ಶೃಂಗೇರಿ ಶ್ರೀ ವಿದ್ಯಾಶಂಕರ ರಥೋತ್ಸವ

ಶೃಂಗೇರಿ: ಶ್ರೀಮಠದ ವಿದ್ಯಾಶಂಕರ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು. ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ನೆರವೇರಿದ ರಥೋತ್ಸವದಲ್ಲಿ ಮಠದ ಸಿಬ್ಬಂದಿ, ಭಕ್ತರು ಭಾಗವಹಿಸಿದ್ದರು. ಮುಖ್ಯ ಬೀದಿಯಲ್ಲಿ ಹಾಕಿದ ರಂಗವಲ್ಲಿ, ಮಠದ ಲಾಂಛನಗಳು, ಆನೆಗಳು, ತಟ್ಟಿರಾಯಗಳು, ವೇದ ಹಾಗೂ ವಾದ್ಯಗೋಷ್ಠಿಗಳು ಉತ್ಸವಕ್ಕೆ ಮೆರುಗು ನೀಡಿದವು. ಜಗದ್ಗುರುಗಳಿಗೆ ಪಟ್ಟಣದ ಭಕ್ತರು ಫಲಪುಷ್ಪ ಸಮರ್ಪಿಸಿ ಆಶೀರ್ವಾದ ಪಡೆದರು.