ಎಸ್​ಎಸ್​ಎಲ್​ಸಿ ಗಣಿತ ಪ್ರಶ್ನೆಪತ್ರಿಕೆ ಸೋರಿಕೆ? ಸಿಂದಗಿ ತಾಲೂಕಿನಲ್ಲಿ ದುಷ್ಕೃತ್ಯ ಶಂಕೆ

ವಿಜಯಪುರ: ಸಿಂದಗಿ ತಾಲೂಕಿನ ಪರೀಕ್ಷಾ ಕೇಂದ್ರವೊಂದರಲ್ಲಿ ಎಸ್​ಎಸ್​ಎಲ್​ಸಿ ಗಣಿತ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಬೆಳಗ್ಗೆ 11.30ರಲ್ಲಿ ಪರೀಕ್ಷೆ ನಡೆಯುತ್ತಿರುವಾಗಲೇ ಪ್ರಶ್ನೆಪತ್ರಿಕೆಯ ಪ್ರತಿ ವಾಟ್ಸ್​ಆ್ಯಪ್​ ಸೇರಿ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿತ್ತು ಎನ್ನಲಾಗಿದೆ.

ಸಿಂದಗಿ ತಾಲೂಕಿನ ಮೋರುಟಗಿ ಗ್ರಾಮ ಕಲ್ಪವೃಕ್ಷ ಶಿಕ್ಷಣ ಸಂಸ್ಥೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿರಬಹುದು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ದೌಡಾಯಿಸಿರುವ ಡಿಡಿಪಿಐ ಪ್ರಸನ್ನಕುಮಾರ್​ ಪರಿಶೀಲಿಸುತ್ತಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ನಿಜ. ಆದರೆ, ಪ್ರಶ್ನೆಪತ್ರಿಕೆ ಮೋರುಟಗಿ ಗ್ರಾಮದ ಶಾಲೆಯಿಂದಲೇ ಸೋರಿಕೆಯಾಗಿದೆಯೇ ಅಥವಾ ಬೇರೆ ಕೇಂದ್ರದಲ್ಲಿ ಆಗಿದೆಯೇ ಎಂಬುದನ್ನು ಪರಿಶೀಲಿಸಿ, ಖಚಿತಪಡಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

2 Replies to “ಎಸ್​ಎಸ್​ಎಲ್​ಸಿ ಗಣಿತ ಪ್ರಶ್ನೆಪತ್ರಿಕೆ ಸೋರಿಕೆ? ಸಿಂದಗಿ ತಾಲೂಕಿನಲ್ಲಿ ದುಷ್ಕೃತ್ಯ ಶಂಕೆ”

  1. This is a very bad thing and this shd not repeat again then wht is the use of conducting exam????? Government plz answer this is ur responsibility how can u do this and cheat the children

  2. ಇಂತಹ ಕ್ಷುಲ್ಲಕ ಘಟನೆ ಬಹಳ ಖಂಡನೀಯವಾಗಿದೆ. ವರ್ಷಕ್ಕೋ ಹತ್ತು ವರ್ಷಕ್ಕೋ ಇಂತಹ ಒಂದು ಘಟನೆ ನಡೆದರೂ ಎಲ್ಲರ ಮುಖಕ್ಕೆ ಮಸಿ ಬಳಿದ ಹಾಗಾಗುತ್ತದೆ ಮತ್ತು ನಾವೆಲ್ಲರೂ ತಲೆ ತಗ್ಗಿಸಬೇಕಾಗುತ್ತದೆ. ತುಂಬಾ ಜಾಗ್ರತೆ ಇರಲಿ ಈ ವಿಷಯಗಳಲ್ಲಿ. – ಗುಂಜಮಂಜ (Gunjmanja)

Comments are closed.