More

  ಶ್ರೀನಿವಾಸಪ್ರಸಾದ್ ಸ್ವಾಭಿಮಾನಿ ಚಕ್ರವರ್ತಿ

  ಕೆ.ಆರ್.ನಗರ: ದಿ.ವಿ.ಶ್ರೀನಿವಾಸ ಪ್ರಸಾದ್ ಅವರು ಸ್ವಾಭಿಮಾನಿ ಚಕ್ರವರ್ತಿಯಾಗಿದ್ದು, ತಮ್ಮ ಅಧಿಕಾರವನ್ನು ಬಡವರ ಅಭಿವೃದ್ಧಿಗೆ ಬಳಸಿದರು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸ್ಮರಿಸಿದರು.

  ಪಟ್ಟಣದ ಎಚ್.ಡಿ.ದೇವೆಗೌಡ ಸಮುದಾಯ ಭವನದಲ್ಲಿ ಮಂಗಳವಾರ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ಜೆಡಿಎಸ್ ಪಕ್ಷ ಮತ್ತು ವಿ.ಶ್ರೀನಿವಾಸ ಪ್ರಸಾದ್ ಅಭಿಮಾನಿಗಳ ವತಿಯಿಂದ ಏರ್ಪಡಿಸಿದ್ದ ನಾಡು ಕಂಡ ಅಪರೂಪದ ಹಿರಿಯ ಮುತ್ಸದ್ದಿ ರಾಜಕಾರಣಿ, ಧೀಮಂತ ನಾಯಕ ವಿ.ಶ್ರೀನಿವಾಸಪ್ರಸಾದ್ ಅವರ ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.

  ಶ್ರೀನಿವಾಸ ಪ್ರಸಾದ್ ಮತ್ತು ನನ್ನ ಸಂಬಂಧ 50 ವರ್ಷಗಳ ಹಿಂದಿನದು. ಅವರು ದಲಿತ ಚಳುವಳಿ, ಕಾರ್ಮಿಕ ಚಳುವಳಿ, ವಿದ್ಯಾರ್ಥಿ ಚಳುವಳಿಗಳಿಂದ ಬಂದವರು. ಮೈಸೂರಿನ ಕೃಷ್ಣಮೂರ್ತಿ ಪುರಂ ನಮ್ಮಂಥ ಅನೇಕರಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಿಕೊಟ್ಟಿದೆ ಎಂದು ತಿಳಿಸಿದರು.

  ಮುನಷ್ಯ ಸಂಸ್ಕಾರ ಕಲಿಯಬೇಕು. ಸಂಸ್ಕಾರ ವಿದ್ಯೆ, ಅನುಭವ, ಬೆಳೆದು ಬಂದ ವಾತವರಣದಿಂದ ಬರಲಿದೆ. ಆದರೆ ಇಂದಿನ ರಾಜಕಾರಣಿಗಳಿಗೆ ಯಾವುದೇ ತತ್ವ, ಸಿದ್ಧ್ದಾಂತ ಇಲ್ಲದೇ ಕೇವಲ ಒಬ್ಬರನ್ನೊಬ್ಬರು ಹಿಯಾಳಿಸುತ್ತಾ ಬೈಯ್ಯುವ ಮೂಲಕ ಆಡಳಿತ ನಡೆಸುತ್ತಿದ್ದಾರೆ. ಹಿರಿಯರು, ಅನುಭವಿಗಳ ಸಲಹೆ ಪಡೆಯುತ್ತಿಲ್ಲ. ಪ್ರಸ್ತುತ ರಾಜಕಾರಣಿಗಳಿಗೆ ಶ್ರೀನಿವಾಸಪ್ರಸಾದ್ ಅವರಂತಹವರು ಮಾದರಿ ಎಂದರು.

  ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿಯೊಂದು ಸಮಾಜದವರಿಗೆ ಸ್ವಾತಂತ್ರ್ಯ, ಸಮಾನತೆ ಹಾಗೂ ಸ್ವಾಭಿಮಾನದ ಹಕ್ಕುಗಳನ್ನು ನೀಡಿದ್ದು, ಪ್ರತಿಯೊಬ್ಬರು ವಿದ್ಯಾವಂತರಾಗಬೇಕು. ಅವರ ದಾರಿಯಲ್ಲೇ ನಡೆದ ಸ್ವಾಭಿಮಾನಿ ಶ್ರೀನಿವಾಸಪ್ರಸಾದ್ ಅವರ ನೆನಪಿನಲ್ಲಿ ನಾವೆಲ್ಲಾ ನಡೆಯೋಣ ಎಂದು ಕರೆ ನೀಡಿದರು. ಮುಖಂಡ ಹನಸೋಗೆ ನಾಗರಾಜ್, ವಕೀಲ ತಿಮ್ಮಪ್ಪ ಮಾತನಾಡಿದರು.

  ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷೆ ಭಾಗ್ಯಾ ಶಂಕರ್, ಮಾಜಿ ಸದಸ್ಯರಾದ ಹಂಗರಬಾಯನಹಳ್ಳಿ ತಮ್ಮಣ್ಣ, ರಾಮಪ್ಪ, ಶ್ರೀನಿವಾಸಪ್ರಸಾದ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಯುವ ಜೆಡಿಎಸ್ ಅಧ್ಯಕ್ಷ ಹಂಪಾಪುರ ಸುರೇಶ್, ಮುಖಂಡರಾದ ವಿಜಯ್, ಅಶೋಕ್ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts