9 ಐಎಎಸ್​ ಅಧಿಕಾರಿಗಳ ವರ್ಗಾವಣೆಗೆ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಭಾನುವಾರ ಪೊಲೀಸ್​​​​​​ ಇಲಾಖೆಯಲ್ಲಿ 12 ಐಪಿಎಸ್​​ ಅಧಿಕಾರಿಗಳನ್ನು ವಗಾರ್ವಣೆ ಮಾಡಿದ್ದ ಬೆನ್ನಲ್ಲೆ ರಾಜ್ಯ ಸರ್ಕಾರ ಇಂದು 9 ಐಎಎಸ್​​ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಆದೇಶ ಹೊರಡಿಸಿದೆ.

ರಾಜ್ಯದ ಆಡಳಿತದಲ್ಲಿ ಹಲವಾರು ಬದಲಾವಣೆ ಹಾಗೂ ಸುಧಾರಣೆ ದೃಷ್ಟಿಯಿಂದ ಸರ್ಕಾರ ಈ ವರ್ಗಾವಣೆಯ ಮಾಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಯುಕ್ತ ರಾಕೇಶ್​​ ಸಿಂಗ್​​​​ ವಿರುದ್ಧ ಹಲವು ಶಾಸಕರು ಅಸಮಧಾನ ವ್ಯಕ್ತಪಡಿಸುವ ಮೂಲಕ ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿಗೆ ಒತ್ತಡ ಹಾಕಿದ್ದರು. ಈ ಹಿನ್ನೆಲೆ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನವನ್ನು ಡಾ.ಎನ್​​​. ಮಂಜುಳಾ ಅಲಂಕರಿಸಲಿದ್ದಾರೆ.

ಪಿ. ರವಿಕುಮಾರ್​, ಮಹೇಂದ್ರ ಜೈನ್​​, ಬಿ.ಎಚ್​​. ಅನಿಲ್​​ ಕುಮಾರ್​, ಪ್ರಿಯಾಂಕ ಮೇರಿ ಫ್ರಾನ್ಸಿಸ್​, ಎಸ್​.ಎಸ್​ ನಕುಲ್​, ಡಾ. ವಿ.ರಾಮ್​​ ಪ್ರಶಾಂತ್​ ಮನೋಹರ್​, ಜಿ.ಸಿ. ವೃಷಭೇಂದ್ರ ಮೂರ್ತಿ ಅವರು ವರ್ಗಾವಣೆಯಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *