ಹಾಲಿ, ಮಾಜಿ ಸಿಎಂ ವಿರುದ್ಧ ಶ್ರೀರಾಮುಲು ಆರೋಪ

ಬಳ್ಳಾರಿ: ಸಿಎಂ ಕುಮಾಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯರು ಕುತಂತ್ರದ ರಾಜಕಾರಣ ಮಾಡಿ, ಬಿಜೆಪಿಯನ್ನ ಕಟ್ಟಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಮೊಳಕಲ್ಮೂರು ಶಾಸಕ ಬಿ.ಶ್ರೀರಾಮುಲು ಆರೋಪಿಸಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆಡಿಯೋ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಪಕ್ಷದಿಂದ ಒತ್ತಾಯಿಸಲಾಗಿದೆ. ಆದರೆ, ಇದನ್ನು ಎಸ್‌ಐಟಿಗೆ ನೀಡಿದರೆ ನಮಗೆ ನ್ಯಾಯ ಸಿಗಲ್ಲ. ಸಿಎಂ ಕುಮಾರಸ್ವಾಮಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಸದನಕ್ಕೆ ಅವಮಾನವಾಗಿದೆ ಎನ್ನುವ ಸಿದ್ದರಾಮಯ್ಯ, ಈ ಹಿಂದೆ ತಾವೇ ಮಾಡಿದ್ದ ಕೆಲಸಗಳನ್ನು ನೆನಪಿಸಿಕೊಳ್ಳಲಿ. ಈ ಹಿಂದೆ ಸದನದಲ್ಲಿ ಮೈಕ್ ಮುರಿದು, ಬಾಗಿಲು ಒದೆಯುವ ಮೂಲಕ ಸಿದ್ದರಾಮಯ್ಯರು ಸದನಕ್ಕೆ ಅವಮಾನ ಮಾಡಿದ್ದರು. ಕಮಿಷನರ್ ಶಂಕರ್ ಬಿದರಿ ಕೊರಳು ಪಟ್ಟಿ ಹಿಡಿದು ಅಗೌರವ ತೋರಿದ್ದರು. ಅಂತಹ ಎಲ್ಲ ಘಟನೆಗಳನ್ನು ತನಿಖೆಗೆ ಒಳಪಡಿಸಬೇಕು ಎಂದರು.