ಸೌಹಾರ್ದದಿಂದ ರಾಮಮಂದಿರ ನಿರ್ಮಾಣ ಆಗಲಿ ಎಂದ ಶ್ರೀ ಸುಬುಧೇಂದ್ರ ತೀರ್ಥರು, ಸೈನಿಕರ ಕಲ್ಯಾಣಕ್ಕಾಗಿ 12ರಂದು ಮಹಾರುದ್ರ ಯಾಗ

ರಾಯಚೂರು: ಶಾಂತಿ, ಸೌಹಾರ್ದದಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿ. ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ. ಸಂಧಾನ ಸಮಿತಿ ನೇಮಕ ಒಳ್ಳೆಯ ಬೆಳವಣಿಗೆಯಾಗಿದ್ದು, ಸಮಿತಿ ಪ್ರಕ್ರಿಯೆ ನಿಧಾನಗೊಳಿಸುವುದು ಸೂಕ್ತವಲ್ಲ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದ್ದಾರೆ.
ಶ್ರೀಮಠದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭದ್ರತೆ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ದೇಶದ ಗಡಿ ಕಾಯುವ ಯೋಧರ ಬಗ್ಗೆ ಸಂಶಯ ಪ್ರವೃತ್ತಿಯೂ ಸರಿಯಲ್ಲ. ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದ ಬಗ್ಗೆ ಸಂಶಯ ವ್ಯಕ್ತಪಡಿಸುವುದು ಯೋಧರನ್ನು ಅನುಮಾನಿಸಿದಂತೆ. ದೇಶ ಸಂಕಷ್ಟದ ಸಂದರ್ಭದಲ್ಲಿದ್ದಾಗ ಎಲ್ಲರೂ ರಾಜಕೀಯ, ಬೇಧ, ಭಾವ ಮರೆತು ಸೈನಿಕರಿಗೆ ಬಲ ತುಂಬುವ ಕೆಲಸ ಮಾಡಬೇಕು. ರಾಜಕೀಯ ಕಾರಣಕ್ಕೆ ಯೋಧರ ಕಾರ್ಯವನ್ನು ಎಳೆದು ತರುವುದು ದೇಶಕ್ಕೆ ಮಾರಕ. ದೇಶದ ಸೈನಿಕರ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದರು.
ಸೈನಿಕರ ಕಲ್ಯಾಣಕ್ಕಾಗಿ ಮಾ.12ರಂದು ಮಂತ್ರಾಲಯದದಲ್ಲಿ ಮಹಾರುದ್ರ ಯಾಗ ಆಯೋಜಿಸಲಾಗುತ್ತಿದೆ. ದೇಶದ ವಿವಿಧೆಡೆಯಿಂದ ಸುಮಾರು 200 ಋತ್ವಿಕರು ಪಾಲ್ಗೊಳ್ಳಲಿದ್ದಾರೆ. ಸೈನಿಕರ ಭದ್ರತೆ, ಸುರಕ್ಷತೆ ಮತ್ತು ಅವರ ಕುಟುಂಬಗಳ ಹೊಣೆಗಾರಿಕೆಯಿಂದ ಯಾಗವನ್ನು ಆಯೋಜಿಸಲಾಗಿದೆ ಎಂದು ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.

One Reply to “ಸೌಹಾರ್ದದಿಂದ ರಾಮಮಂದಿರ ನಿರ್ಮಾಣ ಆಗಲಿ ಎಂದ ಶ್ರೀ ಸುಬುಧೇಂದ್ರ ತೀರ್ಥರು, ಸೈನಿಕರ ಕಲ್ಯಾಣಕ್ಕಾಗಿ 12ರಂದು ಮಹಾರುದ್ರ ಯಾಗ”

  1. Mantralya Shri made a magnificient statement towards Indian soldiers. These are words befitted to the real sons of Bharat mata. JAI JAVAN, JAI KISAN JAI VIJNAN, JAI MANTRALAYA SHRI.

Comments are closed.