ಢಾಕಾ: ಮುಶ್ಫಿಕರ್ ರಹೀಮ್ (84ರನ್, 87ಎಸೆತ, 4 ಬೌಂಡರಿ, 1 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ಹಾಗೂ ಮುಸ್ತಾಫಿಜರ್ ರೆಹಮಾನ್ ( 34ಕ್ಕೆ 3) ಮಾರಕ ದಾಳಿ ನೆರವಿನಿಂದ ಆತಿಥೇಯ ಬಾಂಗ್ಲಾದೇಶ ತಂಡ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 33 ರನ್ಗಳಿಂದ ಸೋಲಿಸಿತು. ಏಕದಿನ ವಿಶ್ವಕಪ್ ಸೂಪರ್ ಲೀಗ್ ಅಂಗವಾಗಿ ನಡೆಯುತ್ತಿರುವ 3 ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾ ತಂಡ 1-0 ಯಿಂದ ಮುನ್ನಡೆ ಸಾಧಿಸಿತು. ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 6 ವಿಕೆಟ್ಗೆ 257 ರನ್ ಪೇರಿಸಿದರೆ, ಪ್ರತಿಯಾಗಿ ಆರಂಭಿಕ ಆಘಾತ ಅನುಭವಿಸಿದ ಪ್ರವಾಸಿ ಲಂಕಾ ತಂಡ, ವನಿಂದು ಹಸರಂಗ (74ರನ್, 60 ಎಸೆತ, 3 ಬೌಂಡರಿ, 5 ಸಿಕ್ಸರ್) ಕಡೇ ಹಂತದಲ್ಲಿ ಹೋರಾಟದ ನಡುವೆಯೂ 48.1 ಓವರ್ಗಳಲ್ಲಿ 224 ರನ್ಗಳಿಗೆ ಸರ್ವಪತನ ಕಂಡಿತು. 2ನೇ ಏಕದಿನ ಪಂದ್ಯ ಮಂಗಳವಾರ ನಡೆಯಲಿದೆ.
ಇದನ್ನೂ ಓದಿ: ಶೀಘ್ರವೇ ಮಹಿಳಾ ತಂಡದ ಕೈ ಸೇರಲಿದೆ ಟಿ20 ವಿಶ್ವಕಪ್ ಬಹುಮಾನದ ಮೊತ್ತ,
ಬಾಂಗ್ಲಾದೇಶ: 6 ವಿಕೆಟ್ಗೆ 257 (ತಮೀಮ್ ಇಕ್ಬಾಲ್ 52, ಮುಶ್ಫಿಕರ್ ರಹೀಮ್ 84, ವೊಹಮದುಲ್ಲಾ 27, ಧನಂಜಯ್ ಡಿ ಸಿಲ್ವಾ 45ಕ್ಕೆ 3), ಶ್ರೀಲಂಕಾ: 48.1 ಓವರ್ಗಳಲ್ಲಿ 224 (ವನಿಂದು ಹಸರಂಗ 74, ಇಸುರು ಉದಾನ 21, ಕುಶಾಲ್ ಪೆರೇರಾ 30, ಮೆಹಿದಿ ಹಸನ್ 30ಕ್ಕೆ 4, ಮುಸ್ತಾಫಿಜರ್ ರೆಹಮಾನ್ 34ಕ್ಕೆ 3, ಮೊಹಮದ್ ಸೈಫಿದ್ದೀನ್ 49ಕ್ಕೆ 2).
ಇದನ್ನೂ ಓದಿ: 2019ರಲ್ಲಿ ನಿಷೇಧಕ್ಕೊಳಗಾದ ಕಥೆ ಬಿಚ್ಚಿಟ್ಟ ಮುಂಬೈ ಬ್ಯಾಟ್ಸ್ಮನ್ ಪೃಥ್ವಿ ಷಾ,
– ಶ್ರೀಲಂಕಾ ತಂಡಕ್ಕೆ ಕಾಡಿದ ಕೋವಿಡ್
ಢಾಕಾ: ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಕೇವಲ ಒಂದು ಗಂಟೆ ಬಾಕಿ ಇರುವಾಗಲೇ ಕೋವಿಡ್&19 ಮಹಾಮಾರಿ ಕಾಡಿತು. ಭಾನುವಾರ ಪಂದ್ಯ ಆರಂಭಕ್ಕೂ ಮುನ್ನ ಶ್ರೀಲಂಕಾ ತಂಡದ ಮೂವರಿಗೆ ಕೋವಿಡ್-19 ಕಾಣಿಸಿಕೊಂಡಿತು. ಬೌಲಿಂಗ್ ಕೋಚ್ ಚಮಿಂದಾ ವಾಸ್ ಹಾಗೂ ಇಬ್ಬರು ಆಟಗಾರರಿಗೆ ಸೋಂಕು ತಲುಗಿದೆ ಎನ್ನಲಾಗಿದೆ.
Bangladesh win the first ODI by 33 runs to take a 1-0 lead in the series.#BANvSL pic.twitter.com/5NIRK3y9lC
— Sri Lanka Cricket 🇱🇰 (@OfficialSLC) May 23, 2021