ಕೊವಿಡ್-19ರಿಂದಾಗಿ ಮುಂದೂಡಲ್ಪಟ್ಟಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ದಿನಾಂಕವನ್ನು ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಮಂಡಳಿ ಈಗಾಗಲೇ ಪ್ರಕಟಿಸಿದ್ದು, ಅದರ ಅನ್ವಯ ಜೂ.25ರಿಂದ ಜುಲೈ 4ರವರೆಗೆ ಪರೀಕ್ಷೆಗಳು ನಡೆಯಲಿವೆ.
ಇಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಟೈಂ ಟೇಬಲ್ ನೀಡಲಾಗಿದ್ದು, ಅದು ಹೀಗಿದೆ.
ಜೂ.25- ದ್ವಿತೀಯ ಭಾಷೆ – ಇಂಗ್ಲಿಷ್, ಕನ್ನಡ- ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30
ಜೂ.26-ಕೋರ್ ಸಬ್ಜೆಕ್ಟ್
- ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2-ಬೆಳಗ್ಗೆ 10-ಮಧ್ಯಾಹ್ನ 1.45
- ಇಂಜಿನಿಯರಿಂಗ್ ಗ್ರಾಫಿಕ್ಸ್-2 -ಮಧ್ಯಾಹ್ನ 2ರಿಂದ ಸಂಜೆ 5-15
- ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ -ಬೆ.10.30-ಮ.1.45
- ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್- -ಬೆ.10.30-ಮ.1.45
- ಅರ್ಥಶಾಸ್ತ್ರ-ಬೆಳಗ್ಗೆ 10.30-ಮಧ್ಯಾಹ್ನ 1.45
ಜೂ.27- ಗಣಿತ ಮತ್ತು ಸಮಾಜಶಾಸ್ತ್ರ-ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45
ಜೂ.28 ಭಾನುವಾರ ರಜಾ
ಜೂನ್ 29-ವಿಜ್ಞಾನ, ರಾಜ್ಯಶಾಸ್ತ್ರ ಪರೀಕ್ಷೆಗಳು ಬೆಳಗ್ಗೆ 10.30-ಮ.1.45
ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ- ಮಧ್ಯಾಹ್ನ 2ರಿಂದ ಸಂಜೆ 5-15
ಜೂ.30ರಂದು ಯಾವುದೇ ಪರೀಕ್ಷೆ ಇಲ್ಲ
ಜುಲೈ 1-ಸಮಾಜ ವಿಜ್ಞಾನ -ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45
ಜುಲೈ 2-ಪ್ರಥಮ ಭಾಷೆ
ಕನ್ನಡ , ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ -ಬೆಳಗ್ಗೆ 10.30-ಮಧ್ಯಾಹ್ನ 1.45.
ಜುಲೈ 3-ತೃತೀಯ ಭಾಷೆ
ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು-ಬೆ.10.30-ಮ.1.45.
ಎನ್ಎಸ್ಕ್ಯೂಎಫ್ ವಿಷಯಗಳಾದ ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್ ಮತ್ತು ಬ್ಯೂಟಿ ಆ್ಯಂಡ್ ವೆಲ್ನೆಸ್ ಪರೀಕ್ಷೆಗಳು ಜು.3ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.45ರವರೆಗೆ ನಡೆಯಲಿವೆ.
ಹಾಗೇ ಜು.4 ಶನಿವಾರದಂದು ಜಿಟಿಎಸ್ ಅಭ್ಯರ್ಥಿಗಳಿಗೆ ಪ್ರಾಯೋಗಿಕ, ಮೌಖಿಕ ಪರೀಕ್ಷೆಗಳನ್ನು ಆಯಾ ಕೇಂದ್ರಗಳಲ್ಲಿ ನಡೆಸಲಾಗುವುದು. ಹಾಗೇ ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತದ ಸೈದ್ಧಾಂತಿಕ ಪರೀಕ್ಷೆಯನ್ನು ಮಧ್ಯಾಹ್ನ 2ಗಂಟೆಯಿಂದ 3.45ರವರೆಗೆ ಹಾಗೂ ಪ್ರಾಯೋಗಿಕ ಪರೀಕ್ಷೆಯನ್ನು ಮಧ್ಯಾಹ್ನ 3.45ರಿಂದ ಸಂಜೆ 5.15ರವರೆಗೆ ನಡೆಸಲಾಗುವುದು ಎಂದು ಪರೀಕ್ಷಾ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.