘೋಷಣೆ. =ತಂತ್ರಜ್ಞಾನದಲ್ಲಿ ಕನ್ನಡವನ್ನು ಹೆಚ್ಚು ಬಳಸುವಂತೆ ಮಾಡಲು ಕನ್ನಡ ತಂತ್ರಾಂಶ ಅಭಿವೃದ್ಧಿ ಮತ್ತು ತಾಂತ್ರಿಕ ವಿಷಯ ಸಂಶೋಧನೆಗೆ ಫೆಲೋಶಿಪ್. =ಜನಪದ ಸಾಂಸ್ಕೃತಿಕ ಭಾರತ ಕಾರ್ಯಕ್ರಮ, ನವೋದಯ ಕವಿ ಗೋಪಾಲಕೃಷ್ಣ ಅಡಿಗರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ‘ಕಟ್ಟುವೆವು ನಾವು ಹೊಸ ನಾಡೊಂದನು’ ಎಂಬ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮ =ಗಡಿ ಪ್ರದೇಶ ಅಭಿವೃದ್ಧಿ ಮಂಡಳಿಗೆ -ಠಿ; 50 ಕೋಟಿ ಅನುದಾನ =ಸಮಗ್ರ ದಾಸ ಸಾಹಿತ್ಯ ಅಧ್ಯಯನ ಪೀಠ ಸ್ಥಾಪನೆ.

ವಿದ್ಯಾರ್ಥಿಗಳಿಗೆ ಉಚಿತ ಬಸ್​ಪಾಸ್

ಶಿಕ್ಷಣಕ್ಕೆ ಸಾರಿಗೆ ವೆಚ್ಚ ತೊಡಕಾಗಬಾರದು ಎಂಬ ಉದ್ದೇಶದಿಂದ ಉಚಿತ ಬಸ್​ಪಾಸ್ ಭಾಗ್ಯ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ 2018-19ನೇ ಸಾಲಿನಿಂದ ವಿಸ್ತರಣೆಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದರಿಂದ 19.60 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.

ಈ ಮೊದಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿ ಗಳಿಗಷ್ಟೇ (4.99 ಲಕ್ಷ) ಯೋಜನೆ ಘೋಷಿಸ ಲಾಗಿತ್ತು. ಇದರಿಂದ ಸರ್ಕಾರಕ್ಕೆ ಪ್ರತಿ ವರ್ಷ -ಠಿ; 1,364 ಕೋಟಿ ಹೊರೆಯಾಗಲಿದೆ.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ನಿರುದ್ಯೋಗಿ ಮಹಿಳೆಯರಿಗೆ ಲಘು ಮೋಟಾರು ವಾಹನ ತರಬೇತಿ, ಬಸ್ ನಿಲ್ದಾಣ ಮೇಲ್ದರ್ಜೆಗೆ, ಡಬ್ಬಲ್ ಡೆಕ್ಕರ್ ಬಸ್, ಫ್ಲೈ ಬಸ್ ಸೇವೆ ಹೆಚ್ಚಳ, ಮಹಿಳಾ ಸುರಕ್ಷತೆಗಾಗಿ ಬಸ್​ನಲ್ಲಿ ಸಿಸಿ ಟಿವಿ, ಟ್ರಕ್ ಟರ್ವಿುನಲ್ ನಿರ್ಮಾಣ ಈ ಬಾರಿ ಇಲಾಖೆಯ ಬಜೆಟ್ ಹೈಲೈಟ್ಸ್.

ಶೂನ್ಯ ಬಡ್ಡಿ ದರದಲ್ಲಿ ಸಾಲ: ಎಸ್​ಸಿಎಸ್​ಪಿ ಟಿಎಸ್​ಪಿ ಯೋಜನೆಯಡಿ ವಾಹನ ಚಾಲನಾ ತರಬೇತಿ ಪಡೆದ 200 ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಸರಕು ಸಾಗಣೆ ವಾಹನ ಖರೀದಿಸಲು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ದೇವರಾಜ ಅರಸು ಟ್ರಕ್ ಟರ್ವಿುನಲ್ಸ್ ನಿಯಮಿತ ಸಹಯೋಗದಲ್ಲಿ ಶೂನ್ಯ ಬಡ್ಡಿ ದರದಲ್ಲಿ -ಠಿ; 15 ಲಕ್ಷ ಸಾಲ. ಬಡ್ಡಿ ಸಹಾಯಧನಕ್ಕಾಗಿ -ಠಿ; 2.50 ಕೋಟಿ ಮೀಸಲು.

ನಗರ ಭೂ ಸಾರಿಗೆ ನಿರ್ದೇಶನಾಲಯ

# ಮೋಟಾರು ವಾಹನಗಳ ಪ್ರಮಾಣ ನಿಯಂತ್ರಿಸಲು ಸಾರ್ವಜನಿಕ ಬೈಸಿಕಲ್ ಬಳಕೆಯನ್ನು ಬೆಂಗಳೂರಿನಲ್ಲಿ ಪರ್ವಿುಟ್ ಸಿಸ್ಟಮ್ ಮೂಲಕ ಬಹು ನಿರ್ವಾಹಕರಿಗೆ ನೀಡಲು ಕ್ರಮ.

# ಟೈರ್-2 ನಗರಗಳಲ್ಲಿ ಸೈಕಲ್ ಹಂಚಿಕೆ, ಸೈಕಲ್ ಪಥ ಅಭಿವೃದ್ಧಿ ಯೋಜನೆ, ಪಾದಚಾರಿ ಮಾರ್ಗ ಸುಧಾರಣೆಗೆ -ಠಿ; 25 ಕೋಟಿ.


ಅನುಷ್ಠಾನದ ಬದ್ಧತೆ ಬೇಕು

| ಪ್ರೊ. ಆರ್.ಆರ್. ಬಿರಾದಾರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯದ ಧಾರವಾಡ

ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕೆಲ ನೂತನ ಕ್ರಮಗಳನ್ನು ಈ ಸಲದ ಬಜೆಟ್​ನಲ್ಲಿ ಘೊಷಿಸಿರುವುದು ಸ್ವಾಗತಾರ್ಹ. ಹಲವಾರು ನಿರೀಕ್ಷೆಗಳು ಹುಸಿಯಾಗಿರುವುದೂ ನಿಜ.

ಗ್ರಾ.ಪಂ. ಮಟ್ಟದಲ್ಲಿ ‘ಕರ್ನಾಟಕ ಸಾರ್ವಜನಿಕ ಸಂಯೋಜಿತ ಶಾಲೆ’ ಸ್ಥಾಪನೆ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ, ಡಿಜಿಟಲ್ ಗ್ರಂಥಾಲಯ ಸ್ಥಾಪನೆ, ಬಸ್ ಪಾಸ್, 100 ವರ್ಷ ಪೂರೈಸಿರುವ ಸರ್ಕಾರಿ ಶಾಲೆಗಳನ್ನು ಪಾರಂಪರಿಕ ಶಾಲೆಗಳೆಂದು ಗುರುತಿಸಿ ನವೀಕರಿಸುವುದು; ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೊಂಕಣಿ ಅಧ್ಯಯನ ಪೀಠ ಸ್ಥಾಪನೆ, ಚಾಮರಾಜನಗರದಲ್ಲಿ ನೂತನ ಕೃಷಿ ಕಾಲೇಜು, ಚಿಕ್ಕಮಗಳೂರಲ್ಲಿ ಕುವೆಂಪು ವಿವಿ ಮತ್ತು ಜಮಖಂಡಿಯಲ್ಲಿ ರಾಣಿ ಚನ್ನಮ್ಮ ವಿವಿ ಸ್ನಾತಕೋತ್ತರ ಕೇಂದ್ರ ಸ್ಥಾಪನೆಗೆ ನೆರವು; ವಿಶೇಷವಾಗಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣಕ್ಕೆ ಮಹಿಳೆಯರಿಗೆ ಪೂರ್ಣ ಶುಲ್ಕ ರಿಯಾಯಿತಿ… ಇವೆಲ್ಲ ಕಾಲೋಚಿತವಾಗಿಯೇ ಇವೆ. ಮೈಸೂರು ವಿವಿಯಲ್ಲಿ ಬಸವ ಅಧ್ಯಯನ ಪೀಠ ಸ್ಥಾಪನೆ ಘೊಷಣೆ ಸ್ವಾಗತಾರ್ಹ.

ತಾರತಮ್ಯ: ಶಿಕ್ಷಣಕ್ಕೆ 26,864 ಕೋಟಿ ರೂ. ನಿಗದಿ ಮಾಡಲಾಗಿದೆ. ಅಂಕಿ ಅಂಶದ ದೃಷ್ಟಿಯಿಂದ ಇದು ಸಮಾಧಾನಕರ. ಆದರೆ ಹಂಚಿಕೆಯಲ್ಲಿ ಇನ್ನೂ ಹೆಚ್ಚು ಜಾಣ್ಮೆ ತೋರಬಹುದಿತ್ತು. ನಿಗದಿಪಡಿಸಿದ ಮೊತ್ತವನ್ನು ಸಕಾಲಕ್ಕೆ ಸರಿಯಾಗಿ ವಿನಿಯೋಗಿಸುವ ಬದ್ಧತೆ ತೋರದಿದ್ದರೆ ಘೊಷಣೆಗಳು ಸಾಧನೆಗಳಾಗಿ ಪರಿವರ್ತನೆಗೊಳ್ಳುವುದಿಲ್ಲ. ಕಲಬುರಗಿ ವಿವಿ ಮತ್ತು ವಿಜಯಪುರ ಮಹಿಳಾ ವಿಶ್ವವಿದ್ಯಾಲಯಗಳು ಹಿಂದುಳಿದ ಜಿಲ್ಲೆಗಳಲ್ಲಿವೆ. ಅಲ್ಲಿಗೆ ಯಾವುದೇ ವಿಶೇಷ ಯೋಜನೆ ಘೊಷಿಸಿಲ್ಲ. ಇದು ತಾರತಮ್ಯದಂತೆ ಕಾಣುತ್ತದೆ. ರಾಜ್ಯದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ಕಡಿಮೆಯಾಗುತ್ತಿದೆ. ಇದರ ಸುಧಾರಣೆಗಾಗಿ ಆಧುನಿಕ ಮೂಲಭೂತ ಬೋಧನಾ ಸೌಕರ್ಯಗಳ ಲಭ್ಯತೆ, ಪಠ್ಯಕ್ರಮದ ಉನ್ನತೀಕರಣ, ಸಂಶೋಧನೆಗೆ ವಿಶೇಷ ಪ್ರಾಧಾನ್ಯತೆಯ ಅವಶ್ಯವಿತ್ತು. ಅಂಥದ್ದೇನೂ ಇಲ್ಲದಿರುವುದು ವಿಷಾದನೀಯ. ಸಹಕಾರಿ ಕ್ಷೇತ್ರದ ತೊಟ್ಟಿಲು ಎಂದೇ ಹೆಸರುವಾಸಿಯಾದ ಉತ್ತರ ಕರ್ನಾಟಕದ ಗದಗ ಜಿಲ್ಲೆ ಕಣಗಿನಹಾಳದಲ್ಲಿ ಪ್ರಥಮ ಬಾರಿಗೆ ಸಹಕಾರಿ ಕೃಷಿ ಪತ್ತಿನ ಸಂಘ ಸ್ಥಾಪಿಸಿದ ಸಿದ್ದನಗೌಡ ಪಾಟೀಲರ ಸ್ಮರಣಾರ್ಥ ಕವಿವಿಯಲ್ಲಿ ಅಧ್ಯಯನ ಪೀಠ ಸ್ಥಾಪನೆ ಮಾಡಬಹುದಿತ್ತು.


ಕಾರ್ವಿುಕ ಸಮ್ಮಾನ್ ಜಾರಿ

ರಾಜ್ಯದಲ್ಲಿ ಅಸಂಘಟಿತ ಕಾರ್ವಿುಕರ ಕಲ್ಯಾಣಕ್ಕಾಗಿ ಕಳೆದ ಮಾರ್ಚ್ 1ರಿಂದಲೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ವಿುಕರ ಕಾಯ್ದೆ ಜಾರಿಗೆ ಬಂದಿದ್ದು, ಇನ್ನು ಮುಂದೆ ಮಾರ್ಚ್ 1ರಂದು ಕಾರ್ವಿುಕರ ಸಮ್ಮಾನ್ ದಿನ ಆಚರಿಸಲಾಗುವುದು. ಈ ವೇಳೆ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಕಾರ್ವಿುಕ ಸಮ್ಮಾನ್ ಪ್ರಶಸ್ತಿ ನೀಡುವುದಾಗಿ ಬಜೆಟ್​ನಲ್ಲಿ ಘೋಷಿಸಲಾಗಿದೆ. ಅಲ್ಲದೇ ಅಸಂಘಟಿತ ಕಾರ್ವಿುಕರಲ್ಲಿ ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಹಾಗೂ ಭಟ್ಟಿ ಕಾರ್ವಿುಕರಿಗೆ ಸಹ ಅಂಬೇಡ್ಕರ್ ಕಾರ್ವಿುಕ ಸಹಾಯ ಹಸ್ತ ಯೋಜನೆಯಡಿ ಸ್ಮಾರ್ಟ್ ಕಾರ್ಡ್ ವಿತರಿಸುವ ಜೊತೆಗೆ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು 25 ಕೋಟಿ ರೂ.ಗಳ ವೆೆಚ ್ಚ ವಿನಿಯೋಗಿಸಲಾಗುವುದು. =ಹಿಂದುಳಿದ ವರ್ಗಗಳ ಕಲ್ಯಾಣ ಕೆನೆಪದರ ಆದಾಯ ಮಿತಿ 8 ಲಕ್ಷಕ್ಕೆ ಹೆಚ್ಚಳ – ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಒಟ್ಟು 3,172 ಕೋಟಿ ರೂ.ಗಳ ಅನುದಾನ ಮೀಸಲಿಡಲಾಗಿದೆ.

ಪಾಲಿಕೆಗೆ ಪೌರಕಾರ್ವಿುಕ ನಾಮನಿರ್ದೇಶನ

ಬಿಬಿಎಂಪಿ, ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆಗಳಲ್ಲಿ ಪೌರ ಕಾರ್ವಿುಕರ ಪ್ರತಿನಿಧಿ ಯೊಬ್ಬನನ್ನು ಸದಸ್ಯನಾಗಿ ನಾಮ ನಿರ್ದೇಶನ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ನಗರ ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುತ್ತಿದ್ದು, ಇದೇ ಮಾದರಿಯಲ್ಲಿ ಪಾಲಿಕೆ, ಪುರಸಭೆಗಳಲ್ಲಿ ಪೌರ ಕಾರ್ವಿುಕ ವರ್ಗಕ್ಕೆ ಸೇರಿದ ಒಬ್ಬ ವ್ಯಕ್ತಿಯನ್ನು ಸದಸ್ಯರನ್ನಾಗಿ ನಿರ್ದೇಶನ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

# ಪ.ಜಾ.ಪ.ಪಂ.ಸಹಕಾರ ಸಂಘಗಳ ಆರ್ಥಿಕ ಸದೃಢತೆಗೆ 100 ಅರ್ಹ ಸಂಘಗಳಿಗೆ ಗರಿಷ್ಠ -ಠಿ; 10 ಲಕ್ಷ ರೂ. ನೀಡಿಕೆಗೆ -ಠಿ; 5 ಕೋಟಿ ಮೀಸಲು.

# ಐಐಟಿ, ಐಐಎಂ, ಐಐಎಸ್​ಸಿ, ಎನ್​ಐಟಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಪ್ರೋತ್ಸಾಹ ಧನ 1 ಲಕ್ಷ ರೂ.ನಿಂದ 2 ಲಕ್ಷ ರೂ.ಗೆ ಏರಿಕೆ.

# ಅನ್ಯಜಾತಿ ಮದುವೆಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನ -ಠಿ; 2 ಲಕ್ಷ ದಿಂದ -ಠಿ; 3 ಲಕ್ಷಕ್ಕೆ ಏರಿಕೆ

# ಪ.ಜಾತಿ ಹುಡುಗಿ ಬೇರೆ ಜಾತಿ ಹುಡುಗನ ಮದುವೆಗೆ -ಠಿ; 3 ಲಕ್ಷ ದಿಂದ -ಠಿ; 5 ಲಕ್ಷಕ್ಕೆ ಹೆಚ್ಚಳ

# ದೇವದಾಸಿಯರ ಮಕ್ಕಳ ಮದುವೆಗಾಗಿ ಹೆಣ್ಣು ಮಕ್ಕಳಿಗೆ -ಠಿ; 5 ಲಕ್ಷ, ಗಂಡು ಮಕ್ಕಳಿಗೆ -ಠಿ; 3 ಲಕ್ಷ ಪ್ರೋತ್ಸಾಹ ಧನ.

# ಖಾದಿ ಮಂಡಳಿಯಿಂದ ಎಲ್ಲ ಬಿಪಿಎಸ್ ಕುಟುಂಬಗಳ ಮರುಪಾವತಿಗಾಗಿ ಬಾಕಿ ಇರುವ ಸಾಲ ಮನ್ನಾ

# ಪ.ಜಾ.ಪ.ಪಂ.ಜನರ ಉದ್ಯಮ ಶೀಲತೆಗಾಗಿ ಇ.ಡಿ.ಪಿ. ತರಬೇತಿ ಕೇಂದ್ರ ಸ್ಥಾಪನೆ

# ಆಶ್ರಮ ಶಾಲೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಮಾಸಿಕ ಆಹಾರ ಭತ್ಯೆ -ಠಿ; 1,300, -ಠಿ; 1,500, -ಠಿ; 1,600ಕ್ಕೆ ಹೆಚ್ಚಳ

ಪೌರಾಡಳಿತ ನಿರ್ದೇಶನಾಲಯ ಎಲ್ಲೆಡೆ ಎಲ್​ಇಡಿ ಬೀದಿ ದೀಪ

# ರಾಜ್ಯದ ಎಲ್ಲ ಸ್ಮಾರ್ಟ್ ಸಿಟಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿದ್ಯುತ್​ ಉಳಿತಾಯ ಮಾಡಲು ಸಾಂಪ್ರದಾಯಿಕ ಬೀದಿ ದೀಪಗಳ ಬದಲಿಗೆ ಕೇಂದ್ರೀಕೃತ ನಿಯಂತ್ರಣ ಮತ್ತು ಉಸ್ತುವಾರಿ ವ್ಯವಸ್ಥೆ ಹೊಂದಿದ ಎಲ್​ಇಡಿ ದೀಪಗಳನ್ನು ಅಳವಡಿಸಲು ಯೋಜನೆ. ಮೊದಲ ಹಂತದಲ್ಲಿ ಎಲ್ಲಾ ಮಹಾನಗರ ಪಾಲಿಕೆಗಳು ಮತ್ತು ನಗರ ಸಭೆಗಳಲ್ಲಿ ನಂತರ ಎರಡ ನೇ ಹಂತದಲ್ಲಿ ಎಲ್ಲಾ ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಯೋಜನೆ.

# ಮಾನವ ತ್ಯಾಜ್ಯ ಕಲ್ಮಷಗಳ ಸಂಸ್ಕರಣೆ ಮತ್ತು ನಿರ್ವಹಣೆಗಾಗಿ ಮೊದಲ ಹಂತದಲ್ಲಿ ಒಳಚರಂಡಿ ವ್ಯವಸ್ಥೆ ಹೊಂದಿರದ 50 ನಗರಗಳಲ್ಲಿ ಯೋಜನೆ ಅನುಷ್ಠಾನ.

# 10 ನಗರಗಳ ಲ್ಲಿ ತ್ಯಾಜ್ಯ ನೀರಿನ ಮರು ಬಳಕೆ ಯೋಜನೆ.

Leave a Reply

Your email address will not be published. Required fields are marked *

Back To Top