ಚಿತ್ರದುರ್ಗ ಜಿಲ್ಲೆಯಲ್ಲಿ 92 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ

ಚಿತ್ರದುರ್ಗ: ಇಂದಿನಿಂದ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಆರಂಭವಾಗಿದ್ದು, ಬೆಳಗ್ಗೆ 9.30ಕ್ಕೆಆರಂಭವಾಗುವ ಪರೀಕ್ಷೆಗೆ ಬಹುತೇಕ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು 45ನಿಮಿಷ ಮೊದಲೇ ಹಾಜರಿದ್ದರು.

92 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, 22,696 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಒಟ್ಟು 432 ಪ್ರೌಢಶಾಲೆಗಳಿಂದ 22,696 ವಿದ್ಯಾರ್ಥಿಗಳಿದ್ದಾರೆ. 11,867 ಬಾಲಕರು,10,829 ಬಾಲಕಿಯರು ಪರೀಕ್ಷೆ ಬರೆಯುತ್ತಿದ್ದಾರೆ.

ಪರೀಕ್ಷಾ ಕೇಂದ್ರಗಳ 200 ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಾ.21 ರಂದು ಪ್ರಥಮ ಭಾಷೆಯ ನಡೆದಿದೆ. ಪರೀಕ್ಷೆ ಆರಂಭ ಸುಗಮವಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ. 

 

Leave a Reply

Your email address will not be published. Required fields are marked *