ಸುಖಾಸುಮ್ಮನೆ ಇರುವೆ ಬಿಟ್ಟುಕೊಂಡ ಶ್ರುತಿ ಹರಿಹರನ್

ಬೆಂಗಳೂರು: ನಾನು ಸಕ್ಕರೆಯಿದ್ದಂತೆ ಅದಕ್ಕೇ ಮಾಧ್ಯಮಗಳು ನನ್ನನ್ನು ಇರುವೆಯಂತೆ ಹಿಂಬಾಲಿಸುತ್ತಾರೆ ಎಂದು ನಟಿ ಶ್ರುತಿ ಹರಿಹರನ್​ ಮಾಧ್ಯಮಗಳ ಕುರಿತು ವ್ಯಂಗ್ಯ ಮಾಡಿದ್ದು, ಟೀಕೆಗೆ ಗುರಿಯಾಗಿದ್ದಾರೆ.

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಭಾಯಿ ಅವರನ್ನು ಭೇಟಿ ಮಾಡಲು ತೆರಳಿದ್ದ ಶ್ರುತಿ ಹರಿಹರನ್​ ಮಹಿಳಾ ಆಯೋಗದ ಸಿಬ್ಬಂದಿಯೊಂದಿಗೆ ತನ್ನ ಕುರಿತು ಹೊಗಳಿಕೊಂಡ ಘಟನೆ ನಡೆದಿದೆ. ಸುದ್ದಿಗೋಷ್ಠಿಯ ನಂತರ ಈ ಕುರಿತು ಶ್ರುತಿ ಹರಿಹರನ್​ಗೆ ಕೇಳಿದಾಗ. ತಾನು ಹಾಗೆ ಹೇಳೇ ಇಲ್ಲ ಎಂದು ಸಮಜಾಯಿಷಿ ನೀಡಲು ಮುಂದಾಗಿದ್ದಾರೆ. ಹಾಗಾದ್ರೆ ಸಿನಿಮಾ ಪ್ರಚಾರಕ್ಕೆ ಬರುವಾಗ ನಿಮಗೆ ಹಾಗೆ ಅನಿಸಲ್ವಾ ಎಂದು ಕೇಳಿದ ನಂತರ ನನಗೆ ಮಾಧ್ಯಮದ ಮೇಲೆ ಗೌರವಿದೆ ಎಂದು ಹಾರಿಕೆಯ ಉತ್ತರ ಕೊಟ್ಟು ಕ್ಷಮೆಯಾಚಿಸಿ ಅಲ್ಲಿಂದ ಹೊರಟಿದ್ದಾರೆ.

ಯಾವುದೇ ಕಾರಣಕ್ಕೂ ನಾನು ಕ್ಷಮೆ ಕೇಳೋದಿಲ್ಲ

ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ. ನಮ್ಮ ಅಣ್ಣನ ಬಳಿ (ಸರ್ಜಾ) ಕ್ಷಮೆ ಕೇಳುವಂತೆ ಹಲವರು ನನಗೆ ಮೆಸೇಜ್​ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ನಾನು ಸ್ಟ್ರಾಂಗ್​ ಆಗಿದ್ದೇನೆ. ಎಲ್ಲವನ್ನೂ ಎದುರಿಸುತ್ತೇನೆ. ಕೋರ್ಟ್​ನಲ್ಲಿ ನನ್ನ ಪರ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಶ್ರುತಿ ಹರಿಹರನ್​ ಮಹಿಳಾ ಆಯೋಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.