ವಿಧುಶೇಖರ ಶ್ರೀ ಪುರಪ್ರವೇಶ  

ಶೃಂಗೇರಿ: ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಮಾರ್ಗದರ್ಶನದಲ್ಲಿ 2018ರ ನ.5ರಿಂದ ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ಧರ್ಮವಿಜಯ ಯಾತ್ರೆ ಕೈಗೊಂಡಿದ್ದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಫೆ.27ರಂದು ಸಂಜೆ 6.30ಕ್ಕೆ ಪುರಪ್ರವೇಶ ಮಾಡುವರು. ಚಿತ್ರಾಪುರದಿಂದ ಆಗ್ರಮಿಸುವ ಅವರನ್ನು ಕಟ್ಟೆಬಾಗಿಲು ಗಣಪತಿ ದೇವಾಲಯದ ಎದುರು ಪಪಂ ಅಧ್ಯಕ್ಷರು, ಸದಸ್ಯರು, ಭಕ್ತರು ಪೂರ್ಣಕುಂಭದೊಂದಿಗೆ ಬರಮಾಡಿಕೊಳ್ಳುವರು. ತಳಿರುತೋರಣ, ಮಂಗಳವಾದ್ಯ ಮತ್ತು ಪಂಚವಾದ್ಯ, ಮಹಿಳೆಯರಿಂದ ಸಾಮೂಹಿಕ ಅಷ್ಟೋತ್ತರ ಪಠಣದೊಂದಿಗೆ ಶ್ರೀಗಳನ್ನು ಸ್ವಾಗತಿಸಲಾಗುವುದು.