ಚನ್ನಗಿರಿಯಲ್ಲಿ ಸೊರಗಿದ ಸ್ತ್ರೀಶಕ್ತಿ ಭವನ

blank

ಚನ್ನಗಿರಿ: ಕೆಳದಿ ರಾಣಿ ಚೆನ್ನಮ್ಮ ಆಳಿದ ಚನ್ನಗಿರಿಯಲ್ಲಿ ಸುಸಜ್ಜಿತ ತಾಲೂಕು ಸ್ತ್ರೀಶಕ್ತಿ ಭವನ ಸರಿಯಾದ ನಿರ್ವಹಣೆ ಇಲ್ಲದೆ ಅನಾಥವಾಗಿದೆ. ಅಲ್ಲದೇ ಅಕ್ರಮ ಮತ್ತು ಅನೈತಿಕ ಚಟುವಟಿಕೆ ತಾಣವಾಗಿ ರೂಪುಗೊಂಡಿದೆ.

blank

ಸರ್ಕಾರ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿಸಲು ಸಾವಿರಾರು ಕೋಟಿ ಅನುದಾನ ನೀಡಿ ಪೋ›ತ್ಸಾಹಿಸುತ್ತಾ ಬಂದಿದೆ. ಅದರಂತೆ ತಾಲೂಕಿನಲ್ಲಿ 2010ರಲ್ಲಿ ಅಂದಿನ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು 25 ಲಕ್ಷ ರೂ. ಅನುದಾನ ಮಂಜೂರು ಮಾಡಿಸಿ ಪಟ್ಟಣದ ಸಂತೆ ಮೈದಾನದಲ್ಲಿ ಪುರಸಭೆಗೆ ಸೇರಿದ ನಿವೇಶನದಲ್ಲಿ ಸ್ತ್ರೀಶಕ್ತಿ ಭವನ ನಿರ್ವಿುಸಿದರು.

ಈ ಕಟ್ಟಡ ನಿರ್ವಣವಾಗುವ ಮೊದಲು ತಾಲೂಕಿನ ಸ್ತ್ರೀಶಕ್ತಿ ಒಕ್ಕೂಟದ ಮಹಿಳೆಯರು ಖಾಸಗಿ ಕಟ್ಟಡದಲ್ಲಿ ಸಭೆಗಳನ್ನು ನಡೆಸಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಿಂದ ಹೋರಾಟ ನಡೆಸುತ್ತಿದ್ದರು. ಮಹಿಳೆಯರ ಒಕ್ಕೂಟಗಳು ಅನೇಕ ವರ್ಷಗಳಿಂದ ಕೈಯಲ್ಲಿ ಅರ್ಜಿ ಹಿಡಿದು ಅಧಿಕಾರದಲ್ಲಿದ್ದ ಎಲ್ಲ ಜನಪ್ರತಿನಿಧಿಗಳ ಮನೆಬಾಗಿಲಿಗೆ ಅಲೆದಾಡಿದರೂ ಆಗದೆ ಇರುವ ಭವನಕ್ಕೆ ಸಿದ್ಧತೆ ನಡೆಸಿ ಕಟ್ಟಡ ನಿರ್ವಿುಸಿಕೊಂಡರು.

ಸ್ತ್ರೀಶಕ್ತಿ ಭವನದ ಕೆಲಸಗಳ ಜತೆಗೆ ಕಟ್ಟಡವನ್ನು ಸರ್ಕಾರದ ಶಿಶು ಮತ್ತು ಮಹಿಳಾ ಕಲ್ಯಾಣಾಧಿಕಾರಿ ಕಚೇರಿಗೆ ನೀಡಲಾಯಿತು. ಒಕ್ಕೂಟದ ಮಹಿಳೆಯರು ಸೇರಿಕೊಳ್ಳಲು ಸಮಸ್ಯೆ ಉಂಟಾದ ಕಾರಣ ಕಚೇರಿ ತೆರವುಗೊಳಿಸುವಂತೆ ಒತ್ತಡ ಹಾಕಲಾಯಿತು. ಅದಕ್ಕೆ ಮಣಿದ ಇಲಾಖೆಯವರು ಮತ್ತೆ ಖಾಸಗಿ ಕಟ್ಟಡಕ್ಕೆ ಬಾಡಿಗೆ ಹೋಗಿ 2018ರಲ್ಲಿ ಒಕ್ಕೂಟದವರಿಗೆ ಕಟ್ಟಡ ಬಿಟ್ಟುಕೊಟ್ಟರು.

ಕಟ್ಟಡ ಖಾಲಿಯಾದ ನಂತರದ ದಿನಗಳಲ್ಲಿ ಮಹಿಳೆಯರು ಬರುವುದನ್ನು ನಿಲ್ಲಿಸಿದ್ದರಿಂದ ಕಟ್ಟಡದ ಸುತ್ತ ಗಿಡಗಂಟಿಗಳು ಬೆಳೆದಿವೆ. ಬೀದಿಹೋಕರಿಗೆ ಉಚಿತವಾಗಿ ಕಟ್ಟಡ ದೊರೆತಂತಾಗಿದೆ. ಕಟ್ಟಡದ ಕಿಟಕಿ ಗಾಜುಗಳು ಒಡೆದುಹೋಗಿವೆ. ಪಕ್ಕದಲ್ಲಿ ವಾರದ ಸಂತೆ ನಡೆಯುವುದರಿಂದ ವ್ಯಾಪಾರಸ್ಥರು, ವರ್ತಕರು, ಗ್ರಾಮೀಣ ಭಾಗದ ಜನರು ಕಟ್ಟಡವನ್ನು ಬಳಸಿಕೊಳ್ಳಲು ಪ್ರಾರಂಭಿಸಿದರು.

ರಾತ್ರಿ ಆಯಿತೆಂದರೆ ಜೂಜುಕೋರರು, ವ್ಯಸನಿಗಳ ಅಡ್ಡಾ ಆಗಿ ಮಾರ್ಪಡುತ್ತದೆ. ಪ್ರಾರಂಭದಲ್ಲಿ ಸುತ್ತಲಿನ ಬೀದಿಯ ಜನರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ತಿಳಿಸುತ್ತಿದ್ದರು, ಕ್ರಮೇಣ ಅದೂ ನಿಂತು ಹೋಗಿದೆ. ಉತ್ತಮ ಕೆಲಸಕ್ಕೆ ಉಪಯೋಗಿಸಿದ ಸರ್ಕಾರದ ಅನುದಾನ ಬಳಕೆಯಾಗದೆ ಹಾಳಾಗಿ ಹೋಗಿದೆ.

ಅನೇಕ ವರ್ಷ ಹೋರಾಟ ಮಾಡಿ ನಿರ್ವಿುಸಿಕೊಂಡ ಸ್ತ್ರೀಶಕ್ತಿ ಭವನ ಪ್ರಾರಂಭದಲ್ಲಿ ಬಾಡಿಗೆ ನೀಡಿದ್ದರಿಂದ ಚನ್ನಾಗಿತ್ತು. ಅವರು ಬಿಟ್ಟುಹೋದ ನಂತರ ನಿರ್ವಹಣೆ ಇಲ್ಲದಂತಾಗಿದೆ. ಮತ್ತೆ ಮರುಜೀವ ನೀಡುವ ಸಲುವಾಗಿ ಶಾಸಕರ ಗಮನಕ್ಕೆ ತರಲಾಗಿದೆ. ಸರ್ಕಾರದ ಅನುದಾನದಿಂದ ದುರಸ್ತಿ ಮಾಡಿಸಿ ಮಹಿಳೆಯರ ಕೆಲಸಗಳಿಗೆ ಬಳಕೆ ಮಾಡಲಾಗುತ್ತದೆ.

| ರೇಣುಕಾ, ಗ್ರಾಪಂ ಅಧ್ಯಕ್ಷೆ, ಸಂತೆಬೆನ್ನೂರು ಹಾಗೂ ಸ್ತ್ರೀಶಕ್ತಿ ಒಕ್ಕೂಟದ ಆಧ್ಯಕ್ಷೆ

ಭವನದ ರಿಪೇರಿ ಹಾಗೂ ಸುಣ್ಣಬಣ್ಣ ಮಾಡಿಸಲು ಪತ್ರ ಬರೆಯಲಾಗಿದೆ. ಕಟ್ಟಡದಲ್ಲಿ ನಡೆಯುವ ಚಟುವಟಿಕೆಗಳು ಗಮನಕ್ಕೆ ಬಂದ ನಂತರ ಗಿಡಗಂಟಿ ತೆರವುಗೊಳಿಸಿ ಗೇಟಿಗೆ ಬೀಗ ಹಾಕಲಾಗಿದೆ. ಸದ್ಯದಲ್ಲೇ ದುರಸ್ತಿ ಮಾಡಿಸಿ ಉಪಯೋಗಿಸಲಾಗುತ್ತದೆ.

| ನಿರ್ಮಲಾಬಾಯಿ, ಶಿಶು ಮತ್ತು ಮಹಿಳಾ ಕಲ್ಯಾಣಾಧಿಕಾರಿ

ಸರ್ಕಾರದ ಕಟ್ಟಡ ಎನ್ನುವ ಕಾರಣಕ್ಕೆ ಹಾಳು ಬಿಡಲಾಗಿದೆ, ರಾತ್ರಿ, ರಜಾದಿನ ಹಾಗೂ ಸಂತೆ ನಡೆಯುವ ದಿನದಂದು ಮನೆಯಲ್ಲಿ ಇರುವುದು ಕಷ್ಟವಾಗುತ್ತದೆ. ಕಟ್ಟಡದಲ್ಲಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದವರು ಪೊಲೀಸರು ಬರುವುದನ್ನು ತಿಳಿದು ಓಡಿಹೋಗುತ್ತಾರೆ. ಇದರಿಂದ ನೆಮ್ಮದಿ ಹಾಳಾಗಿದೆ.

| ನೊಂದ ಸಂತೇಬೀದಿ ಮಹಿಳೆಯರು, ಚನ್ನಗಿರಿ.

Share This Article

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…

ಗಂಡ-ಹೆಂಡತಿಯ ಸಂಬಂಧದಲ್ಲಿ ಮೂರನೇ ವ್ಯಕ್ತಿ ಎಂಟ್ರಿಯಾಗಿದ್ದರೆ ಈ ರೀತಿ ಸುಲಭವಾಗಿ ತಿಳಿದುಕೊಳ್ಳಬಹುದು..! Husband and Wife

Husband and Wife : ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ…