ರಸ್ತೆ ಅಭಿವೃದ್ಧಿ ಕಾಮಗಾರಿಗೆ ಆದ್ಯತೆ

ಶೃಂಗೇರಿ: ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಿದ್ದು ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ತಾಲೂಕಿನ ಗ್ರಾಮೀಣ ಹಾಗೂ ಪಟ್ಟಣದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಪಟ್ಟಣದ ಮಲ್ಲಿಕಾರ್ಜುನ ಬೀದಿಯನ್ನು ಕಾಂಕ್ರಿಟ್ ರಸ್ತೆಯಾಗಿ ಮಾಡುತ್ತಿದ್ದು ಇದಕ್ಕಾಗಿ 1 ಕೋಟಿ ರೂ. ಮೀಸಲಿಡಲಾಗಿದೆ ಎಂದರು.

ಶಾರದಾ ಧನ್ವಂತರಿ ಆಸ್ಪತ್ರೆ ರಸ್ತೆ, ಕಾಳಿಕಾಂಬಾ ದೇವಸ್ಥಾನದ ರಸ್ತೆ ಸೇರಿ ಹಲವು ವರ್ಷದಿಂದ ನನೆಗುದಿಗೆ ಬಿದ್ದಿದ್ದ ರಸ್ತೆಯನ್ನು ಡಾಂಬರಿಕರಣ ಮಾಡಲಾಗುತ್ತಿದೆ ಎಂದರು.

ಕೆಲವು ಭಾಗದಲ್ಲಿ ಮಣ್ಣಿನ ರಸ್ತೆ ಅಥವಾ ಒಮ್ಮೆ ಜಲ್ಲಿ ಹಾಕಿರುವ ರಸ್ತೆ ಇದ್ದು, ಅಂತಹ ರಸ್ತೆಯಲ್ಲಿ ಸಂಚಾರ ತೀವ್ರ ಕಷ್ಟವಾಗಿದೆ. ಸಮ್ಮಿಶ್ರ ಸರ್ಕಾರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿರುವುದರಿಂದ ಬಹುತೇಕ ಗ್ರಾಮೀಣ ರಸ್ತೆಗಳು ಅಭಿವೃದ್ಧಿಗೊಳ್ಳುತ್ತಿವೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್, ಮುಖಂಡರಾದ ಅಣ್ಣಪ್ಪ ಹೆಗ್ಡೆ, ಎಂ.ಪಿ.ಚಂದ್ರಹಾಸ, ತ್ರಿಮೂರ್ತಿ, ಸತೀಶ್, ಸುಹಾಸ್, ದೀಪಕ್, ಉಮೇಶ್, ದೀಕ್ಷಿತ್, ಮೇಗಳಬೈಲು ಚಂದ್ರಶೇಖರ್, ತಿಮ್ಮಪ್ಪ, ಆನಂದ ಶೆಟ್ಟಿ, ಕೆ.ಎಂ.ರಮೇಶ್ ಭಟ್ ಮುಂತಾದವರು ಇದ್ದರು.