ನಟಿ ಶ್ರೀದೇವಿ ಸಾವು ಸಹಜವಲ್ಲ, ಖಂಡಿತ ಅದೊಂದು ಕೊಲೆ ಎನ್ನುತ್ತಾರೆ ಕೇರಳ ಡಿಜಿಪಿ

ಮುಂಬೈ: ಬಾಲಿವುಡ್​ ಖ್ಯಾತ ನಟಿ ಶ್ರೀದೇವಿ ಮೃತಪಟ್ಟು ವರ್ಷಕ್ಕೂ ಹೆಚ್ಚು ಕಾಲ ಕಳೆಯಿತು. 2018 ರ ಫೆಬ್ರವರಿ 24ರಂದು ದುಬೈನಲ್ಲಿ ಇದ್ದಾಗ ಬಾತ್​ಟಬ್​ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಶ್ರೀದೇವಿ ಸಾವು ಅದೆಷ್ಟೋ ಜನರಿಗೆ ಶಾಕ್​ ಆಗಿತ್ತು.

ಮೊದಲು ಅದೊಂದು ಕೊಲೆ ಎಂದೇ ಹಲವರು ಪ್ರತಿಪಾದಿಸಿದರೂ ಕೂಡ ತನಿಖೆಯ ಬಳಿಕ ಶ್ರೀದೇವಿಯವರು ಬಾತ್​ಟಬ್​ನಲ್ಲಿ ಮುಳುಗಿಯೇ ಮೃತಪಟ್ಟಿದ್ದು ಎಂದು ವರದಿ ನೀಡಲಾಗಿತ್ತು.

ಶ್ರೀದೇವಿಯವರು ಮೃತಪಟ್ಟು ಒಂದು ವರ್ಷಗಳ ಬಳಿಕ ಈಗ ಕೇರಳದ ಕಾರಾಗೃಹ ವಿಭಾಗದ ಪೊಲೀಸ್​ ಮಹಾ ನಿರ್ದೇಶಕ (ಡಿಜಿಪಿ) ರಿಷಿರಾಜ್​ ಸಿಂಗ್​ ಅವರು ಈಗ ಶ್ರೀದೇವಿ ಸಾವಿನ ಸಂದರ್ಭವನ್ನು ಮುನ್ನಲೆಗೆ ತಂದಿದ್ದಾರೆ. ಪತ್ರಿಕೆಯೊಂದರ ಕಾಲಂನಲ್ಲಿ ಶ್ರೀದೇವಿ ಸಾವಿನ ವಿಚಾರ ಪ್ರಸ್ತಾಪಿಸಿದ ಅವರು, ಶ್ರೀದೇವಿ ಸಾವು ಬಾತ್​ಟಬ್​ನಲ್ಲಿ ಮುಳುಗಿದ್ದರಿಂದ ಆಗಿರದೆ ಇರಬಹುದು ಎಂದು ಹೇಳಿದ್ದಾರೆ.

ವಿಧಿವಿಜ್ಞಾನ ತಜ್ಞ, ನನ್ನ ಸ್ನೇಹಿತ ಡಾ. ಉಮಾದತ್ತನ್​ ಈ ಹಿಂದೆ ಶ್ರೀದೇವಿ ಸಾವಿನ ಬಗ್ಗೆ ನನಗೆ ತಿಳಿಸಿದ್ದರು. ನಾನು ಅವರ ಬಳಿ ಶ್ರೀದೇವಿಯವರ ಅಸಹಜ ಸಾವಿನ ಬಗ್ಗೆ ಕುತೂಹಲದಿಂದ ಪ್ರಶ್ನಿಸಿದ್ದೆ. ಆಗ ಇದೊಂದು ಕೊಲೆಯಾಗಿರಬಹುದು. ಆಕಸ್ಮಿಕ ಸಾವಲ್ಲ ಎಂದಿದ್ದರು. ಅದನ್ನು ಅವರ ಬಾಯಲ್ಲೇ ದೃಢೀಕರಿಸೋಣ ಎಂದರೆ ಅವರೀಗ ಬದುಕಿಲ್ಲ ಎಂದು ರಿಷಿರಾಜ್​ ಸಿಂಗ್​ ಬರೆದಿದ್ದಾರೆ.
ಡಾ. ಉಮಾದತ್ತನ್​ ಅವರು ನನ್ನ ಬಳಿ ಹೇಳಿರುವ ಪ್ರಕಾರ ಯಾವ ಮನುಷ್ಯನೂ ಒಂದು ಅಡಿ ಆಳದ ನೀರಿನಲ್ಲಿ ಮುಳುಗಲು ಸಾಧ್ಯವೇ ಇಲ್ಲ. ಎಷ್ಟೇ ಕುಡಿದಿದ್ದರೂ ಸ್ವತಃ ಹೋಗಿ ಮುಳುಗಲಾಗದು. ಯಾರಾದರೂ ಅವರ ಎರಡೂ ಕಾಲುಗಳನ್ನು ಗಟ್ಟಿಯಾಗಿ ಹಿಡಿದು ತಲೆಯನ್ನು ನೀರಿನಲ್ಲಿ ಮುಳುಗಿಸಿ ಒತ್ತಿ ಹಿಡಿದುಕೊಂಡರೆ ಮಾತ್ರ ಮುಳುಗಿ ಉಸಿರುಗಟ್ಟಿ ಸಾಯಬಹುದು ಎಂದಿದ್ದಾರೆ.

ಬಾತ್​ರೂಂನ ಬಾತ್​ಟಬ್​ನಲ್ಲಿ ಮುಳುಗಿ ಶ್ರೀದೇವಿಯವರು ಸತ್ತ ಮೇಲೆ ಹಲವು ಜನರು ಇದನ್ನು ವಿಶ್ಲೇಷಣೆ ಮಾಡಿದ್ದರು. ಬಿಜೆಪಿ ಸಂಸದ ಸುಬ್ರಹ್ಮಣಿಯನ್​ ಸ್ವಾಮಿ ಕೂಡ ಇದು ಸಹಜ ಸಾವು ಎಂಬುದನ್ನು ಅಲ್ಲಗಳೆದಿದ್ದರು. ಶ್ರೀದೇವಿ ಹಾರ್ಡ್​ ಲಿಕ್ಕರ್​ಗಳನ್ನು ಕುಡಿಯುವುದಿಲ್ಲ ಎಂದಿದ್ದರು. ದೆಹಲಿಯ ಮಾಜಿ ಎಸಿಪಿ ವೇದ ಭೂಷಣ್​ ಅವರು ಶ್ರೀದೇವಿಯವರದ್ದು ಹತ್ಯೆ ಎಂದಿದ್ದರು.

ಶ್ರೀದೇವಿ ತಮ್ಮ ಕುಟುಂಬದೊಂದಿಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಯುಎಇಗೆ ತೆರಳಿದ್ದಾಗ ದುರ್ಘಟನೆ ಸಂಭವಿಸಿತ್ತು. ಆಕೆ ಬಾತ್​ಟಬ್​ನಲ್ಲಿ ಮುಳುಗಿದ್ದರು. ಸಾಯುವುದಕ್ಕೂ ಮೊದಲು ಸಿಕ್ಕಾಪಟೆ ಕುಡಿದಿದ್ದರು ಎಂದು ಪೋಸ್ಟ್​ಮಾರ್ಟ್ಂ ವೇಳೆ ಗೊತ್ತಾಗಿತ್ತು.

Leave a Reply

Your email address will not be published. Required fields are marked *