ಸಿನಿಮಾ

ಪಕ್ಷೇತರ ಅಭ್ಯರ್ಥಿಗೆ ಚಾಕು ಇರಿತ

ಹುಬ್ಬಳ್ಳಿ: ವ್ಯಕ್ತಿಗತ ನಿಂದನೆ ಹಿನ್ನೆಲೆಯಲ್ಲಿ ಕುಂದಗೋಳ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೊಬ್ಬರಿಗೆ ಗೆಳೆಯನೇ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಶುಕ್ರವಾರ ರಾಜೀವನಗರದ ಚಂದ್ರಗಿರಿ ಲೇಔಟ್​ನಲ್ಲಿ ನಡೆದಿದೆ.

ಉಣಕಲ್​ನ ಬಳಿಗಾರ ಓಣಿಯ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ತೋಟಗೇರ (46) ಚಾಕು ಇರಿತಕ್ಕೆ ಒಳಗಾಗಿದ್ದು, ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಂದ್ರಗಿರಿ ಲೇಔಟ್​ನ ಸುನೀಲ ಖೋಡೆ ಎಂಬಾತ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ಮಲ್ಲಿಕಾರ್ಜುನ, ಸುನೀಲನ ಮನೆಗೆ ಹೋದಾಗ ಹಣಕಾಸು ವಿಷಯವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ವಿಕೋಪಕ್ಕೆ ಹೋಗುತ್ತಿದ್ದಂತೆ ಅವಾಚ್ಯ ಶಬ್ದಗಳಿಂದ ಪರಸ್ಪರ ನಿಂದಿಸಿದ್ದಾರೆ. ಆಗ ಕೋಪಗೊಂಡ ಸುನೀಲ, ಮಲ್ಲಿಕಾರ್ಜುನನಿಗೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಹಾಗೂ ಕಿಮ್ಸ್​ಗೆ ಪೊಲೀಸ್ ಅಧಿಕಾರಿಗಳು, ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Posts

ಲೈಫ್‌ಸ್ಟೈಲ್