ಮಗುವಿನ ನಿರೀಕ್ಷೆಯಲ್ಲಿ ನಟಿ ಶ್ರುತಿ ಹರಿಹರನ್​: ಗರ್ಭಿಣಿ ಆಗಿರುವ ಸುದ್ದಿಯನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡ ಲೂಸಿಯಾ ಬೆಡಗಿ!

ಬೆಂಗಳೂರು: ನಟ ಅರ್ಜುನ್​ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ ಬಳಿಕ ಸ್ಯಾಂಡಲ್​ವುಡ್​ನಲ್ಲಿ ನಡೆದ ಹೈಡ್ರಾಮದ ನಂತರ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದ ನಟಿ ಶ್ರುತಿ ಹರಿಹರನ್ ಹಲವು ದಿನಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದು, ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಶ್ರುತಿ ಎಲ್ಲಿ ಹೋದಳು ಎಂದು ಅಭಿಮಾನಿಗಳು ಹುಡುಕುತ್ತಿರುವ ನಡುವೆಯೇ ಶ್ರುತಿ ಕಡೆಯಿಂದ ಅಚ್ಚರಿಯ ಸಂದೇಶವೊಂದು ಬಂದಿದೆ.

ಶ್ರುತಿ ಮದುವೆಯಾಗಿಲ್ಲ ಎಂದು ತಿಳಿದಿದ್ದ ಅಭಿಮಾನಿಗಳಿಗೆ ನಟ ಅರ್ಜುನ್ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರಿಗೆ ಶ್ರುತಿ ನೀಡಿದ್ದ ದೂರಿನಿಂದ ಎಲ್ಲವೂ ಬಹಿರಂಗವಾಗಿತ್ತು. ದೂರಿನಲ್ಲಿ ಶ್ರುತಿ ಹರಿಹರನ್ ವೈಫ್ ಆಫ್ ರಾಮ್ ಕುಮಾರ್ ಎಂದು ಉಲ್ಲೇಖಿಸಿದ್ದರು. ಶ್ರುತಿ ಅವರ ಪತಿ ರಾಮ್ ಕುಮಾರ್ ಕೇರಳ ಮೂಲದವರಾಗಿದ್ದು, ಕಳರಿಪಯಟ್ಟು ಪಟು. ಇವರಿಬ್ಬರೂ ಗೊಮ್ಟೇಶ್ ಉಪಾಧ್ಯೆ ನಿರ್ದೇಶನದಲ್ಲಿ ಮೂಡಿಬಂದಿದ್ದ ಒಂದೇ ಮ್ಯೂಸಿಕ್ ವೀಡಿಯೋ ಆಲ್ಬಂನಲ್ಲಿ ನಟಿಸಿದ್ದಾರೆ.

ಮೀಟೂ ಆರೋಪದ ಬಳಿಕ ಕಾಣೆಯಾಗಿದ್ದ ಶ್ರುತಿ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಗರ್ಭಿಣಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ತಾನು ಗರ್ಭಿಣಿಯಾಗಿರುವುದನ್ನು ಫೇಸ್​ಬುಕ್​ ಮೂಲಕ ಖಚಿತ ಪಡಿಸಿ ಫೋಟೊವೊಂದನ್ನು ಅಪ್​ಲೋಡ್​ ಮಾಡಿ ಅದನ್ನು ಬ್ಲರ್​ ಮಾಡುವ ಮೂಲಕ ಅಲ್ಲಿಯೂ ಕಾಣಿಸಿಕೊಳ್ಳುವಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.

ಜೀವನ ನಿನ್ನೊಳಗೆ ಬಡಿದುಕೊಳ್ಳುತ್ತಿದೆ ಎಂದು ಭಾಸವಾಗುತ್ತಿದೆ. ಇದೊಂದು ಹೊಸದಾದ ಪ್ರಯಾಣವಾಗಿದ್ದು, ನಿನ್ನ ನೋಡಲು ನನಗೆ ಕಾಯಲು ಆಗುತ್ತಿಲ್ಲ ಎಂದು ಹೇಳುವ ಮೂಲಕ ತಾಯಿಯಾಗುವ ನಿರೀಕ್ಷೆಯಲ್ಲಿರುವುದನ್ನು ಶ್ರುತಿ ತಿಳಿಸಿದ್ದಾರೆ.

‘ಹ್ಯಾಪಿ ನ್ಯೂ ಇಯರ್’ (2017) ಸಿನಿಮಾ ಬಿಡುಗಡೆಯಾದ ಬಳಿಕ ಶ್ರುತಿ ಅವರು ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾಗಿ ಸುದ್ದಿ ಹರಿದಾಡಿತ್ತು. ವೈಯಕ್ತಿಕ ಕಾರಣಗಳಿಂದ ಅವರ ಮದುವೆ ಸಾರ್ವಜನಿಕವಾಗಿ ತಿಳಿಸಿರಲಿಲ್ಲ. ಬಹುಶಃ ಇದರಿಂದ ತನ್ನ ವೃತ್ತಿ ಬದುಕಿಗೆ ತೊಡಕಾಗಬಹುದು ಎಂಬ ಉದ್ದೇಶಕ್ಕೆ ಮದುವೆಯನ್ನು ಬಹಿರಂಗಪಡಿಸಿರಲಿಲ್ಲ ಎಂಬುದು ಕೆಲವರ ಅನಿಸಿಕೆಯಾಗಿತ್ತು.

To actually feel life beating within you …. to know that this is the beginning of a whole new journey .. and to…

Sruthi Hariharan ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜುಲೈ 16, 2019

Leave a Reply

Your email address will not be published. Required fields are marked *