ಬೆಂಗಳೂರು: ಬಹುಭಾಷ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ಪರ ಬ್ಯಾಟ್ ಬೀಸಿದ್ದ ನಟ ಪ್ರಕಾಶ್ ರಾಜ್ ಇದೀಗ ಸರ್ಜಾ ಪರವು ಧ್ವನಿ ಎತ್ತಿದ್ದಾರೆ.
ಆಚಾರ ವಿಚಾರಗಳಿಲ್ಲದ ನಾಲಿಗೆಗಳು ತಮ್ಮ ನೀಚ ಬುದ್ದಿಯಿಂದ ತಮ್ಮ ತಮ್ಮ ಹಿತಾಸಕ್ತಿಗಳ ಬೇಳೆ ಬೇಯಿಸಿಕೊಳ್ಳುತ್ತಾ, ಮೀಟೂ ಅಭಿಯಾನವನ್ನು ದಾರಿ ತಪ್ಪಿಸುವ ಮುನ್ನ ಜಸ್ಟ್ ಆಕ್ಸಿಂಗ್ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.
ಅರ್ಜುನ್ ನನ್ನ ಬಹುಕಾಲದ ಗೆಳೆಯ ಹಾಗೂ ಸಹ ಪ್ರಯಾಣಿಕ. ಆತನನ್ನು ನಾನು ತುಂಬಾ ಚೆನ್ನಾಗಿ, ನಿಮ್ಮೆಲ್ಲರಿಗಿಂತ ಆಂತರಿಕವಾಗಿ ಬಲ್ಲೆ. ನಾನು ಎಲ್ಲೂ ಆತನನ್ನು ಸಾರಾಸಗಟಾಗಿ ಅಪರಾಧಿ ಎನ್ನಲಿಲ್ಲ. ಯಾರ ಬಗ್ಗೆಯೂ ಅರ್ಥವಿಲ್ಲದ ದೂಷಣೆ ಮಾಡುವವನೂ ನಾನಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಶ್ರುತಿ, ಎಲ್ಲರೂ ದೂಷಿಸುತ್ತಿರುವಂತೆ ಅವಕಾಶವಾದಿ ಹೆಣ್ಣು ಮಗಳಲ್ಲ. ಅಪ್ಪಟ ಪ್ರತಿಭಾವಂತೆ. ದಿಟ್ಟ ಹೆಣ್ಣು. ನಮ್ಮೆಲ್ಲರಂತೆ ಇವರನ್ನೂ ಬೆಳೆಸಿರುವುದು ನಮ್ಮ ಸಮಾಜವೇ ಎಂದು ಶ್ರುತಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಇಬ್ಬರೂ ಚಿತ್ರರಂಗದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಕೆಲಸ ಮಾಡಬೇಕಾದವರು. ಮಾಡಲು ಸಾಧ್ಯವಿರುವವರು. ಈ ಸತ್ಯದ ಹಿನ್ನೆಲೆಯಲ್ಲಿ ನಾನು ತುಂಬಾ ಮಾರ್ಮಿಕವಾಗಿ ಕೇಳುತ್ತಿರುವ ಸೂಕ್ಷ್ಮತೆಯ ಪ್ರತಿಕ್ರಿಯೆ ಎಲ್ಲರಿಗೂ ಅರ್ಥವಾದರೆ ಒಳಿತು. ಪಕ್ಷಪಾತವಿಲ್ಲದೆ, ಪೂರ್ವಾಗ್ರಹಪೀಡಿತರಲ್ಲದ ಕೆಲವು ಹಿರಿಯರು ಇಬ್ಬರನ್ನು ಕರೆಸಿ ಕೂರಿಸಿ ತಕ್ಷಣವೆ ಇತ್ಯರ್ಥಿಸಿ ಎಂದು ಇಬ್ಬರ ಪರವಾಗಿತೂ ಬ್ಯಾಟ್ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್)
ಆಚಾರ..ವಿಚಾರಗಳಿಲ್ಲದ ನಾಲಿಗೆಗಳು..ತಮ್ಮ ನೀಚ ಬುದ್ದಿಯಿಂದ ತಮ್ಮ ತಮ್ಮ ಹಿತಾಸಕ್ತಿಗಳ ಬೇಳೆ ಬೇಯಿಸಿಕೊಳ್ಳುತ್ತಾ #ಮೀಟೂ ಅಭಿಯಾನವನ್ನು ದಾರಿ ತಪ್ಪಿಸುವ ಮುನ್ನ … #justasking pic.twitter.com/KWrDGjGvJn
— Prakash Raj (@prakashraaj) October 25, 2018