ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಮುಂಬೈನ ಒಬೆರಾಯ್ 360 ವೆಸ್ಟ್ ಪ್ರಾಜೆಕ್ಟ್‌ನಲ್ಲಿರುವ ತಮ್ಮ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು 80 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:SAPAYI KARMACHARI ಜಿಲ್ಲೆಯ ಎಲ್ಲ ಪೌರ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಡಿ
6,830 ಚದರ ಅಡಿ ಅಪಾರ್ಟ್‌ಮೆಂಟ್ (RERA ಕಾರ್ಪೆಟ್) ಒಬೆರಾಯ್ 360 ವೆಸ್ಟ್ ಪ್ರಾಜೆಕ್ಟ್‌ನ 39ನೇ ಮಹಡಿಯಲ್ಲಿದೆ. ಇದು ವರ್ಲಿಯಲ್ಲಿರುವ ಐಷಾರಾಮಿ ವಸತಿಯಾಗಿದ್ದು, ನಾಲ್ಕು ಪಾರ್ಕಿಂಗ್ ಸ್ಲಾಟ್‌ಗಳನ್ನು ಒಳಗೊಂಡಿದೆ. ಜನವರಿ 31ರಂದು ನೋಂದಣಿಯಾಗಿರುವ ದಾಖಲೆಗಳಲ್ಲಿ 4.80 ಕೋಟಿ ರೂ. ಮುದ್ರಾಂಕ ಶುಲ್ಕ ಪಾವತಿಸಲಾಗಿದೆ. IndexTap ಪ್ರಕಾರ, ಅಪಾರ್ಟ್ಮೆಂಟ್ನ ಪ್ರತಿ ಚದರ ಅಡಿ 1.17 ಲಕ್ಷ ರೂ. ಬೆಲೆ ಇದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ದೇಶದಲ್ಲಿ ಹಿಂದೂ ಎಂಬ ಪದವೇ ಇರಲಿಲ್ಲ ಅದನ್ನು ತಂದಿದ್ದೆ ಕಾಂಗ್ರೆಸ್: Santosh Lad
ಐಷಾರಾಮಿ ಅಪಾರ್ಟ್ಮೆಂಟ್ 4BHK ಮತ್ತು 5BHK ವಸತಿಗಳನ್ನು ಒಳಗೊಂಡಿದೆ. ಇದು ಡ್ಯೂಪ್ಲೆಕ್ಸ್ ಅಪಾರ್ಟ್ಮೆಂಟ್ಗಳು ಮತ್ತು ಪೆಂಟ್ಹೌಸ್(ಮೇಲ್ಮನೆ)ಹೊಂದಿದೆ. ಈ ಕುರಿತ ಪ್ರತಿಕ್ರಿಯೆಗಾಗಿ ನಟ ಮತ್ತು ಅವರ ಪತ್ನಿ ಇಬ್ಬರನ್ನೂ ಸಂಪರ್ಕಿಸಲಾಗಲಿಲ್ಲ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್)