ಶ್ರೀ ಮಲಹಾನಿಕರೇಶ್ವರಸಾಮಿ ಮಹಾ ರಥೋತ್ಸವ

ಶೃಂಗೇರಿ: ಶ್ರೀ ಮಲಹಾನಿಕರೇಶ್ವರ ಸ್ವಾಮಿ ಮಹಾ ರಥೋತ್ಸವ ಬುಧವಾರ ಶೃಂಗೇರಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.

ಬೆಳಗ್ಗೆ 10.30ಕ್ಕೆ ಪಟ್ಟಣದ ಶ್ರೀ ಮಲಹಾನಿಕರೇಶ್ವರ ದೇವಾಲಯಕ್ಕೆ ಶ್ರೀಮಠದ ಕಿರಿಯ ಶ್ರೀ ಜಗದ್ಗುರು ಶ್ರೀ ವಿಧುಶೇಖರಭಾರತೀ ಅವರು ಆಗಮಿಸಿದರು. ಮಹಾಮಂಗಳಾರತಿ ಧಾರ್ವಿುಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀಗಳು ಭಕ್ತರು ಕೋರಿಕೆಯಂತೆ ಉತ್ಸವ ಮೂರ್ತಿಯ ಜೊತೆ ಸಾಗಿ ಬಂದರು.

ಮುಖ್ಯಬೀದಿಯಲ್ಲಿ ಸಾಗಿ ಬಂದ ಮಹಾರಥೋತ್ಸವದಲ್ಲಿ ಶ್ರೀಮಠದ ಆನೆಗಳು, ತಟ್ಟಿರಾಯಗಳು, ಛತ್ರಿಛಾಮರಗಳು, ರಂಗವಲ್ಲಿಯ ಚಿತ್ತಾರಗಳು, ರಸ್ತೆಯ ಇಕ್ಕೆಲೆಗಳಲ್ಲಿ ಹಾಕಲಾದ ತಳಿರುತೋರಣಗಳು ರಥೋತ್ಸವಕ್ಕೆ ಮೆರುಗು ನೀಡಿದವು. ಬಿರುಬಿಸಿಲಿನ ನಡುವೆ ರಥವನ್ನು ಎಳೆದು ತಾಲೂಕಿನ ಭಕ್ತರು ಕೃತಾರ್ಥರಾದರು. ಪಟ್ಟಣ ವಾಸಿಗಳು ಫಲಪುಷ್ಪಗಳನ್ನು ಸಮರ್ಪಿಸಿದರು. ಶ್ರೀಮಠದ ಅಧಿಕಾರಿಗಳಾದ ದಕ್ಷಿಣಾಮೂರ್ತಿ, ಶಿವಶಂಕರ್ ಭಟ್, ಪುರೋಹಿತರು ಹಾಜರಿದ್ದರು.