ದೆಹಲಿ:
ಕೇಂದ್ರ ಸರ್ಕಾರದ ಎಂಟರಪ್ರೈಸಸ್ ಆಗಿರುವ ಎನ್‌ಬಿಸಿಸಿ, ಶ್ರೀನಗರದಲ್ಲಿ 15,000 ಕೋಟಿ ವೆಚ್ಚದಲ್ಲಿ ಸ್ಯಾಟಲೈಟ್ ಟೌನ್‌ಶಿಪ್ ಒಪ್ಪಂದಕ್ಕೆ ಸಹಿ ಮಾಡಿದೆ.
ಶ್ರೀನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀನಗರ ಅಭಿವೃದ್ಧಿ ಪ್ರಾಧಿಕಾರ (ಎಸ್‌ಡಿಎ) ಮತ್ತು ಎನ್‌ಬಿಸಿಸಿ (ಇಂಡಿಯಾ) ಲಿಮಿಟೆಡ್ ಈ ಒಪ್ಪಂದವನ್ನು ೋಷಣೆ ಮಾಡಿವೆ. ಒಪ್ಪಂದಕ್ಕೆ ಶ್ರೀನಗರ ಅಭಿವೃದ್ಧಿ ಪ್ರಾಧಿಕಾರ ಉಪಾಧ್ಯಕ್ಷ ಓವೈಸ್ ಅಹ್ಮದ್ ಹಾಗೂ ಎನ್‌ಬಿಸಿಸಿ ಕಾರ್ಯನಿರ್ವಾಹಕ ನಿರ್ದೇಶಕ ಸಂಜಯ್ ಗುಪ್ತಾ ಸಹಿ ಹಾಕಿದರು.
ಈ ಸಂದರ್ಭದಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ ಆಯುಕ್ತ ಮಂದೀಪ್ ಕೌರ್, ಎನ್ಬಿಸಿಸಿ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಕೆ.ಪಿ. ಮಹದೇವಸ್ವಾಮಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (ಟಏಖಿಅ) ಜಂಟಿ ಕಾರ್ಯದರ್ಶಿ ಮತ್ತು ರವಿ ಅರೋರಾ ಹಾಜರಿದ್ದರು.
ಶ್ರೀನಗರದ ಬೆಮಿನಾದಲ್ಲಿ ಸುಮಾರು 406 ಎಕರೆ ಪ್ರದೇಶದಲ್ಲಿ ಸ್ಯಾಟಲೈಟ್ ಟೌನ್‌ಶಿಪ್ ಅಭಿವೃದ್ಧಿ ಮಾಡಿ ಯೋಜನೆಯನ್ನು ಅನುಷ್ಠಾನಗೊಳಿಸಲು ಎಂಒಯುಗೆ ಸಹಿ ಹಾಕಿದೆ. ಯೋಜನೆಯ ಸೈಟ್ ಮುಂಬರುವ ಮೆಡಿ ಸಿಟಿ ಮತ್ತು ಹೈಕೋರ್ಟ್ ಕಾಂಪ್ಲೆಕ್ಸ್‌ನ ಪಕ್ಕದಲ್ಲಿದೆ.
ಐದು ವರ್ಷಗಳಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿದ್ದು, ಅದರಲ್ಲಿ ವಸತಿ ಪ್ಲಾಟ್‌ಗಳು, ಐಷಾರಾಮಿ ವಿಲ್ಲಾಗಳು, ಅಪಾರ್ಟ್ಮೆಂಟ್ ಸಂಕೀರ್ಣಗಳು, ವಾಣಿಜ್ಯ ಕಚೇರಿ ಸ್ಥಳಗಳು, ಒಳಾಂಗಣ ಕ್ರೀಡಾ ಕೇಂದ್ರ ಮತ್ತು ಆಧುನಿಕ ಸೌಲಭ್ಯಗಳು ಮತ್ತು ಸೌಕರ್ಯಗಳೊಂದಿಗೆ ಸುಸಜ್ಜಿತವಾದ ಪಂಚತಾರಾ ರೆಸಾರ್ಟ್‌ಗಳನ್ನು ಒಳಗೊಂಡಿರುತ್ತದೆ. ಹೆಚ್ಚುವರಿಯಾಗಿ, ಯೋಜನೆಯು ಸುಮಾರು 3,200 ಕೈಗೆಟುಕುವ ವಸತಿ ಘಟಕಗಳನ್ನು ಹೊಂದಿದೆ.
ಯೋಜನೆ ಪೂರ್ಣಗೊಂಡ ನಂತರ, ಶ್ರೀನಗರ ನಿವಾಸಿಗಳಿಗೆ ನ್ಯೂ ಟೌನ್ ಸೆಂಟರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಲಿದೆ.
ಪೋಟೋ: ಎನ್ಬಿಸಿಸಿ