More

    ತಾಲೂಕು ಕಚೇರಿಗೆ ಕುಪ್ಪೆದಡ ಗ್ರಾಮಸ್ಥರ ಮುತ್ತಿಗೆ

    ಶ್ರೀರಂಗಪಟ್ಟಣ: ಗ್ರಾಮಕ್ಕೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು ಹಾಗೂ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಪ್ರಭಾವಿ ವ್ಯಕ್ತಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಸೋಮವಾರ ತಾಲೂಕಿನ ಕುಪ್ಪೆದಡ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಸದಸ್ಯೆ ನೇತೃತ್ವದಲ್ಲಿ ಪಟ್ಟಣದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

    ಪ್ರತಿಭಟನೆ ನೇತೃತ್ವ ವಹಿಸಿದ್ದ ಹುಲಿಕೆರೆ ಗ್ರಾಪಂ ಸದಸ್ಯೆ ರೇಷ್ಮಾಭಾನು ಮಾತನಾಡಿ, ಕುಪ್ಪೆದಡ ಗ್ರಾಮ ಕನಿಷ್ಠ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಗ್ರಾಮದ ಸರ್ವೇ ನಂ.1179 ರಿಂದ 1182 ರ ಕರಾಬು ಜಾಗದಲ್ಲಿ ಕಳೆದ 40 ವರ್ಷಗಳಿಂದ ಜನರು ನೆಲೆಸಿದ್ದು, ಕೇವಲ 30 ಕುಟುಂಬಗಳಿಗೆ ಮಾತ್ರ ನಿವೇಶನ ನೀಡಲಾಗಿದೆ. ಇನ್ನುಳಿದ 50 ರಿಂದ 60 ಬಡಕುಟುಂಬಗಳಿಗೆ ವಿತರಿಸಿಲ್ಲ. ಸ್ವಂತ ಸ್ಥಳವಿಲ್ಲದೆ ಈಗಲೂ ಜನರು ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಸರ್ವೇ ನಂ 13, 14ರಲ್ಲಿರುವ 35 ಗುಂಟೆ ಸರ್ಕಾರಿ ಜಾಗವನ್ನು ಪ್ರಭಾವಿ ವ್ಯಕ್ತಿ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

    ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಎಂ.ವಿ.ರೂಪಾ ಮಾತನಾಡಿ , ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನಿಡಿದರು. ಬಳಿಕ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.
    ರಾಧಮ್ಮ, ಸತ್ಯಮ್ಮ, ಮುಬೀನ್ ತಾಜ್, ಮುಬಾರಕ್ ಭಾನು, ರಾಣಿ, ಪದ್ಮಾ, ಸಿದ್ದಮ್ಮ, ನಿಸಾರ್ ಅಹಮದ್, ಅಪ್ಪು, ಗಣೇಶ, ನಾಗರಾಜ, ಹೇಮಂತ್ ಕುಮಾರ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts