ಶೃಂಗೇರಿ: ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಹಾಗೂ ಸಿಇಒ ಶ್ರೀಕೃಷ್ಣನ್ ಸೋಮವಾರ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀವಿಧುಶೇಖರಭಾರತೀ ಸ್ವಾಮೀಜಿ ದರ್ಶನ ಪಡೆದರು.
ಸಿಇಒ ಶ್ರೀಕೃಷ್ಣನ್ ಮಾತನಾಡಿ, ದೇಶಾದ್ಯಂತ ಬ್ಯಾಂಕ್‌ನ ಒಟ್ಟು 931 ಶಾಖೆಗಳು, 1506 ಎಟಿಎಂಗಳು ಕಾರ್ಯನಿರ್ವಹಿಸುತ್ತಿದ್ದು ವಾರ್ಷಿಕ ವ್ಯವಹಾರ 1ಲಕ್ಷದ 75 ಸಾವಿರ ಕೋಟಿ ವ್ಯವಹಾರ ನಡೆಸಿದ್ದೇವೆ. ವರ್ಷದಿಂದ ವರ್ಷಕ್ಕೆ ಉತ್ತಮ ಲಾಭಗಳಿಸುತ್ತಿದ್ದು 9000ಕ್ಕೂ ಮೇಲ್ಪಟ್ಟು ಸಿಬ್ಬಂದಿಗಳ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದೇವೆ. ಬ್ಯಾಂಕ್‌ನ ಭವಿಷ್ಯದ ಅಭಿವೃದ್ಧಿಗೆ ಜಗದ್ಗುರುಗಳ ಆಶೀರ್ವಾದ ನಿರಂತರವಾಗಿರಬೇಕು ಎಂದು ಪ್ರಾರ್ಥಿಸಿದರು.
ಸ್ಥಳೀಯ ಶಾರದಾ ಬ್ಯಾಂಕ್‌ನ್ನು ವಿಲೀನಕರಿಸಿಕೊಂಡು ಈ ಪ್ರಮಾಣದಲ್ಲಿ ಬೆಳೆದಿರುವ ಕರ್ಣಾಟಕ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಸಾಧಿಸಲಿ. ಬ್ಯಾಂಕ್‌ನಿಂದ ಜನಸಾಮಾನ್ಯರಿಗೆ ಉತ್ತಮ ಸೇವೆ ಸಿಗಲಿ ಎಂದು ಜಗದ್ಗುರು ಶ್ರೀ ವಿಧುಶೇಖರಭಾರತಿ ಸ್ವಾಮೀಜಿ ಹಾರೈಸಿ ಎಲ್ಲರನ್ನೂ ಆಶೀರ್ವದಿಸಿ ಲ ಮಂತ್ರಾಕ್ಷತೆಯನ್ನು ನೀಡಿದರು.
ಶ್ರೀಮಠದಿಂದ ನಡೆಯುತ್ತಿರುವ ಬೆಂಗಳೂರಿನ ಶ್ರೀರಂಗ ದೊರೈ ಆಸ್ಪತ್ರೆಗೆ ಸಲಕರಣೆ ಖರೀದಿಸಲು ಬ್ಯಾಂಕ್‌ಯಿಂದ 25 ಲಕ್ಷ ರೂ. ದೇಣಿಗೆಯಾಗಿ ನೀಡಲಾಯಿತು. ಶಾರದಾ ಪೀಠದ ಆಡಳಿತಾಧಿಕಾರಿ ಪಿ.ಎ.ಮುರುಳಿ, ಬ್ಯಾಂಕ್ ಮಹಾಪ್ರಬಂಧಕ ರವಿಚಂದ್ರನ್, ಜಯನಾಗರಾಜ ರಾವ್, ಶಿವಮೊಗ್ಗದ ಪ್ರಾದೇಶಿಕ ವ್ಯವಸ್ಥಾಪಕ ನಾಗರಾಜ್, ಸ್ಥಳೀಯ ಶಾಖಾ ವ್ಯವಸ್ಥಾಪಕರಾದ ಕಿರಣ್‌ಕುಮಾರ್, ಮನೋಜ್, ಶ್ರೀವತ್ಸ, ಬಾಲಗಂಗಾಧರ್, ನವೀನ್‌ಕುಮಾರ್ ಇದ್ದರು.
ಶೃಂಗೇರಿಗೆ ಕರ್ಣಾಟಕ ಬ್ಯಾಂಕ್ ಅಧ್ಯಕ್ಷರ ಭೇಟಿ
You Might Also Like
Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..
ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…
Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ
ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…
ಎಷ್ಟು ಪ್ರಮಾಣದಲ್ಲಿ ಉಪ್ಪು ಸೇವಿಸಿದ್ರೆ ಆರೋಗ್ಯಕ್ಕೆ ತುಂಬಾ ಡೇಂಜರ್? ಇಲ್ಲಿದೆ ಉಪಯುಕ್ತ ಮಾಹಿತಿ… Salt
ಊಟಕ್ಕೆ ಉಪ್ಪು ( Salt ) ತುಂಬಾನೇ ಅವಶ್ಯಕವಾಗಿದ್ದರೂ ಅದು ಆರೋಗ್ಯ ( Health )…