ಕುಕನೂರು: ತಾಲೂಕಿನ ಯರೇಹಂಚಿನಾಳ ಗ್ರಾಮದ ಹೊರ ವಲಯದಲ್ಲಿ ಇರುವ ಶ್ರೀ ಪತ್ರೇಶ್ವರ ಮಹಾ ರಥೋತ್ಸವ ಶ್ರಾವಣ ಮಾಸದ ಕಡೆ ಸೋಮವಾರ ವಿಜೃಂಭಣೆಯಿಂದ ಜರುಗಿತು.
ಇದನ್ನೂ ಓದಿ: ಜಾಲಿಕಟ್ಟಿ ಬಸವೇಶ್ವರ ರಥೋತ್ಸವ ಅದ್ದೂರಿ
ಬೆಳಗ್ಗೆಯಿಂದ ಶ್ರೀ ಪತ್ರೇಶ್ವರನ ಮೂರ್ತಿಗೆ ರುದ್ರಾಭಿಷೇಕ ಹಾಗೂ ಶ್ರೀ ಮಾರುತೇಶ್ವರ ದೇವಸ್ಥಾನದಿಂದ ಪ್ರಮುಖ ರಾಜ ಬೀದಿಯ ಮೂಲಕ 101 ಕುಂಭಮೇಳದೊಂದಿಗೆ ಭವ್ಯ ಮೆರವಣಿಗೆ ನಡೆಯಿತು.
ಶ್ರೀ ಪತ್ರೇಶ್ವರ ಸೇವಾ ಟ್ರಸ್ಟ್ ಕಲಾತಂಡದಿಂದ ಕೋಲಾಟ, ರಂಗೋಲಿ ಸ್ಪರ್ಧೆ ಜರುಗಿದವು. ದೇವಸ್ಥಾನದ ನೂತನ ಕಟ್ಟಡದ ನೀಲಿನಕ್ಷೆಯನ್ನು ಹೂವಿನಹಡಗಲಿಯ ಡಾ.ಶಾಂತವೀರ ಸ್ವಾಮೀಜಿ ಉದ್ಘಾಟಿಸಿದರು.
ಪ್ರಮುಖರಾದ ಸಿದ್ದಯ್ಯ ಹಿರೇಮಠ, ಈಶಪ್ಪ ಆರೇರ, ಅಂದಪ್ಪ ಕೋಳೂರು, ಶರಬಣ್ಣ ಕೋಳೂರ, ಚಂದ್ರಕಾಂತ ಆರೇರ, ಶುಭಾಸ ಮಾದಿನೂರ, ನಂದಪ್ಪ ಹನಸಿ, ಭೀಮರಡ್ಡಿ ಮೇಟಿ, ಸಂಜಿವರಡ್ಡಿ ಹಂಗನಕಟ್ಟಿ, ಗವಿಸಿದಪ್ಪ ಕಮತರ, ಶೇಖಪ್ಪ ಅಸೂಟಿ, ಶ್ರೀನಿವಾಸ ಮೇಟಿ, ಶಂಕ್ರಪ್ಪ ಒಳಗಡ್ಡಿ, ಶರಣಪ್ಪ ಕಮತರ, ಪ್ರಕಾಶ ಕಮತರ ಇತರರಿದ್ದರು.
