18 C
Bengaluru
Monday, January 20, 2020

ಜ್ಞಾನದ ತವನಿಧಿ ಶ್ರೀಪತಿ ಪಂಡಿತಾರಾಧ್ಯರು

Latest News

FasTag ರಿಯಾಲಿಟಿ | ಹೆಸರು ಫಾಸ್ಟ್ ಕೆಲಸ ಸ್ಲೋ..

ರಾಷ್ಟ್ರೀಯ ಹೆದ್ದಾರಿಯಲ್ಲಿನ ಟೋಲ್​ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಫಾಸ್ಟ್ಯಾಗ್ ಮೂಲಕ ಟೋಲ್ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮೂರು ಬಾರಿ ಗಡುವು ವಿಸ್ತರಿಸಿ ಕೊನೆಗೆ...

ವೇದ ದರ್ಶನ 91 | ವಿಷ್ಣುವೇ ದೇವತಾಸಾರ್ವಭೌಮ

ಎಲ್ಲ ದೇವತೆಗಳೂ ಭಗವಂತನ ಮುಖಗಳೆಂಬುದು ನಿಜವಾದರೂ ಈ ಮುಖಗಳಲ್ಲಿ ಯಾವುದು ಮುಖ್ಯ ಎಂಬ ಗೊಂದಲದ ಪ್ರಶ್ನೆ ಒಮ್ಮೊಮ್ಮೆ ಏಳುತ್ತದೆ. ಇದು ಸರಿಯಾಗಿರಲಿ, ಇಲ್ಲದಿರಲಿ,...

ಯೋಧನ ಮದುವೆಗೆ ಅಡ್ಡಿಪಡಿಸಿದ ಭಾರೀ ಹಿಮಪಾತದ

ಶ್ರೀನಗರ: ಜಮ್ಮು- ಕಾಶ್ಮೀರದಲ್ಲಿ ಸುರಿಯುತ್ತಿರುವ ಭಾರೀ ಹಿಮಪಾತದಲ್ಲಿ ಸಿಲುಕಿಕೊಂಡ ಯೋಧನೋರ್ವ ತನ್ನ ಮದುವೆಯನ್ನೇ ತಪ್ಪಿಸಿಕೊಂಡಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಪಟ್ಟಣದ ನಿವಾಸಿ ಸುನಿಲ್ ಕಳೆದ...

ಯೋಗವಾಸಿಷ್ಠ 211| ಐದು ಮಹಾಭೂತಗಳ ಸೃಷ್ಟಿಯಾದ ನಂತರ ಬ್ರಹ್ಮಾಂಡದ ಸೃಷ್ಟಿ (3.12.24ರಿಂದ 29)

ಪ್ರಳಯ ಆಖ್ಯಾಯಿಕೆಯ (ಪ್ರಳಯಾವಸ್ಥೆಯ ನಿರೂಪಣೆ) ನಂತರ ಸೃಷ್ಟಿ ಆಖ್ಯಾಯಿಕೆಯನ್ನು ಪ್ರಾರಂಭಿಸಿದ ಶ್ರೀ ವಸಿಷ್ಠರು ಈ ಹಿಂದೆ ಈಶ್ವರ-ಜೀವಗಳ ಆವಿರ್ಭಾವ, ಆಕಾಶ, ಅಹಂಕಾರ, ಆಕಾಶತನ್ಮಾತ್ರೆ,...

ಇಂದಿನಿಂದ ಆಸ್ಟ್ರೇಲಿಯನ್ ಓಪನ್: ಪುರುಷರ ಟೆನಿಸ್​ನಲ್ಲಿ ಬಿಗ್ ಥ್ರೀ ಪ್ರಾಬಲ್ಯಕ್ಕೆ ಬೀಳಲಿದೆಯೇ ಕೊನೆ?

ಮೆಲ್ಬೋರ್ನ್: ಇದು ಹೊಸ ದಶಕದ ಆರಂಭವಿರಬಹುದು. ಆದರೆ, ಟೆನಿಸ್ ಜಗತ್ತಿನ ಹೊಸ ದಶಕದ ಆರಂಭವೆಂದು ಅನಿಸುವುದಿಲ್ಲ. 21ರ ದಶಕದ ಮೊಟ್ಟ ಮೊದಲ ಗ್ರಾಂಡ್...

| ಪ್ರಶಾಂತ ರಿಪ್ಪನ್​ಪೇಟೆ, 

ಭಾರತೀಯ ಇತಿಹಾಸದಲ್ಲಿ ಹಲವಾರು ಆಚಾರ್ಯರು, ಸಂತ-ಮಹಾಂತರು, ಶರಣಶ್ರೇಷ್ಠರು, ಋಷಿ-ಮುನಿಗಳು ತಮ್ಮ ಅಧ್ಯಾತ್ಮಸಾಧನೆ ಹಾಗೂ ಅನುಷ್ಠಾನಬಲದಿಂದ ಜಗತ್ತಿಗೆ ಜ್ಞಾನಸಂಪತ್ತನ್ನು ನೀಡಿದ್ದಾರೆ. ಈ ಕಾರಣಕ್ಕಾಗಿಯೇ ಗುರುವಿಗಿಂತ ಅಧಿಕರು ಯಾರೂ ಇಲ್ಲ ಎಂಬ ಮಾತಿದೆ. ಅದರಲ್ಲೂ ವೀರಶೈವಸಿದ್ಧಾಂತದಲ್ಲಿ ಗುರುವಿಗೆ ಭಗವಂತನಿಗಿಂತ ಹೆಚ್ಚಿನ ಸ್ಥಾನವನ್ನು ನೀಡಲಾಗಿದೆ. ಕಾರಣ ಶಿಷ್ಯನಿಗೆ ಸಂಸ್ಕಾರ ನೀಡಿ ಶಿವನ ದರ್ಶನ ಮಾಡಿಸುವ ಮೂಲಕ ಭಕ್ತನನ್ನು ಭಗವಂತನಾಗಿಸುವ ಶಕ್ತಿ ಗುರುವಿನಲ್ಲಿದೆ.

ಗುರು ಎಂದರೆ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಸುಜ್ಞಾನದ ಬೆಳಕನ್ನು ನೀಡುವ ಚೈತನ್ಯಶಕ್ತಿ. ಅಂತಹ ವೀರಶೈವ ಗುರುಪರಂಪರೆಯಲ್ಲಿ ಜ್ಞಾನದ ತವನಿಧಿಯಾಗಿ ಶ್ರೇಷ್ಠ ಸಾಹಿತ್ಯಭಂಡಾರವನ್ನು ಜಗತ್ತಿಗೆ ನೀಡಿದವರು ಜಗದ್ಗುರು ಶ್ರೀ ಶ್ರೀಪತಿ ಪಂಡಿತಾರಾಧ್ಯರು. ಶ್ರೀಶೈಲ ಪೀಠದ ನಾಲ್ಕನೆಯ ಜಗದ್ಗುರುಗಳಾಗಿದ್ದ ಶ್ರೀಪತಿ ಪಂಡಿತಾರಾಧ್ಯರು ರಚಿಸಿದ ಶ್ರೀಕರ ಭಾಷ್ಯವು ವೀರಶೈವಸಿದ್ಧಾಂತವನ್ನು ಪ್ರತಿಪಾದಿಸುವ ಅತ್ಯಂತ ಪ್ರಾಚೀನ ಶಾಸ್ತ್ರಗ್ರಂಥ. ಪುರಾತನ ಧಾರ್ವಿುಕಗ್ರಂಥಗಳನ್ನು ಶ್ರುತಿ, ಗೀತೆ, ಸೂತ್ರ, ಪುರಾಣ ಎಂಬುದಾಗಿ ವಿಭಾಗಿಸಲಾಗುತ್ತದೆ. ಇದರಲ್ಲಿ ಶ್ರೀಕರಭಾಷ್ಯವು ಸೂತ್ರಗ್ರಂಥ.

ಭಾರತೀಯ ಧಾರ್ವಿುಕಸಾಹಿತ್ಯಕ್ಕೆ ಅತ್ಯಂತ ಪುರಾತನ ಆಧಾರವೆಂದರೆ; ವೇದಾಗಮಗಳು. ಅವುಗಳನ್ನು ವಿಷಯಾಧಾರಿತವಾಗಿ ಶಾಖೆ, ಸೀಮೆ ಎಂಬಿತ್ಯಾದಿಯಾಗಿ ವಿಭಾಗಿಸಿ, ಆಳ ಅರ್ಥವನ್ನು ಒಳಗೊಂಡ ಸೂತ್ರರೂಪದಲ್ಲಿ ಬರೆದವರು ವ್ಯಾಸರು. ಹಾಗೆ ವ್ಯಾಸರು ಬರೆದಿರುವ ಗ್ರಂಥವೇ ‘ಬ್ರಹ್ಮಸೂತ್ರ’. ಈ ಗ್ರಂಥವನ್ನು ಬಾದರಾಯಣ ಬ್ರಹ್ಮಸೂತ್ರ ಎಂದು ಕರೆಯುತ್ತಾರೆ. ಬ್ರಹ್ಮಸೂತ್ರಕ್ಕೆ ಹಲವು ಆಚಾರ್ಯರು ತಮ್ಮ ಸಿದ್ಧಾಂತಪರವಾದ ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಶ್ರೀಪತಿ ಪಂಡಿತಾರಾಧ್ಯರು ಬ್ರಹ್ಮಸೂತ್ರಕ್ಕೆ ವೀರಶೈವಸಿದ್ಧಾಂತ ಪರವಾಗಿ ಬರೆದ ವ್ಯಾಖ್ಯಾನವೇ ಶ್ರೀಕರಭಾಷ್ಯ. ವೇದಾಗಮಗಳ ಕರ್ತೃ ಸಾಕ್ಷಾತ್ ಪರಶಿವ. ಪರಮಾತ್ಮನಿಂದ ಸೃಷ್ಟಿಯಾಗಿರುವ ಈ ಜಗತ್ತಿನಲ್ಲಿ ಪರಮಾತ್ಮನ ಅಂಶವೇ ಆಗಿರುವ ಜೀವಾತ್ಮನು ಮಾಡಬೇಕಾದ ಸಾಧನೆಗೆ ಬೇಕಾದ ಸುಲಭಮಾರ್ಗವು ಈ ಸೂತ್ರಗಳಲ್ಲಿದೆ. ಆ ಕಾರಣಕ್ಕೆ ಶ್ರೀಪತಿ ಪಂಡಿತಾರಾಧ್ಯರ ಶ್ರೀಕರಭಾಷ್ಯವು ವೀರಶೈವ ಸಾಹಿತ್ಯದಲ್ಲೇ ಅತ್ಯಂತ ಮೇರುಕೃತಿ ಎಂದು ಪರಿಗಣಿಸಲ್ಪಡುತ್ತದೆ. ಈ ಕೃತಿಯು ಕ್ರಿ.ಶ. 1060ರ ಆಸುಪಾಸಿನಲ್ಲಿ ರಚನೆಯಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯ.

ಅಂದಿನ ಬೆಜವಾಡ ನಗರದ (ವಿಜಯವಾಡ) ಸಮೀಪದಲ್ಲಿರುವ ಜಿಮ್ಮಿದೊಡ್ಡಿ ಎಂಬಲ್ಲಿ ಕುಳಿತು ಈ ಗ್ರಂಥವನ್ನು ರಚಿಸಿದ್ದು, ಅಲ್ಲೇ ಸಮೀಪದ ಮಲ್ಲೇಶ್ವರ ದೇವಾಲಯದ ಶಮೀವೃಕ್ಷಕ್ಕೆ ರೇಷ್ಮೆವಸ್ತ್ರದಲ್ಲಿ ಅಗ್ನಿಯನ್ನು ಕಟ್ಟಿ ಶಿವಭಕ್ತರ ಶಕ್ತಿಯನ್ನು ತೋರಿಸಿದ್ದರು. ಆ ಅಗ್ನಿಸ್ತಂಭನ ಪವಾಡವು ಪಲ್ಲಕೇತು ಎಂಬ ರಾಜನ ಶಿಲಾಶಾಸನದಲ್ಲಿ ಉಲ್ಲೇಖಿಸಲ್ಪಟ್ಟಿದೆ ಹಾಗೂ ತೆಲುಗಿನ ಆದಿಕವಿ ಪಾಲ್ಕುರಿಕೆ ಸೋಮನಾಥನ ಬಸವಪುರಾಣ ಗ್ರಂಥದಲ್ಲೂ ಉಲ್ಲೇಖಗೊಂಡಿದೆ.

ಬೆಂಗಳೂರು ಮುದ್ರಣಾಲಯದಿಂದ 1939-40ರಲ್ಲಿ ಮೊದಲ ಬಾರಿ ಪ್ರಕಟಗೊಂಡಿದ್ದ ಶ್ರೀಕರಭಾಷ್ಯವು, 1970-71ರಲ್ಲಿ ಮೈಸೂರಿನ ಓರಿಯಂಟಲ್ ಪ್ರೆಸ್​ನಿಂದ ಎರಡು ಸಂಪುಟಗಳಲ್ಲಿ ಮರುಮುದ್ರಣಗೊಂಡಿದೆ.

‘ಶ್ರೀಪತಿ’ ಪೌರ್ಣಿಮೆ ಮಹೋತ್ಸವ

ಆಂಧ್ರಪ್ರದೇಶದ ಇತಿಹಾಸದಲ್ಲಿ ಬರುವ ಪಂಡಿತತ್ರಯರಲ್ಲಿ ಶ್ರೀಪತಿ ಪಂಡಿತಾರಾಧ್ಯರು ಪ್ರಮುಖರು. ಜಗದ್ಗುರು ಶ್ರೀ ಮಂಚಣ ಪಂಡಿತಾರಾಧ್ಯರು, ಜಗದ್ಗುರು ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಇನ್ನೀರ್ವ ಪಂಡಿತರು. ಸಾಹಿತ್ಯಿಕ ದೃಷ್ಟಿಯಿಂದ ಶ್ರೀಪತಿ ಪಂಡಿತಾರಾಧ್ಯರನ್ನು ವೀರಶೈವ ವ್ಯಾಸರೆಂದು ಕರೆಯಬಹುದು. ಭಾರತೀಯ ಧಾರ್ವಿುಕಸಾಹಿತ್ಯದಲ್ಲಿ ವ್ಯಾಸರ ಹೆಸರು ಎಲ್ಲ ಹಂತಗಳಲ್ಲೂ ಉಲ್ಲೇಖಗೊಂಡಿದೆ. ವೇದ-ಆಗಮಗಳಿಗೆ ಸೂತ್ರಗಳು, ಹದಿನೆಂಟು ಪುರಾಣಗಳ – ಹೀಗೆ ಇಡೀ ಜಗತ್ತಿಗೆ ಅತಿ ಹೆಚ್ಚು ಜ್ಞಾನವನ್ನು ನೀಡಿದ್ದಾರೆಂಬ ಕಾರಣಕ್ಕಾಗಿ ಗುರು ಎಂಬ ಪದಕ್ಕೆ ಪರ್ಯಾಯವಾಗಿ ವ್ಯಾಸರ ಹೆಸರನ್ನು ಉಲ್ಲೇಖಿಸಲಾಗುತ್ತದೆ. ಆದ್ದರಿಂದಲೇ ಗುರುಪೂರ್ಣಿಮೆಯನ್ನು ‘ವ್ಯಾಸಪೌರ್ಣಿಮೆ’ ಎಂದು ಆಚರಿಸಲಾಗುತ್ತದೆ.

ವ್ಯಾಸರು ವೇದ, ಉಪನಿಷತ್ತು-ಆಗಮಗಳನ್ನು ನಿಯಮಬದ್ಧವಾದ ಸೂತ್ರಗಳ ಮೂಲಕ ಜಗತ್ತಿಗೆ ಕೊಟ್ಟ ಜ್ಞಾನ ಭಂಡಾರವೇ ‘ಬ್ರಹ್ಮಸೂತ್ರ’. ಅಂತಹ ಬಾದರಾಯಣಕೃತ ಬ್ರಹ್ಮಸೂತ್ರಕ್ಕೆ ಭಾಷ್ಯವನ್ನು ಬರೆಯುವ ಮೂಲಕ ವೀರಶೈವ ಪರವಾಗಿ ವೇದಾಗಮವನ್ನು ವ್ಯಾಖ್ಯಾನಿಸಿದ ಶ್ರೀಪತಿ ಪಂಡಿತಾರಾಧ್ಯರ ‘ಶ್ರೀಕರ ಭಾಷ್ಯ’ವು ವೀರಶೈವಪರವಾದ ಪ್ರಾಚೀನ ಗ್ರಂಥ. ಆದ್ದರಿಂದ ಗುರುಪೂರ್ಣಿಮೆಯನ್ನು ವೀರಶೈವರು ಶ್ರೀಪತಿ ಪೌರ್ಣಿಮೆ ಎಂದು ಆಚರಿಸುತ್ತಾರೆ.

ಆಧ್ಯಾತ್ಮಿಕ ಆಶೀರ್ವಚನ ಸಮಾರಂಭ: ಗುರುಪೂರ್ಣಿಮೆಯ ಅಂಗವಾಗಿ ಪ್ರತಿವರ್ಷದಂತೆ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರ ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಸಮಾರಂಭವು ಇದೇ ಜು. 11ರಿಂದ ಜು.16ರವರೆಗೆ ನಡೆಯಲಿದೆ. ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಪ್ರತಿನಿತ್ಯ ಮುಂಜಾನೆ ಇಷ್ಟಲಿಂಗ ಮಹಾಪೂಜೆ ಹಾಗೂ ಸಂಜೆ ಪ್ರವಚನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಶ್ರೀಪತಿ ಪಂಡಿತಾರಾಧ್ಯರ ಶ್ರೀಕರ ಭಾಷ್ಯದಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿಯ ಉಲ್ಲೇಖ ಇರುವುದರಿಂದ ಅದು ಹತ್ತನೆಯ ಶತಮಾನಕ್ಕಿಂತ ಹಿಂದಿನ ಗ್ರಂಥ ಎಂಬುದು ಸಾಬೀತಾಗುತ್ತದೆ. ಅಂತಹ ಶ್ರೀ ಸಿದ್ಧಾಂತ ಶಿಖಾಮಣಿಯ ಆಶೀರ್ವಚನವನ್ನು ಕಳೆದ ಎಂಟು ವರ್ಷಗಳಿಂದ ಶ್ರೀಶೈಲ ಜಗದ್ಗುರುಗಳು ಪ್ರತಿವರ್ಷ ಬೆಂಗಳೂರಿನಲ್ಲಿ ನಡೆಸಿಕೊಂಡು ಬಂದಿದ್ದಾರೆ. ಸಮಾರಂಭ ನಡೆಯುವ ಆರು ದಿನಗಳ ಕಾಲ ಪ್ರತಿನಿತ್ಯ ವಿವಿಧ ಪುಸ್ತಕಗಳ ಲೋಕಾರ್ಪಣೆ, ಸಮಾಜದ ವಿವಿಧ ಕ್ಷೇತ್ರದ ಗಣ್ಯರಿಗೆ ಜಗದ್ಗುರುಗಳು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ‘ಶ್ರೀಪತಿ ಪೌರ್ಣಿಮೆ’ಯ ಅಂಗವಾಗಿ ಜು. 16ರಂದು ಜಗದ್ಗುರು ಶ್ರೀ ಶ್ರೀಪತಿ ಪಂಡಿತಾರಾಧ್ಯರ ಜಯಂತಿ ಮಹೋತ್ಸವ ಹಾಗೂ ಗುರುವಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...