22.5 C
Bangalore
Friday, December 13, 2019

ಲಂಕಾದಲ್ಲೇ ರಝೀನಾ ಅಂತ್ಯ ಸಂಸ್ಕಾರ

Latest News

ಅಜ್ಞಾನದ ಕತ್ತಲೆ ಕಳೆಯುವುದೇ ಕಾರ್ತಿಕೋತ್ಸವ

ಶಿರಹಟ್ಟಿ: ಅಂತರಂಗದ (ಅಜ್ಞಾನದ) ಕತ್ತಲೆ ಹೋಗಲಾಡಿಸಿ ಜ್ಞಾನದ ಅರಿವು ಪಡೆಯುವುದೇ ಕಾರ್ತಿಕೋತ್ಸವದ ಮೂಲ ಉದ್ದೇಶವಾಗಿದೆ ಎಂದು ವರವಿ ಮಠದ ಶ್ರೀ ವಿರೂಪಾಕ್ಷ ಸ್ವಾಮಿಗಳು...

ಜಾತ್ರೆಯ ಯಶಸ್ಸಿಗೆ ಸಹಕರಿಸಿ

ಮುಂಡರಗಿ: ಮನುಷ್ಯನು ಬದುಕಿನಲ್ಲಿ ಸೇವಾ ಮನೋಭಾವ ಹೊಂದಿ ಉತ್ತಮ ವಿಚಾರ ಚಿಂತನೆಗಳ ಮೂಲಕ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಜಗದ್ಗುರು ಅನ್ನದಾನೀಶ್ವರ...

ಅಧ್ಯಾತ್ಮ ಸಾರ್ವತ್ರಿಕರಣವಾಗಲಿ

ಗದಗ: ಎಲ್ಲರಲ್ಲಿಯೂ ದೇವರಿದ್ದಾನೆ ಜತೆಗೆ ದೈವತ್ವದ ಕಿಡಿ ಇದೆ. ಎಲ್ಲರೂ ಒಂದೇ ಎಂದು ತಿಳಿಯಬೇಕು, ವಿಭಿನ್ನತೆಯಲ್ಲಿ ಏಕತೆ ಕಾಣುವುದೇ ನಿಜವಾದ ಧರ್ಮ. ಅಧ್ಯಾತ್ಮ...

ಮಾನವರು ದ್ವೇಷ, ಅಸೂಯೆ ಬಿಡಲಿ

ಚಾಮರಾಜನಗರ: ಶ್ರೀಕೃಷ್ಣ ಪ್ರತಿಷ್ಠಾನದಿಂದ ಮೊಸರು ಮಡಕೆ ಒಡೆಯುವ ಉತ್ಸವದ ಅಂಗವಾಗಿ ಶುಕ್ರವಾರ ನಗರದ ಚೆನ್ನಿಪುರಮೋಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹೂ...

ಅರಣ್ಯ ರಕ್ಷಣೆಗೆ ಡ್ರೋನ್ ಕಣ್ಗಾವಲು

ಗುಂಡ್ಲುಪೇಟೆ: ಮುಂದಿನ ಬೇಸಿಗೆಯಲ್ಲಿ ಬಂಡೀಪುರವನ್ನು ಬೆಂಕಿಯಿಂದ ರಕ್ಷಿಸಲು ಅರಣ್ಯ ಇಲಾಖೆ ಸಂಪೂರ್ಣವಾಗಿ ಸಜ್ಜಾಗಿದೆ. ಬೇಸಿಗೆಯಲ್ಲಿ ಬೆಂಕಿ ಹರಡುವುದನ್ನು ಕೂಡಲೇ ಗುರುತಿಸಲು ಇದೇ ಮೊದಲ ಬಾರಿಗೆ...

 <<ಪೂರ್ಣ ಸಹಕಾರ ನೀಡಿದ ಭಾರತೀಯ ರಾಯಭಾರ ಕಚೇರಿ ಸಚಿವರ ಕಾರಲ್ಲೇ ತೆರಳಿದ ಕುಟುಂಬ>>

– ವಿಜಯವಾಣಿ ಸುದ್ದಿಜಾಲ ಸುರತ್ಕಲ್
ಶ್ರೀಲಂಕಾದ ಕೊಲೊಂಬೋದಲ್ಲಿ ಭಾನುವಾರ ಸರಣಿ ಬಾಂಬ್ ಸ್ಫೋಟಕ್ಕೆ ಬಲಿಯಾದ ಮಂಗಳೂರಿನ ಬೈಕಂಪಾಡಿ ಮೂಲದ ಸುರತ್ಕಲ್ ನಿವಾಸಿ ರಝೀನಾ ಖಾದರ್ ಕುಕ್ಕಾಡಿ(58) ಅವರ ಅಂತಿಮ ಸಂಸ್ಕಾರ ಹುಟ್ಟೂರು ಲಂಕಾದಲ್ಲೇ ವಿಧಿವಿಧಾನ ಪ್ರಕಾರ ಸೋಮವಾರ ನೆರವೇರಿಸಲಾಯಿತು.
ಭಾನುವಾರ ರಾತ್ರಿ ವಿಮಾನ ಮೂಲಕ ಲಂಕಾ ತಲುಪಿದ ಸೇರಿದ್ದ ಅವರ ಸಹೋದರಿ, ನಿಕಟ ಸಂಬಂಧಿಕರು, ಪತಿ ಅಬ್ದುಲ್ ಖಾದರ್ ಕುಕ್ಕಾಡಿ, ಅಮೆರಿಕದಲ್ಲಿ ನೆಲೆಸಿದ್ದ ಪುತ್ರ, ಪುತ್ರಿ ಮೊದಲಾದವರು ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದರು. ಸೋಮವಾರ ಬೆಳಗ್ಗೆ 11ರ ಸುಮಾರಿಗೆ ವಿಧಿಗಳು ಪೂರ್ಣಗೊಂಡವು ಎಂದು ಕುಟುಂಬ ಮೂಲಗಳು ತಿಳಿಸಿವೆ.

ರಾಯಭಾರ ಕಚೇರಿ ಸಹಕಾರ: ಬೆಂಗಳೂರು ಮೂಲಕ ಶ್ರೀಲಂಕಾಕ್ಕೆ ಸಂಬಂಧಿಕರು ತಲುಪಿದಾಗ ಅಲ್ಲಿ ಕರ್ಫ್ಯೂ ಜಾರಿಯಲ್ಲಿತ್ತು. ವಿಮಾನ ನಿಲ್ದಾಣದಿಂದ ತೆರಳಲು ಲಂಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಲ್ಲ ರೀತಿಯಲ್ಲಿ ಸಹಕಾರ ನೀಡಿತ್ತು. ಈ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಚೇರಿಗೆ ಸೂಚನೆ ನೀಡಿದ್ದರು. ಕರ್ಫ್ಯೂ ಇದ್ದ ಕಾರಣ ವಿಮಾನ ನಿಲ್ದಾಣದಿಂದ ಸಂಬಂಧಿಕರ ಸಂಚಾರಕ್ಕೆ ಅಲ್ಲಿನ ಸಚಿವರ ಸರ್ಕಾರಿ ಕಾರನ್ನೇ ಒದಗಿಸಲಾಗಿತ್ತು. ಸ್ಥಳೀಯ ಜನಪ್ರತಿನಿಧಿಗಳು ಕೂಡ ಸಹಕಾರ ನೀಡಿದ್ದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ರಝೀನಾ ಅವರ ಅಣ್ಣ ಶ್ರೀಲಂಕಾದಲ್ಲಿ ಹೆಸರಾಂತ ಉದ್ಯಮಿ.
ರಝೀನಾ ಶ್ರೀಲಂಕಾ ಪೌರತ್ವ ಹೊಂದಿದ್ದು, ಪ್ರಾರಂಭಿಕ ಶಿಕ್ಷಣವನ್ನು ಅಲ್ಲಿಯೇ ಪಡೆದಿದ್ದರು. ಬಳಿಕ ಮಂಗಳೂರಿನಲ್ಲಿ ಬಿಎಎಸ್ಸಿ ಓದಿದ್ದರು. ಕಾಸರಗೋಡು ಬಳಿಯ ಮೊಗ್ರಾಲ್ ಪುತ್ತೂರಿನಲ್ಲಿಯೂ ಅವರ ನಿಕಟ ಸಂಬಂಧಿಕರು ನೆಲೆಸಿದ್ದಾರೆ.

ರಝೀನಾ ನೆನಪು ಚಿರಸ್ಥಾಯಿ:  ರಝೀನಾ ಪತಿ ಅಬ್ದುಲ್ ಖಾದರ್ ಕುಕ್ಕಾಡಿ ದುಬೈಯಲ್ಲಿ ಕೆಮಿಕಲ್ ಇಂಜಿನಿಯರ್. ಅವರು ಕುಕ್ಕಾಡಿ ಕುಟುಂಬದ ಏಳು ಸಹೋದರದಲ್ಲಿ ಹಿರಿಯ ಪುತ್ರ. ರಝೀನಾ ನೆನಪು ಚಿರಸ್ಥಾಯಿ ಎಂದು ಕುಟುಂಬದ ಸದಸ್ಯರು ಶೋಕ ವ್ಯಕ್ತಪಡಿಸಿದ್ದಾರೆ. ಅವರ ಆತ್ಮಕ್ಕೆ ಸದ್ಗತಿ ಕೋರಿ ಕುಟುಂಬಸ್ಥರು, ಬಂಧುಗಳು ಪ್ರಾರ್ಥನೆ ಸಲ್ಲಿಸಿದ್ದಾರೆ.

ಮಂಗಳೂರು ದಂಪತಿ ಲಂಕಾದಲ್ಲಿ ಸೇಫ್

<<ಕೊನೇ ಕ್ಷಣದಲ್ಲಿ ಹೋಟೆಲ್ ಬದಲಾಯಿಸಿದ್ದರಿಂದ ಬಚಾವ್>>
ವಿಜಯವಾಣಿ ಸುದ್ದಿಜಾಲ ಮಂಗಳೂರು
ಶ್ರೀಲಂಕಾಕ್ಕೆ ಪತ್ನಿಯೊಂದಿಗೆ ಪ್ರವಾಸ ಹೋಗಿರುವ ಮಂಗಳೂರಿನ ವೈದ್ಯರೊಬ್ಬರು ಕೊನೇ ಕ್ಷಣದಲ್ಲಿ ವಾಸ್ತವ್ಯದ ಹೋಟೆಲ್ ಬದಲಾವಣೆ ಮಾಡುವ ತಮ್ಮ ನಿರ್ಧಾರದಿಂದ ಸುರಕ್ಷಿತವಾಗಿದ್ದಾರೆ.
ನಗರದ ಶ್ರೀ ವೇದಂಆಯು ಆಯುರ್ವೇದ ಆಸ್ಪತ್ರೆಯ ಡಾ.ಕೇಶವರಾಜ್ ಹಾಗೂ ಅವರ ಪತ್ನಿ ಶ್ರೀದೇವಿ ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಏ.20ರಂದು ಮಧ್ಯಾಹ್ನ ಕೊಲೊಂಬೊ ತೆರಳಿದ್ದರು. ಸ್ಫೋಟ ನಡೆದ ಹೋಟೆಲ್ ಸಿನ್ನಾಮೊನ್ ಗ್ಯ್ರಾಂಡ್‌ನಲ್ಲಿ ಉಳಿದುಕೊಳ್ಳಬೇಕಾಗಿತ್ತಾದರೂ, ಅಂತಿಮ ಹಂತದಲ್ಲಿ ಅದನ್ನು ರದ್ದು ಮಾಡಿ ನೆಗೊಂಬೋ ರಸ್ತೆಯ ಹೋಟೆಲ್ ಕ್ಲಾರಿಯನ್ ಹಬ್‌ನಲ್ಲಿ ತಂಗಿದ್ದರು.
ಶನಿವಾರ ಅವರು ವಿಶ್ರಾಂತಿ ಪಡೆದಿದ್ದು, ಮರುದಿನ ಸ್ಫೋಟದ ಸದ್ದು ಕೇಳಿದೆ. ತಮ್ಮ ಟೂರ್ ಏಜೆಂಟರಲ್ಲಿ ವಿಚಾರಿಸುವಾಗ ಇದು ಬಾಂಬ್ ಸ್ಫೋಟ ಎನ್ನುವುದು ಗೊತ್ತಾಯಿತು. ತಾವು ಉಳಿದುಕೊಳ್ಳಬೇಕಿದ್ದ ಹೊಟೇಲ್‌ನಲ್ಲೇ ಸ್ಫೋಟ ಸಂಭವಿಸಿ ಅಪಾರ ಜೀವಹಾನಿಯಾಗಿದ್ದು ಕೇಳಿ ಬೆಚ್ಚಿಬಿದ್ದರು. ಸರಣಿ ಸ್ಫೋಟದಿಂದಾಗಿ ಯೋಜಿಸಿದಂತೆ ಪ್ರವಾಸದ ಖುಷಿ ಅನುಭವಿಸಲಾಗದೆ ಕೇಶವರಾಜ್ ಹಿಂದಿರುಗಲಿದ್ದಾರೆ.
ಅವರ ಸಹೋದರ ಕಾರ್ತಿಕ್ ರಾಜ್ ‘ವಿಜಯವಾಣಿ’ಯೊಂದಿಗೆ ಮಾತನಾಡಿ, ‘ಸದ್ಯ ಕೊಲೊಂಬೋ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ಜಾಂ ಆಗಿದ್ದು, ಅಲ್ಲಿಗೆ ಸಂಪರ್ಕ ಮಾಡಲಾಗುತ್ತಿಲ್ಲ. ನಾನು ಮಧ್ಯಾಹ್ನ ಅಣ್ಣನೊಂದಿಗೆ ಮಾತನಾಡಿದ್ದೇನೆ, ಅವರು ಸುರಕ್ಷಿತವಾಗಿ ಹೊಟೇಲ್‌ನಲ್ಲೇ ಇದ್ದಾರೆ. ಏ.24ರಂದು ಮಂಗಳೂರಿಗೆ ತಲುಪುವ ನಿರೀಕ್ಷೆ ಇದೆ. ಸದ್ಯ ಕರ್ಫ್ಯೂ ಇರುವುದರಿಂದ ಎಲ್ಲಿಗೂ ಹೋಗಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಕರ್ನಾಟಕ ಕರಾವಳಿ ಪಹರೆ ಬಿಗು
ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ಕರಾವಳಿಯಲ್ಲೂ ಭದ್ರತಾ ವ್ಯವಸ್ಥೆ, ಅದರಲ್ಲೂ ಕರಾವಳಿ ಕಾವಲು ಪಡೆಯ ಪಹರೆಯನ್ನು ಬಿಗುಗೊಳಿಸಲಾಗಿದೆ.
ದೆಹಲಿಯಿಂದಲೇ ಬಂದಿರುವ ಸೂಚನೆಯನ್ವಯ ಪಶ್ಚಿಮ ಮತ್ತು ಪೂರ್ವ ಕರಾವಳಿಯುದ್ದಕ್ಕೂ ಕೋಸ್ಟ್‌ಗಾರ್ಡ್ ಕಾವಲು ನೌಕೆಗಳು ಭಾರತೀಯ ಜಲಗಡಿಯ ಮೇಲೆ ನಿಗಾ ಇರಿಸಿಕೊಂಡಿವೆ.
ಕೋಸ್ಟ್‌ಗಾರ್ಡ್ ಭದ್ರತೆಯ ಮೇಲೆ ಸದಾ ನಿಗಾ ಇರಿಸಿರುತ್ತದೆ, ಸದ್ಯ ಭಾರತದ ನೆರೆ ದೇಶದ ಮೇಲೆ ನಡೆದ ದಾಳಿಯ ಹಿನ್ನೆಲೆಯಲ್ಲಿ ಹೆಡ್‌ಕ್ವಾರ್ಟರ್ಸ್ ಮಟ್ಟದಲ್ಲೇ ಸಂವಹನ ನಡೆದಿರುತ್ತದೆ, ಸಾರ್ವಜನಿಕ ಹಿತಾಸಕ್ತಿಯಿಂದ ಭದ್ರತಾ ವಿಚಾರಗಳನ್ನು ಹಂಚಿಕೊಳ್ಳುವಂತಿಲ್ಲ ಎಂದು ಕೋಸ್ಟ್‌ಗಾರ್ಡ್ ಹಿರಿಯ ಅಧಿಕಾರಿ ‘ವಿಜಯವಾಣಿ’ಗೆ ತಿಳಿಸಿದರು.
ಪಶ್ಚಿಮ ಕರಾವಳಿಯಲ್ಲಿ 320 ಕಿ.ಮೀ ಸಮುದ್ರ ತೀರವನ್ನು ಹೊಂದಿರುವ ಕರ್ನಾಟಕದ ರಕ್ಷಣೆಯ ಹೊಣೆ ಹೊತ್ತಿರುವ ಕರಾವಳಿ ಕಾವಲು ಪಡೆ ಅತ್ಯಾಧುನಿಕ ರಾಡಾರ್‌ಗಳು, ಕಾವಲು ನೌಕೆಗಳು, ಹೋವರ್‌ಕ್ರಾಫ್ಟ್, ಡೋರ್ನಿಯರ್ ವಿಮಾನಗಳ ಮೂಲಕ ಭದ್ರತೆಯನ್ನು ನೋಡಿಕೊಳ್ಳುತ್ತಿದೆ.

Stay connected

278,748FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO| ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ:...

ತಿರುವನಂತಪುರ: ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಕೊಚ್ಚಿ ಮೂಲದ ವನ್ಯಜೀವಿ ಸಂರಕ್ಷಕಿ...

ಅತ್ಯಾಚಾರ ಪ್ರಕರಣ ಕುರಿತು ರಾಹುಲ್​ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ಗದ್ದಲ:...

ನವದೆಹಲಿ: ಅತ್ಯಾಚಾರ ಪ್ರಕರಣ ಕುರಿತು ಗುರುವಾರ ಜಾರ್ಖಂಡ್​ ಸಮಾವೇಶದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ವಯನಾಡಿನ ಹಾಲಿ ಸಂಸದ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ....

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....