More

  ಶ್ರೀಕೃಷ್ಣ ಜನ್ಮಭೂಮಿಗೆ ಮುಕ್ತಿ?

  ಮಥುರಾದ ಶ್ರೀಕೃಷ್ಣ ಜನ್ಮಭೂಮಿಗೆ ತಾಗಿಕೊಂಡಿರುವ ಶಾಹಿ ಈದ್ಗಾ ಮಸೀದಿಯಲ್ಲಿ ಕೋರ್ಟ್ ಕಮಿಷನರ್​ರ ಮೂಲಕ ಸಮೀಕ್ಷೆ ನಡೆಸಲಾಗುವುದು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದ್ದು, ಸಂಚಲನಕ್ಕೆ ಕಾರಣವಾಗಿದೆ. ವಾರಾಣಸಿಯ ಜ್ಞಾನವಾಪಿ ಮಸೀದಿಯ ವಿಡಿಯೋ ಸಮೀಕ್ಷೆ ಈಗಾಗಲೇ ಪೂರ್ಣಗೊಂಡಿದ್ದು, ಈಗ ಶಾಹಿ ಈದ್ಗಾ ಮಸೀದಿ ಸಮೀಕ್ಷೆಯಿಂದ ಯಾವೆಲ್ಲ ಸಂಗತಿಗಳು ಬಹಿರಂಗಗೊಳ್ಳಲಿವೆ ಎಂಬುದು ಕುತೂಹಲ ಮೂಡಿಸಿದೆ.

  ಇತಿಹಾಸವನ್ನು, ಅದರ ವಾಸ್ತವಗಳನ್ನು ದೀರ್ಘ ಸಮಯದವರೆಗೆ ಕತ್ತಲೆಯಲ್ಲಿ ಇಡಲಾಗದು ಎಂಬ ಮಾತಿದೆ. ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇದಕ್ಕೆ ಪುಷ್ಟಿ ನೀಡುವಂತಿವೆ. ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಭವ್ಯ ಮಂದಿರ ನಿರ್ವಣವಾಗುತ್ತಿದ್ದು, 2024 ಜನವರಿ 22ರಂದು ಲೋಕಾರ್ಪಣೆಯಾಗಲಿದೆ. ಈ ಮೂಲಕ 500ಕ್ಕೂ ಹೆಚ್ಚು ವರ್ಷಗಳ ಕಾಯುವಿಕೆ ಅಂತ್ಯವಾಗಲಿದೆ. ಕಾಶಿ ವಿಶ್ವನಾಥ ದೇವಸ್ಥಾನ ಪಕ್ಕದ ಜ್ಞಾನವಾಪಿ ಮಸೀದಿಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಸಮೀಕ್ಷೆ ನಡೆದಿದ್ದು, ಮಂದಿರದ ಹಲವು ಕುರುಹುಗಳು ಕಂಡುಬಂದಿವೆ. ಅದರಂತೆ ಮಥುರಾದ ಶ್ರೀಕೃಷ್ಣ ಜನ್ಮಭೂಮಿಯ ವಿವಾದವು ತುಂಬ ಹಳೆಯದು. ಶ್ರೀಕೃಷ್ಣ ಜನ್ಮಭೂಮಿಯಲ್ಲೇ ಮಸೀದಿ ನಿರ್ವಿುಸಲಾಗಿದೆ ಎಂದು ಸ್ಥಳೀಯರು ತುಂಬ ವರ್ಷಗಳಿಂದ ಹೇಳುತ್ತಿದ್ದರೂ, ಈಗ ನ್ಯಾಯಾಂಗ ಹೋರಾಟದಲ್ಲಿ ಮಹತ್ವದ ಗೆಲುವು ಲಭಿಸಿದೆ. ಶಾಹಿ ಈದ್ಗಾ ಮಸೀದಿಯಲ್ಲಿ ಸಮೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದ್ದು, ಹಿಂದು ಶ್ರದ್ಧಾಳುಗಳು ಇನ್ನಾದರೂ ಕೃಷ್ಣ ಜನ್ಮಭೂಮಿಯ ವಿವಾದ ಕೊನೆಗೊಳ್ಳಲಿ ಎಂದು ಆಶಿಸುತ್ತಿದ್ದಾರೆ. ಒಟ್ಟಾರೆ, ಶ್ರೀರಾಮ ಜನ್ಮಭೂಮಿ ವಿವಾದ ಸುಖಾಂತ್ಯಗೊಂಡ ನಂತರ ಶ್ರೀಕೃಷ್ಣ ಜನ್ಮಭೂಮಿಗೂ ವಿವಾದದಿಂದ ಮುಕ್ತಿ ಸಿಗುವ ನಿರೀಕ್ಷೆ ಹೆಚ್ಚಿದೆ.

  ವಿವಾದದ ಕೇಂದ್ರ: ಮಥುರಾದ ಶ್ರೀಕೃಷ್ಣ ಜನ್ಮಭೂಮಿ 13.37 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ಪೈಕಿ 10.9 ಎಕರೆ ಜಮೀನು ಶ್ರೀಕೃಷ್ಣ ಜನ್ಮ ಸ್ಥಾನ ಸಮಿತಿ ಮಾಲೀಕತ್ವದಲ್ಲಿದ್ದರೆ, 2.5 ಎಕರೆ ಭೂಮಿ ಶಾಹಿ ಈದ್ಗಾ ಮಸೀದಿಯ ಕಮೀಟಿಗೆ ಸೇರಿದೆ. ದೇವಸ್ಥಾನದ ಒಂದು ಭಾಗವನ್ನು ಕೆಡವಿ ಶಾಹಿ ಈದ್ಗಾ ಮಸೀದಿ ನಿರ್ವಿುಸಲಾಗಿದೆ. ಈ ಮಸೀದಿಯನ್ನು ತೆರವು ಮಾಡಿ ಮಂದಿರ ನಿರ್ವಣಕ್ಕೆ ಭೂಮಿ ವಾಪಸ್ ನೀಡಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

  ಜ್ಞಾನವ್ಯಾಪಿಯಲ್ಲಿ ಮಂದಿರದ ಕುರುಹು: ವಾರಾಣಸಿಯ ಜ್ಞಾನವಾಪಿ ಮಸೀದಿಯ ವಿಡಿಯೋಗ್ರಫಿ ವರದಿಯನ್ನು 2022ರ ಮೇನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಹಿಂದು ಶ್ರದ್ಧಾಳುಗಳ ಪ್ರತಿಪಾದನೆಗೆ ಪುಷ್ಟಿ ನೀಡುವ ಅನೇಕ ಅಂಶಗಳು ಬೆಳಕಿಗೆ ಬಂದಿರು ವುದು ಗಮನಾರ್ಹ. ವಿಡಿಯೋ ಸಮೀಕ್ಷೆಯಲ್ಲಿ ತ್ರಿಶೂಲ, ಕಮಲದ ಕೆತ್ತನೆಗಳು ಮತ್ತು ಪ್ರಾಚೀನ ಹಿಂದು ಕೆತ್ತನೆಗಳ ಚಿಹ್ನೆಗಳು ಕಂಡುಬಂದಿವೆ.

  ಮರಾಠರಿಂದ ಮಂದಿರ ನಿರ್ಮಾಣ: 1770ರಲ್ಲಿ ಮೊಘಲರು ಮತ್ತು ಮರಾಠರ ನಡುವೆ ಭೀಕರ ಕಾಳಗ ನಡೆಯಿತು. ಈ ಯುದ್ಧದಲ್ಲಿ ಮರಾಠರು ವಿಜಯ ಸಾಧಿಸಿದರು. ಆ ಬಳಿಕ ಸಂಸ್ಕೃತಿ ಪುನರುತ್ಥಾನದ ನಿಟ್ಟಿನಲ್ಲಿ ಹಲವು ಮಹತ್ವದ ಹೆಜ್ಜೆಗಳನ್ನು ಇರಿಸಿದ ಮರಾಠರು ಶ್ರೀಕೃಷ್ಣ ಜನ್ಮಭೂಮಿಯಲ್ಲಿ ಮತ್ತೆ ಮಂದಿರವನ್ನು ನಿರ್ವಿುಸಿದರು. ಮುಂಚಿನ ಕೇಶವದೇವ ಮಂದಿರ ಈಗ ಕೃಷ್ಣ ಮಂದಿರವಾಯಿತು. ಮರಾಠರು ಮಂದಿರ ನಿರ್ವಿುಸಿದ ಬಳಿಕ ಸಾವಿರಾರು ಹಿಂದುಗಳು ಇಲ್ಲಿ ಭೇಟಿ ನೀಡುತ್ತಿದ್ದರು ಮತ್ತು ಪೂಜೆ ಸಲ್ಲಿಸುತ್ತಿದ್ದರು ಎಂದು ಉತ್ತರ ಭಾರತದ ಹಲವು ಇತಿಹಾಸಕಾರರು ದಾಖಲಿಸಿದ್ದಾರೆ. ಆದರೆ, ಹಲವು ದಶಕಗಳ ಬಳಿಕ ಭೀಕರ ಭೂಕಂಪದಿಂದ ಮಂದಿರ ಭಾಗಶಃ ಹಾನಿಗೊಳಗಾಯಿತು. ಮುಂದೆ ಆಡಳಿತಕ್ಕೆ ಬಂದ ಬ್ರಿಟಿಷರು ಕೂಡ ಹಿಂದು ಶ್ರದ್ಧಾಕೇಂದ್ರಗಳನ್ನು ಹಾಳುಗೆಡವಿದರು. 1815ರಲ್ಲಿ ಮಥುರಾಕ್ಕೆ ಬಂದ ಬ್ರಿಟಿಷ್ ಅಧಿಕಾರಿಗಳು ಈ ಜಮೀನನ್ನು ಹರಾಜಿನಲ್ಲಿ ಮಾರಾಟ ಮಾಡಿದರು. ಕಾಶಿಯ ಆಗಿನ ರಾಜನು ಆ ಜಮೀನನ್ನು ಖರೀದಿಸಿದ ಮತ್ತು ಅಲ್ಲಿ ಮಂದಿರವನ್ನು ನಿರ್ವಿುಸಲು ಉದ್ದೇಶಿಸಿದ. ಆದರೆ, ಹಲವು ಕಾರಣಗಳಿಂದ ಮಂದಿರ ನಿರ್ವಣದ ಪ್ರಯತ್ನಗಳು ಸಫಲವಾಗಲಿಲ್ಲ. ಮತ್ತೆ ಹೆಚ್ಚುಕಡಿಮೆ 100 ವರ್ಷಗಳ ಕಾಲ ಈ ಜಮೀನು ಖಾಲಿಯಾಗೇ ಉಳಿಯಿತು.

  ದೇಶಕ್ಕೆ ಸ್ವಾತಂತ್ರ್ಯ ಸಿಗುವ ಕೆಲವೇ ವರ್ಷಗಳ ಮುನ್ನ ಅಂದರೆ 1944ರಲ್ಲಿ ಇತಿಹಾಸ ಮತ್ತೊಂದು ಮಹತ್ವದ ತಿರುವನ್ನು ಕಂಡಿತು. ಖ್ಯಾತ ಉದ್ಯಮಿ ಜುಗಲ್ ಕಿಶೋರ್ ಬಿರ್ಲಾ ಅವರು 1944ರಲ್ಲಿ ಈ ಜಮೀನನ್ನು ಖರೀದಿಸಿದರು. ಸ್ವಾತಂತ್ರ್ಯಪ್ರಾಪ್ತಿಯ ಬಳಿಕ 1951ರಲ್ಲಿ ಶ್ರೀಕೃಷ್ಣ ಜನ್ಮಸ್ಥಾನ ಟ್ರಸ್ಟ್​ನ ರಚನೆಯಾಯಿತು ಮತ್ತು ಈ ಜಮೀನನ್ನು ಟ್ರಸ್ಟ್​ಗೆ ಹಸ್ತಾಂತರಿಸಲಾಯಿತು. ಈ ಟ್ರಸ್ಟ್ ಜನರಿಂದ ದೇಣಿಗೆ ಸಂಗ್ರಹಿಸಿ 1953ರಲ್ಲಿ ಮಂದಿರ ನಿರ್ಮಾಣ ಕಾರ್ಯವನ್ನು ಆರಂಭಿಸಿತು ಮತ್ತದು 1958ರಲ್ಲಿ ಪೂರ್ಣಗೊಂಡಿತು. 1958ರಲ್ಲೇ ಒಂದು ಹೊಸ ಸಂಸ್ಥೆ ರಚಿಸಲಾಯಿತು. ಅದರ ಹೆಸರು ‘ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನ’. ಈ ಸಂಸ್ಥೆಯು 1968ರಲ್ಲಿ ಮುಸ್ಲಿಂ ಸಮುದಾಯದೊಂದಿಗೆ ಒಂದು ಒಪ್ಪಂದ ಮಾಡಿಕೊಂಡು, ಶ್ರೀಕೃಷ್ಣ ಜನ್ಮಭೂಮಿಯಲ್ಲಿ ಮಂದಿರ ಮತ್ತು ಮಸೀದಿ ಎರಡೂ ಇರಲಿವೆ ಎಂದಿತು. ಅಚ್ಚರಿಯ ಸಂಗತಿ ಎಂದರೆ ಹೀಗೆ ಒಪ್ಪಂದ ಮಾಡಿಕೊಂಡ ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನವು ಜನ್ಮಭೂಮಿಯ ಮೇಲೆ ಯಾವುದೇ ಹಕ್ಕು ಹೊಂದಿರಲಿಲ್ಲ. ಹಾಗಾಗಿ, ‘ಈ ಒಪ್ಪಂದವನ್ನು ನಾವು ಒಪು್ಪವುದಿಲ್ಲ, ಮಸೀದಿ ನಿರ್ವಣವಾದ ಜಾಗ ಮಂದಿರಕ್ಕೇ ಸೇರಿದ್ದು ಅದನ್ನು ಬಿಟ್ಟುಕೊಡಬೇಕು’ ಎನ್ನುವುದು ಶ್ರೀಕೃಷ್ಣ ಜನ್ಮಸ್ಥಾನ ಟ್ರಸ್ಟ್​ನ ಆಗ್ರಹ. ಪ್ರಸ್ತುತ, ನ್ಯಾಯಾಲಯದಲ್ಲೂ ಟ್ರಸ್ಟ್ ಈ ವಾದವನ್ನು ಮುಂದಿರಿಸಿದೆ.

  ಹೀಗಿದೆ ಇತಿಹಾಸ: ಔರಂಗಜೇಬನ ಆದೇಶದ ಮೇರೆಗೆ 1670ರಲ್ಲಿ ಮಥುರಾದ ಶ್ರೀಕೃಷ್ಣ ಜನ್ಮಭೂಮಿಯಲ್ಲಿದ್ದ ಶ್ರೀಕೇಶವದೇವನ ಮಂದಿರವನ್ನು ಕೆಡವಲಾಯಿತು. ಆ ಬಳಿಕ ಅಲ್ಲಿ ಮಸೀದಿ ನಿರ್ವಣಗೊಂಡಿತು. ಮಸೀದಿ ನಿರ್ವಣದ ಬಳಿಕ ಶ್ರೀಕೃಷ್ಣ ಜನ್ಮಭೂಮಿಯ ಪೂರ್ತಿ ಜಮೀನು ಮುಸ್ಲಿಮರ ಪಾಲಾಗಿತ್ತು. ಸುಮಾರು 100 ವರ್ಷಗಳವರೆಗೆ ಇಲ್ಲಿ ಹಿಂದುಗಳ ಪ್ರವೇಶಕ್ಕೆ ತಡೆ ಒಡ್ಡಲಾಗಿತ್ತು.

  ಅಕ್ರಮ ಒಪ್ಪಂದ: ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್​ನ ಆಸ್ತಿಯನ್ನು ಹಿಂದುಗಳಿಗೆ ವಂಚಿಸಿ ಶಾಹಿ ಈದ್ಗಾದೊಂದಿಗೆ ಅನಧಿಕೃತವಾಗಿ ರಾಜಿ ಮಾಡಿಕೊಳ್ಳುವ ಮೂಲಕ ನೀಡಿರುವುದು ತಪ್ಪು. 1968ರ ಅ. 12ರಂದು ಶಾಹಿ ಈದ್ಗಾ ದೊಂದಿಗೆ ಶ್ರೀಕೃಷ್ಣ ಜನ್ಮ ಸೇವಾ ಸಂಸ್ಥಾನವು ಮಾಡಿಕೊಂಡಿರುವ ಒಪ್ಪಂದ ಕಾನೂನಿನ ವ್ಯಾಪ್ತಿಯಿಲ್ಲದೆ ಸಹಿ ಮಾಡಿರುವ ಒಪ್ಪಂದ ಎಂದು ನ್ಯಾಯಾಲಯ ಘೊಷಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

  ಸ್ಥಳೀಯರ ಬೇಡಿಕೆ: ಮೊಘಲ್ ಚಕ್ರವರ್ತಿ ಔರಂಗಜೇಬ 1669ರಲ್ಲಿ ಕಾಶಿಯ ವಿಶ್ವನಾಥ ದೇವಾಲಯ ವನ್ನು ನೆಲಸಮ ಮಾಡಿದ್ದ ಮತ್ತು 1670ರಲ್ಲಿ ಮಥುರಾದ ಭಗವಾನ್ ಕೇಶವದೇವನ ದೇವಾಲಯವನ್ನು ನೆಲಸಮ ಮಾಡಲು ಆದೇಶ ನೀಡಿದ್ದ. ಇದಾದ ನಂತರ, ಕಾಶಿಯ ಜ್ಞಾನವಾಪಿ ಮಸೀದಿ ಮತ್ತು ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ನಿರ್ವಿುಸಲಾಗಿದೆ. ಒಟ್ಟು 13.37 ಎಕರೆ ಭೂಮಿಯನ್ನು ಶ್ರೀಕೃಷ್ಣನ ಜನ್ಮಸ್ಥಳಕ್ಕೆ ನೀಡಬೇಕೆಂಬುದು ಸ್ಥಳೀಯರ ಬೇಡಿಕೆ.

  ರಾಜಕೀಯ ಅಸ್ತ್ರವೂ ಹೌದು: ಬಿಜೆಪಿ ಈಗಾಗಲೇ ಹಲವು ರಾಜ್ಯಗಳಲ್ಲಿ ಹಿಂದುತ್ವ ಆಧಾರದ ಮೇಲೆ ಚುನಾವಣೆ ಎದುರಿಸಿದೆ. ಕೆಲ ತಿಂಗಳಲ್ಲೇ ಲೋಕಸಭೆ ಚುನಾವಣೆ ನಡೆಯಲಿದ್ದು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯ ನಂತರ ಕಾಶಿ ಮತ್ತು ಮಥುರಾ ಪ್ರಮುಖ ವಿಷಯಗಳಾಗಿ ಮಾರ್ಪಡುವ ಸಾಧ್ಯತೆಗಳಿವೆ.

  ಬಿಗಿಭದ್ರತೆಯಲ್ಲಿ ಮಂದಿರ: ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಮತ್ತು ಶ್ರದ್ಧಾಳುಗಳು ಪ್ರತಿನಿತ್ಯ ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆಯುತ್ತಾರೆ. ಮಂದಿರದ ಪಕ್ಕದಲ್ಲೇ ಇರುವ ಮಸೀದಿ ಸದ್ಯ ಸರ್ಕಾರದ ನಿಯಂತ್ರಣದಲ್ಲಿದ್ದು, ಅಲ್ಲಿ ಯಾವುದೇ ಧಾರ್ವಿುಕ ಪ್ರಾರ್ಥನೆ ಅಥವಾ ಚಟುವಟಿಕೆಗಳು ನಡೆಯುತ್ತಿಲ್ಲ. ಈ ಮಸೀದಿ ಇರುವ ಸ್ಥಳದಲ್ಲೇ ಮೂಲ ಮಂದಿರವಿತ್ತು, ಅದನ್ನು ಕೆಡವಿ ಮಸೀದಿ ಕಟ್ಟಲಾಗಿದೆ. ಹಾಗಾಗಿ, ಮೂಲಮಂದಿರದ ಜಾಗವನ್ನು ಮಂದಿರ ಸಮಿತಿಗೆ ಬಿಟ್ಟುಕೊಡಬೇಕು ಎಂದು ಮಥುರಾ ನ್ಯಾಯಾಲಯದಲ್ಲಿ 17 ಅರ್ಜಿಗಳು ದಾಖಲಾಗಿದ್ದವು. ಆ ಪ್ರಕರಣಗಳೆಲ್ಲ ಹೈಕೋರ್ಟ್​ಗೆ ವರ್ಗವಾಗಿದ್ದು, ಪ್ರಸ್ತುತ 16 ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ‘ಶ್ರೀರಾಮ ಮಂದಿರದ ವಿಷಯದಲ್ಲಿ ನ್ಯಾಯ ಸಿಕ್ಕಂತೆ, ಮಥುರಾ ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದಲ್ಲೂ ನ್ಯಾಯ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಅರ್ಜಿದಾರರು.

  ಮಹತ್ವದ ಅಂಶಗಳು

  • ಮಸೀದಿಯ ನೆಲಮಾಳಿಗೆಯಲ್ಲಿರುವ ಕಂಬಗಳಲ್ಲಿ ಹೂವುಗಳ ಕೆತ್ತನೆಗಳು ಮತ್ತು ಕಲಶ (ಹೂಜಿ)ವಿದೆ.
  • ನೆಲಮಾಳಿಗೆಯ ಒಂದು ಕಂಬದ ಮೇಲೆ ಪ್ರಾಚೀನ ಹಿಂದಿ ಭಾಷೆಯ ಕೆತ್ತನೆಗಳು ಕಂಡುಬಂದಿವೆ.
  • ಶೇಷನಾಗನ ಕೆತ್ತನೆ ಕಂಡುಬಂದಿದೆ.
  • ನೆಲಮಾಳಿಗೆ ಗೋಡೆ ಮೇಲೆ ತ್ರಿಶೂಲದ ಚಿಹ್ನೆಯಿದೆ.
  • ಮಸೀದಿಯ ಕೇಂದ್ರ ಗುಮ್ಮಟದ ಕೆಳಗೆ ಶಂಕುವಿನಾಕಾರದ ರಚನೆ ಕಂಡುಬಂದಿದೆ.

  ಮುಂದೇನು?

  • ಕೋರ್ಟ್ ಕಮಿಷನರ್ ಒಳಗೊಂಡ ಸಮೀಕ್ಷೆ ಸಮಿತಿಯಲ್ಲಿ ಯಾರು ಇರಲಿದ್ದಾರೆ ಎಂಬುದನ್ನು ಡಿಸೆಂಬರ್ 18ಕ್ಕೆ ಅಂತಿಮಗೊಳಿ ಸಲಾಗುವುದು ಎಂದಿದೆ ಅಲಹಾಬಾದ್ ಹೈಕೋರ್ಟ್.
  • ಸಮೀಕ್ಷೆ ಪೂರ್ಣಗೊಳಿಸಲು ಕೋರ್ಟ್ ಕಮಿಷನರ್​ರಿಗೆ ಕಾಲಾವಧಿ ನಿಗದಿ ಪಡಿಸಬಹುದು.
  • ಸಮೀಕ್ಷೆ ಪೂರ್ಣಗೊಂಡ ಬಳಿಕ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಆಗಲಿದ್ದು, ವರದಿ ಆಧರಿಸಿ ಕೋರ್ಟ್ ಮುಂದಿನ ತೀರ್ಮಾನ ಕೈಗೊಳ್ಳುತ್ತದೆ.
  • ಮಸೀದಿಯಲ್ಲಿ ನಡೆಸುವ ಸಮೀಕ್ಷೆಯಲ್ಲಿ ಮಂದಿರದ ಕುರುಹುಗಳು ಪತ್ತೆಯಾದರೆ, ಹಿಂದು ಶ್ರದ್ಧಾಳುಗಳ ವಾದಕ್ಕೆ ಮತ್ತಷ್ಟು ಬಲ ಬಂದಂತಾಗುತ್ತದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts