ದಸರಾದಲ್ಲಿ ಸ್ತಬ್ಧಚಿತ್ರ, ಸಾಕುಪ್ರಾಣಿಗಳ ಪ್ರದರ್ಶ

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ನಡೆಯಲಿರುವ ಪಾರಂಪರಿಕ ದಸರೆಯಲ್ಲಿ ಈ ಬಾರಿ ಪಶು ಇಲಾಖೆಯಿಂದ ಆಕರ್ಷಣೀಯ ಸ್ತಬ್ಧಚಿತ್ರ ಹಾಗೂ ಸಾಕುಪ್ರಾಣಿಗಳ ಪ್ರದರ್ಶನಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಲಹೆ ನೀಡುವಂತೆ ಅಧಿಕಾರಿಗಳೊಂದಿಗೆ ಜಿಲ್ಲಾ ಪಶು ಇಲಾಖೆ ಉಪನಿರ್ದೆಶಕ ಪದ್ಮನಾಭ್ ಚರ್ಚಿಸಿದರು.

ಪಟ್ಟಣದ ಪಶುಇಲಾಖೆ ಕಚೇರಿಗೆ ಬುಧವಾರ ಭೇಟಿ ನೀಡಿದ ಅವರು, ಕಚೇರಿಯ ಸಹಾಯಕ ನಿರ್ದೇಶಕ ಡಾ.ಮೋಹನ್ ಹಾಗೂ ಇತರ ಪಶು ವೈದ್ಯರೊಂದಿಗೆ ಚರ್ಚಿಸಿ ಮಾತನಾಡಿದರು.

ಈ ಬಾರಿ ದಸರಾ ಕಾರ್ಯಕ್ರಮದಲ್ಲಿ ಇಲಾಖೆಯಿಂದ ರೈತರು, ಸಾಕುಪ್ರಾಣಿ ಮಾಲೀಕರು ಮತ್ತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಆಕರ್ಷಣೀಯ ಸ್ತಬ್ಧಚಿತ್ರ, ವಿವಿಧ ತಳಿಗಳ ನಾಯಿಗಳು, ದೇಸಿ ತಳಿಯ ಹಸು ಮತ್ತು ಎತ್ತುಗಳು ಸೇರಿ ಇತರ ಸಾಕು ಪ್ರಾಣಿಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ಪಶು ಇಲಾಖೆಯ ಸಿನಿಯರ್ ಇನ್ಸ್‌ಪೆಕ್ಟರ್ ಶಾಂತಮೂರ್ತಿ, ಡಾ.ರಾಘವೇಂದ್ರ, ಕೆ.ಶೆಟ್ಟಹಳ್ಳಿ, ವೈದ್ಯ ಡಾ.ರಮೇಶ್, ನಗುವನಹಳ್ಳಿ ವೈದ್ಯ ಪುಟ್ಟರಾಜು, ಚಿಕ್ಕಂಕನಹಳ್ಳಿ ವೈದ್ಯೆ ಡಾ.ಸುಧಾ, ಗಾಮನಹಳ್ಳಿ ವೈದ್ಯೆ ಡಾ.ಸಹನಾ, ಮಹದೇವಪುರ ವೈದ್ಯ ಡಾ.ಸಿದ್ದೇಶ್ ಹಾಗೂ ಸಿಬ್ಬಂದಿ ಹಾಜರಿದ್ದರು.

Leave a Reply

Your email address will not be published. Required fields are marked *