More

    ಎಸ್ಸೆಸ್ಸೆಲ್ಸಿ ಜಿಲ್ಲಾವಾರು ರ‍್ಯಾಂಕಿಂಗ್​​ಗೆ ಕೊಕ್?

    ಮೈಸೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನೀಡುವ ಜಿಲ್ಲಾವಾರು ರ‍್ಯಾಂಕಿಂಗ್ ಪದ್ಧತಿಯನ್ನು ತೆಗೆದುಹಾಕುವ ಕುರಿತು ಚಿಂತನೆ ನಡೆದಿದೆ ಎಂದು ಸಚಿವ ಎಸ್.ಸುರೇಶ್​ಕುಮಾರ್ ತಿಳಿಸಿದರು.

    ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಮೈಸೂರು ಶೈಕ್ಷಣಿಕ ವಿಭಾಗದ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರ‍್ಯಾಂಕಿಂಗ್​ಗಿಂತ ಗುಣಮಟ್ಟದ ಕಲಿಕೆಗೆ ಮಹತ್ವ ನೀಡಬೇಕಿದೆ. ಈ ಪದ್ಧತಿಯಿಂದ ಜಿಲ್ಲೆಗಳ ನಡುವೆ ಅನಾರೋಗ್ಯಕರ ಸ್ಪರ್ಧೆ ಏರ್ಪಟ್ಟಿದೆ. ಆದ್ದರಿಂದ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಲು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರತಿಯೊಂದು ಜಿಲ್ಲೆಗಳಿಗೆ ನೀಡುವ ರ‍್ಯಾಂಕಿಂಗ್ ಪದ್ಧತಿಯನ್ನು ನಿಲ್ಲಿಸಬೇಕಿದೆ. ಈ ಹಿನ್ನೆಲೆಯಲ್ಲಿ ಚರ್ಚೆ ನಡೆದಿದೆ ಎಂದರು.

    ಸಮಸ್ಯೆ ಹೇಳಿಕೊಳ್ಳಲು ಆ್ಯಪ್​:​ ‘ಶಿಕ್ಷಕರ ಮಿತ್ರ’ ಎಂಬ ಶಿಕ್ಷಕಸ್ನೇಹಿ ಮೊಬೈಲ್ ಆಪ್ ತರಲಾಗುವುದು. ಆ ಮೂಲಕ ಶಿಕ್ಷಕರು ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳಲು ವೇದಿಕೆ ಕಲ್ಪಿಸಿಕೊಡಲಾಗುವುದು. ಇದರೊಂದಿಗೆ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts