ಕಲ್ಲುಗಣಿಗಾರಿಕೆ ಘಟಕಗಳ ಮೇಲೆ ದಾಳಿ

ಶ್ರೀರಂಗಪಟ್ಟಣ: ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಕ್ರಷರ್‌ಗಳು ಹಾಗೂ ಕಲು ್ಲಗಣಿಗಾರಿಕೆ ಘಟಕಗಳ ಮೇಲೆ ತಾಲೂಕು ಆಡಳಿತ ಬುಧವಾರ ದಿಢೀರ್ ದಾಳಿ ನಡೆಸಿ ಬೀಗಮುದ್ರೆಯ ನೋಟಿಸ್ ಅಂಟಿಸಿದೆ.

ಗಣಂಗೂರು ವ್ಯಾಪ್ತಿಯ 11, ಕಾಳೇನಹಳ್ಳಿ 3, ಚನ್ನನಕೆರೆಯ 6 ಅಕ್ರಮ ಕ್ರಷರ್‌ಗಳು, ಟಿ.ಎಂ.ಹೊಸೂರು ವ್ಯಾಪ್ತಿಯ 4 ಟಾರ್ ಪ್ಲಾೃಂಟ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಅಧಿಕಾರಿಗಳು ದಾಳಿ ನಡೆಸುವ ವಿಚಾರ ತಿಳಿದ ಮಾಲೀಕರು ಮತ್ತು ಕಾರ್ಮಿಕರು ಘಟಕಗಳನ್ನು ಸ್ಥಗಿತಗೊಳಿಸಿ ಪರಾರಿಯಾಗಿದ್ದಾರೆ. ಘಟಕಗಳನ್ನು ಪರಿಶೀಲಿಸಿದ ಅಧಿಕಾರಿಗಳು, ಮುಚ್ಚುವಂತೆ ಸೂಚನೆ ನೀಡಿ ಬೀಗಮುದ್ರೆಯ ನೋಟಿಸ್ ಅಂಟಿಸಿದರು.

ತಹಸೀಲ್ದಾರ್ ನಾಗೇಶ್, ಕಂದಾಯ ನಿರೀಕ್ಷಕ ಪದ್ಮನಾಭ ಹಾಗೂ ಗ್ರಾಮ ಲೆಕ್ಕಿಗರಾದ ಮಂಜುನಾಥ್ ಮತ್ತು ಶಿವಣ್ಣ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *