ಶ್ರೀನಿವಾಸಪ್ರಸಾದ್ ಬದುಕು ರಾಜಕಾರಣಿಗಳಿಗೆ ಆದರ್ಶ

blank

ಮೈಸೂರು: ವಿ.ಶ್ರೀನಿವಾಸಪ್ರಸಾದ್ ಅವರ ಜೀವನ, ಆದರ್ಶ ಎಲ್ಲ ಪಕ್ಷದ ರಾಜಕಾರಣಿಗಳಿಗೆ ಸ್ಫೂರ್ತಿ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಮೈಸೂರು ತಾಲೂಕಿನ ನಾಡನಹಳ್ಳಿ ಬಳಿ ಇರುವ ಶ್ರೀಲಕ್ಷ್ಮೀಕಲ್ಯಾಣ ಮಂಟಪದಲ್ಲಿ ವರುಣಾ ಬ್ಲಾಕ್ ಕಾಂಗ್ರೆಸ್‌ನಿಂದ ಶುಕ್ರವಾರ ಆಯೋಜಿಸಿದ್ದ ದಿ. ವಿ. ಶ್ರೀನಿವಾಸ್ ಪ್ರಸಾದ್‌ಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಸ್ವಾಭಿಮಾನಿ ರಾಜಕಾರಣಿಯಾಗಿದ್ದರು. ತಮ್ಮ 50 ವರ್ಷದ ರಾಜಕಾರಣದಲ್ಲಿ ಪಕ್ಷಾತೀತವಾಗಿ ಎಲ್ಲ ರಾಜಕಾರಣಿಗಳು ಅಪಾರ ಗೌರವ ಇಟ್ಟುಕೊಳ್ಳುವಂತೆ ಬದುಕಿದ್ದರು. ಜನರ ಮಧ್ಯೆ ಇದ್ದು, ಜನರ ಪ್ರೀತಿಗೆ ಪಾತ್ರರಾಗಿ ಅಪಾರ ಜನಮನ್ನಣೆ ಗಳಿಸಿದ ಅಪರೂಪ ರಾಜಕಾರಣಿ ಎಂದು ಬಣ್ಣಿಸಿದರು.
ದಲಿತ, ಹಿಂದುಳಿದ ವರ್ಗದ ದೊಡ್ಡಶಕ್ತಿಯಾಗಿದ್ದರೂ ಎಲ್ಲಿಯೇ ಅನ್ಯಾಯ ಕಂಡು ಬಂದರೂ ಅದರ ವಿರುದ್ಧ ಹೋರಾಟ ಮಾಡುತ್ತಾ ಸ್ವಾಭಿಮಾನದಿಂದ ಬದುಕಬೇಕು ಎಂದು ಹೇಳುತ್ತಿದ್ದರು. ಅವರ ಜೀವನ, ಆದರ್ಶ ಎಲ್ಲ್ಲ ಪಕ್ಷದ ಯುವ ರಾಜಕಾರಣಿಗಳಿಗೆ ಸ್ಫೂರ್ತಿಯಾಗಬೇಕು. ಅವರ ನೆನಪು ಶಾಶ್ವತವಾಗಿ ಉಳಿಯುವಂತಹ ಕೆಲಸವನ್ನು ಸರ್ಕಾರ ಮಾಡಬೇಕು ಎಂದರು.
ಸಿದ್ದರಾಮಯ್ಯ ಹಾಗೂ ಶ್ರೀನಿವಾಸ್‌ಪ್ರಸಾದ್ ಅವರಿಗೆ ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಸಹ ಒಳ್ಳೆಯ ಸ್ನೇಹಿತರಾಗಿದ್ದರು. ಶ್ರೀನಿವಾಸ್‌ಪ್ರಸಾದ್ ಅವರ ಬಗ್ಗೆ ಸಿದ್ದರಾಮಯ್ಯ ಅಪಾರ ಗೌರವ ಇಟ್ಟುಕೊಂಡಿದ್ದರು ಎಂದು ಹೇಳಿದರು.
ಬೌದ್ಧ ಧರ್ಮಗುರು ಬಂತೇಜಿ, ಉರುಲಿಂಗ ಪೆದ್ದಿಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ಮಲ್ಕುಂಡಿ ಮಹದೇವಸ್ವಾಮಿ ಮಾತನಾಡಿದರು.
ಮುಖಂಡರಾದ ಮಣಿಯಯ್ಯ, ರಂಗಸ್ವಾಮಿ, ರಮೇಶ ಮುದ್ದೇಗೌಡ, ಹೆಳವರಹುಂಡಿ ಸೋಮು, ಎಂ.ಟಿ. ರವಿಕುಮಾರ್, ಮಂಜುಳಾ ಮಂಜುನಾಥ್, ಮಹದೇವ್, ಜವರಪ್ಪ, ಸಕ್ಕಳ್ಳಿ ಬಸವರಾಜು, ಕನಕಮೂರ್ತಿ, ಹುಣಸೂರು ಬಸವಣ್ಣ, ಶಿವಸ್ವಾಮಿ, ನಾಗರಾಜ್ ಇತರರಿದ್ದರು.

Share This Article

Night Shift Work : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೀರಾ?ಹಾಗಿದ್ರೆ ಈ ಸುದ್ದಿ ನಿಮಗಾಗಿ..

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕಚೇರಿಗಳಲ್ಲಿ ರಾತ್ರಿ ಪಾಳಿಯಲ್ಲಿ (Night Shift Work) ಕೆಲಸ ಮಾಡುತ್ತಿದ್ದಾರೆ.…

ಈ 5 ಬಿಳಿ ಆಹಾರಗಳಿಂದ ದೂರವಿದ್ರೆ ನೀವು ಜೀವನಪೂರ್ತಿ ಆರೋಗ್ಯವಾಗಿರಬಹುದು! ಉಪಯುಕ್ತ ಮಾಹಿತಿ ಇಲ್ಲಿದೆ… White foods

White Foods : ಇತ್ತೀಚಿನ ದಿನಗಳಲ್ಲಿ ಅನೇಕರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆರೋಗ್ಯವಾಗಿರಬೇಕಾದರೆ ಆಹಾರದ…

ಪ್ರತಿನಿತ್ಯ 5 ನೆನೆಸಿದ ಗೋಡಂಬಿ ತಿಂದರೆ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ… Soaked Cashews

Soaked Cashews : ಡ್ರೈಫ್ರೂಟ್ಸ್​ ಗೋಡಂಬಿ ಅಂದರೆ ಬಹುತೇಕರಿಗೆ ಇಷ್ಟ. ಇದನ್ನು ಆರೋಗ್ಯ ಕಣಜ ಎಂದೇ…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ