More

    ಫೆ.1ರಂದು ಶ್ರೀರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ

    ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಫೆ.1ರಂದು ಶ್ರೀರಂಗನಾಥಸ್ವಾಮಿ ರಥಸಪ್ತಮಿ ಅಂಗವಾಗಿ ಬ್ರಹ್ಮರಥೋತ್ಸವ ನಡೆಯುವ ಹಿನ್ನೆಲೆಯಲ್ಲಿ ರಥ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದೆ.

    ನರಸಿಂಹಾಚಾರ್ ನೇತೃತ್ವದ ಕಾರ್ಮಿಕರ ತಂಡ ದೇವಾಲಯದ ಎಡಭಾಗದಲ್ಲಿರುವ ಸುಮಾರು 70 ಅಡಿ ಎತ್ತರ ಹಾಗೂ 40 ಟನ್ ತೂಕದ ಶ್ರೀರಂಗನ ಬ್ರಹ್ಮರಥ ನಿರ್ಮಾಣ ಕಾರ್ಯ ಆರಂಭಿಸಿದೆ. ಸಮಾನವಾದ ಕಂಬಗಳನ್ನು ಅಳವಡಿಸಿ ಬಣ್ಣ ಬಣ್ಣದ ಬಟ್ಟೆಗಳನ್ನು ಕಟ್ಟಲಾಗುತ್ತಿದೆ. ರಥದ ನಾಲ್ಕು ಚಕ್ರಗಳು ಹಾಗೂ ರಥವನ್ನು ಎಳೆಯುವ ಕಬ್ಬಿಣದ ಸರಪಳಿಯನ್ನು ದುರಸ್ತಿಗೊಳಿಸಿ ಬಣ್ಣ ಬಳಿಯಲಾಗುತ್ತಿದೆ.

    ರಥಸಪ್ತಮಿ ದಿನದಂದು ಮುಂಜಾನೆ ಪಟ್ಟಣದ ರಾಜಬೀದಿಗಳಲ್ಲಿ ಸಂಚರಿಸಿ ಪುರಜನರಿಂದ ಪೂಜೆಗೆ ಒಳಪಡುವ ಸೂರ್ಯ ಮಂಡಲ ಹಾಗೂ ಚಂದ್ರಮಂಡಲ ರಥಗಳನ್ನು ಈಗಾಗಲೇ ಸರಿಯಾಗಿ ಜೋಡಿಸಿ ನಿಲ್ಲಿಸಲಾಗಿದ್ದು, ಬಣ್ಣಗಳನ್ನು ಬಳಿದು ಅಣಿಗೊಳಿಸಲಾಗಿದೆ.

    ದೇವಾಲಯದ ಆವರಣ ಸೇರಿದಂತೆ ಬ್ರಹ್ಮರಥ ಸಾಗುವ ದೇಗುಲದ ಸುತ್ತಲಿನ ಉದ್ಯಾನ ಹಾಗೂ ದಾರಿಯನ್ನು ಶುಚಿಗೊಳಿಸಿ ಸಮತಟ್ಟು ಮಾಡಲಾಗುತ್ತಿದೆ. ರಥಸಪ್ತಮಿಗೆ ಶ್ರೀರಂಗಪಟ್ಟಣ, ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯದಿಂದ ಭಕ್ತರು ಆಗಮಿಸುವ ಹಿನ್ನೆಲೆ ಮೂಲ ಸೌಕರ್ಯಗಳು, ವೈದ್ಯಕೀಯ ಹಾಗೂ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲು ಸಿದ್ಧತೆ ನಡೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts