More

    ಮನೆಯಿಂದಲೇ ಮಕ್ಕಳಿಗೆ ಪರಿಸರ ಪಾಠ ಆರಂಭಿಸಿ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಮಕ್ಕಳಿಗೆ ಮನೆಯಿಂದಲೇ ಪರಿಸರ ಪ್ರೀತಿ, ಪಾಠ ಬೆಳಸಬೇಕು. ಚಿಕ್ಕವರಿದ್ದಾಗ ಚಿಲ್ಲರೆ ಹಣ ಸಂಗ್ರಣೆಗೆ ಕುಡಿಕೆ ನೀಡುವ ಬದಲು ಒಂದು ಸಸಿ ಕೊಟ್ಟು ಜೋಪಾನದಿಂದ ಬೆಳೆಸಲು ಕಲಿಸಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಿ ಹೇಳಿದರು.
    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ ವಕೀಲರ ಸಂಘ, ಅರಣ್ಯ ಇಲಾಖೆ, ಆಯುಷ್ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ವಾರ್ತಾ ಇಲಾಖೆ ಆಶ್ರಯದಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಮನೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಪರಿಸರ ದಿನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
    ಅರಣ್ಯ ನಾಶ ಇಂದು ದೊಡ್ಡ ಸಮಸ್ಯಯಾಗುತ್ತಿದೆ. ಆಹಾರ ಅರಸಿ ಪ್ರಾಣಿಗಳು ನಾಡಿಗೆ ಬರುತ್ತಿವೆ. ಇದರಿಂದ ಪ್ರಾಣಿ, ಮಾನವ ಸಂಘರ್ಷಗಳಾಗುತ್ತಿವೆ. ಮರಗಳ್ಳತನ, ಅರಣ್ಯ ಒತ್ತುವರಿ, ನಾಶದಿಂದ ಭೂಮಿ ಬರಡಾಗುತ್ತಿದೆ. ಅರಣ್ಯ ರಕ್ಷಣಾ ಕಾಯ್ದೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ. ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.
    ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ ಮಾತನಾಡಿ, ಧಾರವಾಡ ಮರಗಿಡಗಳಿಂದ ಕೂಡಿದ ಸುಂದರ ನಗರ. ಅರಣ್ಯ ಇಲಾಖೆ ಸಸಿ ನೆಡುವ ಮೂಲಕ ಅರಣ್ಯ ಹೆಚ್ಚಳಕ್ಕೆ ಕ್ರಮವಹಿಸಿದೆ. ಬೀಜೋತ್ಸವ ಮೂಲಕ ಜನರಿಗೆ ಪರಿಸರದ ಪಾಠ ಹೇಳಲಾಗುತ್ತದೆ ಎಂದರು.
    ಅರಣ್ಯ ಸೇವಕ ಶಿವಪ್ಪ ಸಿಂಗಾಡಿ ಅವರನ್ನು ಸನ್ಮಾನಿಸಲಾಯಿತು. ನ್ಯಾಯಾಧೀಶರಾದ ನಾಗಶ್ರೀ ಎಸ್., ಮರಿಯಪ್ಪ, ಮಹೇಶ ಚಂದ್ರಕಾಂತ, ವಿಜಯಲಕ್ಷ್ಮೀ ಗಾಣಾಪುರ, ಮೋಹಿತೆ, ಗೀರಿಶ ಎಚ್.ಪಿ., ಮೋಹಿತ, ಇಸ್ಮಾಯಿಲ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಪಿ. ಪೂಜಾರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳಾ ಎಚ್.ವಿ., ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಂಗಮೇಶ ಗೂಲಪ್ಪನವರ, ವಲಯ ಅರಣ್ಯ ಅಧಿಕಾರಿ ಪ್ರದೀಪ ಪವಾರ, ನ್ಯಾಯವಾದಿಗಳು, ನ್ಯಾಯಾಂಗ ಇಲಾಖೆ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts