More

  ಪ್ರಣಯ್, ಸಾತ್ವಿಕ್-ಚಿರಾಗ್ ಶುಭಾರಂಭ: ಚೀನಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿ

  ಶೆನ್‌ಜೆನ್ (ಚೀನಾ): ಭಾರತದ ಅಗ್ರ ಪುರುಷ ಷಟ್ಲರ್ ಎಚ್‌ಎಸ್ ಪ್ರಣಯ್ ಹಾಗೂ ಸಾತ್ವಿಕ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ ಚೀನಾ ಮಾಸ್ಟರ್ಸ್‌ ಸೂಪರ್-750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗೆಲುವಿನ ಆರಂಭ ಕಂಡಿದ್ದಾರೆ.
  ಮಂಗಳವಾರ ಆರಂಭಗೊಂಡ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ 31ವರ್ಷದ, ಪ್ರಣಯ್ 21-18, 22-20 ನೇರ ಗೇಮ್‌ಗಳಿಂದ ವಿಶ್ವ ನಂ.12 ಚೀನಾ ತೈಪೆಯ ಚೌ ಟಿಯೆನ್ ಚೆನ್ ಎದುರು ಗೆಲುವು ದಾಖಲಿಸಿ ಎರಡನೇ ಸುತ್ತಿಗೆ ಮುನ್ನಡೆದರು. ಮುಂದಿನ ಸುತ್ತಿನಲ್ಲಿ ಡೆನ್ಮಾರ್ಕ್‌ನ ಮ್ಯಾಗ್ನಸ್ ಜೋಹಾನ್ನೆ ಸೆನ್ ಸವಾಲು ಎದುರಿಸಲಿದ್ದಾರೆ.

  ಡಬಲ್ಸ್‌ನಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ, ಅಗ್ರ ಶ್ರೇಯಾಂಕಿತ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ- ಚಿರಾಗ್ ಶೆಟ್ಟಿ ಜೋಡಿ 21-13, 21-10 ಅಂತರದಿಂದ ಇಂಗ್ಲೆಂಡ್‌ನ ಬೆನ್ ಲೇನ್- ಸೀನ್ ವೆಂಡಿ ವಿರುದ್ಧ ಸುಲಭ ದಾಖಲಿಸಿತು. 2ನೇ ಸುತ್ತಿನಲ್ಲಿ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಜಪಾನ್‌ನ ಅಕಿರಾ ಕೋಗಾ -ತೈಚಿ ಸೈಟೊ ವಿರುದ್ಧ ಹೋರಾಟ ನಡೆಸಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಏಕೈಕ ಸ್ಪರ್ಧಿಯಾಗಿದ್ದ ಆಕರ್ಷಿ ಕಶ್ಯಪ್ ಮೊದಲ ಸುತ್ತಿನಲ್ಲಿ ಚೀನಾದ ಜಾಂಗ್ ಯಿ ಮಾನ್ ಎದುರು 12-21,14-21 ರಿಂದ ಪರಾಭವಗೊಂಡರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts