ದೇವದುರ್ಗ: ತಾಲೂಕಿನಲ್ಲಿ 2082 ಮತದಾರರಿದ್ದು, ಹೋಬಳಿಗೆ ಒಂದರಂತೆ ನಾಲ್ಕು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.
ಪಟ್ಟಣದಲ್ಲಿ ಮಿನಿವಿಧಾನಸೌಧ ಸಭಾಂಗಣ, ಜಾಲಹಳ್ಳಿ ನಾಡಕಚೇರಿ, ಗಬ್ಬೂರು ಉಪ ತಹಸಿಲ್ ಕಚೇರಿ ಹಾಗೂ ಅರಕೇರಾದ ನಾಡ ಕಚೇರಿಯಲ್ಲಿ ಮತಗಟ್ಟೆಗಳನ್ನು ತೆರೆಯಲಾಗಿತ್ತು. ಮತದಾರರು ಬೆಳಗ್ಗೆಯಿಂದ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು. ನಾಲ್ಕು ಕೇಂದ್ರಗಳಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ತಾಲೂಕಿನ ನಾಲ್ಕು ಹೋಬಳಿಯ ಮತಗಟ್ಟೆಗಳಲ್ಲಿ ಶೇ.76 ಮತದಾನವಾಗಿದೆ. ಒಟ್ಟು 2096 ಮತದಾರರ ಪೈಕಿ 1571 ಜನರು ಹಕ್ಕು ಚಲಾಯಿಸಿದರು. ಮಿನಿವಿಧಾನಸೌಧ ಮುಂಭಾಗದಲ್ಲಿ ಒಂದು ಪೊಲೀಸ್ ವಾಹನ ಸಹಿತ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ರಾಜಕೀಯ ಪ್ರಮುಖರು ವಿವಿಧ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಚುನಾವಣೆ ಅಧಿಕಾರಿ ಗೋವಿಂದ ನಾಯಕ, ಕಂದಾಯ ನಿರೀಕ್ಷಕ ಭೀಮನಗೌಡ ಪಾಟೀಲ್, ಶಿರಸ್ತೇದಾರ್ ಭೀಮರಾಯ ಮೇಟಿ, ಉಮೇಶ್ ಇತರರಿದ್ದರು.