ಎಸ್ಸೆಸ್ಸೆಲ್ಸಿ ಫೇಲಾದ ವಿದ್ಯಾರ್ಥಿನಿಗೆ ಸಾಂತ್ವನದ ನೆಪದಲ್ಲಿ ಶಿಕ್ಷಕನ ಅನುಚಿತ ವರ್ತನೆ: ಆಡಿಯೋ ಕ್ಲಿಪ್​​ ಜತೆ ದೂರು ದಾಖಲು

ಮಂಡ್ಯ: ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸಿನ ದಾರಿ ತೋರಬೇಕಿದ್ದ ಶಿಕ್ಷಕನೋರ್ವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ತನ್ನ ವಿದ್ಯಾರ್ಥಿನಿ ಜತೆ ಆಕ್ಷೇಪಾರ್ಹ ಮಾತುಗಳನ್ನಾಡಿರುವ ಆಡಿಯೋ ವೈರಲ್​ ಆಗಿದೆ.

ಮಂಡ್ಯದ ಶಾಲೆಯೊಂದರೆ ಶಿಕ್ಷಕ ಮೇಘನಾಥ್ ಎಂಬುವರು ಮಾತನಾಡಿರುವ ಆಡಿಯೋ ಎನ್ನಲಾಗಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ಎರಡು ವಿಷಯದಲ್ಲಿ ಫೇಲ್ ಆಗಿದ್ದ ವಿದ್ಯಾರ್ಥಿನಿಗೆ ಮನೆಯಲ್ಲಿ ಒಂದು ವಿಷಯದಲ್ಲಿ ಫೇಲ್ ಆಗಿದ್ದೇನೆ ಎಂದು ಸುಳ್ಳು ಹೇಳುವಂತೆ ತಪ್ಪು ಸಲಹೆ ನೀಡುತ್ತಿರುವುದು ವೈರಲ್​ ಆಗಿರುವ ಆಡಿಯೋದಲ್ಲಿ ದಾಖಲಾಗಿದೆ.

ಇಷ್ಟೇ ಅಲ್ಲದೆ, ನಾನು ನಿನಗೆ ನೋಟ್ಸ್ ಕೊಟ್ಟು ಮತ್ತೊಮ್ಮೆ ಪರೀಕ್ಷೆ ಬರೆಯಿಸುತ್ತೇನೆ. ಬೇಜಾರಾಗಬೇಡ, ಊಟ ಮಾಡು, ನಾಳೆ ಅಥವಾ ನಾಡಿದ್ದು ಫೋನ್ ಮಾಡುತ್ತೇನೆ. ಆಗ ಬರುವಂತೆ ಎಂದು ವಿದ್ಯಾರ್ಥಿನಿ ಜತೆ ಮಾತನಾಡುತ್ತಾ, ಲೋಡ್ ಸ್ಪೀಕರ್ ಆಫ್ ಮಾಡಿದ್ದೀಯಾ ಎಂದು ಪ್ರಶ್ನಿಸಿದ ಶಿಕ್ಷಕ ಸಂಜೆ ಸಿಗುವಂತೆ ಹೇಳಿ, ಐ ಲವ್​ ಯೂ ಕಣೋ ಎಂದಿರುವುದು ಆಡಿಯೋದಲ್ಲಿದೆ.

ಶಿಕ್ಷಕನ ವಿರುದ್ಧ ದೂರು
ಶಿಕ್ಷಕ ಮಾತನಾಡಿದ ಮರುದಿನ ಬಾಲಕಿ ಶಾಲೆಗೆ ಮರು ಪರೀಕ್ಷೆಗೆ ಅರ್ಜಿ ಸಲ್ಲಿಸಲು ಬಂದಾಗ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ವ್ಯಕ್ತವಾಗಿದೆ. ಶಿಕ್ಷಕನ ವರ್ತನೆಗೆ ಬೇಸತ್ತು ವಿದ್ಯಾರ್ಥಿನಿ ಪಾಲಕರಿಗೆ ಘಟನೆ ವಿವರಿಸಿದ್ದಾಳೆ ಎಂದು ಹೇಳಲಾಗಿದ್ದು, ಫೋನ್ ಸಂಭಾಷಣೆ ಜತೆಗೆ ಯಾರು ಇಲ್ಲದ ವೇಳೆ ಶಾಲೆಗೆ ಕರೆಸಿಕೊಂಡು ಬಾಲಕಿ ಜತೆ ಶಿಕ್ಷಕ ಮೇಘನಾಥ್ ಅಸಭ್ಯವಾಗಿ ನಡೆದುಕೊಂಡಿದ್ದಾನೆಂದು ಆರೋಪಿಸಿ ಪಾಲಕರು ಮಂಡ್ಯದ ಪೂರ್ವ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

One Reply to “ಎಸ್ಸೆಸ್ಸೆಲ್ಸಿ ಫೇಲಾದ ವಿದ್ಯಾರ್ಥಿನಿಗೆ ಸಾಂತ್ವನದ ನೆಪದಲ್ಲಿ ಶಿಕ್ಷಕನ ಅನುಚಿತ ವರ್ತನೆ: ಆಡಿಯೋ ಕ್ಲಿಪ್​​ ಜತೆ ದೂರು ದಾಖಲು”

  1. Whose fault? She should be careful about such lusty people who are always in the society.

Comments are closed.