ಕೂಡ್ಲಿಗಿ: ಸಾಮಾಜಿಕವಾಗಿ, ಧಾರ್ಮಿಕವಾಗಿ ಮತ್ತು ಆರ್ಥಿಕವಾಗಿ ಜನರಿಗೆ ಸ್ಥೈರ್ಯ ತುಂಬುವ ಕೆಲಸ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಡಾ.ಎನ್. ಟಿ.ಶ್ರೀನಿವಾಸ್ ಹೇಳಿದರು.

ಇದನ್ನೂ ಓದಿ: ಶ್ರಾವಣ ಮಾಸದ ವರಮಹಾಲಕ್ಷ್ಮೀ ಪೂಜೆ ಶ್ರೇಷ್ಟ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕಿ ಚೇತನಾ ಅಭಿಮತ
ಪಟ್ಟಣದ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ ಮಂಗಳವಾರ ವಿವಿಧ ಸಂಘಗಳ ಸಂಯುಕ್ತಾಶ್ರಯದಲ್ಲಿ 154 ನೇ ಗಾಂಧಿ ಜಯಂತಿ ಅಂಗವಾಗಿ ಗಾಂಧಿ ಸ್ಮತಿ, ಜನಜಾಗೃತಿ ಜಾಥ, ನವಜೀವನ ಸಮಿತಿ ಸದಸ್ಯರ ಸಮಾವೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದರು.
ರಾಜ್ಯದ ಉದ್ದಗಲಕ್ಕೂ ಬಡವ, ಬಲ್ಲಿದರಿಗೆ ಆರ್ಥಿಕವಾಗಿ ಸಾಲ, ಸೌಲಭ್ಯಗಳನ್ನು ನೀಡಿ ಸ್ವಾವಲಂಬಿ ಜೀವನ ನಡೆಸಲು ಸಹಕಾರ ಮಾಡುತ್ತಿರುವ ಏಕೈಕ ಸಂಘ ಸಂಸ್ಥೆ ಇದಾಗಿದ್ದು, ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಜನರಿಗೆ ಸ್ವ ಉದ್ಯೋಗ ಕಲ್ಪಿಸಲು ಆರ್ಥಿಕವಾಗಿ ಸಹಾಯ ಮಾಡಿ,
ಹಣ ಉಳಿಕೆಯ ಮಾರ್ಗೋಪಾಯವನ್ನು ತಿಳಿಸಿ, ಕೌಟುಂಬಿಕವಾಗಿ ಸುಖಿ ಸಂಸಾರ ಸಾಗಿಸಲು ಮದ್ಯಪಾನ ಹಾಗೂ ದುಶ್ಚಟಗಳನ್ನು ದೂರ ಮಾಡಿ ಸಾಮಾಜಿಕವಾಗಿ ಜನರನ್ನು ಸುಸಂಸ್ಕೃತರನ್ನಾಗಿಸಲು ಸಂಸ್ಥೆ ಸೇವೆ ಮಾಡುತ್ತಿರುವುದು ಸಾರ್ಥಕ ಕಾರ್ಯ ಎಂದರು.
ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿಜೀ ಮಾತಾನಾಡಿ, ನಾಡಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಧಾರ್ಮಿಕವಾಗಿ ಭಕ್ತಿ, ಭಾವನೆ ಜತೆ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಸ್ವ ಸಹಾಯ ಸಂಘಗಳ ಮೂಲಕ ಸಮಾಜಿಕವಾಗಿ ಜಾಗೃತಿ ಮೂಡಿಸುತ್ತಿದೆ.
ಮಹಿಳೆಯರಿಗೆ ಆರ್ಥಿಕ ಬಲ ತುಂಬಿ, ಸಾಲ, ಸೌಲಭ್ಯಗಳ ಜತೆ ಸ್ವಂತ ಶಕ್ತಿಯ ಮೂಲಕ ಸ್ವಾವಲಂಬಿ ಜೀವನ ನಡೆಸಲು ಹತ್ತು ಹಲವು ಯೋಜನೆಗಳಿಂದ ಸುಂದರ ಸಂಸಾರಕ್ಕೆ ಮುನ್ನುಡಿ ಬರೆದಿದೆ ಎಂದರು.
ಸಾಮಾಜಿಕವಾಗಿ ವ್ಯಕ್ತಿ ಕುಡಿತ ಸೇರಿ ದುಶ್ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಮದ್ಯವ್ಯರ್ಜನ ಶಿಬಿರಗಳ ಮೂಲಕ ಕುಡಿತ ಬಿಡಿಸಿ ಸುಖಿ ಸಂಸಾರಕ್ಕೆ ನಾಂದಿ ಹಾಡಿದೆ. ಗ್ರಾಮದ ಕೆರೆಗಳ ಹೂಳನ್ನು ತಗೆದು ಕೆರೆಯ ಮಹತ್ವ ತಿಳಿಸಿದೆ.
ಕೃಷಿಗೆ ಪೂರಕವಾದ ಯೋಜನೆಗಳನ್ನು ಸ್ವ ಸಂಘಗಳನ್ನು ರಚಿಸುವ ಮೂಲಕ ಕೃಷಿ ಯಂತ್ರೋಪಕರಣಗಳನ್ನು ನೀಡಿ ಸಾಮಾಜಿಕವಾಗಿ, ಆರ್ಥಿಕವಾಗಿ ಜನರಿಗೆ ಶಕ್ತಿ ತುಂಬಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಸಾಮಾಜಿಕ ಕ್ರಾಂತಿಯನ್ನೆ ಮಾಡಿದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ನಟರಾಜ್ ಬಾದಾಮಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಲ್ಯಾಣ ಕರ್ನಾಟಕ ಪ್ರಾದೇಶಿಕ ನಿರ್ದೇಶಕ ಬಿ.ಗಣೇಶ, ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ತಾಪಂ ಇಒ ವೈ.ರವಿಕುಮಾರ್,
ಜಿಲ್ಲಾ ಜನ ಜಾಗೃತಿ ವೇದಿಕೆ ನಿರ್ದೇಶಕರಾದ ಕಾವಲಿ ಶಿವಪ್ಪನಾಯಕ, ಎಚ್.ವೀರಭದ್ರಪ್ಪ, ಸಿದ್ದೇಶ್, ಗುಂಡಪ್ಪ, ಮುಖಂಡರಾದ ಎಂ.ಗುರುಸಿದ್ದನ ಗೌಡ, ಡಿ.ಎಚ್.ದುರುಗೇಶ್, ನಲ್ಲಮುತ್ತಿ ದುರುಗೇಶ್, ಪ್ರಾಚಾರ್ಯೆ ಟಿ. ಕೊತ್ಲಮ್ಮ, ಶ್ರೀ ಕ್ಷೇತ್ರ ಧರ್ಮಸ್ಥಳ ತಾಲೂಕು ಯೋಜನಾಧಿಕಾರಿ ಸಂತೋಷ, ಮಹಾಲಿಂಗಯ್ಯ, ರುದ್ರೇಶ್ ಇದ್ದರು.