ಮೂಲ್ಕಿ: ಯಕ್ಷಗಾನ ಕಲೆಯ ಆರಾಧನೆಯೊಂದಿಗೆ ಭಾಷೆ ಸಂಸ್ಕೃತಿಯ ಅಭಿವೃದ್ಧಿಗೆ ಪೋಷಣೆ ನಿರಂತರವಾಗಿರಲಿ. ವಿನಾಯಕ ಮೇಳಕ್ಕೆ ರಾಜ್ಯ ಪುರಸ್ಕಾರ ಸಿಗಲಿ ಎಂದು ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು.
ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡದ ಸಂಯೋಜನೆಯಲ್ಲಿ ಎರಡು ದಿನಗಳ ತೈತತಕತ ಯಕ್ಷಗಾನ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಲ್ಕಿ ಸೀಮೆ ಅರಸ ಎಂ.ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿದರು. ಯಕ್ಷಗಾನ ಕಲೆ ಕರಾವಳಿ ಸಂಸ್ಕೃತಿಯ ವಾಹಕದ ಜೊತೆಗೆ ಶುದ್ಧ ಕನ್ನಡ ಭಾಷೆ ಹಾಗೂ ಧಾರ್ಮಿಕ ಸಂಸ್ಕೃತಿ ಪರಿಚಯಿಸುವ ಉನ್ನತ ಕಲೆಯಾಗಿದೆ ಎಂದರು.
ಶ್ರೀ ಕ್ಷೇತ್ರ ಕಾರಿಂಜದ ಆಡಳಿತಾಧಿಕಾರಿ ಚಂದ್ರಶೇಖರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಬಪ್ಪನಾಡು ಲಯನ್ಸ್ ಬಪ್ಪನಾಡು ಇನ್ಸ್ ಪೈರ್ ಉಪಾಧ್ಯಕ್ಷ ಪುಷ್ಪರಾಜ್ ಚೌಟ, ಇನ್‌ಫೋಸಿಸ್ ನರೇಂದ್ರ ಪ್ರಭು ಮಂಗಳೂರು, ಕಿನ್ನಿಗೋಳಿ ವಿಜಯಾ ಕಲಾವಿದರು, ತಂಡದ ಅಧ್ಯಕ್ಷ ಶರತ್ ಶೆಟ್ಟಿ ಸಂಕಲಕರಿಯ, ಚಾಮರಾ ಫೌಂಡೇಶನ್ ರಚನಾ, ದೇವಸ್ಥಾನದ ಅಧ್ಯಕ್ಷ ಅನಂತ ಪದ್ಮನಾಭ, ಮೂಲ್ಕಿ ಎಲ್ಐಸಿ ಪ್ರಬಂಧಕ ಪ್ರಕಾಶ್ ಆಚಾರ್ಯ, ಮೇಳದ ಅಜಿತ್, ಪ್ರೇಮಲತಾ, ಅನ್ವಿತಾ, ರೇಷ್ಮಾ ಜಿ. ಬಂಗೇರ, ಶ್ರೇಯಸ್, ಧನಂಜಯ ಶೆಟ್ಟಿಗಾರ್, ದುರ್ಗಾ ಪ್ರಸಾದ್, ಲೋಹಿತ್, ಯಶೋದಾ, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು. ಶ್ರೀ ವಿನಾಯಕ ಯಕ್ಷಕಲಾ ತಂಡದ ಅಧ್ಯಕ್ಷ ಜಯಂತ್ ಅಮೀನ್ ಸ್ವಾಗತಿಸಿದರು. ಶ್ರೀ ವಿನಾಯಕ ಯಕ್ಷಕಲಾ ರತ್ನ ಪ್ರಶಸ್ತಿಯನ್ನು ಮೆಸ್ಕಾಂನ ಹಿರಿಯ ಇಂಜಿನಿಯರ್ ಬಿ.ರಾಜೇಶ್, ಬೆಂಗಳೂರಿನ ಕರ್ನಾಟಕ ವಿದ್ಯುತ್ ನೌಕರರ ಸಂಘ ಉಪಾಧ್ಯಕ್ಷ ಎಚ್.ಎಸ್.ಗುರುಮೂರ್ತಿ ಅವರಿಗೆ ನೀಡಿ ಗೌರವಿಸಲಾಯಿತು. ಕಲಾವಿದರಿಂದ ಸತ್ವಶೈಥಿಲ್ಯ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು. ಅಭಿಜಿತ್, ವಾಣಿ ಪರಿಚಯಿಸಿದರು. ಮಾಲತಿ ಕೃಷ್ಣಮೂರ್ತಿ ವಂದಿಸಿ, ಉಷಾ ನರೇಂದ್ರ ಕೆರೆಕಾಡು ನಿರೂಪಿಸಿದರು.